Author: editor.udayarashmi@gmail.com

ವಿಜಯಪುರ: ಜೂ. ೦೯ ರಂದು ಬಸವೇಶ್ವರ ಕಲಾ ಮಹಾವಿದ್ಯಾಲಯ ಬಾಗಲಕೋಟೆಯ ಸೆಮಿನಾರ್ ಹಾಲ್ ದಲ್ಲಿ ೨೦೨೪ ನೆಯ ಸಾಲಿನ ಮೇಘಮೈತ್ರಿಯ ರಾಜ್ಯಮಟ್ಟದ ೦೭ ನೆಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು.ಈ ಸಮ್ಮೇಳನದಲ್ಲಿ ಈಗಾಗಲೇ ಹಲವಾರು ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದಿರುವ, ವಿಜಯಪುರದ ಬಾಲಿಕೆಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ಕನ್ನಡ ಉಪನ್ಯಾಸಕ ಹಾಗೂ ಸಾಹಿತಿ ಪ್ರೊ. ಸಿದ್ದು ಸಾವಳಸಂಗ ಅವರಿಗೆ ೨೦೨೪ ನೆಯ ಸಾಲಿನ ರಾಜ್ಯಮಟ್ಟದ “ಮೇಘಮೈತ್ರಿ ಸಾಹಿತ್ಯ ಸೇವಾ ರತ್ನ ಪ್ರಶಸ್ತಿ” ಪ್ರದಾನ ಮಾಡಲಾಯಿತು.ಸದರಿ ಕಾರ್ಯಕ್ರಮದಲ್ಲಿ ಮೇಘಮೈತ್ರಿ ಕನ್ನಡ ಸಾಹಿತ್ಯ ಸಮ್ಮೇಳನದ ಸಂಸ್ಥಾಪಕ ಅಧ್ಯಕ್ಷ ಎಂ. ರಮೇಶ ಕಮತಗಿ, ಸಮ್ಮೇಳನದ ಸರ್ವಾಧ್ಯಕ್ಷ ಡಾ. ವಿಜಯಕುಮಾರ ಎಸ್. ಕಟಗಿಹಳ್ಳಿಮಠ ಹಾಗೂ ಅನೇಕ ಸಾಹಿತಿಗಳು ಉಪಸ್ಥಿತರಿದ್ದರು.

Read More

ಮೋರಟಗಿ: ನರೇಂದ್ರ ಮೋದಿಜಿ ಅವರು ಭಾರತ ದೇಶದ ೧೫ನೇ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು ಭಾರತ ದೇಶ ಸೇತಿದಂತೆ ಅನೇಕ ರಾಷ್ಟ್ರಗಳಲ್ಲಿ ಆನಂದ ಬಾಷ್ಪಗಳು ಮುಗಿಲಿಗೆ ಮುಟ್ಟಿವೆ ಎಂದು ಮಾಜಿ ಜಿ ಪಂ ಸದಸ್ಯ ಬಿಂದುರಾಯಗೌಡ ಪಾಟೀಲ ಹೇಳಿದರು.ಸಮೀಪದ ಕಕ್ಕಳಮೆಲಿ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಧಾನಿ ಮೋದಿಜಿ ಪ್ರಮಾಣ ವಚನ ದಿನದಂದು ಬಿಜೆಪಿ ವಿಜಯೋತ್ಸವ ಸಂಭ್ರಮ ಆಚರಿಸಿ ಅವರು ಮಾತನಾಡಿದರು.ಕಳೆದ ಎರಡು ಅವಧಿಯಲ್ಲಿ ಮೋದಿಜಿ ಅವರು ಈ ದೇಶದ ಸಮಗ್ರ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದ್ದಾರೆ ಭಗವಂತ ಮತ್ತೆ ದೇಶದ ಜನ ಸೇವೆ ಮಾಡಲು ಮೂರನೇ ಬಾರಿ ಅವಕಾಶ ಕಲ್ಪಿಸಿದ್ದಾನೆ ಅವರ ಅಭಿವೃದ್ಧಿ ಕಾರ್ಯಗಳು ಮುಂದೆ ವರಿಯಲಿಈ ಬಾರಿ ಭಾರತ ವಿಶ್ವಗುರು ಆಗಲಿದೆ ಎಂದರು.ಕಾರ್ಯಕ್ರಮದಲ್ಲಿ ಸಿದ್ರಾಮಪ್ಪ ಸಾಂಬಾ, ಸಿದ್ದನಗೌಡ ಮಾಲಿಪಾಟೀಲ್, ನಿಂಗಣ್ಣ ಆಹೆರಿ, ಧರೆಪ್ಪ ಹಳ್ಳೆಪ್ಪನವರ, ದುಂಡಪ್ಪ ಸಾಂಬಾ, ಶರಣಪ್ಪ ಹಳ್ಳೆಪ್ಪನವರ, ರಾಯಗೊಂಡಪ್ಪ ಸಾಂಬಾ, ಚಂದ್ರು ನಾಗಯ್ಯನಮಠ, ಸಂತೋಷ ಗಾಣಿಗೇರ, ನಿಂಗಣ್ಣ ಹಳ್ಳೆಪ್ಪನವರ, ಸಿದ್ದರಾಮ ಬಿರಾದಾರ, ಭಗವಂತರರಾಯ ಗೋಡೆಕರ, ಸೇರಿದಂತೆ ಅನೇಕರು ಇದ್ದರು.

Read More

ಮೋರಟಗಿ: ಮಕ್ಕಳು ಪಠ್ಯ ಚಟುವಟಿಕೆಗಳ ಜೊತೆಗೆ ಕ್ರೀಡೆಗೂ ಮಹತ್ವ ನೀಡಬೇಕು, ಮಕ್ಕಳ ಬೆಳವಣಿಗೆ ಹಾಗೂ ಅವರ ಆರೋಗ್ಯಕರ ಜೀವನಕ್ಕೆ ಕ್ರೀಡೆ ಅತ್ಯವಶ್ಯ ಎಂದು ಅಭಿವೃದ್ಧಿ ಅಧಿಕಾರಿ ಆರ್ ಎಂ ಚಕ್ರವರ್ತಿ ಹೇಳಿದರು.ಮಂಗಳವಾರ ಗ್ರಾಮ ಪಂಚಾಯತಿ ಕೇಂದ್ರದಲ್ಲಿ ಹಮ್ಮಿಕೊಂಡ ಅಂತರ ರಾಷ್ಟ್ರೀಯ ಆಟದ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಒಬ್ಬ ಸಾಮಾನ್ಯ ವ್ಯಕ್ತಿ ಆಗಲಿ ಶ್ರೀಮಂತ ವ್ಯಕ್ತಿ ಆಗಲಿ ಎಷ್ಟು ವರ್ಷ ಬದುಕಿದ್ದಾನೆ ಎನ್ನುವುದು ಮುಖ್ಯವಲ್ಲ ಎಷ್ಟು ಅರೋಗ್ಯವಂತನಾಗಿ ಬದುಕಿದ್ದಾನೆ ಎನ್ನುವುದು ಮುಖ್ಯ ಇಂದಿನ ವಿದ್ಯಾರ್ಥಿಗಳಾದ ತಾವುಗಳು ನಾಳೆ ನಮ್ಮ ದೇಶ ಬೆಳೆಸುವ ಪ್ರಜೆಗಳು ವಿದೇಶಿ ಕ್ರೀಡೆಗಿಂತ ಸ್ವದೇಶ ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ನೀಡಿ ಉತ್ತಮ ಗುಣಮಟ್ಟದ ಶಿಕ್ಷಣ ಪಡೆದು ದೇಶ ಮೆಚ್ಚುವ ಮಕ್ಕಳಾಗಿ ಹೊರ ಹುಮ್ಮಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ನಂತರ ಗ್ರಾಪಂ ಅಧ್ಯಕ್ಷರ ಪ್ರತಿನಿದಿ ರವಿಕಾಂತ ನಡುವಿನಕೇರಿ ಮಾತನಾಡಿ ದಿನದಿಂದ ದಿನಕ್ಕೆ ಮೊಬೈಲ್ ಬಳಕೆ ಹೆಚ್ಚಾಗುತ್ತಿದೆ ವಿದ್ಯಾರ್ಥಿಗಳು ಹಾಗೂ ಯುವಕರು ಮೊಬೈಲ್ ಗಿಣಿಯ ಹಿಂದೆ ಬಿದ್ದು ಅದೆಷ್ಟೋ ಜನ ಬಲಿಯಾಗಿದ್ದು…

Read More

ಹಡಗಲಿ ಗ್ರಾಮ ಘಟಕ ಉದ್ಘಾಟನೆ | ರೈತರಿಗೆ ಗುರುತಿನ ಚೀಟಿ ವಿತರಣೆ ವಿಜಯಪುರ: ಈ ನಾಡಿನಲ್ಲಿ ರೈತರನ್ನು ಕೃಷಿಯಿಂದ ದೂರವಿಟ್ಟು ಬಂಡವಾಳ ಶಾಹಿಗಳಿಗೆ ಅನುಕೂಲ ಮಾಡಿಕೊಡುವ ಹುನ್ನಾರ ನಡಿತಾ ಇದೆ, ಇದಕ್ಕೆ ನಮ್ಮ ಜನಪ್ರತಿನಿಧಿಗಳು ಸಹ ಅವರೊಂದಿಗೆ ಕೈಜೋಡಿಸುತ್ತಾ, ಅಂತವರ ಪರವಾಗಿಯೇ ಯೋಜನೆಗಳನ್ನು ರೂಪಿಸಿ ರೈತರಿಗೆ ಅನ್ಯಾಯ ಮಾಡುತ್ತಾ ದ್ರೋಹ ಎಸುಗುತ್ತಿದ್ದಾರೆ, ಆದ್ದರಿಂದ ರೈತರೆಲ್ಲರೂ ಒಗ್ಗಟಾಗಿ ಶಕ್ತಿ ಪ್ರದರ್ಶಿಸಬೇಕು ಅಂದಾಗ ಮಾತ್ರ ಈ ದೇಶದಲ್ಲಿ ಕೃಷಿ ಉಳಿಯುವುದು ಜೊತೆಗೆ ರೈತ ಕುಲ ಉಳಿಯುವುದು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಅವರು ಹಡಗಲಿ ಗ್ರಾಮದ ರೈತ ಸಂಘದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವಿಜಯಪುರ ಜಿಲ್ಲೆಯ ಹಡಗಲಿ ಗ್ರಾಮದಲ್ಲಿ ಗ್ರಾಮ ಘಟಕ ಉದ್ಘಾಟನೆಯನ್ನು ಸಸಿಗೆ ನೀರುಣಿಸುತ್ತಾ, ಆಲಿಮಟ್ಟಿ ಆಣೆಕಟ್ಟು ಇಲ್ಲಿಯೇ ಇದ್ದು, ನಮ್ಮ ರೈತರ ಸಾವಿರಾರು ಎಕರೆ ಕೃಷಿ ಭೂಮಿ ಕಳೆದುಕೊಂಡು ಮುಂದಿನ ನಮ್ಮ ಮಕ್ಕಳ ಭವಿಷ್ಯಕ್ಕಾಗಿ ತ್ಯಾಗ ಮಾಡಿದ್ದರು, ಇಂದು ಜಿಲ್ಲೆಯಲ್ಲಿ…

Read More

ಇಂಡಿ: ಆಟಗಳು ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಭಾವನಾತ್ಮಕ ಪ್ರಬಲರನ್ನಾಗಿಸುವಲ್ಲಿ ಮಹತ್ವದಾಗಿದೆ. ಆಟದ ಜೊತೆಗೆ ಪಾಠಕ್ಕೂ ಗಮನ ನೀಡಿ ಎಂದು ಇಂಡಿ ತಾಲೂಕ ಪಂಚಾಯಿತಿ ಯೋಜನಾಧಿಕಾರಿ ನಂದೀಪ ರಾಠೋಡ ಹೇಳಿದರು.ಅವರು ತಾಲೂಕಿನ ಹಿರೇರೂಗಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಹಾಗೂ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಯ ವತಿಯಿಂದ ಹಮ್ಮಿಕೊಂಡ”ಅಂತಾರಾಷ್ಟ್ರೀಯ ಆಟದ ದಿನ”ವನ್ನು ಉದ್ಘಾಟಿಸಿ ಮಾತನಾಡಿದರು.ಕ್ರೀಡೆಯು ಮಕ್ಕಳಲ್ಲಿ ಕಲಿಕೆ ಮತ್ತು ಆರೋಗ್ಯಕರ ಬೆಳವಣಿಗೆಯನ್ನು ಉತ್ತೇಜಿಸಿ, ಸೃಜನಶೀಲತೆಯನ್ನು ಬೆಳೆಸುತ್ತದೆ ಎಂದು ಹೇಳಿದರು.ಹಿರೇರೂಗಿ ಪಿಡಿಓ ಬಸವರಾಜ ಬಬಲಾದ ಮಾತನಾಡಿ, ಮಕ್ಕಳು ಆಟವಾಡುವ ಹಕ್ಕನ್ನು ರಕ್ಷಿಸಲು ಅಂತಾರಾಷ್ಟ್ರೀಯ ಆಟದ ದಿನವಾಗಿ ಒಂದು ದಿನವನ್ನು ಗುರುತಿಸುವಂತೆ ವಿಶ್ವಸಂಸ್ಥೆಗೆ ಮಕ್ಕಳೇ ಮನವಿ ಮಾಡಿದ್ದು, ಅದರಂತೆ ಈ ದಿನವನ್ನು ಆಚರಿಸಲಾಗುತ್ತದೆ ಎಂದು ಹೇಳಿದರು.ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ಜೀವನ ಕೌಶಲ್ಯವನ್ನು ವೃದ್ಧಿಸುವಲ್ಲಿ ಆಟಗಳೇ ಮಗುವಿಗೆ ಮೊದಲ ಮೆಟ್ಟಿಲು. ದೈಹಿಕ-ಮಾನಸಿಕ ಆರೋಗ್ಯ, ಸ್ವಾಭಿಮಾನ, ಆತ್ಮವಿಶ್ವಾಸ, ಸೃಜನಶೀಲತೆ, ಸಮಾನತೆ, ಸಾಮಾಜಿಕ ಸಾಮರಸ್ಯದಂತಹ ಅಭ್ಯಾಸಗಳಿಗೆ ಕ್ರೀಡೆಯು ಅತಿ ಅವಶ್ಯಕ ಎಂದು ಹೇಳಿದರು.ಶಿಕ್ಷಕ ಎಸ್ ಆರ್ ಚಾಳೇಕರ ಮಾತನಾಡಿ,…

Read More

ವಿಜಯಪುರ: ೨೦೨೪-೨೫ನೇ ಸಾಲಿಗೆ ಸಮನ್ವಯ ಶಿಕ್ಷಣ ಚಟುವಟಿಕೆಗಳ (ವಿಶೇಷ ಚೇತನ ಮಕ್ಕಳಿಗೆ ಬೋಧನೆ ಹಾಗೂ ಸಂಬಂಧಿಸಿದ ಇತರೆ ಚಟುವಟಿಕೆಗಳು) ಅನುಷ್ಠಾಮಕ್ಕಾಗಿ ಪ್ರಾಥಮಿಕ ಮತ್ತು ಫ್ರೌಡ ಹಂತಕ್ಕೆ ಅಗತ್ಯತೆ ಅನುಗುಣವಾಗಿ, ವಿಶೇಷ ಡಿ.ಇಡಿ( ಶ್ರವಣ ದೋಷ ಮತ್ತು ದೃಷ್ಟಿ ದೋಷ) ಹಾಗೂ ಬಿ.ಇಡಿ (ಬುದ್ದಿಮಾಂದ್ಯ ಮತ್ತು ಬಹುವಿಕಲಾಂಗತೆ) ವಿಕಲತೆಯಲ್ಲಿ ವಿಶೇಷತೆ ವಿದ್ಯಾರ್ಹತೆ ಹೊಂದಿದ ಹಾಗೂ ೬೦ ವರ್ಷ ಒಳಗಿನ ಅರ್ಹ ಅಭ್ಯರ್ಥಿಗಳಿಂದ ನೇರ ಗುತ್ತಿಗೆ ಮೂಲಕ ವಿಶೇಷ ಶಿಕ್ಷಕರ ಸೇವೆ ಪಡೆಯಲು ಖಾಲಿ ಇರುವ ೧೯ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.ನೇರ ಗುತ್ತಿಗೆಯಡಿಯಲ್ಲಿ ತಾತ್ಕಾಲಿಕವಾಗಿ ಕಾರ್ಯ ನಿರ್ವಹಿಸಲು ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಜೂನ್ ೧೯ ರಂದು ಸಂಜೆ ೫ ಗಂಟೆಯ ಒಳಗಾಗಿ ಉಪನಿರ್ದೇಶಕರು (ಆಡಳಿತ) ಹಾಗೂ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು, ಶಾಲಾ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ-ಕರ್ನಾಟಕ ವಿಜಯಪುರ ಜಿಲ್ಲಾ ಕಚೇರಿಗೆ ಅಗತ್ಯ ದಾಖಲಾತಿಗಳೊಂದಿಗೆ ಪತ್ರಾಂಕಿತ ಅಧಿಕಾರಿಗಳಿಂದ ಧೃಡೀಕರಿಸಿ, ದ್ವಿ-ಪ್ರತಿಯಲ್ಲಿ ಸಲ್ಲಿಸಲು ತಿಳಿಸಿದೆ.ಆರ್‌ಸಿಐ ನೋಂದಣಿ ಹಾಗೂ ಚಾಲ್ತಿಯಲ್ಲಿ ಇಲ್ಲದೆ ಇರುವ ಪ್ರೊವಿಷನಲ್ ಸರ್ಟಿಪಿಕೆಟ್…

Read More

ವಿಜಯಪುರ: ಜಿಲ್ಲೆಯ ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್ ಗಳು ಕಡ್ಡಾಯವಾಗಿ ಕೆಪಿಎಂಇ (.ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ) ಕಾಯ್ದೆ -2018 ರ ಅಡಿಯಲ್ಲಿ ನೋಂದಣಿ ಮಾಡಿಸಬೇಕು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಸೂಚಿಸಿದರು.ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೆಪಿಎಂಇ ಜಿಲ್ಲಾ ನೋಂದಣಿ ಮತ್ತು ಕುಂದುಕೊರತೆ ನಿವಾರಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಖಾಸಗಿ ಆಸ್ಪತ್ರೆ, ಕ್ಲಿನಿಕ್ ಗಳು, ಪ್ರಯೋಗಾಲಯ, ನರ್ಸಿಂಗ್ ಹೋಮ್ ಗಳು ಕೆಪಿಎಂಇ ಕಾಯ್ದೆ ಅಡಿಯಲ್ಲಿ ನೋಂದಣಿ ಮಾಡಿಸಬೇಕು. ನಕಲಿ ವೈದ್ಯರ ಹಾವಳಿ ತಡೆಗಟ್ಟುವ ಉದ್ದೇಶದಿಂದ ಕಡ್ಡಾಯವಾಗಿ ಎಲ್ಲರಿಗೂ ಕಾಣುವ ರೀತಿಯಲ್ಲಿ ನೋಂದಣಿ ಫಲಕ ಅಳವಡಿಸಬೇಕು ಎಂದು ಸೂಚಿಸಿದರು.ಅಲೋಪತಿ ಆಸ್ಪತ್ರೆಗಳು ಆಕಾಶ ನೀಲಿ ಬಣ್ಣದ, ಆಯುರ್ವೇದಿಕ್ ಆಸ್ಪತ್ರೆಗಳು ತಿಳಿ ಹಸಿರು ಬಣ್ಣದ ಫಲಕಗಳನ್ನು ಅಳವಡಿಸಬೇಕು. ಜಿಲ್ಲೆಯಲ್ಲಿ ಇಲ್ಲಿಯವರೆಗೆ ನೋಂದಣಿಯಾಗದೆ ಇರುವ ಸಂಸ್ಥೆಗಳು ಒಂದು ವಾರದ ಒಳಗೆ ನೋಂದಣಿ ಹಾಗೂ ನವೀಕರಣ ಮಾಡಿಸತಕ್ಕದ್ದು, ತಪ್ಪಿದಲ್ಲಿ ಕೆಪಿಎಂಪಿ ಕಾಯ್ದೆ – 2018 ರ 19ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು…

Read More

ಲೋಕಸಭೆಯಲ್ಲಿ ಬಿಜೆಪಿ ಬಳಿಕ 99 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ | ಸಿಡಬ್ಲ್ಯುಸಿ ಸದಸ್ಯರಿಂದ ನಿರ್ಣಯ ಅಂಗೀಕಾರ ನವದೆಹಲಿ: ರಾಹುಲ್ ಗಾಂಧಿ ‘ಮ್ಯಾನ್ ಆಫ್ ದಿ ಮ್ಯಾಚ್’ ಆಗಿದ್ದಾರೆ. ಅವರು ಸದನದಲ್ಲಿ ವಿರೋಧ ಪಕ್ಷದ ನಾಯಕನಾಗಬೇಕು ಎಂದು ಕಾಂಗ್ರೆಸ್‌ ಹಿರಿಯ ನಾಯಕ ಶಶಿ ತರೂರ್ ಆಗ್ರಹಿಸಿದ್ದು, ಇದೇ ರೀತಿಯ ಬೇಡಿಕೆಯನ್ನು ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ ಸೇರಿ ಹಲವು ಕಾಂಗ್ರೆಸ್‌ ನಾಯಕರು ಮುಂದಿಟ್ಟಿದ್ದಾರೆ.ಇದಲ್ಲದೆ ರಾಹುಲ್ ಗಾಂಧಿ ಅವರನ್ನು ಲೋಕಸಭೆಯಲ್ಲಿ ಪಕ್ಷದ ನಾಯಕರನ್ನಾಗಿ ನೇಮಿಸಬೇಕು ಎಂದು ಸಿಡಬ್ಲ್ಯುಸಿ ಸದಸ್ಯರು ನಿರ್ಣಯ ಅಂಗೀಕರಿಸಿದ್ದಾರೆ.ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಶಶಿ ತರೂರ್, ಈ ಜನಾದೇಶವು ಬಿಜೆಪಿಯ ದುರಹಂಕಾರ ಮತ್ತು ವರ್ತನೆಗೆ ಮತದಾರರು ನೀಡಿರುವ ಜನಾದೇಶದ ಸಂದೇಶವಾಗಿದೆ. ಸರ್ಕಾರವನ್ನು ನಡೆಸುವಾಗ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿದ್ದ ಮೋದಿ ಮತ್ತು ಅಮಿತ್ ಶಾ ಅವರಿಗೆ ಇದು ಒಂದು ಸವಾಲಾಗಿದೆ ಮತ್ತು ಇದು ಅವರ ಕಾರ್ಯಚಟುವಟಿಕೆಯನ್ನು ಬದಲಾಯಿಸುವ ಮತ್ತು ಹೆಚ್ಚು ಹೊಂದಿಕೊಳ್ಳುವ ಸಾಮರ್ಥ್ಯವನ್ನು ಪರೀಕ್ಷಿಸಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.ಈ ಬಾರಿ…

Read More

ಕೊಲ್ಹಾರ: ತಾಲೂಕಿನ ಕೂಡಗಿ ಎನ್ ಟಿಪಿಸಿಯ ಬೂದಿ ತುಂಬಿಕೊಂಡು ಹೋಗಲು ಬಂದಿದ್ದ ಬಲ್ಕರ್ ವಾಹನದ ಚಾಲಕ ಮೇನ್ ಲೈನ್ ತಾಗಿ ಮೃತಪಟ್ಟಿರುವ ಘಟನೆ ಉಷ್ಣ ವಿದ್ಯುತ್ ಸ್ಥಾವರದ ಬಳಿಯ ಎಚ್ ಪಿ ಪೆಟ್ರೋಲ್ ಪಂಪ್ ಹತ್ತಿರ ಶನಿವಾರ ಸಂಜೆ 5 ಗಂಟೆಯ ಸುಮಾರಿಗೆ ಜರುಗಿದೆ.ಮೃತ ಚಾಲಕ ವಿಶ್ವನಾಥ್ ಶೇವು ರಾಠೋಡ (24) ಸಿಂದಗಿ ತಾಲೂಕಿನ ಕೋರವಾರ ಸಮೀಪದ ಮಲ್ಲಾಳ ತಾಂಡಾ ಎಲ್ ಟಿ ಗ್ರಾಮದವನು ಎಂದು ತಿಳಿದು ಬಂದಿದೆ. ಚಾಲಕ ವಾಹನದ ಮೇಲೆ ಹತ್ತಿದ ಸಂದರ್ಭದಲ್ಲಿ ಮೇನ್ ಲೈನ್ ತಾಗಿದೆ. ಸ್ಥಳಕ್ಕೆ ಕೂಡಗಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More

ಲಿಂ.ಶಿವಾನಂದ ಮಹಾಸ್ವಾಮಿಗಳ 28 ನೇ ಪುಣ್ಯರಾಧನೆ | ನೂರಾರು ಸುಮಂಗಲೆಯರ ಸಂಭ್ರಮ ಚಡಚಣ: ಪಟ್ಟಣದ ವಿರಕ್ತ ಮಠದಲ್ಲಿ ಲಿಂ. ಶಿವಾನಂದ ಮಹಾಸ್ವಾಮಿಗಳ 28 ನೇ ಪುಣ್ಯರಾಧನೆ ನಿಮಿತ್ತವಾಗಿ ಶನಿವಾರ ಶ್ರೀಗಳ ಭಾವಚಿತ್ರದೊಂದಿಗೆ ಪಟ್ಟಣದ ಪ್ರಮುಖ ಬೀದಿ ಬೀದಿಗಳಲ್ಲಿ ನೂರಾರು ಸುಮಂಗಲೆಯರಿಂದ ಪೂರ್ಣ ಕುಂಭಮೇಳ ಹಮ್ಮಿಕೊಂಡು ಮಠಕ್ಕೆ ತಲುಪಿದ ನಂತರ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು.ಶ್ರೀ ಮಠದ ವತಿಯಿಂದ ವಿವಿಧ ಮಠಮಾನ್ಯಗಳಿಂದ ಆಗಮಿಸಿದ ಮಠಾಧೀಶರಿಗೆ ಮತ್ತು ನೂತನವಾಗಿ ಆಯ್ಕೆಯಾದ ಪಟ್ಟಣ ಪಂಚಾಯತಿಯ ಸದಸ್ಯರುಗಳಿಗೆ ಗೌರವ ಸತ್ಕಾರ ಮಾಡಲಾಯಿತು.ಇದೇ ವೇಳೆ ಕದಳಿ ಮಹಿಳಾ ವೇದಿಕೆ ಮತ್ತು ಸಮೃದ್ಧಿ ಮಹಿಳಾ ಸಂಘದ ವತಿಯಿಂದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳೊಂದಿಗೆ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.ಬಳಿಕ ಭಕ್ತರಿಗೆ ಅನ್ನಪ್ರಸಾದ ವನ್ನು ಉಣಬಡಿಸಲಾಯಿತು.ಇದಕ್ಕೂ ಮುನ್ನ ಲಿಂಗೈಕ್ಯ ಶ್ರೀಗಳ ಗದ್ದುಗೆಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಪುಷ್ಪವೃಷ್ಠಿ ಕಾರ್ಯಕ್ರಮವನ್ನು ನಡೆಸಿಕೊಡಲಾಯಿತು.

Read More