ಲಿಂ.ಶಿವಾನಂದ ಮಹಾಸ್ವಾಮಿಗಳ 28 ನೇ ಪುಣ್ಯರಾಧನೆ | ನೂರಾರು ಸುಮಂಗಲೆಯರ ಸಂಭ್ರಮ
ಚಡಚಣ: ಪಟ್ಟಣದ ವಿರಕ್ತ ಮಠದಲ್ಲಿ ಲಿಂ. ಶಿವಾನಂದ ಮಹಾಸ್ವಾಮಿಗಳ 28 ನೇ ಪುಣ್ಯರಾಧನೆ ನಿಮಿತ್ತವಾಗಿ ಶನಿವಾರ ಶ್ರೀಗಳ ಭಾವಚಿತ್ರದೊಂದಿಗೆ ಪಟ್ಟಣದ ಪ್ರಮುಖ ಬೀದಿ ಬೀದಿಗಳಲ್ಲಿ ನೂರಾರು ಸುಮಂಗಲೆಯರಿಂದ ಪೂರ್ಣ ಕುಂಭಮೇಳ ಹಮ್ಮಿಕೊಂಡು ಮಠಕ್ಕೆ ತಲುಪಿದ ನಂತರ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು.
ಶ್ರೀ ಮಠದ ವತಿಯಿಂದ ವಿವಿಧ ಮಠಮಾನ್ಯಗಳಿಂದ ಆಗಮಿಸಿದ ಮಠಾಧೀಶರಿಗೆ ಮತ್ತು ನೂತನವಾಗಿ ಆಯ್ಕೆಯಾದ ಪಟ್ಟಣ ಪಂಚಾಯತಿಯ ಸದಸ್ಯರುಗಳಿಗೆ ಗೌರವ ಸತ್ಕಾರ ಮಾಡಲಾಯಿತು.
ಇದೇ ವೇಳೆ ಕದಳಿ ಮಹಿಳಾ ವೇದಿಕೆ ಮತ್ತು ಸಮೃದ್ಧಿ ಮಹಿಳಾ ಸಂಘದ ವತಿಯಿಂದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳೊಂದಿಗೆ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಬಳಿಕ ಭಕ್ತರಿಗೆ ಅನ್ನಪ್ರಸಾದ ವನ್ನು ಉಣಬಡಿಸಲಾಯಿತು.
ಇದಕ್ಕೂ ಮುನ್ನ ಲಿಂಗೈಕ್ಯ ಶ್ರೀಗಳ ಗದ್ದುಗೆಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಪುಷ್ಪವೃಷ್ಠಿ ಕಾರ್ಯಕ್ರಮವನ್ನು ನಡೆಸಿಕೊಡಲಾಯಿತು.

