ಸಿಂದಗಿ: ಪಟ್ಟಣದವನ್ನು ಹಚ್ಚಹಸಿರು ಮಾಡಲು ತಾಲೂಕಾ ಅರಣ್ಯ ಇಲಾಖೆ ಶ್ರಮ ಪಡುತ್ತಿದೆ. ಪರಿಸರ ಉಳಿದರೆ ಮಾತ್ರ ನಮ್ಮೆಲ್ಲರ ಬದುಕು ಹಸನವಾಗುತ್ತದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಅವರು ಪಟ್ಟಣದ ಪ್ರಾದೇಶಿಕ ಅರಣ್ಯ ಇಲಾಖೆ ಹಾಗೂ ಸಾಮಾಜಿಕ ವಲಯ ಅರಣ್ಯ ಇಲಾಖೆಗಳ ಸಹಯೋಗದಲ್ಲಿ ಶನಿವಾರ ವನಮಹೋತ್ಸವ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಮಾತನಾಡಿದರು.
ಸಿಂದಗಿ ನಗರದ ಎಲ್ಲ ಬಡಾವಣೆಗಳಲ್ಲಿ ಈ ಬಾರಿ ಸಸಿ ನೆಡುವ ಯೋಜನೆ ಇದೆ. ಪ್ರತಿಯೊಬ್ಬರು ತಮ್ಮ ತಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ನೆಟ್ಟ ಸಸಿಗಳನ್ನು ಪಾಲನೆ ಪೋಷಣೆ ಮಾಡುವುದು ಮುಖ್ಯವಾಗಿದೆ. ಪರಿಸರದ ಬಗ್ಗೆ ಹೆಚ್ಚು ಕಾಳಜಿ ಎಲ್ಲರೂ ವಹಿಸಬೇಕು ಎಂದ ಅವರು ಪಟ್ಟಣದಲ್ಲಿ ಹಳೆಯ ವಿದ್ಯುತ್ತ್ ಕಂಬಗಳನ್ನು ತಗೆದು ಸುಮಾರು ೫ ಕೋಟಿ ವೆಚ್ಚದಲ್ಲಿ ಹೊಸ ವಿದ್ಯುತ್ತ್ ಕಂಬಗಳನ್ನು ನಿರ್ಮಾಣ ಮಾಡುವುದು ಹಾಗೂ ೩೬ ಕೋಟಿ ವೆಚ್ಚದಲ್ಲಿ ೨೪*೭ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗಳನ್ನು ಇನ್ನು ಕೆಲವೇ ದಿನಗಳಲ್ಲಿ ಭೂಮಿ ಪೂಜೆ ನೆರವೇರಿಸಿ ಕಾರ್ಯ ನಿರ್ವಹಿಸಲಿವೆ ಈಗಾಗಲೆ ಸಿಂದಗಿಯ ಹೊನ್ನಪ್ಪಗೌಡ ಲೇಔಟ್ ದಲ್ಲಿ ರೂ ೨ ಕೋಟಿ ಅನುದಾನದಲ್ಲಿ ಟ್ರೀ ಪಾರ್ಕ ನಿರ್ಮಾಣದ ಕಾಮಗಾರಿ ನಡೆಯುತ್ತಿದೆ ಎಂದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಶ ಪೂಜಾರಿ, ಪುರಸಭೆ ಸದಸ್ಯ ಬಸವರಾಜ ಹರನಾಳ, ಸಿದ್ದಣ್ಣ ಹಿರೇಕುರುಬರ, ಖಾದರ ಬಂಕಲಗಿ, ಪರಶುರಾಮ ಉಪ್ಪಾರ, ವಿಜಯಕುಮಾರ ಯಾಳವಾರ, ಶಿವಶಂಕರಗೌಡ ಬಿರಾದಾರ, ಭೀಮು ರೋಡಗಿ , ಜಿಲಾನಿ ನಾಟಿಕಾರ, ಸುನಂದಾ ಯಂಪೂರೆ, ಅರಣ್ಯ ಇಲಾಖೆಯ ಅಧಿಕಾರಿಗಳಾದ ರಾಜೀವ ಬಿರಾದಾರ, ಎಮ್.ಎಮ್ ಮಲಕಣ್ಣವರ, ಎಮ್.ಎನ್.ಮುಲ್ಲಾ, ಆರ್.ಎಚ್.ಜಮಾದಾರ, ಎಮ್.ಬಿ.ಕಂಠಿಕರ, ಶಿವಾನಂದ ಮಡಗೊಂಡ, ಮಹಾದೇವ ಯಂಕಂಚಿ, ಎಸ್.ಎಚ್.ಕೋಟಿಕಾನೆ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
ಪರಿಸರ ಉಳಿದರೆ ಮಾತ್ರ ನಮ್ಮೆಲ್ಲರ ಬದುಕು ಹಸನು :ಶಾಸಕ ಮನಗೂಳಿ
Related Posts
Add A Comment

