ಮೋರಟಗಿ: ನರೇಂದ್ರ ಮೋದಿಜಿ ಅವರು ಭಾರತ ದೇಶದ ೧೫ನೇ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು ಭಾರತ ದೇಶ ಸೇತಿದಂತೆ ಅನೇಕ ರಾಷ್ಟ್ರಗಳಲ್ಲಿ ಆನಂದ ಬಾಷ್ಪಗಳು ಮುಗಿಲಿಗೆ ಮುಟ್ಟಿವೆ ಎಂದು ಮಾಜಿ ಜಿ ಪಂ ಸದಸ್ಯ ಬಿಂದುರಾಯಗೌಡ ಪಾಟೀಲ ಹೇಳಿದರು.
ಸಮೀಪದ ಕಕ್ಕಳಮೆಲಿ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಧಾನಿ ಮೋದಿಜಿ ಪ್ರಮಾಣ ವಚನ ದಿನದಂದು ಬಿಜೆಪಿ ವಿಜಯೋತ್ಸವ ಸಂಭ್ರಮ ಆಚರಿಸಿ ಅವರು ಮಾತನಾಡಿದರು.
ಕಳೆದ ಎರಡು ಅವಧಿಯಲ್ಲಿ ಮೋದಿಜಿ ಅವರು ಈ ದೇಶದ ಸಮಗ್ರ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದ್ದಾರೆ ಭಗವಂತ ಮತ್ತೆ ದೇಶದ ಜನ ಸೇವೆ ಮಾಡಲು ಮೂರನೇ ಬಾರಿ ಅವಕಾಶ ಕಲ್ಪಿಸಿದ್ದಾನೆ ಅವರ ಅಭಿವೃದ್ಧಿ ಕಾರ್ಯಗಳು ಮುಂದೆ ವರಿಯಲಿ
ಈ ಬಾರಿ ಭಾರತ ವಿಶ್ವಗುರು ಆಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಸಿದ್ರಾಮಪ್ಪ ಸಾಂಬಾ, ಸಿದ್ದನಗೌಡ ಮಾಲಿಪಾಟೀಲ್, ನಿಂಗಣ್ಣ ಆಹೆರಿ, ಧರೆಪ್ಪ ಹಳ್ಳೆಪ್ಪನವರ, ದುಂಡಪ್ಪ ಸಾಂಬಾ, ಶರಣಪ್ಪ ಹಳ್ಳೆಪ್ಪನವರ, ರಾಯಗೊಂಡಪ್ಪ ಸಾಂಬಾ, ಚಂದ್ರು ನಾಗಯ್ಯನಮಠ, ಸಂತೋಷ ಗಾಣಿಗೇರ, ನಿಂಗಣ್ಣ ಹಳ್ಳೆಪ್ಪನವರ, ಸಿದ್ದರಾಮ ಬಿರಾದಾರ, ಭಗವಂತರರಾಯ ಗೋಡೆಕರ, ಸೇರಿದಂತೆ ಅನೇಕರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

