ಕೊಲ್ಹಾರ: ತಾಲೂಕು ಕೇಂದ್ರವಾಗಿ ಎಂಟು ವರ್ಷ ಗತಿಸುತ್ತಾ ಬಂದರೂ ಕೇಂದ್ರ ಸ್ಥಾನವಾದ ಕೊಲ್ಹಾರ ಪಟ್ಟಣದ ಹಾಗೂ ತಾಲೂಕು ವ್ಯಾಪ್ತಿಯ ಹಳ್ಳಿಗಳ ಸಾರ್ವಜನಿಕರು ರೈತಾಪಿ ವರ್ಗದವರು ವಿದ್ಯುತ್ ಸಮಸ್ಯೆಗಳ ಕುರಿತು ಮೇಲಾಧಿಕಾರಿಗಳ ಭೇಟಿಯಾಗಬೇಕಾದರೆ ದೂರದ ನಿಡಗುಂದಿ ಬಸವನ ಬಾಗೇವಾಡಿ ವಿಜಯಪೂರ ನಗರದಲ್ಲಿರುವ ಕಚೇರಿಗೆ ಅಲೆದಾಡುವುದು ತಪ್ಪುತ್ತಿಲ್ಲ.
ಪಟ್ಟಣದ ಹಾಗೂ ಸುತ್ತಮುತ್ತಲ ಹಳ್ಳಿಗಳಲ್ಲಿ ಸುಮಾರು ಒಂದು ಸಾವಿರಕ್ಕಿಂತಲೂ ಅಧಿಕವಾದ ಎಚ್.ಟಿ ಲೈನ್ ಮತ್ತು ಹದಿನೈದುನೂರು ಕಿ.ಮೀ ಉದ್ದದ ಎಚ್.ಟಿ ಲೈನ್‌ಗಳು ಹಾಯ್ದುಹೋಗಿದ್ದು ಅಂದಾಜು ೩೨ ಸಾವಿರ ಸ್ಥಾವರಗಳನ್ನು ಹೊಂದಿದ ಕೊಲ್ಹಾರ ತಾಲೂಕು ಕೆಂದ್ರದಿಂದ ಹುಬ್ಬಳ್ಳಿ ವಿದ್ಯುತ್ ನಿಗಮ ನಿಯಮಿತ ಕಂಪನಿಗೆ ಸುಮಾರು ೪ ಕೋಟಿ ರೂ.ಗಿಂತಲೂ ಪ್ರತಿ ತಿಂಗಳು ಅಧಿಕ ಆದಾಯ ಕೊಡುವ ಕೊಲ್ಹಾರ ಪಟ್ಟಣದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಸೆಕ್ಷನ್ ಆಫಿಸ್‌ನ ಕಾರ್ಯ ರೈತರಿಗೆ ವರದಾನವಾಗದೇ ವಿದ್ಯುತ್ ಗ್ರಾಹಕರಿಗೆ ಸರಿಯಾದ ಸೌಲಭ್ಯ ಕೊಡುವಲ್ಲಿ ವಿಫಲವಾಗುವದನ್ನು ತಪ್ಪಿಸಲು ತಾಲೂಕು ಕೇಂದ್ರದಲ್ಲಿರುವ ಕಾರ್ಯ ಮತ್ತು ಪಾಲನಾ ಕಾರ್ಯನಿರ್ವಾಹಕ ಅಧಿಕಾರಿಗಳ ಉನ್ನತ ದರ್ಜೆಯ ಉಪವಿಭಾಗ ಕಚೇರಿ ಅತೀ ಅವಶ್ಯಕವಾಗಿದೆ.
ಒಂದು ಲಕ್ಷ ಇಪ್ಪತ್ತು ಸಾವಿರ ಎಕರೆ ಭೂಪ್ರದೇಶವನ್ನು ಮತ್ತು ಒಂದು ಲಕ್ಷ ಹದಿನೆಂಟು ಸಾವಿರ ಜನಸಂಖ್ಯೆಯನ್ನು ಹೊಂದಿರುವ ತಾಲೂಕು ಕೆಂದ್ರದಲ್ಲಿ ಸುಮಾರು ನಾಲ್ಕು ೧೧೦ ಕೆ.ವಿ ಸ್ಟೇಶನ್‌ಗಳು, ೫೦ ಫೀಡರ್‌ಗಳ ಸಂಖ್ಯೆ, ೩೦೦೦ ಪರಿವರ್ತಕಗಳನ್ನು ಹೊಂದಿದ ಇನ್ನೂ ಅಧಿಕ ಸಂಪರ್ಕವನ್ನು ಪಡೆಯುವ ವಿದ್ಯುತ್ ಗ್ರಾಹಕರನ್ನು ಹಾಗೂ ಹಲವಾರು ಉದ್ಯಮಿಗಳು ತಮ್ಮ ಉದ್ಯಮಗಳನ್ನು ಸ್ಥಾಪಿಸಲು ಕೊಲ್ಹಾರ ಪಟ್ಟಣವನ್ನು ಆಯ್ಕೆಮಾಡಿಕೊಳ್ಳುತ್ತಿದ್ದು ಇಂಥಹ ಗ್ರಾಹಕರು ವಿದ್ಯುತ್ ಸಂಪರ್ಕದ ಸಲುವಾಗಿ ಅಧಿಕಾರಿಗಳನ್ನು ಸಂಪರ್ಕಿಸುವಾಗ ಈಗಿರುವ ಅಧಿಕಾರಿಗಳ ಕಚೇರಿಮೂಲಕ ಗ್ರಾಹಕರ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತಿಲ್ಲ ಕಾರಣ ಮೇಲಾಧಿಕಾರಿಗಳ ದರ್ಜೆಯ ಕಚೇರಿ ಇಲ್ಲಿ ಕಾರ್ಯನಿರ್ವಹಿಸದೇ ಇಲ್ಲದೇ ಇರುವದರಿಂದ ಆದ್ದರಿಂದ ಕೊಲ್ಹಾರ ಪಟ್ಟಣದಲ್ಲಿ ಇಂಧನ ಇಲಾಖೆಯ ಕಾರ್ಯ ಮತ್ತು ಪಾಲನಾ ಉಪ ವಿಭಾಗವನ್ನು ಹುದ್ದೆಗಳ ಸಮೇತ ಸರಕಾರವು ಮಂಜೂರು ಮಾಡಿ ಅನುಕೂಲ ಮಾಡಿಕೊಡಬೇಕು.
Subscribe to Updates
Get the latest creative news from FooBar about art, design and business.
ಕೊಲ್ಹಾರದಲ್ಲಿ ಕೆಇಬಿ ಉಪವಿಭಾಗ ಕಚೇರಿ ಆರಂಭಕ್ಕೆ ನಾಗರಿಕರ ಒತ್ತಾಯ
Related Posts
Add A Comment
