ಹಡಗಲಿ ಗ್ರಾಮ ಘಟಕ ಉದ್ಘಾಟನೆ | ರೈತರಿಗೆ ಗುರುತಿನ ಚೀಟಿ ವಿತರಣೆ
ವಿಜಯಪುರ: ಈ ನಾಡಿನಲ್ಲಿ ರೈತರನ್ನು ಕೃಷಿಯಿಂದ ದೂರವಿಟ್ಟು ಬಂಡವಾಳ ಶಾಹಿಗಳಿಗೆ ಅನುಕೂಲ ಮಾಡಿಕೊಡುವ ಹುನ್ನಾರ ನಡಿತಾ ಇದೆ, ಇದಕ್ಕೆ ನಮ್ಮ ಜನಪ್ರತಿನಿಧಿಗಳು ಸಹ ಅವರೊಂದಿಗೆ ಕೈಜೋಡಿಸುತ್ತಾ, ಅಂತವರ ಪರವಾಗಿಯೇ ಯೋಜನೆಗಳನ್ನು ರೂಪಿಸಿ ರೈತರಿಗೆ ಅನ್ಯಾಯ ಮಾಡುತ್ತಾ ದ್ರೋಹ ಎಸುಗುತ್ತಿದ್ದಾರೆ, ಆದ್ದರಿಂದ ರೈತರೆಲ್ಲರೂ ಒಗ್ಗಟಾಗಿ ಶಕ್ತಿ ಪ್ರದರ್ಶಿಸಬೇಕು ಅಂದಾಗ ಮಾತ್ರ ಈ ದೇಶದಲ್ಲಿ ಕೃಷಿ ಉಳಿಯುವುದು ಜೊತೆಗೆ ರೈತ ಕುಲ ಉಳಿಯುವುದು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಅವರು ಹಡಗಲಿ ಗ್ರಾಮದ ರೈತ ಸಂಘದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವಿಜಯಪುರ ಜಿಲ್ಲೆಯ ಹಡಗಲಿ ಗ್ರಾಮದಲ್ಲಿ ಗ್ರಾಮ ಘಟಕ ಉದ್ಘಾಟನೆಯನ್ನು ಸಸಿಗೆ ನೀರುಣಿಸುತ್ತಾ, ಆಲಿಮಟ್ಟಿ ಆಣೆಕಟ್ಟು ಇಲ್ಲಿಯೇ ಇದ್ದು, ನಮ್ಮ ರೈತರ ಸಾವಿರಾರು ಎಕರೆ ಕೃಷಿ ಭೂಮಿ ಕಳೆದುಕೊಂಡು ಮುಂದಿನ ನಮ್ಮ ಮಕ್ಕಳ ಭವಿಷ್ಯಕ್ಕಾಗಿ ತ್ಯಾಗ ಮಾಡಿದ್ದರು, ಇಂದು ಜಿಲ್ಲೆಯಲ್ಲಿ ಸುಮಾರು ೨೪ ಏತ ನೀರಾವರಿ ಯೋಜನೆಗಳಿಗೆ ಸಾವಿರಾರು ಕೋಟಿ ಹಣ ಖರ್ಚು ಮಾಡಿದ್ದರು ಕೂಡಾ ಇನ್ನು ಜಿಲ್ಲೆಯಲ್ಲಿ ಸಂಪೂರ್ಣ ನೀರಾವರಿ ಆಗಿಲ್ಲ, ಜೊತೆಗೆ ಪ್ರತಿ ಬೇಸಿಗೆಯಲ್ಲಿ ಕುಡಿಯಲು ನೀರು ಸಿಗದೇ ಟ್ಯಾಂಕರ್ ನೀರು ಹಾಕಿಸಿಕೊಳ್ಳುವುದು ತಪ್ಪುತ್ತಿಲ್ಲ ಎಂದರು
ಜಿಲ್ಲೆಯಲ್ಲಿ ಸಾಕಷ್ಟು ಕಳಪೆ ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕ ಹಾಗೂ ಯಂತ್ರೋಪಕರಣಗಳು ಮಾರಾಟ ಮಾಡುತ್ತಿದ್ದಾರೆ, ಮಾರಾಟಗಾರರು ನಿಗದಿ ಪಡೆಸಿದ ಬೆಲೆಗಿಂತ ಅತೀ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ, ಇದನ್ನು ತಡೆಯಬೇಕಾಗಿರುವ ಅಧಿಕಾರಿಗಳು ಕೈಕಟ್ಟಿ ಕುಳಿತ್ತಿದ್ದಾರೆ, ಒಟ್ಟಾರೆಯಾಗಿ ರೈತರನ್ನು ಬಡವರನ್ನಾಗಿ ಉಳಿಯುವಂತೆ ಮಾಡುವ ದೊಡ್ಡ ಶಡ್ಯಂತರ ನಡೆತಾ ಇದೆ, ಆದ್ದರಿಂದ ಈ ರೀತಿ ಸಂಘಟನೆ ಪ್ರತಿ ಗ್ರಾಮದಲ್ಲಿ ರೈತರು, ರೈತ ಮಹಿಳೆಯರು ಹಾಗೂ ರೈತ ಕಾರ್ಮಿಕರನೊಳಗೊಂಡು ಸಂಘಟನೆಗೆ ಬರಬೇಕು ಅಂದಾಗ ಮಾತ್ರ ರೈತ ಆತ್ಮಹತೈಯನ್ನು ತಡೆಯಬಹುದು ಎಂದರು.
ವಿಜಯಪುರ ತಾ ಅಧ್ಯಕ್ಷ ಮಹಾದೇವಪ್ಪ ತೇಲಿ, ಜಿಲ್ಲಾ ಸಂಚಾಲಕ ರಾಮನಗೌಡ ಪಾಟೀಲ ಮಾತನಾಡುತ್ತಾ, ಜಿಲ್ಲೆಯಲ್ಲಿ ರೈತ ಸಂಘದಿಂದ ಸಾಕಷ್ಟು ಕೆಲಸಗಳು ಆಗುತ್ತಿವೆ, ನಮ್ಮ ಕಣ್ಣುಮುಂದೆಯೇ ಹಲವಾರು ಕೆಲಸಗಳು ರೈತರಿಗಾಗಿ ಮಾಡಲಾಗಿದೆ, ಸರಕಾರದ ಯೋಜನೆಗಳನ್ನು ಸರಿಯಾದ ರೈತರಿಗೆ ಸಿಗುವಂತೆ ಮಾಡಲಾಗುತ್ತಿದೆ, ಎಲ್ಲರು ಜಾತ್ಯಾತೀತವಾಗಿ ಹಾಗೂ ಪಕ್ಷಾತೀತವಾಗಿ ಜೋಡಿಸಿಕೊಳ್ಳಬೇಕು ಎಂದರು
ಈ ವೇಳೆ ಹಡಗಲಿ ಗ್ರಾಮದ ಬಕ್ಕೆಶ್ವರ ದೇವಸ್ಥಾನದ ಪೀಠಾಧಿಪತಿಗಳಾದ ಪ.ಪೂ ಶಿವಯ್ಯಾ ಮಹಾಸ್ವಾಮಿಗಳು ನೂತನವಾಗಿ ಸಂಘಕ್ಕೆ ಸೇರಿದ ಎಲ್ಲಾ ರೈತರಿಗೆ ಹಸಿರು ಶಾಲು ಹೊದಿಸಿ, ಗುರುತಿನ ಚೀಟಿಗಳನ್ನು ಹಾಕಿ ಆರ್ಶಿವಚನ ನೀಡುತ್ತಾ, ರೈತ ಕುಲ ತುಂಬಾ ದೊಡ್ಡದು, ಬಾಗಲಕೋಟಿ, ಜಮಖಂಡಿ, ಮುಧೋಳ ಭಾಗದಲ್ಲಿ ರೈತ ಸಂಘಕ್ಕೆ ಬಹು ದೊಡ್ಡ ಶಕ್ತಿ ಇದೆ, ಇಂದಿನಿಂದ ಇಲ್ಲಿಯೂ ಕೂಡಾ ರೈತರೆಲ್ಲರೂ ಒಗ್ಗಟಾಗಿ ನಿಮ್ಮ ಹಕ್ಕುಗಳಿಗೆ ದೊಡ್ಡಮಟ್ಟದ ಸಂಘಟನೆಯಾಗಿ ಬೆಳೆಯಿರಿ, ರೈತರೆಲ್ಲರೂ ಒಂದಾದಾಗ ಮಾತ್ರ ರೈತರಿಗೆ ಬೆಲೆ ಬರುವುದು ಎಂದರು.
ಈ ವೇಳೆ ತಾ ಉಪಾಧ್ಯಕ್ಷ ಪ್ರಕಾಶ ತೇಲಿ, ಹಿರಿಯರಾದ ಶಿವಯ್ಯ ಚಟ್ಟರಕಿ, ಕಾಶಿನಾತ ಹೂಗಾರ, ಮಳಸಿದ್ದ ಔರಾದಿ, ಹಡಗಲಿ ಅಧ್ಯಕ್ಷರಾದ ಅಶೋಕ ಕನ್ನೂರ, ಉಪಾಧ್ಯಕ್ಷರಾಗಿ ಬಸವರಾಜ ಹಡಪದ, ಸಿದ್ದನಗೌಡ ಬಿರಾದಾರ, ಮಲಕು ಅಕ್ಕಿಹುಗ್ಗಿ, ಶರಣಬಸು ಇಂಡಿ, ಸುಖಾನಂದ ಗಂಗಶೆಟ್ಟಿ, ಶ್ರೀಕಾಂತ ಬೆಳ್ಳುಬ್ಬಿ, ಈರಪ್ಪ ಅಕ್ಕಿಹುಗ್ಗಿ, ಪರಸು ಚಿಕ್ಕಲಕಿ, ರೇವಣಸಿದ್ದ ಹಾದಿಮನಿ, ರುದ್ರಯ್ಯ ಸ್ಥಾವರಮಠ, ಮಲ್ಲಿಕಾರ್ಜುನ ಬಳವಲದ, ಸಿದ್ದು ಗಂಗಶೆಟ್ಟಿ, ಸಂಗಮೇಶ ಪತ್ತಾರ, ಶರಣಬಸ್ಸು ಗಂಗಶೆಟ್ಟಿ, ಶ್ರೀಶೈಲ ಕಾಳಗಿ, ಬಸವರಾಜ ಹಜೇರಿ, ಸಂತೋಷ ಹಂಚನಾಳ, ರಾಮ ಪಡಗಾನೂರ, ಯಲ್ಲಪ್ಪ ಕರಬಂಟನಾಳ, ಮಲ್ಲು ಬಿರಾದಾರ, ಸಿದ್ದಯ್ಯ ಮಠಪತಿ, ಭೀಮನಗೌಡ ಬಿರಾದಾರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

