Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಮೆಟ್ರಿಕ್ ನಂತರದ ಹಿಂದುಳಿದ ವರ್ಗದ ವಸತಿನಿಲಯದಲ್ಲಿನ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ ಇಂಡಿ: ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಮೆಟ್ರಿಕ್ ನಂತರದ ಹಿಂದುಳಿದ ವರ್ಗದ ವಸತಿನಿಲಯದ ಬಾಲಕಿಯರು ವಸತಿ ನಿಲಯ ಎದುರಿಗೆ ವಿಜಯಪುರ ರಸ್ತೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿದ್ಯಾರ್ಥಿ ಘಟಕದ ನೇತೃತ್ವದ ಅಡಿ ರಾಸ್ತಾರೋಕೊ ಮಾಡಿದರು.ವಸತಿ ನಿಲಯದಲ್ಲಿ ಕಳೆದ ಎಂಟು ದಿನಗಳಿಂದ ನೀರು ಬಂದಿಲ್ಲ. ವಸತಿ ನಿಲಯದಲ್ಲಿ ಸ್ವಚ್ಛತೆ ಎಂಬುದು ಇಲ್ಲ. ಅಡುಗೆ ಮನೆಯಲ್ಲಿಯೇ ಊಟ ಮಾಡಿ ಉಳಿದಿದ್ದು ಅಲ್ಲಿಯೇ ಒಗೆಯುತ್ತಾರೆ. ತಾಟುಗಳಲ್ಲಿ ಉಳಿದಿದ್ದು ಅಲ್ಲಯೇ ಹಾಕಿ ತೊಳೆಯುತ್ತಾರೆ. ಹೀಗಾಗಿ ಅಡುಗೆ ಮನೆ ಹೊಲಸು ನಾರುತ್ತಿರುತ್ತದೆ. ಅಹಾರ ದಾನ್ಯಗಳು ಮತ್ತು ತರಕಾರಿ ಸಾಮಗ್ರಿಗಳು ಕಳಪೆ ಮಟ್ಟದಿಂದ ಕೂಡಿರುತ್ತವೆ. ಕೆಲವೊಂದು ಅಹಾರ ಧ್ಯಾನ್ಯಗಳಲ್ಲಿ ನುಸಿ ಮತ್ತು ಕಿಡೆಗಳಿದ್ದರೂ ಹಾಗೇ ಸ್ವಚ್ಛ ಮಾಡದೆ ಅಡುಗೆ ಮಾಡುತ್ತಾರೆ. ಸ್ನಾಹ ಗೃಹಗಳು ಸ್ವಚ್ಛತೆಯಿಂದ ಕೂಡಿಲ್ಲ. ಸ್ವಚ್ಛ ಮಾಡಲು ವಸತಿ ನಿಲಯದ ಅಧಿಕಾರಿಗಳಿಗೆ ತಿಳಿಸಿದರೆ ನಿವೇ ಸ್ವಚ್ಛ ಮಾಡಿಕೊಳ್ಳಿ ಎಂದು ಉತ್ತರಿಸುತ್ತಾರೆ ಎಂದರು.ವಸತಿ ನಿಲಯದ ಮೇಲ್ವಿಚಾರಕರು ಸರಿಯಾಗಿ ಬರುವದಿಲ್ಲ.…
ಸಿಂದಗಿ: ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹಿರಿಯ ಸಾಹಿತಿ, ಕಥೆಗಾರ, ವಿಮರ್ಶಕ ಡಾ.ಚನ್ನಪ್ಪ ಕಟ್ಟಿ ಅಧಿಕಾರ ಸ್ವೀಕರಿಸಿದರು.
ಸಿಂದಗಿ: ನಗರದ ಬಿಎನ್‌ಬಿ ಫೌಂಡೇಶನ್ ವತಿಯಿಂದ ಜೂ.೧೬ರಂದು ಭಾನುವಾರ ಬೆಳಿಗ್ಗೆ ೧೦:೩೦ಗಂಟೆಗೆ ವಿಜಯಪುರ ರಸ್ತೆಯ ಮಾಂಗಲ್ಯ ಭವನದಲ್ಲಿ ದಿ.ಭೀಮರಾಯಗೌಡ ಬಿರಾದಾರ, ಮಾಗಣಗೇರಿ ಅವರ ಸ್ಮರಣಾರ್ಥವಾಗಿ ಸಿಂದಗಿ ಮತ್ತು ಆಲಮೇಲ ತಾಲೂಕಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಎನ್‌ಬಿ ಫೌಂಡೇಶನ್ ಅಧ್ಯಕ್ಷ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ತಿಳಸಿದ್ದಾರೆ.ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಿಜಯಪುರ ವನಶ್ರೀ ಸಂಸ್ಥಾನ ಮಠದ ಡಾ.ಜಯಬಸವ ಕುಮಾರ ಸ್ವಾಮಿಗಳು, ಯಂಕಂಚಿಯ ಅಭಿನವ ರುದ್ರಮುನಿ ಶಿವಾಚಾರ್ಯರು, ಆಲಮೇಲ ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಮಹಾಸ್ವಾಮಿಗಳು, ಕನ್ನೊಳ್ಳಿಯ ಸಿದ್ದಲಿಂಗ ಶಿವಾಚಾರ್ಯರು, ದೇವದುರ್ಗ ವೀರಗೋಟಿ ಮಠದ ಅಡವಿಲಿಂಗ ಮಹಾರಾಜರು ವಹಿಸಿಕೊಳ್ಳಲಿದ್ದಾರೆ. ಉದ್ಘಾಟಕರಾಗಿ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಆಗಮಿಸಿಲಿದ್ದಾರೆ. ಬೆಳಗಾವಿ ಜಿಲ್ಲಾಧಿಕಾರಿ ನಿತೀಶ ಪಾಟೀಲ ಗೌರವ ಉಪಸ್ಥಿತಿ ಇರಲಿದ್ದಾರೆ. ಅಧ್ಯಕ್ಷತೆಯನ್ನು ಮಾಜಿ ಶಾಸಕ ರಮೇಶ ಭೂಸನೂರ ವಹಿಸಿಕೊಳ್ಳಲಿದ್ದಾರೆ. ಪೋಟೋ ಪೂಜೆಯನ್ನು ಶಾಸಕ ಅಶೋಕ ಮನಗೂಳಿ ನೆರೆವೇರಿಸುವರು. ಮುಖ್ಯ ಅತಿಥಿಗಳಾಗಿ ಜೇವರ್ಗಿ ಶಾಸಕ ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್, ಇಂಡಿ ಶಾಸಕ ಯಶವಂತ್ರಾಯಗೌಡ…
ಸಿಂದಗಿ: ಪಟ್ಟಣದ ಯುವಕ ವಿಜಯಪುರ ಜಿಲ್ಲೆಯ ಪ್ರತಿಷ್ಠಿತ ಸಂಸ್ಥೆಯಾದ ಸಿಕ್ಯಾಬ್ ಇನ್ಸಿಟ್ಯೂಟ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಜಲಿ ಕಾಲೇಜಿನ ವಿದ್ಯಾರ್ಥಿ ಅಜರ್‌ಫಜಲ್‌ಅಹಮ್ಮದ ಮುಲ್ಲಾ ೨೦೨೩-೨೪ನೆಯ ಸಾಲಿನ ಎಮ್.ಟೆಕ್ ಪದವಿಯಲ್ಲಿ ಮಹಾವಿದ್ಯಾಲಯಕ್ಕೆ ಪ್ರಥಮ ಸ್ಥಾನದಲ್ಲಿ ಉತ್ತೀರ್ಣಗೊಂಡು ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.ವಿದ್ಯಾರ್ಥಿಯ ಈ ಸಾಧನೆಗೆ ಸಿಕ್ಯಾಬ್ ಸಂಸ್ಥೆಯ ಅಧ್ಯಕ್ಷ ಎಸ್.ಎ.ಪುಣೆಕರ್, ಕಾರ್ಯದರ್ಶಿ ಎ.ಎಸ್.ಪಾಟೀಲ, ನಿರ್ದೇಶಕ ಮಂಡಳಿ, ಪ್ರಾಚಾರ್ಯ ಡಾ.ಸೈಯದ್ ಅಬ್ಬಾಸಲಿ ಹಾಗೂ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಹರ್ಷವ್ಯಕ್ತಪಡಿಸಿದ್ದಾರೆ.
– ಸಂತೋಷ್ ರಾವ್ ಪೆರ್ಮುಡ,ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ. ಒಂದೂರಿನಲ್ಲಿ ಒಬ್ಬಳು ಅಜ್ಜಿ ಕಾಡಿನಂಚಿನಲ್ಲಿ ವಾಸವಾಗಿದ್ದಳು. ಮನೆಯ ದಿನನಿತ್ಯದ ಬಳಕೆಗಾಗಿ ಅಗತ್ಯವಿರುವ ನೀರನ್ನು ತರಲು ಅಜ್ಜಿಯು ನಾಲ್ಕೈದು ಕಿ.ಮೀ ದೂರದಲ್ಲಿದ್ದ ನದಿಯಿಂದ ಕಾಡಿನ ಹಾದಿಯಲ್ಲಿ ಸಾಗಿ ತರಬೇಕಿತ್ತು. ನದಿಯಿಂದ ನೀರನ್ನು ತರಲು ಅಜ್ಜಿಯು ಎರಡು ತಾಮ್ರದ ಬಿಂದಿಗೆಗಳನ್ನು ಬಳಸುತ್ತಿದ್ದಳು. ಈ ಎರಡು ತಾಮ್ರದ ಬಿಂದಿಗಳು ಆತ್ಮೀಯ ಮಿತ್ರರಾಗಿದ್ದು, ನಿತ್ಯವೂ ತಮ್ಮ ಉಭಯ ಕುಶಲೋಪರಿಗಳನ್ನು ಹಂಚಿಕೊಳ್ಳುತ್ತಿದ್ದವು. ಹೀಗಿರುವಾಗ ಒಂದು ಬಾರಿ ಈ ತಾಮ್ರದ ಬಿಂದಿಗೆಗಳ ಪೈಕಿ ಒಂದು ಬಿಂದಿಗೆ ತೂತಾಗಿಬಿಡುತ್ತದೆ ಮತ್ತು ಬಿಂದಿಗೆಯು ತೂತಾಗಿರುವ ವಿಚಾರ ಅಜ್ಜಿಗೆ ತಿಳಿಯುವುದೇ ಇಲ್ಲ.ಹೀಗೆ ದಿನನಿತ್ಯ ಅಜ್ಜಿ ಎರಡೂ ಬಿಂದಿಗೆಗಳಲ್ಲಿ ನೀರನ್ನು ತುಂಬಿಕೊಂಡು ನದಿಯಿಂದ ಕಾಡಿನ ಹಾದಿಯ ಮೂಲಕ ತನ್ನ ಮನೆಗೆ ಬರುತ್ತಿದ್ದಳು. ತೂತಾಗದೆ ಇರುವ ಬಿಂದಿಗೆಯಲ್ಲಿ ನದಿಯಿಂದ ತುಂಬಿಕೊಂಡ ನೀರು ಪೂರ್ತಿಯಾಗಿ ಮನೆಗೆ ಬಂದರೆ, ತೂತಾಗಿದ್ದ ಬಿಂದಿಗೆಯಲ್ಲಿ ತುಂಬಿಕೊಂಡು ಬಂದ ನೀರು ಅರ್ಧಕ್ಕರ್ಧ ದಾರಿಯುದ್ದಕ್ಕೂ ಚೆಲ್ಲಿ ಮನೆಗೆ ಬರುವಾಗ…
ವಿಜಯಪುರ: ವಿಜಯಪುರ ನಗರದ ಮನಗೂಳಿ ಅಗಸಿ ಬಡಾವಣೆಯ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಡಾ ಬಿ ಆರ್ ಅಂಬೇಡ್ಕರ್ ಯುವಕ ಸಂಘದಿಂದ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಗುರುವಾರ ೨೪ನೇ ದಿನ ಪೂರೈಸಿದೆ.ಗುರುವಾರ ಹೋರಾಟಗಾರರಾದ ರೋಹಿತ ಮಲಕಣ್ಣನವರ ಹಾಗೂ ಮಂಜುನಾಥ ಶಿವಶರಣ ಅವರು ಸರದಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.ಈ ಸಂದರ್ಭದಲ್ಲಿ ಮುಖಂಡ ರವಿ ಕಾಖಂಡಕಿ ಮಾತನಾಡಿ, ಕಳೆದ ೨೪ ದಿನಗಳಿಂದ ಅಂಬೇಡ್ಕರ ಭವನ ಕಟ್ಟಲು ಜಾಗಕ್ಕೆ ಆಗ್ರಹಿಸಿ ಅಹೋರಾತ್ರಿ ಧರಣಿ ಹಾಗೂ ಎರಡು ದಿನಗಳಿಂದ ಸರದಿ ಸತ್ಯಾಗ್ರಹ ನಡೆಸುತ್ತಿದ್ದರೂ ಕೂಡಾ ಅಧಿಕಾರಿಗಳು ದಿವ್ಯ ನಿರ್ಲಕ್ಷವಹಿಸಿದ್ದರಿಂದ ದಲಿತರ ಬದುಕು ಬೀದಿಗೆ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಅಂಬೇಡ್ಕರ್ ಭವನಕ್ಕೆ ಜಾಗ ನೀಡದಂತೆ ಒತ್ತಡ ಹಾಕುತ್ತಿರುವ ಪ್ರಭಾವಿಗಳ ಹೆಸರನ್ನು ಕೂಡಲೇ ಬಹಿರಂಗಪಡಿಸಬೇಕೆಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಸುನೀಲ ಕಾಖಂಡಕಿ, ಬಾಬು ಶಿವಶರಣ, ಶ್ರೀಶೈಲ ಕಾಖಂಡಕಿ, ಸಚೀನ ಕಾಖಂಡಕಿ, ಬಸವಕುಮಾರ ಕಾಂಬಳೆ, ಬಸವರಾಜ ಕುಬಕಡ್ಡಿ, ಸುಭಾಸ ವಾಲಿಕಾರ, ರಾಜು ಕಾಖಂಡಕಿ, ಅರವಿಂದ ಕಾಖಂಡಕಿ, ಕೃಷ್ಣಾ ಚಲವಾದಿ,…
ವಿಜಯಪುರ: ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಪ್ರತಿಯೊಬ್ಬರು ಪರಿಸರ ಪ್ರೇಮ ಬೆಳೆಸಿಕೊಂಡು ಪರಿಸರ ಪ್ರೇಮಿಗಳಾಗಬೇಕು ಎಂದು ರವೀಂದ್ರನಾಥ ಟ್ಯಾಗೋರ ಶಿಕ್ಷಣ ಸಂಸ್ಥೆಯ ಪ್ರದಾನಕಾರ್ಯದರ್ಶಿ ಶ್ರೀಮತಿ ಡಾ. ಉಮಾ ಭೋಸಲೆ ಹೇಳಿದರು.ವಿಜಯಪುರ ನಗರದ ಅತಾಲಟ್ಟಿ ರಸ್ತೆಯಲ್ಲಿರುವ ರವೀಂದ್ರನಾಥ ಟ್ಯಾಗೋರ ಶಿಕ್ಷಣ ಸಂಸ್ಥೆಯ ಶ್ರೀ ಗುರುದೇವ ಇಂಟರನ್ಯಾಶನಲ್ ಪ್ರೌಡಶಾಲೆಯಲ್ಲಿ ಹಮ್ಮಿಕೊಂಡ ಪರಿಸರ ದಿನಾಚರಣೆ ಹಾಗೂ ಶಾಲಾ ಪ್ರಾರಂಭೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆಧುನಿಕತೆ ಹೆಚ್ಚಾದಂತೆ ಪರಿಸರ ಪ್ರಜ್ಞೆ ಕಡಿಮೆಯಾಗುತ್ತಿದೆ. ಪ್ರತಿಯೊಬ್ಬರೂ ಗಿಡ ಬೆಳೆಸುವ ಮನೋಭಾವ ಬೆಳೆಸಿಕೊಳ್ಳಬೇಕು. ನೀವಿರುವ ಪ್ರದೇಶ ಶಾಲಾ ಆವರಣ, ರಸ್ತೆಗಳು ಖಾಲಿ ಜಾಗಗಳಲ್ಲಿ ಸಸಿ ನೆಟ್ಟು ಪರಿಸರ ಕಾಳಜಿ ತೋರಬೇಕು. ಪರಿಸರ ಸಂರಕ್ಷಣೆಯಿಂದ ನಮ್ಮ ಬಾಳು ಸುಂದರ ಸುಖಮಯವಾಗಲಿದೆ ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪರಿಸರ ಪ್ರೇಮಿಗಳಾಗೋಣ ಎಂದರು.ಅಧ್ಯಕ್ಷತೆ ವಹಿಸಿದ್ದ ವೀಂದ್ರನಾಥ ಟ್ಯಾಗೋರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ರವೀಂದ್ರ ಭೋಸಲೆ ಮಾತನಾಡಿ ಮಕ್ಕಳಲ್ಲಿ ನಿರಂತರ ಕ್ರೀಯಾಶೀಲತೆಯಿಂದ ಓದಿನ ಕಡೆ ಹೆಚ್ಚು ಗಮನ ಕೊಡಬೇಕು. ನಿರಂತರ ಓದಿನಿಂದ ಏನನ್ನಾದರೂ ಸಾಧಿಸಲು…
ಸಿಂದಗಿ: ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾಪಂ ಇಒ ರಾಮು ಅಗ್ನಿ ಅವರ ನೇತೃತ್ವದಲ್ಲಿ ಗುರುವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.ತಾಲೂಕಿನಲ್ಲಿ ಈ ಬಾರಿ ಪರೀಕ್ಷೆಗೆ ಹಾಜರಾದ ಮಕ್ಕಳಲ್ಲಿ ಪ್ರತಿಶತ ಶೇ.೮೦ ವಿದ್ಯಾರ್ಥಿಗಳು ಮಾತ್ರ ತೇರ್ಗಡೆ ಹೊಂದಿದ್ದು, ಮುಂದಿನ ದಿನಗಳಲ್ಲಿ ಶೇ.೧೦೦ಕ್ಕೆ ೧೦೦ರಷ್ಟು ಫಲಿತಾಂಶ ಬರುವಂತೆ ಶ್ರಮ ವಹಿಸಬೇಕು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ತಾಪಂ ಇಒ ರಾಮು ಅಗ್ನಿ ಸೂಚಿಸಿದರು.ಇದಕ್ಕೆ ಉತ್ತರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಆರಿಫ್ ಬಿರಾದಾರ್, ಈಗಾಗಲೇ ತಾಲೂಕಿನ ಪ್ರತಿಯೊಂದು ಗ್ರಾಮದ ಸರಕಾರಿ ಶಾಲೆಗೆ ತಮ್ಮ ಮಕ್ಕಳಿಗೆ ನೋಂದಣಿ ಪಡೆದುಕೊಳ್ಳುವಂತೆ ಜಾಗೃತಿ ಮೂಡಿಸಲಾಗಿದೆ. ಶೈಕ್ಷಣಿಕ ವರ್ಷದಲ್ಲಿ ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಿ ವಿಶೇಷ ತರಗತಿ ನಡೆಸಲಾಗುವದು. ಮುಂಬರುವ ದಿನಮಾನಗಳಲ್ಲಿ ೧೦೦ಕ್ಕೆ ೧೦೦ರಷ್ಟು ಫಲಿತಾಂಶ ಬರುವ ಹಾಗೆ ಮಾಡಲಾಗುವುದು ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಇಲಾಖೆ, ಆರೋಗ್ಯ ಇಲಾಖೆ, ಪಿ.ಆರ್.ಇ.ಡಿ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆ,…
ಮುದ್ದೇಬಿಹಾಳ: ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಅರಿಹಂತಗಿರಿಯಲ್ಲಿ ಜೂ.೧೪ ರಂದು ಭಗವಾನ ಶ್ರೀ ಆಧಿನಾಥ ತೀರ್ಥಂಕರ ಮತ್ತು ೧೦೦೮ ಭಗವಾನ ಶ್ರೀ ಬಾಹುಬಲಿ ಸ್ವಾಮಿಯ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವದ ವಾರ್ಷಿಕ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅರಿಹಂತ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಮಹಾವೀರ ಸಗರಿ ತಿಳಿಸಿದರು.ಬೆಳಿಗ್ಗೆ ೫ಘಂಟೆಗೆ ಮಂಗಳವಾದ್ಯಗೋಶ, ೬ಘಂಟೆಗೆ ಸಂಧ್ಯಾವಂದನ, ಸಕಲಿಕರಣ, ಪಂಚಾಮೃತ ಅಭಿಷೇಕ, ಮಹಾಶಾಂತಿ ಮಂತ್ರ ಪಠಣ, ಮಹಾವೀರ ಸ್ವಾಮಿಯ ಮನೋಕಾಮನಾ ವಿಧಾನ, ಶಾಂತಿ ಹೋಮ, ೧೦೮ ಕಳಶಾಭೀಷೆಕ ಹಾಗೂ ಭಗವಾನ ಬಾಹುಬಲಿ ಸ್ವಾಮಿ, ಆದಿನಾಥತೀರ್ಥಂಕರಿಗೆ ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ ಮಧ್ಯಾಹ್ನ ಮಹಾಪ್ರಸಾದ, ೨ಗಂಟೆಗೆ ಕನ್ನಡ ಸಾಹಿತ್ಯಕ್ಕೆ ಜೈನ ಕವಿಗಳ ಕೊಡುಗೆ ಕುರಿತು ೬ ನೇ ವರ್ಷದ ದತ್ತಿ ಉಪನ್ಯಾಸ ಹೀಗೆ ವಿಶೇಶ ಕಾರ್ಯಕ್ರಮಗಳು ಸಮಸ್ತ ಜೈನ ಸಮಾಜ ಹಾಗೂ ನಾಗರಿಕರ ಸಹಯೋಗದಡಿಯಲ್ಲಿ ನಡೆಯಲಿವೆ. ಹದಿನೆಂಟು ತೀರ್ಥ ಕ್ಷೇತ್ರಗಳ ದರ್ಶನ ಮಾಡಿದ ಫಲ ೧೦೦೮ ಭಗವಾನ ಆದಿನಾಥರ ದರ್ಶನದಿಂದ ಸಿಗಲಿದ್ದು ಸಾರ್ವಜನಿಕರು ಭಾಗಿಯಾಗುವಂತೆ ಮನವಿ ಮಾಡಿಕೊಂಡಿದ್ದಾರೆ.
