Author: editor.udayarashmi@gmail.com

ಮೋರಟಗಿಯ ಅಮೋಘಸಿದ್ದೇಶ್ವರ ಜಾತ್ರೆ I ಭಂಡಾರದಲ್ಲಿ ಮಿಂದೆದ್ದ ಭಕ್ತ ಸಾಗರ ಮೋರಟಗಿ: “ರೋಣಿ ಮಿರಗಕ್ಕ ಕೂರಿಗಿ ಸಾಗ, ಪುಷ್ಯ- ಪುನರ್ವಸು ದೇಶಕ್ಕೆ ಸಂಪೂರ್ಣ, ನಂಬಿದ ರೈತಗ ಹಿಂಬಾಳಾಗಿರತೀನಿ..”ಮಿರಗ ಕೂಡುವ ದಿನವೇ ಗ್ರಾಮದಲ್ಲಿ ಕೇಳಿಬಂದ ಇಂಥದೊಂದು ಹೇಳಿಕೆ ಸುತ್ತಲಿನ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ‘ಮುತ್ಯಾನ ಮಾತಿನಂತೆ ಮಳೆರಾಯ ಕೈಹಿಡದರ ಬಾಳ ಹಸನಾದಂಗ’ ಎಂದು ಅನ್ನದಾತರು ಆತ್ಮವಿಶ್ವಾಸದಿಂದ ಕೃಷಿ ಚಟುವಟಿಕೆಗೆ ಮುಂದಾಗಿದ್ದಾರೆ.ಗ್ರಾಮದ ಆರಾಧ್ಯ ದೈವ, ಭಕ್ತಿ ಭಂಡಾರದ ಅವತಾರಿ, ಸಿದ್ಧಿಪುರುಷ ಅಮೋಘಸಿದ್ಧೇಶ್ವರ ಜಾತ್ರೆ ನಿಮಿತ್ತ ಶುಕ್ರವಾರ ನಡೆದ ಹೇಳಿಕೆಯಲ್ಲಿ ಪಟ್ಟದ ದೇವರಾದ ಕನ್ನಯ್ಯ ಮುತ್ಯಾ ಅವರು ಮಳೆ ಭವಿಷ್ಯ ನುಡಿದಿದ್ದಾರೆ. ಅಜ್ಜನ ವಾಣಿಯಂತೆ ಈ ಬಾರಿ ಉತ್ತಮ ಮಳೆಯಾಗಲಿದೆ ಎಂದು ಗ್ರಾಮಸ್ಥರು ಸಂತಸಗೊಂಡಿದ್ದಾರೆ.ಹೇಳಿಕೆ ಸಂದರ್ಭದಲ್ಲಿ ಸುತ್ತಲಿನ ಗ್ರಾಮಗಳ ನೂರಾರು ಜನ ನೆರೆದಿದ್ದರು.ಪ್ರತಿ ವರ್ಷದ ಪದ್ಧತಿಯಂತೆ ಈ ವರ್ಷವೂ ಕೂಡಾ ಸಂಪ್ರದಾಯದಂತೆ ಅದ್ದೂರಿಯಾಗಿ ನಡೆದ ಜಾತ್ರೆಯಲ್ಲಿ ಸಾವಿರಾರು ಭಕ್ತರು ಭಂಡಾರದಲ್ಲಿ ಮಿಂದ್ದೆದ್ದರು.ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತರು ದೇವರ ದರ್ಶನ ಪಡೆದರು.ಗುರುವಾರ ರಾತ್ರಿ ೮ ಗಂಟೆಗೆ…

Read More

ವಿಜಯಪುರ: ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಮದಾಪುರ ಗ್ರಾಮದಲ್ಲಿ ಚಲವಾದಿ ಸಮಾಜದ ವತಿಯಿಂದ ಬುದ್ಧ, ಬಸವ, ಅಂಬೇಡ್ಕರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.ಇದೇ ಸಂದರ್ಭದಲ್ಲಿ S.S.L.C. ಮತ್ತು ಪಿ.ಯು.ಸಿಯಲ್ಲಿ 95% ಕ್ಕಿಂತ ಹೆಚ್ಚಿಗೆ ಅಂಕ ಪಡೆದ ಪ್ರತಿಭಾವಂತ 8 ಜನ ಮಕ್ಕಳಿಗೆ ಅದ್ದೂರಿಯಾಗಿ ಸನ್ಮಾನಿಸಲಾಯಿತು. ಇದೇ ಸಮಯದಲ್ಲಿ ಸಂಪೂರ್ಣ ಮಧ್ಯಪಾನ ತ್ಯಜಿಸಿ ಮುಖ್ಯವಾಹಿನಿಗೆ ಬಂದ 1) ಪುಂಡಲಿಕ ಶೇಗುಣಸಿ 2) ಚಿದಾನಂದ ಚಲವಾದಿ ಇವರಿಗೂ ವಿಶೇಷ ಸನ್ಮಾನಿಸಲಾಯಿತು ಮತ್ತು S.C. ವಿದ್ಯಾರ್ಥಿ ಗಂಗಾಧರ ಈತನು L.L.B ಪಾಸಾಗಿ ವಕೀಲನಾಗಿದ್ದಕ್ಕಾಗಿ ಸನ್ಮಾನಿಸಲಾಯಿತು.ಸನ್ಮಾನ ಸ್ವೀಕರಿಸಿ ಮಾತಾಡಿದ S.C. ಬಡ ವಿದ್ಯಾರ್ಥಿನಿ ಸೈನಿಕನ ಮಗಳಾದ ಭುವನೇಶ್ವರಿ ಕಟ್ಟಿಮನಿ ನಾನು 2022ರಲ್ಲಿ ಸರಕಾರಿ ಶಾಲೆ ಕಾರಜೋಳ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಯಿಂದ 99.84 ಅಂಕ ಪಡೆದು ರಾಜ್ಯಕ್ಕೆ 2 ನೇ ರ್‍ಯಾಂಕ್ ಗಳಿಸಿದರೂ ನನಗೆ ಸರಕಾರದಿಂದ ಮತ್ತು ಜಿಲ್ಲಾಡಳಿತದಿಂದ ಬಹುಮಾನವೂ ಇಲ್ಲ. ಸನ್ಮಾನವೂ ಇಲ್ಲ, ಯಾಕೆಂದರೆ ನಾನು ಎಸ್.ಸಿ. ವಿದ್ಯಾರ್ಥಿನಿ. ಆದರೆ ಈ ವರ್ಷ ನನ್ನಂತೆ ಮೇಲ್ವರ್ಗದ ಅಂಕಿತಾ…

Read More

ತಿಕೋಟಾ: ೭೫ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಆದೇಶದಂತೆ ನಮ್ಮ ತಾಲೂಕಿನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಗ್ರಾಮ ಪಂಚಾಯತಿಗಳ ಮೂಲಕ ಒಟ್ಟು ೦೭ ಅಮೃತ ಸರೋವರಗಳನ್ನು ನಿರ್ಮಾಣ ಮಾಡಲಾಗಿದೆ. ಪ್ರಸ್ತುತ ತಾಲೂಕಿನ ಸಿದ್ಧಾಪುರ (ಕೆ) ಗ್ರಾಮ ಪಂಚಾಯತಿ ವ್ಯಾಪ್ತಿಯ ಧನ್ನರ್ಗಿ ಗ್ರಾಮದಲ್ಲಿ ನಿರ್ಮಿಸಿದ ಅಮೃತ ಸರೋವರದಲ್ಲಿ ಜೂ.೬ರಂದು ಸುರಿದ ಭಾರಿ ಮಳೆಯಿಂದಾಗಿ ಅಮೃತ ಸರೋವರ ಮಳೆನೀರಿನಿಂದ ತುಂಬಿ, ಸುಂದರವಾಗಿ ಕಂಗೊಳಿಸುತ್ತಿದೆ. ಇದರಿಂದ ಈ ಭಾಗದ ಸಾವಿರಾರು ರೈತ್ತರಿಗೆ ಅನುಕೂಲವಾಗಲಿದ್ದು, ಗ್ರಾಪಂ ಸದಸ್ಯರು & ರೈತ್ತರು ಹರ್ಷ ವ್ಯಕ್ತ ಪಡಿಸುತ್ತಿದ್ದಾರೆ ಎಂದು ತಿಕೋಟಾ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣಕುಮಾರ ಸಾಲಿ ಹೇಳಿದರು.ಧನ್ನರ್ಗಿ ಗ್ರಾಮದಲ್ಲಿರುವ ಅಮೃತ ಸರೋವರ ಕೆರೆಗೆ ಇಂದು ತಿಕೋಟಾ ತಾಲೂಕು ಪಂಚಾಯತಿಯ ತಾಂತ್ರಿಕ ಸಂಯೋಜಕ ಸಂಜೀವಕುಮಾರ ಬಿರಾದಾರ ಮತ್ತು ತಾಲೂಕು ಐಇಸಿ ಸಂಯೋಜಕ ಕಲ್ಲಪ್ಪ ನಂದರಗಿ ಭೇಟಿ ನೀಡಿ ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಸದಸ್ಯರು & ಸಿಬ್ಬಂದಿಗಳು ಉಪಸ್ಥಿತರಿದ್ದರು.ಈ…

Read More

ಇಂಡಿ: ಸಂಸದ ರಮೇಶ ಜಿಗಜಿಣಗಿ ಅವರ ಅಭಿವೃಧ್ಧಿ ಕಾರ್ಯಗಳಿಗೆ ಮೆಚ್ಚಿ ಜಿಲ್ಲೆಯ ಜನರು ಮತ್ತೆ ಜಿಗಜಿಣಗಿ ಅವರ ಕೈ ಹಿಡಿದಿದ್ದಾರೆ. ಜಿಗಜಿಣಗಿ ಅವರು ಜಿಲ್ಲೆಯಲ್ಲಿ ಇನ್ನಷ್ಟು ಅಭಿವೃಧ್ಧಿ ಕಾರ್ಯ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹೇಳಿದರು.ಅವರು ಶುಕ್ರವಾರ ತಾಲೂಕಿನ ಬಳ್ಳೊಳ್ಳಿ ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬಿಜೆಪಿ ಲೋಕಸಬಾ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರು ಗೆಲುವು ಸಾಧಿಸಿದ್ದ ಪ್ರಯುಕ್ತ ಹಮ್ಮಿಕೊಂಡ ವಿಜಯೋತ್ಸವ ಸಮಾರಂಭದಲ್ಲಿ ಸಿಹಿ ಹಂಚಿ ಮಾತನಾಡಿದರು.ಇಂಡಿ ಮತಕ್ಷೇತ್ರ ಸಂಸದ ಜಿಗಜಿಣಗಿ ಅವರ ತವರು ಕ್ಷೇತ್ರವಾಗಿದ್ದು ತವರಿನ ಜನ ರಮೇಶ ಜಿಗಜಿಣಗಿ ಅವರ ಕೈ ಹಿಡಿದು ಕಮಲ ಅರಳಿಸಿದ್ದಾರೆ. ಜಿಗಜಿಣಗಿ ಅವರು ಸಹ ಇಂಡಿ ಕ್ಷೇತ್ರದ ಬಗ್ಗೆ ಅಪಾರ ಕಾಳಜಿ ಹಾಗೂ ಗೌರವ ಹೊಂದಿದ್ದಾರೆ. ಹೀಗಾಗಿ ಈ ಬಾರಿ ಇಂಡಿ ಕ್ಷೇತ್ರದಲ್ಲಿಯೂ ಹೆಚ್ಚಿನ ಕೆಲಸ ಮಾಡಲಿ, ಅವರಿಗೆ ಕೇಂದ್ರದಲ್ಲಿ ಉನ್ನತ ಸ್ಥಾನಮಾನ ದೊರೆಯಲಿ ಎಂದು ಆಶಿಸುವುದಾಗಿ ತಿಳಿಸಿದರು.ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಾಪಸೆ ಮಾತನಾಡಿ,…

Read More

ಇಂಡಿ: ಶಹರ ಪೋಲಿಸ್ ‌ಠಾಣಾ ವ್ಯಾಪ್ತಿ ಹೆಚ್ಚಿಸಲು ಪುರಸಭೆ ಮಾಜಿ ಅಧ್ಯಕ್ಷ ಯಮುನಾಜಿ‌‌ ಸಾಳೆಂಕೆ ಜಿಲ್ಲಾ ಪೋಲಿಸ್ ವರಿಷ್ಠ ಅಧಿಕಾರಿಗಳಿಗೆ ಮನವಿ ಮಾಡಿದರು.ಬುಧವಾರ ಶಹರ ಪೋಲಿಸ್ ಠಾಣಾದಲ್ಲಿ ಆಯೋಜಿಸಿದ್ದ ಬಕ್ರೀದ್ ಹಾಗೂ ಚೌಡಮ್ಮ‌ ಜಾತ್ರೆ ನಿಮಿತ್ಯ ಶಾಂತಿ ಸಭೆಯಲ್ಲಿ ಮಾತನಾಡಿದರು.ಪಟ್ಟಣದಿಂದ ಸುಮಾರು 10 ಕಿಮೀ ವ್ಯಾಪ್ತಿಯ ಬರುವ ಹಳ್ಳಿಗಳು ಶಹರ ಪೋಲಿಸ್ ಠಾಣೆಗೆ ಸೇರ್ಪಡೆಗೊಳಿಸಿ ಶಹರ ಪೋಲಿಸ್ ಠಾಣೆಗೆ ಮೆರಗು ತರಬೇಕು. ಈ ಹಿಂದೆ ಶಹರ್ ಮತ್ತು ಗ್ರಾಮೀಣ ಠಾಣೆ ಒಂದೇಯಾಗಿತ್ತು. ಇತ್ತೀಚೆಗೆ ಅಪರಾಧ ಚಟುವಟಿಕೆಗಳು ಮತ್ತು ಆಡಳಿತದ ಹಿತದೃಷ್ಟಿಯಿಂದ ಗ್ರಾಮೀಣ ಮತ್ತು ಶಹರ ಠಾಣೆ‌ ಎಂದು ಇಬ್ಬಾಗ ಮಾಡಲಾಗಿದೆ. ಆದರೆ ಆಡಳಿತ ಹಿತ ದೃಷ್ಟಿಯಿಂದ‌ ಶಹರ್ ಠಾಣೆಗೆ ಇನ್ನೊಂದಿಷ್ಟು ಹಳ್ಳಿಗಳು ಸೇರ್ಪಡೆ ‌ಮಾಡುವುದರಿಂದ‌‌‌ ಒಳ್ಳೆಯದು ಆಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಭೀಮನಗೌಡ ಪಾಟೀಲ, ಸತೀಶ ಕುಂಬಾರ, ಅಯೂಬ್ ನಾಟೀಕಾರ ಮಾತನಾಡಿ, ಪಟ್ಟಣ ಶಾಂತಿ ಸೌಹಾರ್ದತೆಗೆ ಹೆಸರುವಾಸಿಯಾಗಿದೆ. ‌ಹಾಗಾಗಿ ಯಾವುದೆ ಕಾರಣಕ್ಕೂ ಕೆಟ್ಟ…

Read More

ಕೊಲ್ಹಾರ: ತಾಲೂಕು ಕೇಂದ್ರವಾಗಿ ಎಂಟು ವರ್ಷ ಗತಿಸುತ್ತಾ ಬಂದರೂ ಕೇಂದ್ರ ಸ್ಥಾನವಾದ ಕೊಲ್ಹಾರ ಪಟ್ಟಣದ ಹಾಗೂ ತಾಲೂಕು ವ್ಯಾಪ್ತಿಯ ಹಳ್ಳಿಗಳ ಸಾರ್ವಜನಿಕರು ರೈತಾಪಿ ವರ್ಗದವರು ವಿದ್ಯುತ್ ಸಮಸ್ಯೆಗಳ ಕುರಿತು ಮೇಲಾಧಿಕಾರಿಗಳ ಭೇಟಿಯಾಗಬೇಕಾದರೆ ದೂರದ ನಿಡಗುಂದಿ ಬಸವನ ಬಾಗೇವಾಡಿ ವಿಜಯಪೂರ ನಗರದಲ್ಲಿರುವ ಕಚೇರಿಗೆ ಅಲೆದಾಡುವುದು ತಪ್ಪುತ್ತಿಲ್ಲ.ಪಟ್ಟಣದ ಹಾಗೂ ಸುತ್ತಮುತ್ತಲ ಹಳ್ಳಿಗಳಲ್ಲಿ ಸುಮಾರು ಒಂದು ಸಾವಿರಕ್ಕಿಂತಲೂ ಅಧಿಕವಾದ ಎಚ್.ಟಿ ಲೈನ್ ಮತ್ತು ಹದಿನೈದುನೂರು ಕಿ.ಮೀ ಉದ್ದದ ಎಚ್.ಟಿ ಲೈನ್‌ಗಳು ಹಾಯ್ದುಹೋಗಿದ್ದು ಅಂದಾಜು ೩೨ ಸಾವಿರ ಸ್ಥಾವರಗಳನ್ನು ಹೊಂದಿದ ಕೊಲ್ಹಾರ ತಾಲೂಕು ಕೆಂದ್ರದಿಂದ ಹುಬ್ಬಳ್ಳಿ ವಿದ್ಯುತ್ ನಿಗಮ ನಿಯಮಿತ ಕಂಪನಿಗೆ ಸುಮಾರು ೪ ಕೋಟಿ ರೂ.ಗಿಂತಲೂ ಪ್ರತಿ ತಿಂಗಳು ಅಧಿಕ ಆದಾಯ ಕೊಡುವ ಕೊಲ್ಹಾರ ಪಟ್ಟಣದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಸೆಕ್ಷನ್ ಆಫಿಸ್‌ನ ಕಾರ್ಯ ರೈತರಿಗೆ ವರದಾನವಾಗದೇ ವಿದ್ಯುತ್ ಗ್ರಾಹಕರಿಗೆ ಸರಿಯಾದ ಸೌಲಭ್ಯ ಕೊಡುವಲ್ಲಿ ವಿಫಲವಾಗುವದನ್ನು ತಪ್ಪಿಸಲು ತಾಲೂಕು ಕೇಂದ್ರದಲ್ಲಿರುವ ಕಾರ್ಯ ಮತ್ತು ಪಾಲನಾ ಕಾರ್ಯನಿರ್ವಾಹಕ ಅಧಿಕಾರಿಗಳ ಉನ್ನತ ದರ್ಜೆಯ ಉಪವಿಭಾಗ ಕಚೇರಿ ಅತೀ ಅವಶ್ಯಕವಾಗಿದೆ.ಒಂದು ಲಕ್ಷ…

Read More

“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ – ಗದಗ ಐಷಾರಾಮಿ ಹಾಸಿಗೆಯ ಮೇಲೆ ಮಲಗಬಹುದು.. ನಿದ್ದೆಯನ್ನು ಕೊಳ್ಳಲು ಸಾಧ್ಯವಿಲ್ಲ,ಮೃಷ್ಟಾನ್ನ ಭೋಜನ ತಟ್ಟೆಯಲ್ಲಿಹುದು.. ಆದರೆ ಹಸಿವಿಲ್ಲ,ಜಗತ್ತಿನ ಎಲ್ಲ ಸುಖಗಳು ಅಂಗೈಯಲ್ಲಿ ಸಿಗಬಹುದು.. ಅನುಭವಿಸಲು ಆರೋಗ್ಯವಿಲ್ಲಹಾಗಾದರೆ ಓರ್ವ ವ್ಯಕ್ತಿಗೆ ಬದುಕಿನಲ್ಲಿ ಮುಖ್ಯವಾಗಿ ಬೇಕಾದದ್ದು ಯಾವುದು?? ಎಲ್ಲವೂ ಇದ್ದು ಏನೂ ಇಲ್ಲದಂತಹ ಮಾನಸಿಕ ವಿಷಣ್ಣತೆ ಮನುಷ್ಯನನ್ನು ಕಾಡುವುದಾದರೂ ಏಕೆ?ಇದಕ್ಕೆ ಪರಿಹಾರಗಳು ಉಂಟೆ?ಖಂಡಿತವಾಗಿಯೂ.. ಒಂದು ಸೂಕ್ಷ್ಮ ಜೀವಕೋಶದಿಂದ ಉದಿಸಿದ,ಒಂದು ಹತ್ತಾಗಿ ಹತ್ತು ಇಪ್ಪತ್ತಾಗಿ ಲಕ್ಷಾಂತರ ಜೀವಕೋಶಗಳ ಹೊಂದಿರುವ ಮನುಷ್ಯನ ನಿಜವಾದ ಅವಶ್ಯಕತೆಗಳು ಬಹಳವೇ ಕಡಿಮೆ. ತಾನು ತನ್ನದು ತನಗಾಗಿ ಎಂದು ಆತ ವೈಯುಕ್ತಿಕ ಪರಿಧಿಯಲ್ಲಿ ಯೋಚಿಸಲಾರಂಭಿಸಿದರೆ ಈ ಭೂಮಿಯ ಮೇಲಿರುವ ಎಲ್ಲವೂ ಆತನ ಬೇಡಿಕೆಯ ಪರಿಧಿಯಲ್ಲಿ ಬರುತ್ತದೆ.ಮೂಲಭೂತವಾಗಿ ಮನುಷ್ಯನಿಗೆ ಮುಖ್ಯವಾಗಿ ಬೇಕಾಗಿರುವುದು.. ಒಂದೊಳ್ಳೆಯ ಆರೋಗ್ಯ, ಸೊಂಪಾದ ನಿದ್ರೆ, ಪೌಷ್ಟಿಕ ಆಹಾರ, ಪ್ರಕೃತಿಯೊಂದಿಗೆ ಒಡನಾಟ, ತನ್ನವರ ಪ್ರೀತಿ ವಿಶ್ವಾಸ, ಸಮಯ ಮತ್ತು ತನ್ನಿಚ್ಛೆಯಂತೆ ಬದುಕುವ ಸ್ವಾತಂತ್ರ್ಯ.. ಇವುಗಳಲ್ಲಿ ಕೆಲವನ್ನು ವೈಯುಕ್ತಿಕ ಸಾಧನೆಯ ಮೂಲಕ ಸಂಪಾದಿಸಿಕೊಂಡರೆ ಮತ್ತೆ ಕೆಲವು…

Read More

ಪ್ರೊ.ಧರ್ಮರಾಜ ಎಸ್ ಕುಂಬಾರಉಪನ್ಯಾಸಕರು ಮತ್ತು ಉದ್ಯೋಗ ತರಬೇತಿ ಅಧಿಕಾರಿ, ಅಥಣಿ ಜಗತ್ತು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ, ಜಗತ್ತಿನ ಯಾವುದೇ ಒಂದು ಕ್ಷೇತ್ರದಿಂದ ತೆಗೆದುಕೊಂಡರು ಸಹ ಅಲ್ಲಿ ನಾಯಕನಿಗಾಗಿ ಒಂದು ವಿಶೇಷ ಸ್ಥಾನವಿದೆ. ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಈ ಸಂದರ್ಭದಲ್ಲಿ, ನಾಯಕನ ಸ್ಥಾನಕ್ಕೆ ಅತಿ ಹೆಚ್ಚಿನ ಮಹತ್ವ ಬಂದಿದೆ. ಇದರ ಬಗ್ಗೆ ವಿಶ್ಲೇಷಣೆ ಮಾಡಿದಾಗ ನಮಗೆ ತಿಳಿಯುವುದು ಏನೆಂದರೆ ಯಾವ ರೀತಿಯ ನಾಯಕ ನಮಗೆ ಬೇಕು, ನಾಯಕನಲ್ಲಿ ಎಷ್ಟು ಪ್ರಕಾರಗಳು?.ನಾಯಕನಲ್ಲಿ ಪ್ರಕಾರಗಳು ಇಲ್ಲ ಕೆಟ್ಟ ನಾಯಕ, ಒಳ್ಳೆಯ ನಾಯಕ, ಬುದ್ಧಿವಂತ ನಾಯಕ ಎಂಬ ವಿಧಗಳು ಇಲ್ಲ. ನಾಯಕ ಎಂದ ಮೇಲೆ ನಾಯಕ ಅಷ್ಟೇ. ಆದರೆ ಬದಲಾವಣೆಗೊಳ್ಳುತ್ತಿರುವ ಈ 21ನೇ ಶತಮಾನದಲ್ಲಿ ನಾಯಕನಿಗೆ ಇರಬೇಕಾದ ಕೌಶಲ್ಯಗಳು ನವೀಕರಣಗೊಂಡಿವೆ ಎಂದರೆ ತಪ್ಪಾಗಲಾರದು.ಉದ್ಯೋಗಿಗಳಲ್ಲಿ ಇರುವ ಕೌಶಲ್ಯವನ್ನು ಗುರುತಿಸಿ ಅವುಗಳನ್ನು ಬಳಸಿಕೊಂಡು ಸಂಸ್ಥೆಯನ್ನು ಅತ್ಯುನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗುವ ನಾಯಕರು ನಮಗೆ ಇವತ್ತು ಬೇಕಾಗಿದ್ದಾರೆ. ನಾಯಕನಾದವನು ಕೇವಲ ಭಾಷಣಕ್ಕೆ ಸೀಮಿತವಾಗಬಾರದು, ಒಬ್ಬ ಅತ್ಯುತ್ತಮ ಆಲಿಸುವನಾಗಿರಬೇಕು ಮತ್ತು ಸಭೆಯಲ್ಲಿ ಎಲ್ಲರಿಗೂ…

Read More

ಬೆಂಗಳೂರು: ಹವಾಮಾನ ವೈಪರೀತ್ಯದಿಂದಾಗಿ ಉತ್ತರಾಖಂಡದಲ್ಲಿ ಪ್ರಾಣ ಕಳೆದುಕೊಂಡ ಕರ್ನಾಟಕದ ಒಂಬತ್ತು ಚಾರಣಿಗರ ಮೃತದೇಹಗಳನ್ನು ಶುಕ್ರವಾರ ದೆಹಲಿ ಮೂಲಕ ಬೆಂಗಳೂರಿಗೆ ತರಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮೇ 29 ರಂದು ಉತ್ತರಕಾಶಿಯಿಂದ 35 ಕಿಮೀ ದೂರದ ಚಾರಣಕ್ಕೆ 22 ಸದಸ್ಯರ ಟ್ರೆಕ್ಕಿಂಗ್ ತಂಡವನ್ನು ಮನೇರಿಯ ಹಿಮಾಲಯನ್ ವ್ಯೂ ಟ್ರೆಕ್ಕಿಂಗ್ ಏಜೆನ್ಸಿಯಿಂದ ಕಳುಹಿಸಲಾಗಿತ್ತು. ಈ ತಂಡದಲ್ಲಿ ಕರ್ನಾಟಕದ 18 ಚಾರಣಿಗರು ಮತ್ತು ಮಹಾರಾಷ್ಟ್ರದ ಓರ್ವರ ಜೊತೆಗೆ ಮೂವರು ಸ್ಥಳೀಯ ಮಾರ್ಗದರ್ಶಕರಿದ್ದರು.ಈ ಕುರಿತು ಮಾಹಿತಿ ನೀಡಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಡೆಹ್ರಾಡೂನ್ ವಿಮಾನ ನಿಲ್ದಾಣದಿಂದ ಎಲ್ಲಾ ಒಂಬತ್ತು ಮೃತದೇಹಗಳನ್ನು ಎಂಬಾಮಿಂಗ್ ಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದೇವೆ. ಎಂಬಾಮ್ ಮಾಡಿದ ನಂತರ ಮೃತದೇಹಗಳನ್ನು ದೆಹಲಿ ವಿಮಾನ ನಿಲ್ದಾಣಕ್ಕೆ ಆಂಬ್ಯುಲೆನ್ಸ್‌ಗಳಲ್ಲಿ ಸಾಗಿಸಲಾಗುವುದು. ನಾಳೆ ಬೆಳಿಗ್ಗೆ ದೆಹಲಿ-ಬೆಂಗಳೂರು ವಿಮಾನಗಳಲ್ಲಿ ಜಾಗವನ್ನು ಕಾಯ್ದಿರಿಸಲಾಗಿದೆ. ಮೃತರ ವಿವರಗಳನ್ನು ತಿಳಿಸುತ್ತೇವೆ ಎಂದು ತಿಳಿಸಿದ್ದಾರೆ. ಈ ಮಧ್ಯೆ ರಕ್ಷಿಸಲಾದ ಎಲ್ಲಾ 13 ಚಾರಣಿಗರು ಇಂದು ಸಂಜೆಯೊಳಗೆ ಬೆಂಗಳೂರು ತಲುಪುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮಹಿಳೆಯರೂ ಸೇರಿದಂತೆ ಎಂಟು…

Read More