ವಿಜಯಪುರ : ಅಜಾತ ಶತ್ರು ಎಂದು ಕರೆಸಿಕೊಳ್ಳುವ ರಮೇಶ ಜಿಗಜಿಣಗಿಯವರು ಈ ಬಾರಿ ಲೋಸಕಭೆ ಚುನಾವಣೆಯಲ್ಲಿ ೭೭,೨೨೯ ಸಾವಿರ ಮತಗಳ ಅಂತರದಿಂದ ಗೆದ್ದು ಬೀಗಿದ್ದು, ಮಾನ್ಯ ನರೇಂದ್ರ ಮೋದಿಜಿಯವರ ಬಿಜೆಪಿ ಸರಕಾರಕ್ಕೆ ಒಂದು ಶಕ್ತಿಯನ್ನು ತಂದುಕೊಟ್ಟಿದ್ದಾರೆ. ಇವರು ಸತತ ೭ ಬಾರಿ ಸಂಸದರಾಗಿ ಆಯ್ಕೆಯಾಗಿರುವದು ಇತಿಹಾಸವೇ ಸರಿ. ಇವರಿಗೆ ಸೋಲು ಎಂಬುದು ಮರಿಚಿಕ್ಕೆಯಾಗಿದೆ. ಇವರು ಈ ಹಿಂದಿನ ಬಿಜೆಪಿ ಸರಕಾರದಲ್ಲಿ ಕೇಂದ್ರ ರಾಜ್ಯ ಸಚಿವರಾಗಿ ಹಲವಾರು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದು ಇತಿಹಾಸವಿದೆ. ರಮೇಶ ಜಿಗಜಿಣಗಿಯವರು ಸರಳ ಸಜ್ಜನಿಕೆಯ ವ್ಯಕ್ತಿಗಳಾಗಿದ್ದು, ಇವರು ಎಲ್ಲರೊಂದಿಗೆ ಸ್ನೇಹ ಭಾವದಿಂದ ಎಲ್ಲ ಜಾತಿ, ಮತ, ಧರ್ಮವನ್ನು ಗೌರವಿಸುತ್ತಾ, ದೀನ, ದಲಿತರ, ಹಿಂದುಳಿದ ವರ್ಗದವರೊಂದಿಗೆ ಒಳ್ಳೆಯ ಒಡನಾಟವನ್ನು ಇಟ್ಟುಕೊಂಡವರು. ಸಂಸದರಾಗುವ ಮುಂಚೆ ರಾಜ್ಯ ಸಚಿವರಾಗಿ ಹಲವಾರು ಇಲಾಖೆಯಲ್ಲಿ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ ಅನುಭವ ಇವರದು.
ಇಂತಹ ಸರಳ ಸಜ್ಜನಿಕೆಯ ವ್ಯಕ್ತಿಗೆ ಈ ಬಾರಿ ಎನ್‌ಡಿಎ. ಒಕ್ಕೂಟದ ಸರಕಾರದಲ್ಲಿ ಕೇಂದ್ರ ಸಂಪುಟ ದರ್ಜೆಯ ಸಚಿವ ಸ್ಥಾನವನ್ನು ನೀಡಿ ವಿಜಯಪುರ ಜಿಲ್ಲೆಯು ಇನ್ನಷ್ಟು ಅಭಿವೃದ್ದಿ ಹೊಂದಲು ಜಿಗಜಿಣಗಿಯವರಿಗೆ ಶಕ್ತಿ ನೀಡಬೇಕೆಂದು ಭಾರತೀಯ ಜನತಾ ಪಾರ್ಟಿಯ ಎಸ್.ಸಿ.ಮೋರ್ಚಾ,ನಗರ ಮಂಡಲ ಕಾರ್ಯದರ್ಶಿಗಳಾದ ಸದಾನಂದ ಗುನ್ನಾಪೂರ, ಕರ್ನಾಟಕ ಮಾದಿಗ ಜನ ಸಂಘ ಹೋರಾಟ ಸಮಿತಿ (ರಿ) ಬೆಂಗಳೂರು ರಾಜ್ಯಾಧ್ಯಕ್ಷ ಪರಶುರಾಮ ರೋಣಿಹಾಳ ಇವರು ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

