ವಿಜಯಪುರ: ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಮದಾಪುರ ಗ್ರಾಮದಲ್ಲಿ ಚಲವಾದಿ ಸಮಾಜದ ವತಿಯಿಂದ ಬುದ್ಧ, ಬಸವ, ಅಂಬೇಡ್ಕರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ S.S.L.C. ಮತ್ತು ಪಿ.ಯು.ಸಿಯಲ್ಲಿ 95% ಕ್ಕಿಂತ ಹೆಚ್ಚಿಗೆ ಅಂಕ ಪಡೆದ ಪ್ರತಿಭಾವಂತ 8 ಜನ ಮಕ್ಕಳಿಗೆ ಅದ್ದೂರಿಯಾಗಿ ಸನ್ಮಾನಿಸಲಾಯಿತು. ಇದೇ ಸಮಯದಲ್ಲಿ ಸಂಪೂರ್ಣ ಮಧ್ಯಪಾನ ತ್ಯಜಿಸಿ ಮುಖ್ಯವಾಹಿನಿಗೆ ಬಂದ 1) ಪುಂಡಲಿಕ ಶೇಗುಣಸಿ 2) ಚಿದಾನಂದ ಚಲವಾದಿ ಇವರಿಗೂ ವಿಶೇಷ ಸನ್ಮಾನಿಸಲಾಯಿತು ಮತ್ತು S.C. ವಿದ್ಯಾರ್ಥಿ ಗಂಗಾಧರ ಈತನು L.L.B ಪಾಸಾಗಿ ವಕೀಲನಾಗಿದ್ದಕ್ಕಾಗಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತಾಡಿದ S.C. ಬಡ ವಿದ್ಯಾರ್ಥಿನಿ ಸೈನಿಕನ ಮಗಳಾದ ಭುವನೇಶ್ವರಿ ಕಟ್ಟಿಮನಿ ನಾನು 2022ರಲ್ಲಿ ಸರಕಾರಿ ಶಾಲೆ ಕಾರಜೋಳ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಯಿಂದ 99.84 ಅಂಕ ಪಡೆದು ರಾಜ್ಯಕ್ಕೆ 2 ನೇ ರ್‍ಯಾಂಕ್ ಗಳಿಸಿದರೂ ನನಗೆ ಸರಕಾರದಿಂದ ಮತ್ತು ಜಿಲ್ಲಾಡಳಿತದಿಂದ ಬಹುಮಾನವೂ ಇಲ್ಲ. ಸನ್ಮಾನವೂ ಇಲ್ಲ, ಯಾಕೆಂದರೆ ನಾನು ಎಸ್.ಸಿ. ವಿದ್ಯಾರ್ಥಿನಿ. ಆದರೆ ಈ ವರ್ಷ ನನ್ನಂತೆ ಮೇಲ್ವರ್ಗದ ಅಂಕಿತಾ ಕೊಣ್ಣೂರ ಬಾಗಲಕೋಟೆ ಜಿಲ್ಲೆಯಿಂದ ಸರಕಾರಿ ಶಾಲೆಯಿಂದ S.S.L.C. ಯಲ್ಲಿ ರಾಜ್ಯಕ್ಕೆ 1ನೇ ರಾಂಕ 100ಕ್ಕೆ 100 ಅಂಕ ಪಡೆದು ಪಾಸಾಗಿದ್ದಕ್ಕಾಗಿ ಮುಖ್ಯಮಂತ್ರಿಗಳಿಂದ. ಉಪ ಮುಖ್ಯಮಂತ್ರಿ, ಸಮಾಜ ಕಲ್ಯಾಣ ಮಂತ್ರಿ ಅನೇಕರಿಂದ 50 ಲಕ್ಷದವರೆಗೆ ಬಹುಮಾನ ಸನ್ಮಾನ ಹರಿದು ಬರುತ್ತಲೇ ಇದೆ.
ಈ ರೀತಿ S.C.(ಚಲವಾದಿ) ವಿದ್ಯಾರ್ಥಿನಿಗೊಂದು ಮೇಲವರ್ಗದ ವಿದ್ಯಾರ್ಥಿನಿಗೊಂದು ಸರಕಾರವೇ ಕುಳಿತು ಭೇದಭಾವ ಮಾಡಬಾರದೆಂದು ತನ್ನ ನೋವು ತೋಡಿಕೊಂಡು ಕಣ್ಣೀರು ಹಾಕಿದಳು.
ಅಧ್ಯಕ್ಷ ಸ್ಥಾನ ವಹಿಸಿ ಮಾತಾಡಿದ ಮಹಾವಿದ್ಯಾಲಯದ ಅಧ್ಯಕ್ಷ ಕೃಷ್ಣಾಜಿ ಕುಲಕರ್ಣಿಯವರು ಈ ಚಲವಾದಿ ವಿದ್ಯಾರ್ಥಿನಿಗೆ ನಿನ್ನ ನೋವನ್ನು ನಾನು ಬೃಹತ್ ಕೈಗಾರಿಕೆ ಮತ್ತು ವಿಜಯಪುರ ಉಸ್ತುವಾರಿ ಮಂತ್ರಿ ಎಮ್. ಬಿ. ಪಾಟೀಲ ಸಾಹೇಬರು ಕೂಡ ಮಾತಾಡಿ ನಿನಗೆ ಸರಕಾರದಿಂದ ಸಹಾಯ ಸಿಗುವಂತೆ ಮಾಡುತ್ತೇನೆಂದು ಭರವಸೆ ಕೊಟ್ಟು ವಿದ್ಯಾರ್ಥಿನಿಯನ್ನು ಸಮಾಧಾನ ಪಡಿಸಿದರು. 95% ಕಿಂತ ಹೆಚ್ಚು ಅಂಕ ಪಡೆದ 8 ವಿದ್ಯಾರ್ಥಿಗಳಿಗೆ ತಮ್ಮ P.D.J. ಮಹಾವಿದ್ಯಾಲಯದಲ್ಲಿ ಉಚಿತವಾಗಿ ಎಡಿಶನ್ ಕೊಡಿಸುವುದಾಗಿ ಭರವಸೆ ನೀಡಿದರು.
ಸಂತೋಷ ಶಾಪೂರ, ಬಸವರಾಜ ಚಲವಾದಿ ಉಪನ್ಯಾಸ ನೀಡಿದರು. ಸಭೆಯಲ್ಲಿ ರಿಗೆ ಸುಪರಿಡೆಂಟ ಇಂಜಿನೀಯರ ಮಧ್ವಾಚಾರ್ಯ ಕುಲಕರ್ಣಿ, ಬಸು ಸಾವಕಾರ ಗಲಗಲಿ, ಶ್ರೀ ಸದಾಶಿವಯ್ಯ ಖಾಕಂಡಕಿಮಠ, ಎಚ್. ಎಮ್. ಪುರೋಹಿತ ಮತ್ತು ಜಯಂತಿಯ ರೂವಾರಿ, ಸಾಬೂ ಚಲವಾದಿ, ಮುತ್ತೇಶ ಗಡ್ಡದಮಠ, ರಾಮಜಿ ಅವಟಿ, ಕೃಷ್ಣಾ ಕಟ್ಟಿಮನಿ, ಶ್ರೀಶೈಲ ಕಟ್ಟಿಮನಿಹುಸೇನಿಕೀಜ, ಶಾಮನಾಯಕ, ರುಕ್ಕೋದ್ದೀನ ಕಾಗಿ, ಲಕ್ಷ್ಮೀಕಾಂತ ಮಮದಾಪುರ ಬಾಬು ಶೇಗವಾಸಿ, ಚನ್ನಪ್ಪ ಕಟ್ಟಿಮನಿ ಅನೇಕರು ಹಾಜರಿದ್ದರು.
ಸುಜಾತಾ ಚಲವಾದಿ ಆರೋಗ್ಯ ಇಲಾಖೆ ಸ್ವಾಗತ ಗೀತೆ ಹಾಡಿದರು. ಮಲ್ಲು ಚಲವಾದಿ ಶಿಕ್ಷಕರು ನಿರೂಪಣೆ ಮಾಡಿದರು. ಸಾಬೂ ಚಲವಾದಿ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

