ಮುದ್ದೇಬಿಹಾಳ: ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಅರಿಹಂತಗಿರಿಯಲ್ಲಿ ಜೂ.೧೪ ರಂದು ಭಗವಾನ ಶ್ರೀ ಆಧಿನಾಥ ತೀರ್ಥಂಕರ ಮತ್ತು ೧೦೦೮ ಭಗವಾನ ಶ್ರೀ ಬಾಹುಬಲಿ ಸ್ವಾಮಿಯ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವದ ವಾರ್ಷಿಕ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅರಿಹಂತ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಮಹಾವೀರ ಸಗರಿ ತಿಳಿಸಿದರು.
ಬೆಳಿಗ್ಗೆ ೫ಘಂಟೆಗೆ ಮಂಗಳವಾದ್ಯಗೋಶ, ೬ಘಂಟೆಗೆ ಸಂಧ್ಯಾವಂದನ, ಸಕಲಿಕರಣ, ಪಂಚಾಮೃತ ಅಭಿಷೇಕ, ಮಹಾಶಾಂತಿ ಮಂತ್ರ ಪಠಣ, ಮಹಾವೀರ ಸ್ವಾಮಿಯ ಮನೋಕಾಮನಾ ವಿಧಾನ, ಶಾಂತಿ ಹೋಮ, ೧೦೮ ಕಳಶಾಭೀಷೆಕ ಹಾಗೂ ಭಗವಾನ ಬಾಹುಬಲಿ ಸ್ವಾಮಿ, ಆದಿನಾಥತೀರ್ಥಂಕರಿಗೆ ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ ಮಧ್ಯಾಹ್ನ ಮಹಾಪ್ರಸಾದ, ೨ಗಂಟೆಗೆ ಕನ್ನಡ ಸಾಹಿತ್ಯಕ್ಕೆ ಜೈನ ಕವಿಗಳ ಕೊಡುಗೆ ಕುರಿತು ೬ ನೇ ವರ್ಷದ ದತ್ತಿ ಉಪನ್ಯಾಸ ಹೀಗೆ ವಿಶೇಶ ಕಾರ್ಯಕ್ರಮಗಳು ಸಮಸ್ತ ಜೈನ ಸಮಾಜ ಹಾಗೂ ನಾಗರಿಕರ ಸಹಯೋಗದಡಿಯಲ್ಲಿ ನಡೆಯಲಿವೆ. ಹದಿನೆಂಟು ತೀರ್ಥ ಕ್ಷೇತ್ರಗಳ ದರ್ಶನ ಮಾಡಿದ ಫಲ ೧೦೦೮ ಭಗವಾನ ಆದಿನಾಥರ ದರ್ಶನದಿಂದ ಸಿಗಲಿದ್ದು ಸಾರ್ವಜನಿಕರು ಭಾಗಿಯಾಗುವಂತೆ ಮನವಿ ಮಾಡಿಕೊಂಡಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
