ಮೋರಟಗಿ: ಮನುಷ್ಯನ ಜನನ ಆಕಸ್ಮಿಕ, ಮರಣ ನಿಶ್ಚಿತ, ಜನನ-ಮರಣಗಳ ಮದ್ಯೆದಲ್ಲಿ ಸರ್ವ ಸಮುದಾಯ ಭಾಂದವರ ಜೊತೆಗೆ ಅವಿನಾಭಾವದ ಜೀವನ ಕಳೆಯಬೇಕು ಎಂದು ಅಂಜುಮನ್ ಸಮಿತಿ ಕಾರ್ಯದರ್ಶಿ ಮೈಬೂಬಸಾಬ ಕಣ್ಣಿ ಹೇಳಿದರು.
ಗ್ರಾಮದ ಇದ್ಗಾ ಮೈದಾನದ ಆವರಣದಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಮುಸ್ಲಿಂ ಭಾಂದವರು ಹಮ್ಮಿಕೊಂಡ ಸಾಮೂಹಿಕವಾಗಿ ಪ್ರಾರ್ಥನೆಯಲ್ಲಿ ಮಾತನಾಡಿದ ಅವರು, ಇಂದಿನ ರಾಜಕೀಯ ರಂಗ ಹದಗೆಟ್ಟಿದ್ದು, ತಮ್ಮ ರಾಜಕೀಯ ಬೇಳೆ ಬೆಯಿಸಿಕೊಳ್ಳಲು ಜಾತಿ ಜಾತಿಗಳ ಮದ್ಯದಲ್ಲಿ ವೀಷದ ಬೀಜ ಬಿತ್ತುತ್ತಾರೆ. ರಾಜಕೀಯವನ್ನು ಬದಿಗೊತ್ತಿ ವ್ಯಾಪಾರ ವಹಿವಾಟದಲ್ಲಿ ಮುಂದೆ ಬರಬೇಕು. ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕು ನಿರ್ಗತಿಕರು ಕಂಡಲ್ಲಿ ಸಹಾಯಕ್ಕೆ ಮುಂದಾಗಬೇಕು ಎಂದು ಸಮುದಾಯದ ಯುವಕರಿಗೆ ಸಲಹೆ ನೀಡಿದರು.
ಸೋಮವಾರ ಬೆಳಿಗ್ಗೆ ೮ಗಂಟೆಗೆ ಪ್ರಾರ್ಥನೆ ಸಲ್ಲಿಸಿ ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹಿಂದೂ ಸಮುದಾಯದ ಹಿರಿಯರಿಗೆ ಮತ್ತು ಯುವಕರಿಗೆ ಭೇಟಿ ನೀಡಿ ಇದ್-ಮಿಲಾದ ಮಾಡಿದರು. ಮನೆಗೆ ಆಮಂತ್ರಿಸಿ ಸುರಕುಂಬ್ ಕುಡಿಸಿ ಸಂಭ್ರಮಿಸಿದರು.
ಈ ವೇಳೆ ಶಾಹಾಬಾದ ಮೌಲಾನ ಪ್ರಾರ್ಥನೆಯಲ್ಲಿ ಮಂತ್ರ ಪಠಣ ಮಾಡಿದರು. ಅಬ್ಬಾಸಲಿ ಬಂಟನೂರ, ರಜಾಕ ಬಾಗವಾನ, ಗಪೂರ ಮುಲ್ಲಾ, ಸಲೀಮ್ ಕಣ್ಣಿ, ಎಂ.ಕೆ.ಮುಲ್ಲಾ, ಸಿರಾಜ್ ಕಣ್ಣಿ, ಶಬ್ಬೀರ ಬಾಸಗಿ, ಮಾಬಣ್ಣ ಗೊಗಾಡಿ, ಸೇರಿದಂತೆ ಇಸ್ಲಾಂ ಬಾಂಧವರು ಉಪಸ್ಥಿತರಿದ್ದರು
Subscribe to Updates
Get the latest creative news from FooBar about art, design and business.
Related Posts
Add A Comment

