ವಿಜಯಪುರ: ಮಗುವಿಗೊಂದು ಮರ, ಶಾಲೆಗೊಂದು ವನ ಮಾಡುವದರೊಂದಿಗೆ ವಿಶ್ವ ಪರಿಸರ ದಿನವನ್ನು ಅಥ೯ಪೂಣ೯ವಾಗಿ ಆಚರಿಸೋಣ. ಫಲ ನೀಡುವ ಮರಗಳನ್ನು ಬೆಳೆಸುವ ಕತ೯ವ್ಯ ನಮ್ಮೆಲ್ಲರದಾಗಿದೆ. ಅರಣ್ಯ ನಾಶದಿಂದ ಜೀವ ವೈವಿಧ್ಯದ ನಷ್ಟ ಉಂಟಾಗುತ್ತಿರುವ ಕಳವಳಕಾರಿ ಕನ್ನಡ ವಿಷಯ ಎಂದು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.
ಬುಧವಾರ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಶಿವಗಿರಿ ಕೇಂದ್ರದಲ್ಲಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನವನ್ನು ಉದ್ಘಾಟಿಸಿ ಮಾತನಾಡಿದ ಅವರು,
ಭವಿಷ್ಯದ ಪೀಳಿಗೆಗೆ ಪರಿಸರ ಸಮತೋಲನ ಕಾಪಾಡುವ ಜವಾಬ್ದಾರಿ ನಮ್ಮದಾಗಿದೆ. ವಾಯು ಮಾಲಿನ್ಯ, ಜಲ ಮಾಲಿನ್ಯ, ಶಬ್ದ ಮಾಲಿನ್ಯದಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದರು.
ಮುಖ್ಯ ಅತಿಥಿಗಳಾದ ಸಮಾಜ ಸೇವಕ ರಾಜು ಜಾಧವ ಮಾತನಾಡಿ, ಪರಿಸರ ನಾಶದಿಂದ ಪಶು,ಪಕ್ಷಿ, ಪ್ರಾಣಿಗಳ ವಿನಾಶಕ್ಕೆ ಕಾರಣವಾಗುತ್ತಿದೆ. ಪರಿಸರ ಸಂರಕ್ಷಣೆಯ ಮಾಡದೆ ಇದ್ದರೆ ಜಾಗತಿಕ ತಾಪಮಾನ ಏರಿಕೆಯಾಗಿ ಮನು ಕುಲಕ್ಕೆ
ಧಕ್ಕೆ ಉಂಟಾಗುತ್ತದೆ ಎಂದರು.
ಉಪನ್ಯಾಸಕರಾಗಿ ಡಾ ಸುಮಾ ಮಮದಾಪೂರ ಮಾತನಾಡಿ, ಮನೆಗೊಂದು ಮರ, ದೇಶಕ್ಕೆ ವರ, ರಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿಯ ಶಕ್ತಿ ಕಳೆದುಕೊಳ್ಳುತ್ತಿದೆ.
ಕಾಡಿನ ಪ್ರಮಾಣ ಹೆಚ್ಚಿಸಿದರೆ ಮಳೆ ಪ್ರಮಾಣವು ಹೆಚ್ಚಾಗುತ್ತದೆ.
ಎಂದರು.
ಬಿ ಕೆ ಸಂಗೀತ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಸ್ ಆಯಾ ಬಗಲಿ ಮಾತನಾಡಿದರು.
ಪ್ರಾಸ್ತಾವಿಕ ಬಿ ಕೆ ಸರೋಜಾ ಅಕ್ಕನವರು ಮಾತನಾಡಿದರು. ಬಿ ಕೆ ಕಲ್ಮೇಶ ನಿರೂಪಿಸಿದರು. ನಿಂಗಪ್ಪ ಬೈಚಬಾಳ ವಂದಿಸಿದರು
Subscribe to Updates
Get the latest creative news from FooBar about art, design and business.
Related Posts
Add A Comment

