ಬಸವನಬಾಗೇವಾಡಿ: ತಾಲೂಕಿನ ಡೋಣೂರ ಗ್ರಾಮದ ಕಟ್ಟೀಮನಿ ಹಿರೇಮಠದ ಗುರು ಮರುಳಸಿದ್ದೇಶ್ವರ ಜಾತ್ರಾಮಹೋತ್ಸವದಂಗವಾಗಿ ಶುಕ್ರವಾರ ಸಂಜೆ ಗುರು ಮರುಳಸಿದ್ದೇಶ್ವರರ ರಥೋತ್ಸವ ಭಕ್ತರ ಜಯಘೋಷದೊಂದಿಗೆ ಸಂಭ್ರಮದಿಂದ ಜರುಗಿತು.
ರಥೋತ್ಸವಕ್ಕೆ ಕಟ್ಟೀಮನಿ ಹಿರೇಮಠದ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ನಂದಿಪುರದ ಡಾ.ಮಹೇಶ್ವರ ಸ್ವಾಮೀಜಿ, ಶಿರಶ್ಯಾಡದ ಮರುಘೇಂದ್ರ ಶಿವಾಚಾರ್ಯ ಸ್ವಾಮೀಜಿ,ಬಳ್ಳಾರಿಯ ಕಲ್ಯಾಣ ಸ್ವಾಮೀಜಿ ಬೆಣ್ಣೆಹಳ್ಳಿಶ್ರೀಗಳು, ಕೂಡ್ಲಿಗಿಯ ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮೀಜಿ, ಪುರ್ತಗೇರಿಯ ಕೈಲಾಸಲಿಂಗ ಶಿವಾಚಾರ್ಯ ಸ್ವಾಮೀಜಿ, ಉಕ್ಕಲಿಯ ಅಣ್ಣಾಸಾಹೇಬಗೌಡ ಪಾಟೀಲ ಚಾಲನೆ ನೀಡಿದರು.
ಗುರು ಮರುಳಸಿದ್ದೇಶ್ವರ ರಥೋತ್ಸವವು ಗ್ರಾಮದಲ್ಲಿರುವ ಎಲ್ಲ ಸಮಾಜದ ದೇವರುಗಳನ್ನು ಪ್ರತಿನಿಧಿಸುವದರಿಂದ ರಥೋತ್ಸವದಲ್ಲಿ ಎಲ್ಲ ಸಮಾಜದ ಬಾಂಧವರು ಭಾಗವಹಿಸುವದು ಈ ರಥೋತ್ಸವದ ವಿಶೇಷ. ಗುರು ಮರುಳಸಿದ್ದೇಶ್ವರ ಜಾತ್ರಾಮಹೋತ್ಸವದೊಂದಿಗೆ ಚೌಡಮ್ಮದೇವಿ ಜಾತ್ರಾಮಹೋತ್ಸವ ಹಾಗೂ ಹಜರತ್ ಸುಲೇಮಾನ ಉರುಸು ನಡೆಯುವದರಿಂದ ಇದೊಂದು ಭಾವೈಕ್ಯದ ಸಂಕೇತವಾಗಿ ಈ ಭಾಗದಲ್ಲಿ ರಥೋತ್ಸವ ನಡೆದುಕೊಂಡು ಬರುತ್ತಿದೆ. ರಥೋತ್ಸವದಲ್ಲಿ ಭಾಗವಹಿಸಿದ್ದ ಜನರು ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಎಸೆದು ತಮ್ಮ ಭಕ್ತಿ ಸಮರ್ಪಿಸುವದು ಕಂಡುಬಂದಿತ್ತು.
ರಥೋತ್ಸವದಲ್ಲಿ ಕಲ್ಲನಗೌಡ ಪಾಟೀಲ, ಎಸ್.ಎಂ.ದುಂಬಾಳಿ, ಅಪ್ಪುಗೌಡ ಪಾಟೀಲ, ಗೋಲಾಳಪ್ಪ ಕೆರೂಟಗಿ, ಸಿದ್ದರಾಮ ಹಳ್ಳಿ, ಗುರುಪ್ರಸಾದ ಹಿರೇಮಠ, ಶಂಕರಪ್ಪ ತಾಲಬಾವಡಿ, ಶಂಕರಪ್ಪ ಹುಲ್ಲೂರ, ಭೀಮಣ್ಣ ಕೆರೂಟಗಿ, ಬಸವರಾಜ ಹಳ್ಳಿ, ಸಿದ್ದನಗೌಡ ಬಿರಾದಾರ, ಬಾಳಪ್ಪ ಮರನೂರ, ಸಿದ್ರಾಮಯ್ಯ ಹಿರೇಮಠ, ಬಾಬು ಕೆರೂಟಗಿ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

