ಸಿಂದಗಿ: ಪಟ್ಟಣದ ಜನತೆಯ ಬಹುದಿನಗಳ ಬೇಡಿಕೆಯಾದ ವೀರರಾಣಿ ಕಿತ್ತೂರ ಚೆನ್ನಮ್ಮ ಮತ್ತು ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಪುತ್ಥಳಿಗಳು ಸಿಂದಗಿ ನಗರಕ್ಕೆ ಜೂನ್ ೧೨ ರಂದು ಆಗಮಿಸಲಿವೆ ಎಂದು ಧುರೀಣ ಸಿದ್ದುಗೌಡ ಪಾಟೀಲ ಹೂನಳ್ಳಿ ಹೇಳಿದರು.
ಅವರು ಪಟ್ಟಣದ ಬಸವ ಮಂಟಪದಲ್ಲಿ ಶನಿವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಜೂನ್ ೧೨ ರಂದು ಬೆಳಗ್ಗೆ ೧೦ ಗಂಟೆಗೆ ಕನಕದಾಸ ವೃತ್ತದಲ್ಲಿ ಪುತ್ತಳಿಗಳು ಆಗಮಿಸಲಿದ್ದು ಅಲ್ಲಿಂದ ಅರ್ಥಪೂರ್ಣವಾದ ಮೆರವಣಿಗೆ ಮೂಲಕ ಸ್ವಾಮಿ ವಿವೇಕಾನಂದ ವೃತ್ತಕ್ಕೆ ಆಗಮಿಸಿ ಅಲ್ಲಿ ಸ್ವಾಮಿ ವಿವೇಕಾನಂದರ ಪುತ್ತಳಿಯನ್ನು ನಿಲ್ಲಿಸಲಾಗುವುದು ಮತ್ತೆ ಎಚ್.ಜಿ.ಕಾಲೇಜು ಮಾರ್ಗವಾಗಿ ಶ್ರೀ ಬಸವೇಶ್ವರ ವೃತ್ತಕ್ಕೆ ಸಾಗಿ ಚೆನ್ನಮ್ಮ ವೃತ್ತದಲ್ಲಿ ವೀರರಾಣಿ ಕಿತ್ತೂರ ಚೆನ್ನಮ್ಮಳ ಪುತ್ತಳಿಯನ್ನು ನಿಲ್ಲಿಸಲಾಗುವುದು. ಈ ಎಲ್ಲ ಕಾರ್ಯಕ್ರಮ ಶಾಸಕ ಅಶೋಕ ಮನಗೂಳಿ ಅವರ ನೇತೃತ್ವದಲ್ಲಿ ಮತ್ತು ಅನೇಕ ಮಠಾಧೀಶರ ಸಾರಥ್ಯದಲ್ಲಿ ನೆರವೇರುವುದು ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಎಮ್.ಎಮ್.ಹಂಗರಗಿ ಮತ್ತು ಸಂಗನಬಸು ಬಿರಾದಾರ ಮಾತನಾಡಿ, ಶಾಸಕ ಅಶೋಕ ಮನಗೂಳಿ ಅವರ ಮತ್ತು ಅನೇಕ ಹಿರಿಯ ಮುಖಂಡರ ಸಹಕಾರದಿಂದ ಸಿಂದಗಿ ನಗರದಲ್ಲಿ ಎರಡು ಪುತ್ತಳಿಗಳು ನಿಲ್ಲಲಿವೆ. ಮುಂದಿನ ದಿನಗಳಲ್ಲಿ ಈ ಎರಡು ಪುತ್ತಳಿಗಳ ವೃತ್ತಗಳ ಕಾಮಗಾರಿಗಳು ಸಂಪೂರ್ಣ ಮುಗಿದ ನಂತರ ಪುತ್ತಳಿ ಅನಾವರಣ ಕಾರ್ಯಕ್ರಮ ಜರುಗುವುದು ಹೆಚ್ಚಿನ ಸಂಖ್ಯೆಯಲ್ಲಿ ಸಿಂದಗಿ ಮತ್ತು ಸುತ್ತಮುತ್ತಲಿನ ನಾಗರಿಕರು, ಹಿರಿಯರು, ರಾಜಕೀಯ ಮುಖಂಡರು ಭಾಗವಹಿಸಬೇಕು ಎಂದು ಕೋರಿದರು.
ವೇದಿಕೆ ಮೇಲೆ ಸ್ವಾಮಿ ವಿವೇಕಾನಂದ ವೃತ್ತದ ಮುಖಂಡ ಬಸವರಾಜ ಪಾಟೀಲ, ಶಿವು ನಿಗಡಿ, ಗುರು ಬಸರಕೋಡ ಇದ್ದರು.
ಪತ್ರಿಕಾ ಗೋಷ್ಠಿಯಲ್ಲಿ ರವಿ ಬಿರಾದಾರ, ಗಂಗಾಧರ ರುಕುಂಪುರ, ಸಂತೋಷ ಬಜಂತ್ರಿ, ಸಂಗನಗೌಡ ಪಾಟೀಲ ಅಗಸಬಾಳ, ಬಾಪುಗೌಡ ಬಿರಾದಾರ, ಮಹಾಂತೇಶ ಅಂಗಡಿ, ಎಮ್.ಎಸ್.ರುದ್ರಗೌಡ ರಾಮಚಂದ್ರ ಕಲಬುರ್ಗಿ, ಮಲ್ಲನಗೌಡ ಪಾಟೀಲ, ಶಿವಶಂಕರ ಬಿರಾದಾರ, ಮಲಕಣ್ಣ ಹೊಡ್ಲ ಸೇರಿದಂತೆ ಅನೇಕರು ಇದ್ದರು. ಆನಂದ ಶಾಬಾದಿ ನಿರೂಪಿಸಿ, ವಂದಿಸಿದರು.
Subscribe to Updates
Get the latest creative news from FooBar about art, design and business.
ಜೂ.೧೨ಕ್ಕೆ ಕಿತ್ತೂರ ಚೆನ್ನಮ್ಮ & ಸ್ವಾಮಿ ವಿವೇಕಾನಂದ ಪುತ್ಥಳಿಗಳ ಆಗಮನ
Related Posts
Add A Comment

