ಚಡಚಣ: ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಜನರು ಇಟ್ಟಿರುವ ನಂಬಿಕೆಯೇ ಈ ಗೆಲುವಿಗೆ ಸಾಕ್ಷಿ. ಎಲ್ಲ ಸಮುದಾಯದ ಜನ ಪಕ್ಷ ಮೇಲೆ ಇಟ್ಟಿರುವ ನಂಬಿಕೆ ಮತದಾರರಿಂದ ಈಗ ಗೆಲವು ಸಾಧ್ಯವಾಗಿದೆ. ಬಿಜೆಪಿ ವಿಶ್ವಾಸನೀಯ ಪಕ್ಷ ಎನ್ನುವುದು ಮತ್ತೆ ಸಾಬೀತಾಗಿದೆ ಎಂದು ರೇವತಗಾಂವ ಗ್ರಾಪಂ ಸದಸ್ಯ ರೇವಣಸಿದ್ದ ಜಾಬಗೊಂಡೆಯವರು ಹೇಳಿದರು.
ಜಿಲ್ಲೆಯಲ್ಲಿ ಈ ಬಾರಿ ಮತ್ತೆ ಕಮಲ ಅರಳುವ ಮೂಲಕ ಬಿಜೆಪಿ ಗೆಲುವಿನ ನಗೆ ಬೀರಿದೆ. ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿಯವರು ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರರವರನ್ನು ೭೫,೭೭೮ ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. ಸತತ ಏಳನೇ ಬಾರಿಗೆ ಜಯ ಗಳಿಸುವ ಮೂಲಕ ಸಂಸತ್ ಪ್ರವೇಶಿಸಿದ್ದಾರೆ. ಈ ಹಿನ್ನಲೆ ರೇವತಗಾಂವ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿಗಳನ್ನು ಸಿಡಿಸಿ, ಗುಲಾಲ್ ಎರಚಿ ಮೋದಿ, ಜಿಗಜಿಣಗಿ ಪರ ಜಯ ಘೋಷಣೆಗಳನ್ನು ಕೂಗುತ್ತ, ಸಿಹಿ ಹಂಚಿ ಸಂಭ್ರಮಾಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು. ಇದು ಕಾರ್ಯಕರ್ತರು, ಹಿಂದುತ್ವ, ಪಕ್ಷದ ಜಯವಾಗಿದ್ದು. ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಕಾರ್ಯಕರ್ತರ ಸಹಕಾರದೊಂದಿಗೆ ಹಿಂದುತ್ವಕ್ಕೆ ಬದ್ದತೆ. ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ ಎಂದು ಹೇಳಿದರು.
ಈ ವೇಳೆ ಗ್ರಾಮದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

