Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಕಲಬುರ್ಗಿ: ಡಾ.ವಿಷ್ಣುಸೇನಾ ಸಮಿತಿ ವಿಜಯಪುರ ಜಿಲ್ಲಾ ಘಟಕದಿಂದ ಜಿಲ್ಲಾಧ್ಯಕ್ಷ ವಿಷ್ಣು ಸಂಗಮೇಶ್ ಅವರ ನೇತೃತ್ವದಲ್ಲಿ ಶನಿವಾರ ವಿಷ್ಣುಸೇನಾ ಸಮಿತಿಯ ರಾಜ್ಯಾಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರ ಹುಟ್ಟು ಹಬ್ಬ ಆಚರಿಸಲಾಯಿತು.ಜನುಮದಿನ ಪ್ರಯುಕ್ತವಾಗಿ ಅಫಜಲಪುರ ತಾಲೂಕಿನ ಚಿಂಚೋಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮುದ್ದು ಮಕ್ಕಳ ಜೊತೆ ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಲಾಯಿತು.ಇದೇ ಸಂದರ್ಭದಲ್ಲಿ ಅಫಜಲಪುರ ತಾಲೂಕು ಕರ್ನಾಟಕ ರೈತ ಸಂಘದ ಅಧ್ಯಕ್ಷ ಮಹಾಂತೇಶ್ ಜಮಾದಾರ, ಉದ್ಯಮಿ ಶಿವಶಂಕರ ಜಗದೀ, ಮುಖಂಡರಾದ ಶ್ರೀಶೈಲ ಗೋಳೆ, ನಜೀರ್ ಮಲ್ಲಾಬಾದ, ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷ ಭಗವಂತ ರಾಯ ಹೂಗಾರ, ಪ್ರಶಾಂತ್ ರಾಚಗೋಳ, ರವಿ ಸುತಾರ ಸೇರಿದಂತೆ ಶಾಲೆಯ ಮುಖ್ಯ ಗುರುಗಳು ಹಾಗೂ ಮುದ್ದು ಮಕ್ಕಳು ಉಪಸ್ಥಿತರಿದ್ದರು.
ಆಲಮಟ್ಟಿ: ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಆರಂಭಗೊಂಡಿದ್ದು, ಈ ವರ್ಷದ ಮೊದಲ ಒಳಹರಿವು ದಾಖಲಾಗಿದೆ. 1,768 ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, ಕೃಷ್ಣಾ ನದಿ ಪಾತ್ರದ ಜನರ ಸಂತಸಕ್ಕೆ ಕಾರಣವಾಗಿದೆ. ಕಳೆದ ವರ್ಷ ಜೂನ್ ಕಳೆದರೂ ಒಳಹರಿವು ಇರಲಿಲ್ಲ. ಆದರೆ ಈ ವರ್ಷ ಜೂನ್ ಮೊದಲ ವಾರವೇ ಒಳಹರಿವು ಆರಂಭವಾದ ಕಾರಣ ಕೃಷ್ಣಾ ನದಿ ಪಾತ್ರದ ಜನರಿಗೆ ಸಂತಸ ತಂದಿದೆ.ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಸುರಿದ ಮಳೆಯಿಂದ ಈ ಒಳಹರಿವು ಬಂದಿದ್ದು, ಇನ್ನೂ ಮಹಾರಾಷ್ಟ್ರದಿಂದ ಬಿಟ್ಟ ನೀರು ಬಂದಿಲ್ಲ.ಕಳೆದ ವರ್ಷ ಮಳೆಯ ಅಭಾವ, ನೀರಿನ ಬರ ಅನುಭವಿಸಿದ ರೈತರಿಗೆ ಈ ಬಾರಿ ಅಣೆಕಟ್ಟಿಗೆ ನೀರು ಬಂದ ಕಾರಣ ನೆಮ್ಮದಿಯ ನಿಟ್ಟುಸಿರು ಬಿಟ್ಟಂತಾಗಿದೆ.ಜಲಾಶಯ ಶೀಘ್ರ ಭರ್ತಿಯತ್ತ ಸಾಗಲಿ ಎಂದು ರೈತರ ಅಪೇಕ್ಷೆಯಾಗಿದೆ.ನೀರಿನ ಸಂಗ್ರಹದ ಮಾಹಿತಿ:519.60 ಮೀ ಗರಿಷ್ಟ ಎತ್ತರದ ಆಲಮಟ್ಟಿ ಜಲಾಶಯದಲ್ಲಿ ಶುಕ್ರವಾರ 507.79 ಮೀ, ವರೆಗೆ ನೀರು ಇತ್ತು. 123.081 ಟಿಎಂಸಿ ಗರಿಷ್ಠ ಸಂಗ್ರಹದ ಜಲಾಶಯದಲ್ಲಿ 20.6 ಟಿಎಂಸಿ ನೀರಿದೆ. ಅದರಲ್ಲಿ ಬಳಕೆಯೋಗ್ಯ 3 ಟಿಎಂಸಿ…
ಢವಳಗಿ: ಮುಂದಿನ ಪೀಳಿಗೆಗೆ ನಾವು ಪರಿಸರವನ್ನು ಉಳಿಸಿ ಹೋಗಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು ಗಿಡಗಳನ್ನು ನೆಡುವ ಮೂಲಕ ಪ್ರತಿಯೊಬ್ಬರು ಹಸಿರು ಉಳಿಸುವ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಬೆಂಗಳೂರಿನ ಸರ್ದಾರ್ ವಲ್ಲಭಬಾಯಿ ಪಟೇಲ್ ಸೊಸೈಟಿಯ ಮುಖ್ಯಸ್ಥ ಡಾ.ಬಾಲಕೃಷ್ಣ ರೆಡ್ಡಿ ಹೇಳಿದರು.ತಾಲ್ಲೂಕಿನ ಢವಳಗಿಯ ಮಡಿವಾಳೇಶ್ವರ ಉಚಿತ ಪ್ರಸಾದ ನಿಲಯದ ಆವರಣದಲ್ಲಿ ಶುಕ್ರವಾರ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸರ್ದಾರ್ ವಲ್ಲಭಬಾಯಿ ಪಟೇಲ್ ಸೊಸೈಟಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಪರಿಸರ ನಮಗೆ ಎಲ್ಲವನ್ನೂ ಕೊಟ್ಟಿದೆ. ಆದರೆ ಮನುಷ್ಯರು ಪರಿಸರಕ್ಕೆ ಹಾನಿಯನ್ನೇ ಮಾಡುತ್ತ ಹೊರಟಿದ್ದು ಉಷ್ಣಾಂಶದ ನಿಯಂತ್ರಣಕ್ಕೆ ಗಿಡಗಳನ್ನು ಬೆಳೆಸಿ ಅವುಗಳನ್ನು ಕಾಪಾಡುವುದೇ ನಮ್ಮ ಆದ್ಯ ಕರ್ತವ್ಯವಾಗಬೇಕು ಎಂದರು.ಮುಖಂಡ ಉಮೇಶ ಕಮ್ಮಾರ ಮಾತನಾಡಿ, ಪರಿಸರದ ಉಳಿವಿನಿಂದ ಜೀವ ಸಂಕುಲದ ಉಳಿವು ಸಾಧ್ಯ. ಬೇಸಿಗೆಯಲ್ಲಿ ಎದುರಿಸಿದ ಕಷ್ಟವನ್ನು ನಾವೆಲ್ಲ ಗಮನಿಸಿದ್ದೇವೆ. ಶಾಖ, ಉಷ್ಣಾಂಶವನ್ನು ಹೆಚ್ಚಳಗೊಳ್ಳಲು ಬಿಡದೇ ಪರಿಸರದ ಸಮತೋಲನಕ್ಕೆ ಅಗತ್ಯವಿರುವ ಕಾರ್ಯಗಳನ್ನು ಸಂಘ ಸಂಸ್ಥೆಗಳು,ಸಾಮಾಜಿಕ ಸಂಘಟನೆಗಳು ಕೈಗೊಳ್ಳಬೇಕು ಎಂದರು.ಶಿಬಿರದ…
ಸಿಂದಗಿ: ಪಟ್ಟಣದವನ್ನು ಹಚ್ಚಹಸಿರು ಮಾಡಲು ತಾಲೂಕಾ ಅರಣ್ಯ ಇಲಾಖೆ ಶ್ರಮ ಪಡುತ್ತಿದೆ. ಪರಿಸರ ಉಳಿದರೆ ಮಾತ್ರ ನಮ್ಮೆಲ್ಲರ ಬದುಕು ಹಸನವಾಗುತ್ತದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಅವರು ಪಟ್ಟಣದ ಪ್ರಾದೇಶಿಕ ಅರಣ್ಯ ಇಲಾಖೆ ಹಾಗೂ ಸಾಮಾಜಿಕ ವಲಯ ಅರಣ್ಯ ಇಲಾಖೆಗಳ ಸಹಯೋಗದಲ್ಲಿ ಶನಿವಾರ ವನಮಹೋತ್ಸವ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಮಾತನಾಡಿದರು.ಸಿಂದಗಿ ನಗರದ ಎಲ್ಲ ಬಡಾವಣೆಗಳಲ್ಲಿ ಈ ಬಾರಿ ಸಸಿ ನೆಡುವ ಯೋಜನೆ ಇದೆ. ಪ್ರತಿಯೊಬ್ಬರು ತಮ್ಮ ತಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ನೆಟ್ಟ ಸಸಿಗಳನ್ನು ಪಾಲನೆ ಪೋಷಣೆ ಮಾಡುವುದು ಮುಖ್ಯವಾಗಿದೆ. ಪರಿಸರದ ಬಗ್ಗೆ ಹೆಚ್ಚು ಕಾಳಜಿ ಎಲ್ಲರೂ ವಹಿಸಬೇಕು ಎಂದ ಅವರು ಪಟ್ಟಣದಲ್ಲಿ ಹಳೆಯ ವಿದ್ಯುತ್ತ್ ಕಂಬಗಳನ್ನು ತಗೆದು ಸುಮಾರು ೫ ಕೋಟಿ ವೆಚ್ಚದಲ್ಲಿ ಹೊಸ ವಿದ್ಯುತ್ತ್ ಕಂಬಗಳನ್ನು ನಿರ್ಮಾಣ ಮಾಡುವುದು ಹಾಗೂ ೩೬ ಕೋಟಿ ವೆಚ್ಚದಲ್ಲಿ ೨೪*೭ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗಳನ್ನು ಇನ್ನು ಕೆಲವೇ ದಿನಗಳಲ್ಲಿ ಭೂಮಿ ಪೂಜೆ ನೆರವೇರಿಸಿ ಕಾರ್ಯ ನಿರ್ವಹಿಸಲಿವೆ ಈಗಾಗಲೆ ಸಿಂದಗಿಯ ಹೊನ್ನಪ್ಪಗೌಡ ಲೇಔಟ್…
ಸಿಂದಗಿ: ಪಟ್ಟಣದ ಜನತೆಯ ಬಹುದಿನಗಳ ಬೇಡಿಕೆಯಾದ ವೀರರಾಣಿ ಕಿತ್ತೂರ ಚೆನ್ನಮ್ಮ ಮತ್ತು ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಪುತ್ಥಳಿಗಳು ಸಿಂದಗಿ ನಗರಕ್ಕೆ ಜೂನ್ ೧೨ ರಂದು ಆಗಮಿಸಲಿವೆ ಎಂದು ಧುರೀಣ ಸಿದ್ದುಗೌಡ ಪಾಟೀಲ ಹೂನಳ್ಳಿ ಹೇಳಿದರು.ಅವರು ಪಟ್ಟಣದ ಬಸವ ಮಂಟಪದಲ್ಲಿ ಶನಿವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.ಜೂನ್ ೧೨ ರಂದು ಬೆಳಗ್ಗೆ ೧೦ ಗಂಟೆಗೆ ಕನಕದಾಸ ವೃತ್ತದಲ್ಲಿ ಪುತ್ತಳಿಗಳು ಆಗಮಿಸಲಿದ್ದು ಅಲ್ಲಿಂದ ಅರ್ಥಪೂರ್ಣವಾದ ಮೆರವಣಿಗೆ ಮೂಲಕ ಸ್ವಾಮಿ ವಿವೇಕಾನಂದ ವೃತ್ತಕ್ಕೆ ಆಗಮಿಸಿ ಅಲ್ಲಿ ಸ್ವಾಮಿ ವಿವೇಕಾನಂದರ ಪುತ್ತಳಿಯನ್ನು ನಿಲ್ಲಿಸಲಾಗುವುದು ಮತ್ತೆ ಎಚ್.ಜಿ.ಕಾಲೇಜು ಮಾರ್ಗವಾಗಿ ಶ್ರೀ ಬಸವೇಶ್ವರ ವೃತ್ತಕ್ಕೆ ಸಾಗಿ ಚೆನ್ನಮ್ಮ ವೃತ್ತದಲ್ಲಿ ವೀರರಾಣಿ ಕಿತ್ತೂರ ಚೆನ್ನಮ್ಮಳ ಪುತ್ತಳಿಯನ್ನು ನಿಲ್ಲಿಸಲಾಗುವುದು. ಈ ಎಲ್ಲ ಕಾರ್ಯಕ್ರಮ ಶಾಸಕ ಅಶೋಕ ಮನಗೂಳಿ ಅವರ ನೇತೃತ್ವದಲ್ಲಿ ಮತ್ತು ಅನೇಕ ಮಠಾಧೀಶರ ಸಾರಥ್ಯದಲ್ಲಿ ನೆರವೇರುವುದು ಎಂದು ತಿಳಿಸಿದರು.ಈ ಸಂಧರ್ಭದಲ್ಲಿ ಎಮ್.ಎಮ್.ಹಂಗರಗಿ ಮತ್ತು ಸಂಗನಬಸು ಬಿರಾದಾರ ಮಾತನಾಡಿ, ಶಾಸಕ ಅಶೋಕ ಮನಗೂಳಿ ಅವರ ಮತ್ತು ಅನೇಕ ಹಿರಿಯ ಮುಖಂಡರ ಸಹಕಾರದಿಂದ…
ವಿಜಯಪುರ : ಅಜಾತ ಶತ್ರು ಎಂದು ಕರೆಸಿಕೊಳ್ಳುವ ರಮೇಶ ಜಿಗಜಿಣಗಿಯವರು ಈ ಬಾರಿ ಲೋಸಕಭೆ ಚುನಾವಣೆಯಲ್ಲಿ ೭೭,೨೨೯ ಸಾವಿರ ಮತಗಳ ಅಂತರದಿಂದ ಗೆದ್ದು ಬೀಗಿದ್ದು, ಮಾನ್ಯ ನರೇಂದ್ರ ಮೋದಿಜಿಯವರ ಬಿಜೆಪಿ ಸರಕಾರಕ್ಕೆ ಒಂದು ಶಕ್ತಿಯನ್ನು ತಂದುಕೊಟ್ಟಿದ್ದಾರೆ. ಇವರು ಸತತ ೭ ಬಾರಿ ಸಂಸದರಾಗಿ ಆಯ್ಕೆಯಾಗಿರುವದು ಇತಿಹಾಸವೇ ಸರಿ. ಇವರಿಗೆ ಸೋಲು ಎಂಬುದು ಮರಿಚಿಕ್ಕೆಯಾಗಿದೆ. ಇವರು ಈ ಹಿಂದಿನ ಬಿಜೆಪಿ ಸರಕಾರದಲ್ಲಿ ಕೇಂದ್ರ ರಾಜ್ಯ ಸಚಿವರಾಗಿ ಹಲವಾರು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದು ಇತಿಹಾಸವಿದೆ. ರಮೇಶ ಜಿಗಜಿಣಗಿಯವರು ಸರಳ ಸಜ್ಜನಿಕೆಯ ವ್ಯಕ್ತಿಗಳಾಗಿದ್ದು, ಇವರು ಎಲ್ಲರೊಂದಿಗೆ ಸ್ನೇಹ ಭಾವದಿಂದ ಎಲ್ಲ ಜಾತಿ, ಮತ, ಧರ್ಮವನ್ನು ಗೌರವಿಸುತ್ತಾ, ದೀನ, ದಲಿತರ, ಹಿಂದುಳಿದ ವರ್ಗದವರೊಂದಿಗೆ ಒಳ್ಳೆಯ ಒಡನಾಟವನ್ನು ಇಟ್ಟುಕೊಂಡವರು. ಸಂಸದರಾಗುವ ಮುಂಚೆ ರಾಜ್ಯ ಸಚಿವರಾಗಿ ಹಲವಾರು ಇಲಾಖೆಯಲ್ಲಿ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ ಅನುಭವ ಇವರದು.ಇಂತಹ ಸರಳ ಸಜ್ಜನಿಕೆಯ ವ್ಯಕ್ತಿಗೆ ಈ ಬಾರಿ ಎನ್‌ಡಿಎ. ಒಕ್ಕೂಟದ ಸರಕಾರದಲ್ಲಿ ಕೇಂದ್ರ ಸಂಪುಟ ದರ್ಜೆಯ ಸಚಿವ ಸ್ಥಾನವನ್ನು ನೀಡಿ ವಿಜಯಪುರ…
ಕೊಲ್ಹಾರ: ಪ್ರಸಕ್ತ ಸಾಲಿನ ಲೋಕಸಭಾ ಚುನಾವಣೆಯಲ್ಲಿ ಹಾವೇರಿ ಹಾಗೂ ಸುಪುತ್ರಿ ಸ್ಪರ್ದಿಸಿರುವ ಬಾಗಲಕೋಟ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಗೆದ್ದಿರುವುದಕ್ಕೆ ಮತ್ತು ವಿಜಯಪುರ ಲೋಕಸಭಾ ಕ್ಷೇತ್ರದ ಸಚಿವರ ಸ್ವಕ್ಷೇತ್ರ ಬಸವನ ಬಾಗೇವಾಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ೧೭ ಸಾವಿರಕ್ಕಿಂತಲೂ ಅಧಿಕ ಮತಗಳ ಹಿನ್ನಡೆಯಾಗಿರುವ ನೈತಿಕ ಹೊಣೆಯನ್ನು ಹೊತ್ತು ಶಿವಾನಂದ ಪಾಟೀಲ ಅವರು ತಕ್ಷಣವೇ ರಾಜಿನಾಮೆ ನೀಡಬೇಕು ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಒತ್ತಾಯಿಸಿದ್ದಾರೆ.ಪಟ್ಟಣದ ಅವರ ಸ್ವಗೃಹದಲ್ಲಿ ಪತ್ರಿಕಾಗೋಷ್ಟಿಯನ್ನು ನಡೆಸಿ ಮಾತನಾಡಿದ ಅವರು ದೇಶದ ಜನತೆ ನರೇಂದ್ರ ಮೋದಿಯವರು ಮತ್ತೊಮ್ಮೆ ಅಂದರೆ ಮೂರನೇ ಬಾರಿಗೆ ಪ್ರಧಾನಿಯಾಗಿ ಇತಿಹಾಸ ನಿರ್ಮಿಸಬೇಕೆಂಬ ಮಹತ್ವಾಕಾಂಕ್ಷಿಯಿಂದ ರಾಜ್ಯದ ೧೭ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದು ಅಖಂಡ ವಿಜಯಪುರ ಬಾಗಲಕೋಟ ಜಿಲ್ಲೆಯಲ್ಲಿ ಸತತವಾಗಿ ಮತದಾರರು ಭಾರತೀಯ ಜನತಾಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುತ್ತಿರುವುದಕ್ಕೆ ಮತದಾರರಿಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು ಎಂದರು.ಕಳೆದಬಾರಿಗಿಂತ ಬಿಜೆಪಿ ಪಕ್ಷವು ಸ್ವಲ್ಪ ಹಿನ್ನಡೆ ಅನುಭವಿಸಿದರೂ ದೇಶದ ಜನತೆಗೆ ಕಾಂಗ್ರೆಸ್ ಪಕ್ಷ ಕೊಟ್ಟ ಗ್ಯಾರಂಟಿ ಯೋಜನೆಗಳನ್ನು…
ಕೊಲ್ಹಾರ: ರೋಹಿಣಿ ಮಳೆಯು ಕಳೆದು ಮೃಗಶಿರಾ ಮಳೆಯು ಸೇರುವ ಗುರುವಾರ ಶುಕ್ರವಾರ ದಿವಸ ರಾತ್ರಿ ಕೊಲ್ಹಾರ ತಾಲೂಕಿನಾದ್ಯಂತ ಸುಮಾರು ೫೮ ಮಿ.ಮೀ ಧಾಖಲೆ ಪ್ರಮಾಣದಲ್ಲಿ ಮಳೆಯಾಗಿದೆ ಎಂದು ತಹಶೀಲ್ದಾರ ಎಸ್.ಎಸ್.ನಾಯ್ಕಲಮಠ ತಿಳಿಸಿದರು.ಧಾರಾಕಾರವಾಗಿ ಮಳೆ ಸುರಿದಿರುವದರಿಂದ ರೈತರ ಮೊಗದಲ್ಲಿ ಸಂತಸ ಮೂಡಿದರೆ ಮಳೆರಾಯಣ ಆರ್ಭಟಕ್ಕೆ ತಾಲೂಕಿನ ಹಳ್ಳ, ಕೊಳ್ಳ, ಕೆರೆ ಕಟ್ಟೆಗಳು ತುಂಬಿಕೊಂಡು ನೀರು ಹರಿದುಬಂದಿದೆ ಅದರಂತೆ ಗೋಡೆ ಕುಸಿದು ಅಲ್ಲಲ್ಲಿ ಅಹಿತಕರ ಘಟಣೆಗಳು ಸಂಭವಿಸಿವೆ ಅದರಲ್ಲಿ ಕೂಡಗಿ ಗ್ರಾಮದಲ್ಲಿ ೯ ಜಾನುವಾರುಗಳು ಸಾವನ್ನಪ್ಪಿರುವದು, ಹಣಮಾಪೂರ ೨, ರೋಣಿಹಾಳ ೨, ಮುಳವಾಡ ೧, ಮಲಘಾನ ೧, ಸಿದ್ದನಾಥ ೧, ತೆಲಗಿ ಗ್ರಾಮದಲ್ಲಿ ಅನೇಕ ಮನೆಗಳಿಗೆ ಹಾನಿಯಾಗಿರುವ ಘಟಣೆ ವರದಿಯಾಗಿದೆ.ತಾಲೂಕು ವ್ಯಾಪ್ತಿಯ ಗ್ರಾಮಗಳಲ್ಲಿ ಹೊಲ ಗದ್ದೆಗಳ ಬದುವಿನಲ್ಲಿ ತಗ್ಗು ಪ್ರದೇಶಗಳಲ್ಲಿ ಮಳೆ ಆಗಮನದಿಂದ ಸಾಕಷ್ಟು ಪ್ರಮಾಣದ ನೀರು ಸಂಗ್ರಹವಾಗಿ ರೈತಾಪಿ ವರ್ಗದವರ ಮೊಗದಲ್ಲಿ ಹರ್ಷದಾಯಕವಾಗಿದೆ ಭೂದೇವಿಯನ್ನು ತಂಪಾಗಿಸಿರುವದಕ್ಕೆ ಜನರು ಮಳೆರಾಜನಿಗೆ ಕೃತಜ್ಞತೆ ಹೇಳುವದು ಅಲ್ಲಲ್ಲಿ ಕಂಡುಬಂದಿತು.
ಬಸವನಬಾಗೇವಾಡಿ: ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ಶುಕ್ರವಾರ ಮಧ್ಯಾನ್ಹ ಶಾಟ್ ಸರ್ಕ್ಯೂಟ್ ಉಂಟಾಗಿ ವಿದ್ಯುತ್ ಪರಿವರ್ತಕದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿತು. ಅದೃಷ್ಟವಶಾತ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಮಧ್ಯಾನ್ಹ ಸುರಿದ ಗಾಳಿ-ಮಳೆಯಿಂದ ವಿದ್ಯುತ್ ಕಂಬದಲ್ಲಿ ಶಾಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಉಂಟಾಗಿರಬಹುದು. ವಿದ್ಯುತ್ ಪರಿವರ್ತಕದಲ್ಲಿ ಬೆಂಕಿ ಕಾಣಿಸಿಕೊಂಡ ಮಾಹಿತಿಯನ್ನು ಹೆಸ್ಕಾಂ ಇಲಾಖೆಗೆ ಗ್ರಾಮಸ್ಥರು ತಿಳಿಸಿದ ಕೂಡಲೇ ಹೆಸ್ಕಾಂ ಆಧಿಕಾರಿಗಳು ಮುಂಜಾಗ್ರತ ಕ್ರಮವಾಗಿ ವಿದ್ಯುತ್ ಕಡಿತಗೊಳಿಸಿದರು.ಗಾಳಿಗೆ ಆಕಸ್ಮಿಕವಾಗಿ ವಿದ್ಯುತ್ ತಂತಿಗಳು ಕೂಡಿಕೊಂಡು ಬೆಂಕಿ ಉಂಟಾಗಿದೆ. ತಂತಿಗಳು ಸುಟ್ಟಿವೆ. ವಿದ್ಯುತ್ ಪರಿವರ್ತಕಕ್ಕೆ ಯಾವುದೇ ಹಾನಿಯಾಗಿಲ್ಲ. ಸುಟ್ಟಿರುವ ತಂತಿಗಳನ್ನು ಸರಿಪಡಿಸಿ ಮತ್ತೆ ವಿದ್ಯುತ್ ಸಂಪರ್ಕ ಕೊಡಲಾಗಿದೆ ಎಂದು ಸ್ಥಳಕ್ಕೆ ಹೋಗಿದ್ದ ಹೆಸ್ಕಾಂ ಶಾಖಾಧಿಕಾರಿ ಪಿ.ಎಂ.ಉಕ್ಕಲಿ ಹೇಳಿದರು.
ಬಸವನಬಾಗೇವಾಡಿ: ತಾಲೂಕಿನ ಡೋಣೂರ ಗ್ರಾಮದ ಕಟ್ಟೀಮನಿ ಹಿರೇಮಠದ ಗುರು ಮರುಳಸಿದ್ದೇಶ್ವರ ಜಾತ್ರಾಮಹೋತ್ಸವದಂಗವಾಗಿ ಶುಕ್ರವಾರ ಸಂಜೆ ಗುರು ಮರುಳಸಿದ್ದೇಶ್ವರರ ರಥೋತ್ಸವ ಭಕ್ತರ ಜಯಘೋಷದೊಂದಿಗೆ ಸಂಭ್ರಮದಿಂದ ಜರುಗಿತು.ರಥೋತ್ಸವಕ್ಕೆ ಕಟ್ಟೀಮನಿ ಹಿರೇಮಠದ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ನಂದಿಪುರದ ಡಾ.ಮಹೇಶ್ವರ ಸ್ವಾಮೀಜಿ, ಶಿರಶ್ಯಾಡದ ಮರುಘೇಂದ್ರ ಶಿವಾಚಾರ್ಯ ಸ್ವಾಮೀಜಿ,ಬಳ್ಳಾರಿಯ ಕಲ್ಯಾಣ ಸ್ವಾಮೀಜಿ ಬೆಣ್ಣೆಹಳ್ಳಿಶ್ರೀಗಳು, ಕೂಡ್ಲಿಗಿಯ ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮೀಜಿ, ಪುರ್ತಗೇರಿಯ ಕೈಲಾಸಲಿಂಗ ಶಿವಾಚಾರ್ಯ ಸ್ವಾಮೀಜಿ, ಉಕ್ಕಲಿಯ ಅಣ್ಣಾಸಾಹೇಬಗೌಡ ಪಾಟೀಲ ಚಾಲನೆ ನೀಡಿದರು.ಗುರು ಮರುಳಸಿದ್ದೇಶ್ವರ ರಥೋತ್ಸವವು ಗ್ರಾಮದಲ್ಲಿರುವ ಎಲ್ಲ ಸಮಾಜದ ದೇವರುಗಳನ್ನು ಪ್ರತಿನಿಧಿಸುವದರಿಂದ ರಥೋತ್ಸವದಲ್ಲಿ ಎಲ್ಲ ಸಮಾಜದ ಬಾಂಧವರು ಭಾಗವಹಿಸುವದು ಈ ರಥೋತ್ಸವದ ವಿಶೇಷ. ಗುರು ಮರುಳಸಿದ್ದೇಶ್ವರ ಜಾತ್ರಾಮಹೋತ್ಸವದೊಂದಿಗೆ ಚೌಡಮ್ಮದೇವಿ ಜಾತ್ರಾಮಹೋತ್ಸವ ಹಾಗೂ ಹಜರತ್ ಸುಲೇಮಾನ ಉರುಸು ನಡೆಯುವದರಿಂದ ಇದೊಂದು ಭಾವೈಕ್ಯದ ಸಂಕೇತವಾಗಿ ಈ ಭಾಗದಲ್ಲಿ ರಥೋತ್ಸವ ನಡೆದುಕೊಂಡು ಬರುತ್ತಿದೆ. ರಥೋತ್ಸವದಲ್ಲಿ ಭಾಗವಹಿಸಿದ್ದ ಜನರು ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಎಸೆದು ತಮ್ಮ ಭಕ್ತಿ ಸಮರ್ಪಿಸುವದು ಕಂಡುಬಂದಿತ್ತು.ರಥೋತ್ಸವದಲ್ಲಿ ಕಲ್ಲನಗೌಡ ಪಾಟೀಲ, ಎಸ್.ಎಂ.ದುಂಬಾಳಿ, ಅಪ್ಪುಗೌಡ ಪಾಟೀಲ, ಗೋಲಾಳಪ್ಪ ಕೆರೂಟಗಿ, ಸಿದ್ದರಾಮ ಹಳ್ಳಿ,…
