ಕೊಲ್ಹಾರ: ರೋಹಿಣಿ ಮಳೆಯು ಕಳೆದು ಮೃಗಶಿರಾ ಮಳೆಯು ಸೇರುವ ಗುರುವಾರ ಶುಕ್ರವಾರ ದಿವಸ ರಾತ್ರಿ ಕೊಲ್ಹಾರ ತಾಲೂಕಿನಾದ್ಯಂತ ಸುಮಾರು ೫೮ ಮಿ.ಮೀ ಧಾಖಲೆ ಪ್ರಮಾಣದಲ್ಲಿ ಮಳೆಯಾಗಿದೆ ಎಂದು ತಹಶೀಲ್ದಾರ ಎಸ್.ಎಸ್.ನಾಯ್ಕಲಮಠ ತಿಳಿಸಿದರು.
ಧಾರಾಕಾರವಾಗಿ ಮಳೆ ಸುರಿದಿರುವದರಿಂದ ರೈತರ ಮೊಗದಲ್ಲಿ ಸಂತಸ ಮೂಡಿದರೆ ಮಳೆರಾಯಣ ಆರ್ಭಟಕ್ಕೆ ತಾಲೂಕಿನ ಹಳ್ಳ, ಕೊಳ್ಳ, ಕೆರೆ ಕಟ್ಟೆಗಳು ತುಂಬಿಕೊಂಡು ನೀರು ಹರಿದುಬಂದಿದೆ ಅದರಂತೆ ಗೋಡೆ ಕುಸಿದು ಅಲ್ಲಲ್ಲಿ ಅಹಿತಕರ ಘಟಣೆಗಳು ಸಂಭವಿಸಿವೆ ಅದರಲ್ಲಿ ಕೂಡಗಿ ಗ್ರಾಮದಲ್ಲಿ ೯ ಜಾನುವಾರುಗಳು ಸಾವನ್ನಪ್ಪಿರುವದು, ಹಣಮಾಪೂರ ೨, ರೋಣಿಹಾಳ ೨, ಮುಳವಾಡ ೧, ಮಲಘಾನ ೧, ಸಿದ್ದನಾಥ ೧, ತೆಲಗಿ ಗ್ರಾಮದಲ್ಲಿ ಅನೇಕ ಮನೆಗಳಿಗೆ ಹಾನಿಯಾಗಿರುವ ಘಟಣೆ ವರದಿಯಾಗಿದೆ.
ತಾಲೂಕು ವ್ಯಾಪ್ತಿಯ ಗ್ರಾಮಗಳಲ್ಲಿ ಹೊಲ ಗದ್ದೆಗಳ ಬದುವಿನಲ್ಲಿ ತಗ್ಗು ಪ್ರದೇಶಗಳಲ್ಲಿ ಮಳೆ ಆಗಮನದಿಂದ ಸಾಕಷ್ಟು ಪ್ರಮಾಣದ ನೀರು ಸಂಗ್ರಹವಾಗಿ ರೈತಾಪಿ ವರ್ಗದವರ ಮೊಗದಲ್ಲಿ ಹರ್ಷದಾಯಕವಾಗಿದೆ ಭೂದೇವಿಯನ್ನು ತಂಪಾಗಿಸಿರುವದಕ್ಕೆ ಜನರು ಮಳೆರಾಜನಿಗೆ ಕೃತಜ್ಞತೆ ಹೇಳುವದು ಅಲ್ಲಲ್ಲಿ ಕಂಡುಬಂದಿತು.
Subscribe to Updates
Get the latest creative news from FooBar about art, design and business.
Related Posts
Add A Comment

