ವಿಜಯಪುರ: ಜೂ. ೦೯ ರಂದು ಬಸವೇಶ್ವರ ಕಲಾ ಮಹಾವಿದ್ಯಾಲಯ ಬಾಗಲಕೋಟೆಯ ಸೆಮಿನಾರ್ ಹಾಲ್ ದಲ್ಲಿ ೨೦೨೪ ನೆಯ ಸಾಲಿನ ಮೇಘಮೈತ್ರಿಯ ರಾಜ್ಯಮಟ್ಟದ ೦೭ ನೆಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು.
ಈ ಸಮ್ಮೇಳನದಲ್ಲಿ ಈಗಾಗಲೇ ಹಲವಾರು ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದಿರುವ, ವಿಜಯಪುರದ ಬಾಲಿಕೆಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ಕನ್ನಡ ಉಪನ್ಯಾಸಕ ಹಾಗೂ ಸಾಹಿತಿ ಪ್ರೊ. ಸಿದ್ದು ಸಾವಳಸಂಗ ಅವರಿಗೆ ೨೦೨೪ ನೆಯ ಸಾಲಿನ ರಾಜ್ಯಮಟ್ಟದ “ಮೇಘಮೈತ್ರಿ ಸಾಹಿತ್ಯ ಸೇವಾ ರತ್ನ ಪ್ರಶಸ್ತಿ” ಪ್ರದಾನ ಮಾಡಲಾಯಿತು.
ಸದರಿ ಕಾರ್ಯಕ್ರಮದಲ್ಲಿ ಮೇಘಮೈತ್ರಿ ಕನ್ನಡ ಸಾಹಿತ್ಯ ಸಮ್ಮೇಳನದ ಸಂಸ್ಥಾಪಕ ಅಧ್ಯಕ್ಷ ಎಂ. ರಮೇಶ ಕಮತಗಿ, ಸಮ್ಮೇಳನದ ಸರ್ವಾಧ್ಯಕ್ಷ ಡಾ. ವಿಜಯಕುಮಾರ ಎಸ್. ಕಟಗಿಹಳ್ಳಿಮಠ ಹಾಗೂ ಅನೇಕ ಸಾಹಿತಿಗಳು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

