Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಸಿಂದಗಿ: ತಾಲೂಕಿನ ೧೧೦/೧೧ಕೆವಿ ವಿದ್ಯುತ್ ವಿತರಣಾ ಕೇಂದ್ರ ಮೋರಟಗಿಯಿಂದ ಸರಬರಾಜಾಗುವ ೧೧ಕೆವ್ಹಿ ಮೋರಟಗಿ ಮತ್ತು ಬಗಲೂರ ಎನ್‌ಜೆವಾಯ್ ಮಾರ್ಗಗಳ ಮೇಲೆ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಸದರಿ ಮಾರ್ಗಗಳ ಮೇಲೆ ಬರುವ ಮೋರಟಗಿ, ಕುಳೆಕುಮಟಗಿ, ಬಗಲೂರ, ಶಿರಸಗಿ, ಚಿಕ್ಕಹವಳಗಿ, ದೇವರನಾವದಗಿ, ತಾಂಡಾ, ಮತ್ತು ದೇವರನಾವದಗಿ ಗ್ರಾಮದ ವ್ಯಾಪ್ತಿಗಳಿಗೆ ಜೂ.೧೮ ಮತ್ತು ೨೨ ರಂದು ಬೆಳಿಗ್ಗೆ ೯ ಗಂಟೆಯಿಂದ ಸಾಯಂಕಾಲ ೪ ಗಂಟೆಯವರೆಗೆ ವಿದ್ಯುತ್ ವಿತರಣೆ ಇರುವುದಿಲ್ಲ. ಆದ್ದರಿಂದ ಸದರಿ ಗ್ರಾಮಗಳ ಗ್ರಾಹಕರು ಸಹಕರಿಸಬೇಕು ಎಂದು ಸಿಂದಗಿ ಹೆಸ್ಕಾಂ ಉಪವಿಭಾಗದ ಸಹಾಯಕ ನಿರ್ವಾಹಕ ಅಭಿಯಂತರರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಮೋರಟಗಿ: ಮನುಷ್ಯನ ಜನನ ಆಕಸ್ಮಿಕ, ಮರಣ ನಿಶ್ಚಿತ, ಜನನ-ಮರಣಗಳ ಮದ್ಯೆದಲ್ಲಿ ಸರ್ವ ಸಮುದಾಯ ಭಾಂದವರ ಜೊತೆಗೆ ಅವಿನಾಭಾವದ ಜೀವನ ಕಳೆಯಬೇಕು ಎಂದು ಅಂಜುಮನ್ ಸಮಿತಿ ಕಾರ್ಯದರ್ಶಿ ಮೈಬೂಬಸಾಬ ಕಣ್ಣಿ ಹೇಳಿದರು.ಗ್ರಾಮದ ಇದ್ಗಾ ಮೈದಾನದ ಆವರಣದಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಮುಸ್ಲಿಂ ಭಾಂದವರು ಹಮ್ಮಿಕೊಂಡ ಸಾಮೂಹಿಕವಾಗಿ ಪ್ರಾರ್ಥನೆಯಲ್ಲಿ ಮಾತನಾಡಿದ ಅವರು, ಇಂದಿನ ರಾಜಕೀಯ ರಂಗ ಹದಗೆಟ್ಟಿದ್ದು, ತಮ್ಮ ರಾಜಕೀಯ ಬೇಳೆ ಬೆಯಿಸಿಕೊಳ್ಳಲು ಜಾತಿ ಜಾತಿಗಳ ಮದ್ಯದಲ್ಲಿ ವೀಷದ ಬೀಜ ಬಿತ್ತುತ್ತಾರೆ. ರಾಜಕೀಯವನ್ನು ಬದಿಗೊತ್ತಿ ವ್ಯಾಪಾರ ವಹಿವಾಟದಲ್ಲಿ ಮುಂದೆ ಬರಬೇಕು. ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕು ನಿರ್ಗತಿಕರು ಕಂಡಲ್ಲಿ ಸಹಾಯಕ್ಕೆ ಮುಂದಾಗಬೇಕು ಎಂದು ಸಮುದಾಯದ ಯುವಕರಿಗೆ ಸಲಹೆ ನೀಡಿದರು.ಸೋಮವಾರ ಬೆಳಿಗ್ಗೆ ೮ಗಂಟೆಗೆ ಪ್ರಾರ್ಥನೆ ಸಲ್ಲಿಸಿ ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹಿಂದೂ ಸಮುದಾಯದ ಹಿರಿಯರಿಗೆ ಮತ್ತು ಯುವಕರಿಗೆ ಭೇಟಿ ನೀಡಿ ಇದ್-ಮಿಲಾದ ಮಾಡಿದರು. ಮನೆಗೆ ಆಮಂತ್ರಿಸಿ ಸುರಕುಂಬ್ ಕುಡಿಸಿ ಸಂಭ್ರಮಿಸಿದರು.ಈ ವೇಳೆ ಶಾಹಾಬಾದ ಮೌಲಾನ ಪ್ರಾರ್ಥನೆಯಲ್ಲಿ ಮಂತ್ರ ಪಠಣ ಮಾಡಿದರು.…
ತಿಕೋಟಾ: ತಾಲ್ಲೂಕಿನ ಬಾಬಾನಗರ ಗ್ರಾಮದ ಸರ್ಕಾರಿ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲಾ ಶಿಕ್ಷಕ ಹಾಗೂ ಜಿಓಸಿಸಿ ಬ್ಯಾಂಕ ನಿರ್ದೇಶಕ ಐ.ಎ.ತೇಲಿ ಅವರಿಗೆ ಹುಬ್ಬಳ್ಳಿಯಲ್ಲಿ ರವಿವಾರ ನಡೆದ ಜ್ಞಾನಯೋಗಿ ವಿಧ್ಯಾಸಂಸ್ಥೆ (ರಿ) ಧಾರವಾಡ ಸಂಸ್ಥೆಯ ಉದ್ಘಾಟನೆ, ಪದಾಧಿಕಾರಿಗಳ ಪದಗ್ರಹಣ ಹಾಗೂ ವೈ.ಬಿ.ಕಡಕೋಳ ಅವರ ಗಾಣಿಗರ ಹೆಜ್ಜೆಗಳು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ “ಗಾಣಿಗ ರತ್ನ” ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಡಾ. ಜಯಬಸವಕುಮಾರ ಸ್ವಾಮೀಜಿ , ಯೋಗಿ ಶ್ರೀ ಕಲ್ಲಿನಾಥ ಗುರುಗಳ ಅಮೃತ ಹಸ್ತದಿಂದ ಸಂಸ್ಥೆಯು ಈ ಪ್ರಶಸ್ತಿ ನೀಡಿದೆ. ಎಂ.ಎಸ್.ಗಾಣಿಗೇರ, ಎಲ್.ಐ.ಲಕ್ಕಮ್ಮನವರ, ವೈ.ಬಿ.ಕಡಕೋಳ ಹಾಗೂ ಗಣ್ಯರು ಇದ್ದರು.
ಮುದ್ದೇಬಿಹಾಳ: ಕಳೆದ ಕೆಲ ದಿನಗಳ ಹಿಂದೆ ಪಟ್ಟಣದ ನ್ಯಾಯಾಲಯದ ಎದುರು ಯುವಕನೋರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣದಲ್ಲಿ ಪರಾರಿಯಾಗಿದ್ದ ಆರೋಪಿಗಳ ಪೈಕಿ ಶಂಕ್ರಪ್ಪ ಕರಳ್ಳಿಯನ್ನು ಪೊಲೀಸರು ಬಂಧಿಸಿ ವಿಜಯಪುರದ ಕೇಂದ್ರ ಕಾರಾಗ್ರಹಕ್ಕೆ ಅಟ್ಟಿದ್ದಾರೆ.ಬಾಗೇವಾಡಿ ತಾಲೂಕಿನ ಜಯವಾಡಗಿ ಗ್ರಾಮದ ಕರಳ್ಳಿ ಕುಟುಂಬಸ್ತರು ತಮ್ಮ ಮನೆಯ ಹೆಣ್ಣುಮಗಳಿಗೆ ಮಾತನಾಡಿಸಿದ್ದಕ್ಕೆ ಸಿಟ್ಟಾಗಿ ಅದೇ ಗ್ರಾಮದ ನಿವಾಸಿ ಸಂತೋಷ ಕಾಡಮೆಗೇರಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಘಟನೆ ಪಟ್ಟಣದ ನ್ಯಾಯಾಲಯದ ಎದುರು ನ್ಯಾಯವಾದಿಗಳ ಮತ್ತು ಸಾರ್ವಜನಿಕರ ಮಧ್ಯೆ ಸಂಭವಿಸಿದ್ದರಿಂದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂಬ ಕೂಗು ಕೇಳಿ ಬಂದಿತ್ತು.ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸುತ್ತಿದ್ದಂತೆಯೇ ಕಾಲ್ಕಿತ್ತಿದ್ದ ಆರೋಪಿಗಳ ಹೆಡೆಮುರಿ ಕಟ್ಟಲು ಇಲ್ಲಿನ ಪಿಎಸ್‌ಆಯ್ ಸಂಜೀವ ತಿಪರೆಡ್ಡಿ ತೀವ್ರ ಶೋಧ ನಡೆಸಿದ್ದರು. ಘಟನೆಯ ಹಿನ್ನೆಲೆ ೮ ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು ಸೋಮುವಾರ ಬೆಳ್ಳಂಬೆಳಿಗ್ಗೆ ಎ೪ ಆರೋಪಿ ಪೊಲೀಸರಿಗೆ ಅತಿಥಿಯಾಗಿದ್ದಾನೆ. ಇನ್ನುಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿರುವದಾಗಿ ಪೊಲೀಸ ಮೂಲಗಳು ತಿಳಿಸಿವೆ.
ಮುದ್ದೇಬಿಹಾಳ: ಮಧ್ಯ ಸೇವಿಸಲು ಸ್ಥಳಾವಕಾಶ ಮಾಡಿಕೊಟ್ಟ ಆರೋಪದಡಿ ತಾಲೂಕಿನ ದೆವೂರು ಗ್ರಾಮದ ಶಿವಪ್ಪ ಕೋಲಕಾರ ಮೇಲೆ ಪ್ರಕರಣ ದಾಖಲಾಗಿದೆ.ತನ್ನ ಪಾಯಿದೆಗೊಸ್ಕರ ಸಂಬಂಧಿಸಿದ ಪ್ರಾಧಿಕಾರದಿಂದ ಯಾವುದೇ ಲೈಸೆನ್ಸ ವ ಪರವಾನಿಗೆಯನ್ನು ಪಡೆಯದೆ ದೇವೂರ ಗ್ರಾಮದ ಹತ್ತಿರದಲ್ಲಿರುವ ತನ್ನ ಚಹಾದ ಅಂಗಡಿಯ ಮುಂದೆ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಗ್ಲಾಸು, ನೀರು ಹಾಗೂ ತಿನಿಸು ಕೊಟ್ಟು ಮದ್ಯ ಸೇವಿಸಲು ಸ್ಥಳಾವಕಾಶ ಮಾಡಿಕೊಟ್ಟು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು, ಈ ಆರೋಪದ ಮೇಲೆ ಪಿಎಸ್‌ಐ ಸಂಜೀವ ತಿಪರೆಡ್ಡಿ ಪ್ರಕರಣ ದಾಖಲಿಸಿದ್ದಾರೆ.
ವಿಜಯಪುರ: ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್ ಸರಕಾರ ಜನ ವಿರೋಧಿಯಾಗಿದೆ. ಪೆಟ್ರೋಲ್, ಡೀಸೆಲ್ ಮೇಲೆ ವಿಧಿಸಿದ ಮಾರಾಟ ತೆರಿಗೆಯನ್ನು ವಾಪಸ್ ಪಡೆಯಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.ಸೋಮವಾರ ಪತ್ರಿಕಾ ಹೇಳಿಕೆ ನೀಡಿದ ಅವರು, ಬಡವರ ಪರ ಎಂದು ಹೇಳಿಕೊಳ್ಳುವ ಸಿಎಂ ಸಿದ್ದರಾಮಯ್ಯ ಇಂಧನದ ಮೇಲೆ ತೆರಿಗೆ ಹೆಚ್ಚಿಸಿದ್ದಾರೆ. ವಿದ್ಯುತ್ ಉಚಿತವಾಗಿ ನೀಡು ತ್ತೇವೆ ಎಂದು ಹೇಳಿ ವಾಣಿಜ್ಯಕ್ಕೆ ಬಳಕೆ ಯಾಗುವ ವಿದ್ಯುತ್ ದರ ಹೆಚ್ಚಳ ಮಾಡಿ ಮೋಸ ಮಾಡಿದ್ದಾರೆ. ಮನಸೋ ಇಚ್ಛೆ ನಡೆಸುತ್ತಿರುವ ಇವರ ಆಡಳಿತದಿಂದ ಬಡವರಿಗೆ ಹೊರೆಯಾಗಿದೆ. ೫ ಗ್ಯಾರಂಟಿಗಳನ್ನೂ ಸಮರ್ಪಕವಾಗಿ ಅನುಷ್ಠಾನಗೊಳಿಸಿಲ್ಲ. ಬೆಲೆ ಏರಿಕೆಗಳನ್ನು ಗಮನಿಸಿದರೆ ರಾಜ್ಯ ಸರಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಹೇಳಿದರು.
“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ – ಗದಗ್ ಬದುಕಿನ ವೈಭವವನ್ನು ಕೈಯಲ್ಲಿ ಕಟ್ಟಿರುವ ದುಬಾರಿ ವಾಚುಗಳಲ್ಲಿ, ಹಿಡಿದಿರುವ ಮೊಬೈಲುಗಳಲ್ಲಿ ನೋಡಬೇಡ.ವಾಚುಗಳು ಸಮಯವನ್ನು ತೋರಿಸುತ್ತವೆಯೇ ಹೊರತು ನಮ್ಮ ಬದುಕನ್ನು ಬದಲಿಸುವ ಶಕ್ತಿ ಇರುವುದು ಕೇವಲ ಸಮಯಕ್ಕೆ ಹೊರತು ನಾವು ಕಟ್ಟಿರುವ ವಾಚುಗಳಿಗಲ್ಲ. ಮೊಬೈಲ್ ಕೂಡ ಇರುವುದು ನಮ್ಮ ಉಪಯೋಗಕ್ಕೆ ಹೊರತು ತೋರಿಕೆಯ ಡಂಬಾಚಾರಕ್ಕಲ್ಲ ಬದುಕಿನ ವೈಭವವನ್ನು ಐಷಾರಾಮಿ ಪ್ರಯಾಣಗಳಲ್ಲಿ ನೋಡಬೇಡ, ಐಷಾರಾಮಿ ವಾಹನ ನಮ್ಮನ್ನು ನಮ್ಮ ಗಮ್ಯಸ್ಥಾನಕ್ಕೆ ತಲುಪಿಸುತ್ತದೆಯೇ ಹೊರತು ನಮ್ಮ ಬದುಕಿನ ದಿಕ್ಕನ್ನು ನಿರ್ಧರಿಸುವುದಿಲ್ಲ. ಬದುಕಿನ ವೈಭವ ನೀನು ತಿನ್ನುವ ಆಹಾರದ ಉತ್ಕೃಷ್ಟತೆಯಲ್ಲಿಲ್ಲ… ಒಳ್ಳೆಯ ಭೋಜನ ನಿನ್ನ ಆರ್ಥಿಕತೆಯ ಔನ್ಯತ್ಯವನ್ನು ನಿರ್ಧರಿಸುತ್ತದೆಯೇ ಹೊರತು ನಿನ್ನ ಆರೋಗ್ಯವನ್ನು ಅಲ್ಲ. ಬದುಕಿನ ವೈಭವವನ್ನು ಬ್ರಾಂಡೆಡ್ ಬಟ್ಟೆಗಳ ಮೇಲೆ, ಮೈಮೇಲೆ ಹೇರಿಕೊಂಡಿರುವ ಚಿನ್ನ ಮತ್ತು ವಜ್ರದ ಒಡವೆಗಳ, ಬ್ಯಾಂಕಿನಲ್ಲಿರುವ ಅಪಾರ ಮೊತ್ತದ ಹಣದ ಮೇಲೆ ಮೇಲೆ ನಿರ್ಧರಿಸದಿರು….. ಕ್ಷಣಿಕ ತೃಪ್ತಿಯನ್ನು, ತುಸು ಅಹಂಭಾವವನ್ನಲ್ಲದೆ ಅದಾವುದೂ ನಿನಗೆ ಮಾನಸಿಕ ತೃಪ್ತಿಯನ್ನು ತಂದುಕೊಡುವುದಿಲ್ಲ. ಬದುಕಿನ ವೈಭವವನ್ನು…
“ಆರೋಗ್ಯ ಅಂಗಳ”- Dr Nandini MuchchandiAssociate Professor and Fellowship in community and mental healthDepartment of BiochemistryBLDE, Shri B M Patil medical college hospital and research centre, vijaypur ಇತ್ತೀಜಿನ ದಿನಗಳಲ್ಲಿ ಚಿಕ್ಕವರಲ್ಲಿ ಶಾಲೆ, ಓದು, ಪರೀಕ್ಷೆ ಮತ್ತು ದೊಡ್ಡವರಲ್ಲಿ ದುಡಿಮೆ, ಆಸ್ತಿ, ಪಾರ್ಟಿ ಇಂತಹ ವಿಷಯಗಳಿಗೆ ಇರುವ ಮಹತ್ವ ಕ್ರೀಡೆ ಮತ್ತು ದೈಹಿಕ ಚಟುವಟಿಕೆಗಳಿಗೆ ಇರುವುದಿಲ್ಲ. ಆದರೆ ಮನುಷ್ಯ ಆರೋಗ್ಯದಿಂದಿರಲು ಪೌಷ್ಠಿಕ ಭರಿತ ಆಹಾರ ಮತ್ತು ನಿದ್ದೆಯೊಂದಿಗೆ ದೈಹಿಕ ಚಟುವಟಿಕೆ (ಕ್ರೀಡೆ)ಗಳು ಅಷ್ಠೇ ಮುಖ್ಯ.ಆರೋಗ್ಯ ಎಂದರೆ, ಕೇವಲ ರೋಗಮುಕ್ತ ಅಥವಾ ಯಾವುದೇ ರೋಗದಿಂದ ಬಾಧಿತರಾಗಿರುವುದೇ ಅಷ್ಠೇ ಅಲ್ಲ. ಆರೋಗ್ಯ ಎಂದರೆ, ದೈಹಿಕ ಮಾನಸಿಕ ಮತ್ತು ಸಾಮಾಜಿಕ ಸಮತೋಲನ ಸ್ಥಿತಿಯೊಂದಿಗೆ ರೋಗದ ಅನುಪಸ್ಥಿತಿಯಲ್ಲಿರುವುದು. ಮತ್ತು ಇವುಗಳನ್ನು ಸಮತೋಲನ ಸ್ಥಿತಿಯಲ್ಲಿಡಲು ಕ್ರೀಡೆಗಳು ಅತಿ ಅವಶ್ಯಕವಾಗಿವೆ. ಇಂದಿನ ಮೊಬೈಲ್ ಇಂಟರ‍್ನೆಟ್ ಯುಗದಲ್ಲಿ ಮಕ್ಕಳು ಮೊಬೈಲ್ (ಆನ್‌ಲೈನ್) ಆಟಗಳ ಗೀಳಿನಿಂದ ದಾಸರಾಗಿದ್ದರೆ, ದೊಡ್ಡವರು ಸೋಶಿಯಲ್ ಮೀಡಿಯಾ ಅಂತಹ ಪಿಡುಗಿಗೆ…
ವಿಜಯಪುರ: ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ರೋಗಶಾಸ್ತ್ರ ವಿಭಾಗದ ವತಿಯಿಂದ ಶುಕ್ರವಾರ ಬೀದಿ ನಾಟಕದ ಮೂಲಕ ರಕ್ತದಾನದ ಮಹತ್ವದ ಕುರಿತು ಜನ ಜನಜಾಗೃತಿ ಮೂಡಿಸಲಾಯಿತು.ರಕ್ತ ದಾನ ಜಾಗೃತಿ ಮತ್ತು ರಕ್ತ ದಾನಿಗಳಿಗೆ ಕೃತಜ್ಞತೆ ಅರ್ಪಿಸುವ ಕಾರ್ಯಕ್ರಮ ಘೋಷಣೆಯಡಿ ನಗರದ ಬಿ.ಎಲ್.ಡಿ.ಇ ಆಸ್ಪತ್ರೆಯ ಎದುರು, ಶ್ರೀ ಸಿದ್ದೇಶ್ವರ ದೇವಸ್ಥಾನದ ಮುಂಭಾಗ, ಗಾಂಧಿ ಚೌಕ್ ಹಾಗೂ ಕೇಂದ್ರ ಬಸ್ ನಿಲ್ದಾಣದಲ್ಲಿ ಬೀದಿ ನಾಟಕ ಪ್ರದರ್ಶನ ನಡೆಯಿತು.ಈ ಬೀದಿ ನಾಟಕದಲ್ಲಿ ಪಾಲ್ಗೊಂಡ ಎಂಬಿಬಿಎಸ್ ವಿದ್ಯಾರ್ಥಿಗಳು ರಕ್ತದಾನದ ಕುರಿತು ಜಾಗೃತಿ ಮತ್ತು ರಕ್ತದಾನಿಗಳಿಗೆ ಧನ್ಯವಾದ ಅರ್ಪಿಸಿದರು. ಅಲ್ಲದೇ, ರಕ್ತದಾನಿಗಳಿಗೆ ಧನ್ಯವಾದ ಪತ್ರಗಳನ್ನು ವಿತರಿಸಿದರು.ಇದೇ ವೇಳೆ ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರ ಹಾಗೂ ಬೀದಿ ನಾಟಕದ ಸಂದರ್ಭದಲ್ಲಿ ಸಾರ್ವಜನಿಕರಿಗಾಗಿ ರಕ್ತದ ಗುಂಪು ಪರೀಕ್ಷೆಯನ್ನು ಉಚಿತವಾಗಿ ಮಾಡಲಾಯಿತು.ಈ ಸಂದರ್ಭದಲ್ಲಿ ವಿವಿ ಕುಲಪತಿ ಡಾ. ಆರ್. ಎಸ್. ಮುಧೋಳ, ಪ್ರಾಂಶುಪಾಲ ಡಾ.…
ವಿಜಯಪುರ: ನೀಟ್ ಫಲಿತಾಂಶದಲ್ಲಿ ಭಾರಿ ಅಕ್ರಮದ ನಡೆದಿದ್ದು ನೀಟ್ ಪರೀಕ್ಷೆ ನಿಷ್ಪಕ್ಷಪಾತವಾಗಿ ತನಿಖೆ ಮಾಡಬೇಕು ಎಂದು ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ವಿಜಯಪುರ (NSUI )ಅಧ್ಯಕ್ಷ ಅಮಿತ ಚವ್ಹಾಣ ಆಗ್ರಹಿಸಿದ್ದಾರೆ.ಪರೀಕ್ಷೆಯ ವಿಸ್ವಾಸಾರ್ಹತೆ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೆ ಏನ್ ಟಿ ಎ ಆಗಲಿ ಕೇಂದ್ರ ಸರ್ಕಾರವಾಗಲಿ ಉತ್ತರಿಸದೆ ಇರುವುದು ಲಕ್ಷಾಂತರ ಯುವ ಜನರ ಭವಿಷ್ಯ ಮಣ್ಣುಪಾಲು ಮಾಡಲು ಹೊರಟಿದೆ. ನೀಟ್ ಪರೀಕ್ಷೆಯಲ್ಲಿ 67 ವಿದ್ಯಾರ್ಥಿಗಳು 720ಕ್ಕೆ 720ಅಂಕಗಳು ಬಂದಿವೆ. ಪರೀಕ್ಷೆಯಲ್ಲಿ ಪ್ರತಿ ತಪ್ಪು ಉತ್ತರಕ್ಕೆ ಋಣಾತ್ಮಕ ಅಂಕಗಳಿರುವ ಕಾರಣ ಇಷ್ಟೊಂದು ಮಂದಿ ಶೇ% 100ರಷ್ಟು ಗಳಿಸಲು ಹೇಗೆ ಸಾಧ್ಯ? ಇದನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕೆಂದು ಚವ್ಹಾಣ ಪತ್ರಿಕಾ ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.
