ಕೊಲ್ಹಾರ: ತಾಲೂಕಿನ ಕೂಡಗಿ ಎನ್ ಟಿಪಿಸಿಯ ಬೂದಿ ತುಂಬಿಕೊಂಡು ಹೋಗಲು ಬಂದಿದ್ದ ಬಲ್ಕರ್ ವಾಹನದ ಚಾಲಕ ಮೇನ್ ಲೈನ್ ತಾಗಿ ಮೃತಪಟ್ಟಿರುವ ಘಟನೆ ಉಷ್ಣ ವಿದ್ಯುತ್ ಸ್ಥಾವರದ ಬಳಿಯ ಎಚ್ ಪಿ ಪೆಟ್ರೋಲ್ ಪಂಪ್ ಹತ್ತಿರ ಶನಿವಾರ ಸಂಜೆ 5 ಗಂಟೆಯ ಸುಮಾರಿಗೆ ಜರುಗಿದೆ.
ಮೃತ ಚಾಲಕ ವಿಶ್ವನಾಥ್ ಶೇವು ರಾಠೋಡ (24) ಸಿಂದಗಿ ತಾಲೂಕಿನ ಕೋರವಾರ ಸಮೀಪದ ಮಲ್ಲಾಳ ತಾಂಡಾ ಎಲ್ ಟಿ ಗ್ರಾಮದವನು ಎಂದು ತಿಳಿದು ಬಂದಿದೆ. ಚಾಲಕ ವಾಹನದ ಮೇಲೆ ಹತ್ತಿದ ಸಂದರ್ಭದಲ್ಲಿ ಮೇನ್ ಲೈನ್ ತಾಗಿದೆ. ಸ್ಥಳಕ್ಕೆ ಕೂಡಗಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


