ಇಂಡಿ: ಸಂಸದ ರಮೇಶ ಜಿಗಜಿಣಗಿ ಅವರ ಅಭಿವೃಧ್ಧಿ ಕಾರ್ಯಗಳಿಗೆ ಮೆಚ್ಚಿ ಜಿಲ್ಲೆಯ ಜನರು ಮತ್ತೆ ಜಿಗಜಿಣಗಿ ಅವರ ಕೈ ಹಿಡಿದಿದ್ದಾರೆ. ಜಿಗಜಿಣಗಿ ಅವರು ಜಿಲ್ಲೆಯಲ್ಲಿ ಇನ್ನಷ್ಟು ಅಭಿವೃಧ್ಧಿ ಕಾರ್ಯ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹೇಳಿದರು.
ಅವರು ಶುಕ್ರವಾರ ತಾಲೂಕಿನ ಬಳ್ಳೊಳ್ಳಿ ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬಿಜೆಪಿ ಲೋಕಸಬಾ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರು ಗೆಲುವು ಸಾಧಿಸಿದ್ದ ಪ್ರಯುಕ್ತ ಹಮ್ಮಿಕೊಂಡ ವಿಜಯೋತ್ಸವ ಸಮಾರಂಭದಲ್ಲಿ ಸಿಹಿ ಹಂಚಿ ಮಾತನಾಡಿದರು.
ಇಂಡಿ ಮತಕ್ಷೇತ್ರ ಸಂಸದ ಜಿಗಜಿಣಗಿ ಅವರ ತವರು ಕ್ಷೇತ್ರವಾಗಿದ್ದು ತವರಿನ ಜನ ರಮೇಶ ಜಿಗಜಿಣಗಿ ಅವರ ಕೈ ಹಿಡಿದು ಕಮಲ ಅರಳಿಸಿದ್ದಾರೆ. ಜಿಗಜಿಣಗಿ ಅವರು ಸಹ ಇಂಡಿ ಕ್ಷೇತ್ರದ ಬಗ್ಗೆ ಅಪಾರ ಕಾಳಜಿ ಹಾಗೂ ಗೌರವ ಹೊಂದಿದ್ದಾರೆ. ಹೀಗಾಗಿ ಈ ಬಾರಿ ಇಂಡಿ ಕ್ಷೇತ್ರದಲ್ಲಿಯೂ ಹೆಚ್ಚಿನ ಕೆಲಸ ಮಾಡಲಿ, ಅವರಿಗೆ ಕೇಂದ್ರದಲ್ಲಿ ಉನ್ನತ ಸ್ಥಾನಮಾನ ದೊರೆಯಲಿ ಎಂದು ಆಶಿಸುವುದಾಗಿ ತಿಳಿಸಿದರು.
ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಾಪಸೆ ಮಾತನಾಡಿ, ಕೇಂದ್ರ ಸರಕಾರದ ಅಭಿವೃಧ್ಧಿ ಕಾರ್ಯಗಳು ಹಾಗೂ ಸಂಸದ ಜಿಗಜಿಣಗಿ ಅವರು ಜಿಲ್ಲೆಯಲ್ಲಿ ಮಾಡಿದ ಅಭಿವೃಧ್ಧಿ ಕಾರ್ಯಗಳಿಗೆ ಜನತೆ ಮನಸೋತು ಮತದಾನ ಮಾಡಿದ್ದಾರೆ. ಈ ಬಾರಿಯೂ ಬಿಜೆಪಿ ಸರಕಾರ ರಚನೆಯಾಗಲಿದ್ದು, ದೇಶ ಉತ್ಯುಂಗಕ್ಕೇರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸಂಭ್ರಮಾಚರಣೆಯಲ್ಲಿ ವಿಠ್ಠಲ ಶಿರಶ್ಯಾಡ, ಸದಾಶಿವ ರೇವತಗಾಂವ, ರವಿ ಹೂಗಾರ, ಸಿದ್ದಾರಾಮ ವಾಲಿ, ಶರಣಯ್ಯ ಮಠಪತಿ, ಸಿದ್ದು ತೇಲಿ, ಮಹಾದೇವ ಕದರಿ, ಅಶೋಕ ತೋಟದಾರ, ವಿಠ್ಠಲ ಕಾಗರ ಸೇರಿದಂತೆ ಮತ್ತಿತರರು ಇದ್ದರು.
Subscribe to Updates
Get the latest creative news from FooBar about art, design and business.
ಅಭಿವೃಧ್ಧಿ ಕಾರ್ಯಗಳಿಂದ ಜಿಗಜಿಣಗಿ ಗೆಲುವು :ಅಪ್ಪು ಪಟ್ಟಣಶೆಟ್ಟಿ
Related Posts
Add A Comment

