Author: editor.udayarashmi@gmail.com

ವಿಜಯಪುರ: ಮಗುವಿಗೊಂದು ಮರ, ಶಾಲೆಗೊಂದು ವನ ಮಾಡುವದರೊಂದಿಗೆ ವಿಶ್ವ ಪರಿಸರ ದಿನವನ್ನು ಅಥ೯ಪೂಣ೯ವಾಗಿ ಆಚರಿಸೋಣ. ಫಲ ನೀಡುವ ಮರಗಳನ್ನು ಬೆಳೆಸುವ ಕತ೯ವ್ಯ ನಮ್ಮೆಲ್ಲರದಾಗಿದೆ. ಅರಣ್ಯ ನಾಶದಿಂದ ಜೀವ ವೈವಿಧ್ಯದ ನಷ್ಟ ಉಂಟಾಗುತ್ತಿರುವ ಕಳವಳಕಾರಿ ಕನ್ನಡ ವಿಷಯ ಎಂದು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.ಬುಧವಾರ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಶಿವಗಿರಿ ಕೇಂದ್ರದಲ್ಲಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನವನ್ನು ಉದ್ಘಾಟಿಸಿ ಮಾತನಾಡಿದ ಅವರು,ಭವಿಷ್ಯದ ಪೀಳಿಗೆಗೆ ಪರಿಸರ ಸಮತೋಲನ ಕಾಪಾಡುವ ಜವಾಬ್ದಾರಿ ನಮ್ಮದಾಗಿದೆ. ವಾಯು ಮಾಲಿನ್ಯ, ಜಲ ಮಾಲಿನ್ಯ, ಶಬ್ದ ಮಾಲಿನ್ಯದಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದರು.ಮುಖ್ಯ ಅತಿಥಿಗಳಾದ ಸಮಾಜ ಸೇವಕ ರಾಜು ಜಾಧವ ಮಾತನಾಡಿ, ಪರಿಸರ ನಾಶದಿಂದ ಪಶು,ಪಕ್ಷಿ, ಪ್ರಾಣಿಗಳ ವಿನಾಶಕ್ಕೆ ಕಾರಣವಾಗುತ್ತಿದೆ. ಪರಿಸರ ಸಂರಕ್ಷಣೆಯ ಮಾಡದೆ ಇದ್ದರೆ ಜಾಗತಿಕ ತಾಪಮಾನ ಏರಿಕೆಯಾಗಿ ಮನು ಕುಲಕ್ಕೆಧಕ್ಕೆ ಉಂಟಾಗುತ್ತದೆ ಎಂದರು.ಉಪನ್ಯಾಸಕರಾಗಿ ಡಾ ಸುಮಾ ಮಮದಾಪೂರ ಮಾತನಾಡಿ, ಮನೆಗೊಂದು ಮರ, ದೇಶಕ್ಕೆ ವರ, ರಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿಯ ಶಕ್ತಿ ಕಳೆದುಕೊಳ್ಳುತ್ತಿದೆ.ಕಾಡಿನ…

Read More

ವಿಜಯಪುರ: ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ (ಓಅಗಿಖಿ) ಸಂಯೋಜನೆ ಹೊಂದಿದ ೧೨ ವಿವಿಧ ವೃತ್ತಿಗಳಲ್ಲಿ ಪ್ರವೇಶಗಳು ಪ್ರಾರಂಭವಾಗಿವೆ. ಸಂಸ್ಥೆಯು ಸುಸಜ್ಜಿತ ಕಾರ್ಯಾಗಾರವನ್ನು ಹೊಂದಿದ್ದು, ಆಧುನಿಕ iಟಿಜusಣಡಿಥಿ ೪.೦ ಅಡಿಯಲ್ಲಿ ಖಿಚಿಣಚಿ ಖಿeಛಿhಟಿoಟogies ಐಣಜ, ಇವರ ಸಹಯೋಗದೊಂದಿಗೆ ಉತ್ತಮ ದರ್ಜೆ ತರಬೇತಿ ನೀಡಲಾಗುವುದು, ಹಾಗೂ ತರಬೇತಿಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಉದ್ಯೋಗ ಭರವಸೆ ನೀಡಲಾಗುವುದು. ಪ್ರವೇಶಕ್ಕೆ ವಾರ್ಷಿಕವಾಗಿ ೧,೨೦೦ ರೂ ಶುಲ್ಕವನ್ನು ಪಡೆದುಕೊಳ್ಳಲಾಗುವುದು. ಎಸ್‌ಎಸ್‌ಎಲ್‌ಸಿ ಹಾಗೂ ೮ನೇ ತರಗತಿ ಪಾಸಾದ ಅಭ್ಯರ್ಥಿಗಳು ಪ್ರವೇಶ ಹೊಂದಲು ಅರ್ಹರಿದ್ದು, ತಿತಿತಿ.ಛಿiಣe.ಞಚಿಡಿಟಿಚಿಣಚಿಞಚಿ.gov.iಟಿ ಇಲಾಖೆ ಜಾಲತಾಣದ ಮೂಲಕ ಜೂನ್ ೯ರವರೆಗೆ ಆನ್ ಲೈನ್ ಅರ್ಜಿ ಸಲ್ಲಿಸಬಹುದು ಒಟ್ಟು ೪೭೦ ಸ್ಥಾನಗಳಿಗೆ ಪ್ರವೇಶ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ೯೯೭೨೬೮೨೧೮೪, ೯೪೪೮೯೮೬೩೮೧, ೯೮೮೬೪೩೭೫೧೭ ಮತ್ತು ೦೮೩೫೨೨೬೦೩೬೦ ಗೆ ಸಂಪರ್ಕಿಸಿಬಹುದು ಎಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಚಡಚಣ: ವಿಶ್ವ ಪರಿಸರ ದಿನವನ್ನು ಪರಿಸರವನ್ನು ಉಳಿಸುವ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆಚರಿಸಲಾಗುತ್ತದೆ. ಪರಿಸರ ಉಳಿಸಲು ಎಲ್ಲರೂ ಒಗ್ಗೂಡುವುದು. ಗಿಡ, ಮರಗಳನ್ನು ಬೆಳೆಸುವಂತೆ ಜನರನ್ನು ಪ್ರೇರೆಪಿಸುವ ಗುರಿಯನ್ನು ಹೊಂದಿದೆ. ಹೀಗಾಗಿ ಈ ದಿನದಂದು ಪರಿಸರ ಉಳಿಸುವ ಜಾಗೃತಿ ಕಾರ್ಯಕ್ರಮಗಳು ಹಾಗೂ ಮರ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಪಣತೊಡೋಣ ಎಂದು ರೇವತಗಾಂವ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಗುರುಮಾತೆ ಎಂ.ಎಸ್.ಪಾಟೀಲ ಹೇಳಿದರು.ಬುಧವಾರದಂದು ಪ್ರೌಢ ಶಾಲೆಯಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು. ಮಾನವನ ಸ್ವಾರ್ಥಭರಿತ ಚಟುವಟಿಕೆಗಳಿಂದ ದಿನೇ ದಿನೇ ಪ್ರಕೃತಿಯೂ ಹಾಳಾಗುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ಮನುಷ್ಯನು ಕುರುಡಾಗಿ ವರ್ತಿಸುತ್ತಿದ್ದಾನೆ. ಅತಿಯಾದ ಕಾಡುಗಳ ನಾಶದಿಂದ ಮುಂಬರುವ ದಿನಗಳ್ಲೂ ಉಸಿರಾಡಲು ಆಮ್ಲಜನಕವೇ ಇಲ್ಲವಾದರೆ, ಬದುಕಿಳಿಯುವುದು ಕಷ್ಟವೇ. ಹೀಗಾಗಿ ಪರಿಸರದ ಬಗ್ಗೆ ಹೆಚ್ಚೆಚ್ಚು ಕಾಳಜಿ ವಹಿಸುವ ಜವಾಬ್ದಾರಿಯೂ ನಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಜೂನ ೫…

Read More

ದೇವರಹಿಪ್ಪರಗಿ: ಪ್ರತಿ ಮೂರು ವರ್ಷಗಳಿಗೊಮ್ಮೆ ಆಚರಿಸಲ್ಪಡುವ ಇಬ್ರಾಹಿಂಪೂರ ಗ್ರಾಮದೇವತೆ ದ್ಯಾಮವ್ವದೇವಿ ಜಾತ್ರಾ ಮಹೋತ್ಸವ ದಿ:೬ ರಂದು(ಇಂದು) ಆರಂಭಗೊಳ್ಳಲಿದೆದಿ:೬ ಗುರುವಾರ(ಇಂದು) ಮುಂಜಾನೆ ೮ ಗಂಟೆಗೆ ದೇವಿಯು ಗಂಗಾಸ್ಥಳ ಮಾಡಿಕೊಂಡು ಪೋತರಾಜರೊಂದಿಗೆ ಕುಂಭ, ಕಳಸ, ಡೋಳ್ಳು ಕುಣಿತದೊಂದಿಗೆ ಬಂಡಿಯಲ್ಲಿ ಮೆರವಣಿಗೆಯಲ್ಲಿ ಹೊರಟು, ಅಗಸಿಯಲ್ಲಿನ ಲಕ್ಷ್ಮೀ ದೇವಸ್ಥಾನ ಕಟ್ಟಿಯಲ್ಲಿ ಪ್ರತಿಷ್ಠಾಪನೆಗೊಳ್ಳಲಿದ್ದಾಳೆ. ನಂತರ ದಿ:೭ ಶುಕ್ರವಾರದಂದು ಪುನಃ ಕುಂಭ, ಕಳಸ, ಡೋಳ್ಳು ಕುಣಿತದೊಂದಿಗೆ ಬಂಡಿಯಲ್ಲಿ ಮೆರವಣಿಗೆಯಲ್ಲಿ ಹೊರಟು, ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮೂಲ ದೇವಸ್ಥಾನಕ್ಕೆ ತಲುಪುವಳು. ಅದೇ ದಿನ ರಾತ್ರಿ ಶ್ರೀರಾಘವೇಂದ್ರ ಕೃಷ್ಣ ಪಾರಿಜಾತ ಕಂಪನಿಯಿಂದ ಶ್ರೀಕೃಷ್ಣ ಪಾರಿಜಾತ ಎಂಬ ಪೌರಾಣಿಕ ನಾಟಕ ಜರುಗುವುದು ಎಂದು ಜಾತ್ರಾ ಸಮೀತಿ ಪ್ರಕಟಣೆ ಮೂಲಕ ತಿಳಿಸಿದೆ.

Read More

ದೇವರಹಿಪ್ಪರಗಿ: ಸಸಿ ನೆಟ್ಟು ಬೆಳೆಸುವ ಕಾರ್ಯ ಕೇವಲ ಪರಿಸರ ದಿನಕ್ಕೆ ಸೀಮಿತವಾಗದೆ ಪ್ರತಿಯೊಬ್ಬರು ಮನೆಗೊಂದು ಮರ ಬೆಳೆಸಿ ಪರಿಸರ ಸಮತೋಲನಕ್ಕೆ ಸಹಕಾರ ನೀಡಬೇಕು ಎಂದು ತಹಶೀಲ್ದಾರ ಪ್ರಕಾಶ ಸಿಂದಗಿ ಹೇಳಿದರು.ಪಟ್ಟಣದಲ್ಲಿ ಬುಧವಾರ ಪಂಚಾಯಿತಿ ಹಾಗೂ ಪ್ರಾದೇಶಿಕ ಅರಣ್ಯ ವಲಯಗಳ ಅಡಿಯಲ್ಲಿ ಬೇವಿಕಟ್ಟಿಯ ಹಳೇಶಾಲೆ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿಗಳನ್ನು ನೆಟ್ಟು ನೀರುಣಿಸಿ ಮಾತನಾಡಿದರು. ಪರಿಸರ ದಿನಾಚರಣೆ ಕೇವಲ ಇಂದಿನ ದಿನ ನೆಪ ಮಾತ್ರಕ್ಕೆ ಆಚರಿಸದೇ ನಮ್ಮ ಉಳಿವಿಗಾಗಿ ಅಳವಡಿಸಿಕೊಳ್ಳಬೇಕಾಗಿದೆ. ಆದ್ದರಿಂದ ಗಿಡ ಮರಗಳ ಬೆಳೆಸುವುದರ ಮೂಲಕ ಸ್ವಚ್ಛ, ಸುಂದರ ಪರಿಸರ ನಿರ್ಮಾಣಕ್ಕೆ ಬದ್ಧರಾಗೋಣ ಎಂದರು.ಸಾನಿಧ್ಯ ವಹಿಸಿದ್ದ ಸದಯ್ಯನಮಠದ ವೀರಗಂಗಾಧರಶ್ರೀಗಳು ಮಾತನಾಡಿ, ಹಸಿರೇ ಉಸಿರು. ನಮ್ಮ ಭವಿಷ್ಯ ಹಾಗೂ ಮುಂದಿನ ಪೀಳಿಗೆಗಾಗಿ ನಾವೆಲ್ಲ ಸಸಿಗಳನ್ನು ನೆಟ್ಟು, ನಾಡನ್ನು ಹಸಿರಾಗಿಸೋಣ ಎಂದರು.ಸ್ಥಳೀಯ ಜಡಿಮಠದ ಜಡಿಸಿದ್ದೇಶ್ವರಶ್ರೀ ಹಾಗೂ ಅವೋಗೇಶ್ವರಶ್ರೀ ಉಪಸ್ಥಿತಿಯಲ್ಲಿ ಪಟ್ಟಣದ ಪಂಚಾಯಿತಿ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಶಾಲಾ ಆವರಣದಲ್ಲಿ ಸಸಿ ನೆಟ್ಟು ನೀರುಣಿಸಿದರು.ನಂತರ ಪಟ್ಟಣದ ಇಂಡಿ ರಸ್ತೆ, ಸಿದ್ದೇಶ್ವರ…

Read More

“ಜಯ್ ನುಡಿ” (ವ್ರಕ್ತಿತ್ವ ವಿಕಸನ ಮಾಲಿಕೆ) – ಜಯಶ್ರೀ.ಜೆ. ಅಬ್ಬಿಗೇರಿ,ಇಂಗ್ಲೀಷ ಉಪನ್ಯಾಸಕರು, ಬೆಳಗಾವಿ. ಮೊ: ೯೪೪೯೨೩೪೧೪೨ ನ್ಯೂಟನ್‌ನ ಮೂರನೇ ನಿಯಮ ಎಲ್ಲರಿಗೂ ಗೊತ್ತು. ಕ್ರಿಯೆಗೆ ಪ್ರತಿಕ್ರಿಯೆ ಯಾವಾಗಲೂ ಸಮ ಹಾಗೂ ವಿರುದ್ಧವಾಗಿರುತ್ತದೆ. ಅಚ್ಚರಿಯೆನಿಸಿದರೂ ನಿಜ ಸಂಗತಿ ಏನು ಗೊತ್ತೆ? ನಾವೆಲ್ಲ ಬದುಕಿನ ಸಂತಸದ ಅಮೂಲ್ಯ ಕ್ಷಣಗಳನ್ನು ಬೇಗನೆ ಮರೆತು ದುಃಖ ದುರಂತ ಘಟನೆಗಳಿಗೆ ಭಾವ ಪರವಶರಾಗಿ ಅತಿಯಾಗಿ ಸ್ಪಂದಿಸುವ ಸ್ವಭಾವ ಹೊಂದಿದ್ದೇವೆ. ಸಣ್ಣ ಪುಟ್ಟ ಸಮಸ್ಯೆಗಳು, ಚಿಕ್ಕ ಚಿಕ್ಕ ನೋವುಗಳು ಸಾಲು ಸಾಲು ಸೋಲುಗಳು ನಮ್ಮ ಮೃದು ಮನಸ್ಸಿನ ಮೇಲೆ ಆಳವಾದ ಪ್ರಭಾವ ಬೀರಿ ಬಹು ಕಾಲದವರೆಗೆ ಬೇರೆ ಯಾವ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದಂತೆ ನಮ್ಮನ್ನು ಹಿಡಿದಿಟ್ಟುಕೊಳ್ಳುತ್ತವೆ. ನಮ್ಮ ಬದುಕಿನ ದಿಕ್ಕನ್ನೇ ಬದಲಿಸಿಬಿಡುತ್ತೇವೆ. ಯಾವುದೇ ಉತ್ತಮ ಕೆಲಸ ನನ್ನಿಂದಾಗದು. ನಾನೆಂದೂ ಅಂದುಕೊಂಡದ್ದನ್ನು ಸಾಧಿಸಲು ಸಾಧ್ಯವಿಲ್ಲ. ಎಂದೇ ಯೋಚಿಸುತ್ತೇವೆ. ಪ್ರತಿಯೊಂದು ಸನ್ನಿವೇಶದಲ್ಲೂ ಹೆಚ್ಚು ನಕಾರಾತ್ಮಕತೆಯಿಂದಲೇ ಪ್ರತಿಕ್ರಿಯಿಸುತ್ತೇವೆ. ಅವುಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದಷ್ಟು ನಮ್ಮಲ್ಲಿ ಅಸಂತಸದ ಮೂಟೆಯ ಗಾತ್ರವನ್ನು ಹೆಚ್ಚಿಸುತ್ತವೆ. ಅನೀಸ್ ನಿನ್ ಹೇಳಿದಂತೆ ನಾವು ವಸ್ತುಗಳನ್ನು…

Read More

ವಿಜಯಪುರ: ಮಾನವ ಸಂಕುಲದ ಬದುಕುಳಿಯುವಿಕೆಗೆ ಅವಶ್ಯವಿರುವ ಮೂಲಭೂತ ಅವಶ್ಯಕತೆಗಳನ್ನು ಪರಿಸರ ಒದಗಿಸುತ್ತದೆ. ಮಾನವನ ಯೋಗಕ್ಷೇಮಕ್ಕೆ ಅವಶ್ಯವಿರುವ ಎಲ್ಲಾ ಸಂಪನ್ಮೂಲಗಳು ಈ ಭೂಮಿಯ ಮೇಲಿದೆ. ಆದ್ದರಿಂದ ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ರಿಷಿ ಆನಂದ ಹೇಳಿದರು.ಜಿಲ್ಲಾ ಪಂಚಾಯತ ಹಾಗೂ ಸಮಾಜಿಕ ಅರಣ್ಯ ಇಲಾಖೆ ವಿಜಯಪುರ ಇವರ ಸಹಯೋಗದಲ್ಲಿ ವಿಜಯಪುರ ಜಿಲ್ಲಾ ಪಂಚಾಯತಿಯ ಆವರಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ”ವಿಶ್ವ ಪರಿಸರ ದಿನಾಚರಣೆ ” ಕಾರ್ಯಕ್ರಮದಲ್ಲಿ ಗಿಡ ನೆಟ್ಟು, ನೀರುಣಿಸಿ ಅವರು ಮಾತನಾಡಿದರು.ಪ್ರಕೃತಿ ಸಂಪನ್ಮೂಲವನ್ನು ನಮಗೆ ಅವಶ್ಯಕತೆ ಇದ್ದಷ್ಟು ಮಾತ್ರ ಉಪಯೋಗಿಸೋಣ, ಅವಶ್ಯಕತೆಗಿಂತ ಹೆಚ್ಚು ಉಪಯೋಗ ಮಾಡದೇ ನಮ್ಮ ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಅತೀ ಹೆಚ್ಚು ಬಿಸಿಲಿನ ತಾಪಮಾನ ಇರುವುದರಿಂದ ಸಸಿಗಳನ್ನು ನೆಡುವುದು ಹಾಗೂ ಜಲ ಸಂರಕ್ಷಣೆ ಮಾಡುವುದು ಅವಶ್ಯಕವಾಗಿದೆ. ಜಲಸಂರಕ್ಷಣೆಗೆ ಅತ್ಯಂತ ಸೂಕ್ತ ವಿಧಾನ “ಮಳೆನೀರು ಕೊಯ್ಲು” ಈ ವಿಧಾನವನ್ನು ನಾವು ಅಳವಡಿಸಿಕೊಂಡು ಸಾರ್ವಜನಿಕರಲ್ಲಿಯೂ ಜಾಗೃತಿ ಮೂಡಿಸಬೇಕು ಎಂದರು.ಮಾನವ ಮಾತ್ರ ಪ್ರಕೃತಿಯ…

Read More

ಲೋಕಸಭೆ ಚುನಾವಣೆ ಕರ್ನಾಟಕದ ಫಲಿತಾಂಶ | ಡಿಕೆಶಿಗೆ ಭಾರಿ ಮುಖಭಂಗ | ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ಹಿಡಿತ ಬೆಂಗಳೂರು: ಲೋಕಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ರಾಜ್ಯದ 28 ಕ್ಷೇತ್ರಗಳ ಪೈಕಿ ಬಿಜೆಪಿ 17 ಸ್ಥಾನಗಳಲ್ಲಿ, ಅದರ ಮಿತ್ರ ಪಕ್ಷ ಜೆಡಿಎಸ್ ಎರಡು ಸ್ಥಾನಗಳಲ್ಲಿ ಹಾಗೂ ರಾಜ್ಯದ ಆಡಳಿತರೂಢ ಕಾಂಗ್ರೆಸ್ 9 ಕ್ಷೇತ್ರಗಳಲ್ಲಿ ಗೆಲವು ಸಾಧಿಸಿದೆ.ಬೆಂಗಳೂರು ಗ್ರಾಮಾಂತರ ಸೇರಿದಂತೆ ರಾಜಧಾನಿ ಬೆಂಗಳೂರಿನ ಎಲ್ಲಾ ನಾಲ್ಕು ಕ್ಷೇತ್ರಗಳಲ್ಲೂ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದು, ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಭಾರಿ ಮುಖಭಂಗವಾಗಿದೆ.ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಅವರು ಡಿಕೆ ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್ ವಿರುದ್ಧ ಜಯಗಳಿಸಿದರೆ, ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ತನ್ನ ಹಿಡಿತ ಸಾಧಿಸಿದೆ ಮತ್ತು ಜೆಡಿಎಸ್ ಎರಡು ಸ್ಥಾನಗಳನ್ನು ಗೆದ್ದಿದೆ.2019 ರಲ್ಲಿ 25 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಈ ಬಾರಿ ಹಲವು ಕ್ಷೇತ್ರಗಳನ್ನು ಕಳೆದುಕೊಂಡಿದೆ ಮತ್ತು ಜೆಡಿಎಸ್‌ ಗೆದ್ದುಕೊಂಡ ಸ್ಥಾನಗಳು ಸೇರಿ 19ಕ್ಕೆ ಇಳಿದಿದೆ.ಮಾಜಿ…

Read More

ಚಡಚಣ: ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಜನರು ಇಟ್ಟಿರುವ ನಂಬಿಕೆಯೇ ಈ ಗೆಲುವಿಗೆ ಸಾಕ್ಷಿ. ಎಲ್ಲ ಸಮುದಾಯದ ಜನ ಪಕ್ಷ ಮೇಲೆ ಇಟ್ಟಿರುವ ನಂಬಿಕೆ ಮತದಾರರಿಂದ ಈಗ ಗೆಲವು ಸಾಧ್ಯವಾಗಿದೆ. ಬಿಜೆಪಿ ವಿಶ್ವಾಸನೀಯ ಪಕ್ಷ ಎನ್ನುವುದು ಮತ್ತೆ ಸಾಬೀತಾಗಿದೆ ಎಂದು ರೇವತಗಾಂವ ಗ್ರಾಪಂ ಸದಸ್ಯ ರೇವಣಸಿದ್ದ ಜಾಬಗೊಂಡೆಯವರು ಹೇಳಿದರು.ಜಿಲ್ಲೆಯಲ್ಲಿ ಈ ಬಾರಿ ಮತ್ತೆ ಕಮಲ ಅರಳುವ ಮೂಲಕ ಬಿಜೆಪಿ ಗೆಲುವಿನ ನಗೆ ಬೀರಿದೆ. ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿಯವರು ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರರವರನ್ನು ೭೫,೭೭೮ ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. ಸತತ ಏಳನೇ ಬಾರಿಗೆ ಜಯ ಗಳಿಸುವ ಮೂಲಕ ಸಂಸತ್ ಪ್ರವೇಶಿಸಿದ್ದಾರೆ. ಈ ಹಿನ್ನಲೆ ರೇವತಗಾಂವ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿಗಳನ್ನು ಸಿಡಿಸಿ, ಗುಲಾಲ್ ಎರಚಿ ಮೋದಿ, ಜಿಗಜಿಣಗಿ ಪರ ಜಯ ಘೋಷಣೆಗಳನ್ನು ಕೂಗುತ್ತ, ಸಿಹಿ ಹಂಚಿ ಸಂಭ್ರಮಾಚರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು. ಇದು ಕಾರ್ಯಕರ್ತರು, ಹಿಂದುತ್ವ, ಪಕ್ಷದ ಜಯವಾಗಿದ್ದು. ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಕಾರ್ಯಕರ್ತರ ಸಹಕಾರದೊಂದಿಗೆ ಹಿಂದುತ್ವಕ್ಕೆ ಬದ್ದತೆ. ಅಭಿವೃದ್ಧಿಗೆ…

Read More

ಚಿಮ್ಮಡದ ಯುವಕರ ಪರಿಸರ ಪ್ರೇಮ | ಅರಣ್ಯ ಇಲಾಖೆ & ಗ್ರಾಮ ಪಂಚಾಯತಿ ಸಾಥ್ – ಇಲಾಹಿ ಇ. ಜಮಖಂಡಿಚಿಮ್ಮಡ: ಕಾಡು ಬೆಳೆಸಿ, ನಾಡು ಉಳಿಸಿ. ಅರಣ್ಯ ಇಲಾಖೆಯ ಈ ಘೋಷವಾಕ್ಯವನ್ನು ಅಕ್ಷರಶಃ ನಿಜವಾಗಿಸಿದ್ದಾರೆ ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದ ಪರಿಸರ ಪ್ರೇಮಿ ಯುವಕರು.ಮನೆಯ ಮಂದೆ ಒಂದು ಸಸಿ ನೆಟ್ಟು ಪೋಷಣೆ ಮಾಡಲಾಗದ ಇಂದಿನ ದಿನಮಾನದಲ್ಲಿ ಯಾವುದೇ ಫಲಾಪೆಕ್ಷೆ ಇಲ್ಲದೇ ಗ್ರಾಮದ ಗುಡ್ಡದ ಶ್ರೀ ಪ್ರಭುಲಿಂಗೇಶ್ವರ ದೇವಸ್ಥಾನದ ಸುತ್ತ ೨೪ ಎಕರೆ ಬರಡು ತಗ್ಗು ದಿನ್ನೆ ಇರುವ ಪ್ರದೇಶದಲ್ಲಿ ಹಾಗೂ ಹಿಂದೂ ರುದ್ರಭೂಮಿಯ ೮ ಎಕರೆ ಭೂಮಿಯಲ್ಲಿ ವಿವಿಧ ಬಗೆಯ ಸುಮಾರು ೫ ಸಾವಿರಕ್ಕೂ ಅಧಿಕ ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಣೆ ಮಾಡುವ ಮೂಲಕ ಈ ಭಾಗದಲ್ಲಿ ಪರಿಸರ ಕ್ರಾಂತಿಯನ್ನೇ ಮಾಡಿದ್ದಾರೆ.ಕಳೆದ ೨೦ ವರ್ಷಗಳ ಹಿಂದೆ ಗ್ರಾಮದ ಲಾಲಸಾಬ ಸರ್ಕಾವಸ ಎಂಬಾತ ದೇವಸ್ಥಾನದ ಆವರಣದಲ್ಲಿ ನೂರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಘಟಪ್ರಭಾ ಎಡದಂಡೆ ಕಾಲುವೆಯಿಂದ ಹೆಗಲ ಮೇಲೆ…

Read More