ಸಿಂದಗಿ: ನಗರದ ಬಿಎನ್‌ಬಿ ಫೌಂಡೇಶನ್ ವತಿಯಿಂದ ಜೂ.೧೬ರಂದು ಭಾನುವಾರ ಬೆಳಿಗ್ಗೆ ೧೦:೩೦ಗಂಟೆಗೆ ವಿಜಯಪುರ ರಸ್ತೆಯ ಮಾಂಗಲ್ಯ ಭವನದಲ್ಲಿ ದಿ.ಭೀಮರಾಯಗೌಡ ಬಿರಾದಾರ, ಮಾಗಣಗೇರಿ ಅವರ ಸ್ಮರಣಾರ್ಥವಾಗಿ ಸಿಂದಗಿ ಮತ್ತು ಆಲಮೇಲ ತಾಲೂಕಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಎನ್‌ಬಿ ಫೌಂಡೇಶನ್ ಅಧ್ಯಕ್ಷ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ತಿಳಸಿದ್ದಾರೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಿಜಯಪುರ ವನಶ್ರೀ ಸಂಸ್ಥಾನ ಮಠದ ಡಾ.ಜಯಬಸವ ಕುಮಾರ ಸ್ವಾಮಿಗಳು, ಯಂಕಂಚಿಯ ಅಭಿನವ ರುದ್ರಮುನಿ ಶಿವಾಚಾರ್ಯರು, ಆಲಮೇಲ ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಮಹಾಸ್ವಾಮಿಗಳು, ಕನ್ನೊಳ್ಳಿಯ ಸಿದ್ದಲಿಂಗ ಶಿವಾಚಾರ್ಯರು, ದೇವದುರ್ಗ ವೀರಗೋಟಿ ಮಠದ ಅಡವಿಲಿಂಗ ಮಹಾರಾಜರು ವಹಿಸಿಕೊಳ್ಳಲಿದ್ದಾರೆ. ಉದ್ಘಾಟಕರಾಗಿ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಆಗಮಿಸಿಲಿದ್ದಾರೆ. ಬೆಳಗಾವಿ ಜಿಲ್ಲಾಧಿಕಾರಿ ನಿತೀಶ ಪಾಟೀಲ ಗೌರವ ಉಪಸ್ಥಿತಿ ಇರಲಿದ್ದಾರೆ. ಅಧ್ಯಕ್ಷತೆಯನ್ನು ಮಾಜಿ ಶಾಸಕ ರಮೇಶ ಭೂಸನೂರ ವಹಿಸಿಕೊಳ್ಳಲಿದ್ದಾರೆ. ಪೋಟೋ ಪೂಜೆಯನ್ನು ಶಾಸಕ ಅಶೋಕ ಮನಗೂಳಿ ನೆರೆವೇರಿಸುವರು. ಮುಖ್ಯ ಅತಿಥಿಗಳಾಗಿ ಜೇವರ್ಗಿ ಶಾಸಕ ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್, ಇಂಡಿ ಶಾಸಕ ಯಶವಂತ್ರಾಯಗೌಡ ಪಾಟೀಲ, ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ, ಮಾಜಿ ವಿಪ ಸದಸ್ಯ ಅರುಣ ಶಹಾಪೂರ, ನಿತೀನ ಗುತ್ತೇದಾರ, ಗುರಣ್ಣಗೌಡ ಬಿರಾದಾರ, ಪರಶುರಾಮ ಮನಗೂಳಿ ಇರಲಿದ್ದಾರೆ. ಸಾಹಿತಿ ಶಿವಶರಣಪ್ಪ ಶಿರೂರ ಉಪನ್ಯಾಸ ನೀಡಲಿದ್ದಾರೆ ಎಂದು ಕಾರ್ಯದರ್ಶಿ ಬಸವರಾಜಗೌಡ ಬಿರಾದಾರ, ಸಿದ್ದನಗೌಡ ಬಿರಾದಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

