ದೇವರಹಿಪ್ಪರಗಿ: ಸಸಿ ನೆಟ್ಟು ಬೆಳೆಸುವ ಕಾರ್ಯ ಕೇವಲ ಪರಿಸರ ದಿನಕ್ಕೆ ಸೀಮಿತವಾಗದೆ ಪ್ರತಿಯೊಬ್ಬರು ಮನೆಗೊಂದು ಮರ ಬೆಳೆಸಿ ಪರಿಸರ ಸಮತೋಲನಕ್ಕೆ ಸಹಕಾರ ನೀಡಬೇಕು ಎಂದು ತಹಶೀಲ್ದಾರ ಪ್ರಕಾಶ ಸಿಂದಗಿ ಹೇಳಿದರು.
ಪಟ್ಟಣದಲ್ಲಿ ಬುಧವಾರ ಪಂಚಾಯಿತಿ ಹಾಗೂ ಪ್ರಾದೇಶಿಕ ಅರಣ್ಯ ವಲಯಗಳ ಅಡಿಯಲ್ಲಿ ಬೇವಿಕಟ್ಟಿಯ ಹಳೇಶಾಲೆ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿಗಳನ್ನು ನೆಟ್ಟು ನೀರುಣಿಸಿ ಮಾತನಾಡಿದರು. ಪರಿಸರ ದಿನಾಚರಣೆ ಕೇವಲ ಇಂದಿನ ದಿನ ನೆಪ ಮಾತ್ರಕ್ಕೆ ಆಚರಿಸದೇ ನಮ್ಮ ಉಳಿವಿಗಾಗಿ ಅಳವಡಿಸಿಕೊಳ್ಳಬೇಕಾಗಿದೆ. ಆದ್ದರಿಂದ ಗಿಡ ಮರಗಳ ಬೆಳೆಸುವುದರ ಮೂಲಕ ಸ್ವಚ್ಛ, ಸುಂದರ ಪರಿಸರ ನಿರ್ಮಾಣಕ್ಕೆ ಬದ್ಧರಾಗೋಣ ಎಂದರು.
ಸಾನಿಧ್ಯ ವಹಿಸಿದ್ದ ಸದಯ್ಯನಮಠದ ವೀರಗಂಗಾಧರಶ್ರೀಗಳು ಮಾತನಾಡಿ, ಹಸಿರೇ ಉಸಿರು. ನಮ್ಮ ಭವಿಷ್ಯ ಹಾಗೂ ಮುಂದಿನ ಪೀಳಿಗೆಗಾಗಿ ನಾವೆಲ್ಲ ಸಸಿಗಳನ್ನು ನೆಟ್ಟು, ನಾಡನ್ನು ಹಸಿರಾಗಿಸೋಣ ಎಂದರು.
ಸ್ಥಳೀಯ ಜಡಿಮಠದ ಜಡಿಸಿದ್ದೇಶ್ವರಶ್ರೀ ಹಾಗೂ ಅವೋಗೇಶ್ವರಶ್ರೀ ಉಪಸ್ಥಿತಿಯಲ್ಲಿ ಪಟ್ಟಣದ ಪಂಚಾಯಿತಿ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಶಾಲಾ ಆವರಣದಲ್ಲಿ ಸಸಿ ನೆಟ್ಟು ನೀರುಣಿಸಿದರು.
ನಂತರ ಪಟ್ಟಣದ ಇಂಡಿ ರಸ್ತೆ, ಸಿದ್ದೇಶ್ವರ ಸ್ವಾಮೀಜಿ ಶಾಲೆಯ ರಸ್ತೆ ಸೇರಿದಂತೆ ಅಗತ್ಯವಿರುವ ಸ್ಥಳಗಳಲ್ಲಿ ಸಸಿ ನೆಟ್ಟು ಪೋಷಿಸಿ ಬೆಳೆಸುವ ನಿರ್ಧಾರ ಕೈಗೊಳ್ಳಲಾಯಿತು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಲ್.ಡಿ,ಮುಲ್ಲಾ, ಅರಣ್ಯಇಲಾಖೆಯ ಗುರು ರಾಮಗಿರಿಮಠ, ಮೌಲಾಸಾಬ್, ಕಿರಿಯ ಆರೋಗ್ಯ ನಿರೀಕ್ಷಕ ಫಿರೋಜ್ ಮುಲ್ಲಾ, ಪಟ್ಟಣ ಪಂಚಾಯಿತಿ ಸದಸ್ಯರಾದ ಕಾಶೀನಾಥ ಬಜಂತ್ರಿ, ಸಿಂಧೂರ ಡಾಲೇರ್, ಸುಮಂಗಲಾ ಸೇಬೆನವರ, ನಾಮ ನಿರ್ದೇಶಿತ ಸದಸ್ಯ ಹುಸೇನ್ ಕೊಕಟನೂರ ಸೇರಿದಂತೆ ಸೋಮು ದೇವೂರ, ಬಸವರಾಜ ದೇವಣಗಾಂವ, ಗುರುಬಸು ಯರನಾಳ, ಶ್ರೀಶೈಲ ಮಲ್ಲಿಕಾರ್ಜುನಮಠ, ನಿಂಗು ಜಡಗೊಂಡ, ಕಾಶೀನಾಥ ಕಡ್ಲೇವಾಡ ಪಂಚಾಯಿತಿ ಸಿಬ್ಬಂದಿ ಸೋಮು ಭೋವಿ, ಮಾರ್ತಾಂಡ ಗುಡಿಮನಿ, ಅಂಗನವಾಡಿ ಕಾರ್ಯಕರ್ತೆಯರಾದ ರೇಣುಕಾ ಯರನಾಳ, ಗುರುಬಾಯಿ ಕೋಟಿನ್ ಹಾಗೂ ಸಾರ್ವಜನಿಕರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

