Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ಜಿಲ್ಲಾಡಳಿತದ ವತಿಯಿಂದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮ ಇದೇ ಜೂ.27 ರಂದು ಹಾಗೂ ಜುಲೈ 2ರಂದು ಡಾ.ಫ.ಗು.ಹಳಕಟ್ಟಿಯವರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಅತ್ಯಂತ ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಣೆ ಮಾಡಲು ನಿರ್ಧರಿಸಲಾಯಿತು.ಗುರುವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಪೂರ್ವಸಿದ್ಧತಾ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಜಯಂತಿ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದ ಅಂಗವಾಗಿ ನಾಡಪ್ರಭು ಕೆಂಪೇಗೌಡ ಅವರ ಕುರಿತು ಫ್ರೌಡಶಾಲೆಯ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಏರ್ಪಡಿಸಿ,ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲು ತೀಮಾರ್ನಿಸಲಾಯಿತು.ಜುಲೈ 2 ರಂದು ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಅವರ ಜಯಂತಿಯನ್ನು ಸಹ ಅತ್ಯಂತ ಸರಳವಾಗಿ, ವ್ಯವಸ್ಥಿತವಾಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನೇರವೆರಿಸಲಾಗುವುದು. ಡಾ.ಫ.ಗು.ಹಳಕಟ್ಟಿ ಅವರ ಬಗ್ಗೆ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ…
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಅಧಿಕಾರಿಗಳಿಗೆ ಸೂಚನೆ ವಿಜಯಪುರ: ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವದ ಬೆಳವಣಿಗೆಗೆ ಎಲ್ಲ ಇಲಾಖೆ ಅಧಿಕಾರಿಗಳು ಯೋಜನಾಬದ್ಧ ಗುರಿಯನ್ನು ನಿಗದಿಪಡಿಸಿಕೊಂಡು ಮಕ್ಕಳ ಸಂರಕ್ಷಣೆಗೆ ಆದ್ಯತೆ ನೀಡುವ ಮೂಲಕ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಸೂಚಿಸಿದರು.ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಮಕ್ಕಳ ಪಾಲನಾ ಸಂಸ್ಥೆ, ಸ್ವಯಂ ಸೇವಾ ಸಂಸ್ಥೆ ಮುಖ್ಯಸ್ಥರೊಂದಿಗೆ ನಡೆದ ಮಕ್ಕಳ ರಕ್ಷಣಾ ವ್ಯವಸ್ಥೆ ಕುರಿತ ಭಾಗಿದಾರರೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಪ್ರಸವಪೂರ್ವ ಲಿಂಗ ಪತ್ತೆ ಮತ್ತು ನವಜಾತ ಶಿಶುಗಳ ಹತ್ಯೆಯಂತಹ ಕೃತಗಳು ನಡೆಯದಂತೆ ನೋಡಿಕೊಳ್ಳಲು ಎಲ್ಲ ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬೇಕು. ಎಲ್ಲ ಸ್ಕ್ಯಾನಿಂಗ್ ಸೆಂಟರ್‍ಗಳಿಗಳಿಗೆ ಸಂಬಂಧಿಸಿದ ಅಧಿಕಾರಿಗಳು ಭೇಟಿ…
ವಿಜಯಪುರ: ಬಿ.ಎಲ್.ಡಿ.ಇ ಸಂಸ್ಥೆಯ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯಕ್ಕೆ ವಿಶ್ವವಿದ್ಯಾಲಯ ಅನುದಾನ ಆಯೋಗ(ಯುಜಿಸಿ) 12 ಬಿ ಮಾನ್ಯತೆ ನೀಡಿದೆ.ವಿಶ್ವವಿದ್ಯಾಲಯದಲ್ಲಿರುವ ಲಭ್ಯವಿರುವ ಉನ್ನತ ಶಿಕ್ಷಣ, ನಡೆಯುತ್ತಿರುವ ಸಂಶೋಧನೆಗಳು, ಸಾಧಿಸಿರುವ ಪ್ರಗತಿಯನ್ನು ಪರಿಗಣಿಸಿ ಈ ಮಾನ್ಯತೆ ದೊರೆತಿದೆ. ಯುಜಿಸಿ 12ಬಿ ಮಾನ್ಯತೆ ನೀಡಿರುವುದರಿಂದ ಮುಂಬರುವ ದಿನಗಳಲ್ಲಿ ವಿವಿಯ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಯುಜಿಸಿ, ಕೇಂದ್ರ ಸರಕಾರ ಅಥವಾ ಸಂಸ್ಥೆಗಳಿಂದ ನಾನಾ ಸಂಶೋಧನೆ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಅನುದಾನ ಪಡೆಯಲು ಅರ್ಹತೆಯನ್ನು ಪಡೆದಂತಾಗಿದೆ.ವಿವಿಗೆ 12ಬಿ ಮಾನ್ಯತೆ ದೊರೆತಿರುವುದಕ್ಕೆ ಕುಲಾಧಿಪತಿ ಎಂ. ಬಿ. ಪಾಟೀಲ, ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಇನ್ನು ಮುಂದೆಯೂ ಕೂಡ ವಿವಿ ವೈದ್ಯಕೀಯ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆಗಳನ್ನು ಮಾಡಲು ಬದ್ಧವಾಗಿದೆ ಎಂದು ತಿಳಿಸಿದ್ದಾರೆ.ವಿವಿಗೆ ಈ ಗೌರವ ದೊರೆತಿರುವುದಕ್ಕೆ ಸಮಕುಲಾಧಿಪತಿ ಪ್ರೊ. ವೈ, ಎಂ. ಎಂ. ಜಯರಾಜ, ಕುಲಪತಿ ಡಾ. ಆರ್. ಎಸ್. ಮುಧೋಳ, ಸಮಕುಲಪತಿ ಡಾ. ಅರುಣ ಚಂ. ಇನಾಮದಾರ ಅವರು ವಿವಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ ಎಂದು…
ಕೆಂಭಾವಿ: ಪಟ್ಟಣದಲ್ಲಿಅಪರಿಚಿತ ವ್ಯಕ್ತಿಯೊಬ್ಬ ಅನಾರೋಗ್ಯದಿಂದ ಬಳಲುತ್ತಿದ್ದಾಗ ಮೃತಪಟ್ಟ ಘಟನೆ ಗುರುವಾರ ನಡೆದಿದೆ.ಅಪರಿಚಿತ ವ್ಯಕ್ತಿಯು ಅನಾರೋಗ್ಯದಿಂದ ನರಳುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ವೈದ್ಯಕೀಯ ಚಿಕಿತ್ಸೆಗಾಗಿ ಪಟ್ಟಣದ ಸಮುದಾಯದ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅವನನ್ನು ಸುರಪುರ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.ಸದರಿ ವ್ಯಕ್ತಿಯ ಗುರುತು ಪತ್ತೆಯಾದಲ್ಲಿ ಕೆಂಭಾವಿ ಪೋಲೀಸ್ ಠಾಣೆಗೆ ಸಂಪರ್ಕಿಸಲು ಪಿಎಸ್ಐ ರಾಜಶೇಖರ ರಾಠೋಡ ಕೆಳಗಿನ ನಂಬರಿಗೆ ಕರೆ ಮಾಡಲು ತಿಳಿಸಿದ್ದಾರೆ.ಮೊ.ನಂಬರ್: 9480803585
Udayarashmi kannada daily newspaper Udayarashmi kannada daily newspaper
ಮುದ್ದೇಬಿಹಾಳ: ಮುದ್ದೇಬಿಹಾಳ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಕಾಮರಾಜ ಬಿರಾದಾರ ಇವರನ್ನು ತಾಲ್ಲೂಕಿನ ಸಾಹಿಗಳು ಹಾಗೂ ಕನ್ನಡಾಭಿಮಾನಿಗಳು ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.ಪಟ್ಟಣದ ಪ್ರವಾಸಿ ಮಂದರಿರದ ಸರ್ಕಿಟ್ ಹೌಸ್ ನಲ್ಲಿ ಕಸಾಪ ಆಯ್ಕೆ ಪ್ರಕ್ರೀಯೆಯ ನಂತರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು ಕನ್ನಡ ನಾಡು-ನುಡಿ, ನೆಲ- ಜಲ, ಸಂಸ್ಕೃತಿಯನ್ನು ಉಳಿಸುವ ಬೆಳೆಸುವ ಕರ್ತವ್ಯ ನಿಮ್ಮೆಲ್ಲರದ್ದಾಗಿದೆ ಎಂದರು.ಕಸಾಪ ಮಾಜಿ ಅಧ್ಯಕ್ಷ ಎಮ್.ಬಿ.ನಾವದಗಿ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಸರ್ಕಾರದ ಅಂಗ ಸಂಸ್ಥೆಯಾಗಿದ್ದರಿAದ ನಮಗೆ ನೀಡಿದ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿ ಇದರ ಗೌರವ ಘನತೆ ಹೆಚ್ಚಿಸಬೇಕು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ತಾಲೂಕಿನಲ್ಲಿ ಸಾಹಿತ್ಯದ ಪರಿಸರ ಮೂಡಿಸೋಣ ಎಂದರು.ಹಿರಿಯ ಮುಖಂಡ ಮುಖಂಡ ವಾಯ್.ಎಚ್.ವಿಜಯಕರ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ಕ್ರೀಯಾಶೀಲವಾಗಿ ಸಾಗಬೇಕು. ಕನ್ನಡ ಸಾಹಿತ್ಯ ಪರಿಷತ್ತು ಅಲಂಕಾರಿತ ಹುದ್ದೆಯಲ್ಲ, ಕ್ರಿಯಾತ್ಮಕ ಚಟುವಟಿಕೆಗಳಿಂದ ಪ್ರತಿಭಾವಂತ ಸಾಹಿತಿಗಳಿಗೆ ವೇದಿಕೆಯನ್ನು ಕಲ್ಪಿಸಬೇಕು ಎಂದರು.ಕಸಾಪ ತಾಳಿಕೋಟಿ…
ಮುದ್ದೇಬಿಹಾಳ: ಚಾಲಕನ ನಿಯಂತ್ರಣ ತಪ್ಪಿದ ಕ್ರೂಸರ್ ವಾಹನವೊಂದು ಪಲ್ಟಿಯಾದ ಪರಿಣಾಮ ೧೨ ಪ್ರಯಾಣಿಕರಿಗೆ ಚಿಕ್ಕಪುಟ್ಟ ಮೂವರಿಗೆ ಹೆಚ್ಚಿನ ಗಾಯಗಳಾದ ಘಟನೆ ತಾಲೂಕಿನ ಕೊಳೂರ ಬಳಿ ನಡೆದಿದೆ.ಯರಗಲ್ಲ ಗ್ರಾಮದ ಬಾಲಾಜಿ ಶುಗರ್ಶ ನಲ್ಲಿ ಕೆಲಸ ಮಾಡುವ ಸಿಬ್ಬಂದಿಗಳನ್ನು ಹೊತ್ತೊಯ್ಯುತ್ತಿದ್ದ ವಾಹನ ಇದಾಗಿದ್ದು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಕೂಡಲೇ ಮುದ್ದೇಬಿಹಾಳದ ತಾಲೂಕಾಸ್ಪತ್ರೆಗೆ ರವಾನಿಸಿ ಕಾರ್ಖಾನೆಯ ವ್ಯವಸ್ಥಾಪಕರು ಸೂಕ್ತ ಚಿಕಿತ್ಸೆ ಕೊಡಿಸಿದ್ದಾರೆ. ಹೆಚ್ಚಿನ ಚಿಕಿತ್ಸೆ ಅವಶ್ಯವಿರುವವರನ್ನ ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿರುವುದಾಗಿ ತಿಳಿದುಬಂದಿದೆ.
ಚಡಚಣ: ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ,ನಂ-೨ ಮರಡಿ ಶಾಲೆಯಲ್ಲಿ ಇತ್ತೀಚೆಗೆ ಸೇವಾ ನಿವೃತ್ತಿ ಹೊಂದಿದ ರೇಣುಕಾ ಗೌರ ಗುರುಮಾತೆಯರಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಎಸ್ ಡಿ ಎಂ ಸಿಯ ಉಪಾಧ್ಯಕ್ಷರಾದ ಮಾಹಾದೇವಿ ಕೇಶೆಟ್ಟಿ ವಹಿಸಿದ್ದರು.ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಬಿ ಆರ್ ಪಿ ಸತೀಶ ಬಗಲಿ, ಗೌರ ಗುರುಮಾತೆಯರು ನನ್ನ ವಿದ್ಯಾಗುರುಗಳಾಗಿದ್ದಾರೆ. ಅವರು ಕಲಿಸಿದ ಅನೇಕ ಚಟುವಟಿಕೆಗಳು ನಾನು ಇಂತಹ ಉನ್ನತ ಹುದ್ದೆ ಸ್ವೀಕರಿಸಲು ಸಹಾಯಕವಾಯಿತು ಎಂದರು.ಸಿ ಆರ್ ಪಿ ಭೀಮಾಶಂಕರ ವಾಘಮೋರೆ ಮಾತನಾಡಿ, ಗುರುಮಾತೆಯರು ನನ್ನ ವಿದ್ಯಾಗುರುಗಳು ಮತ್ತು ಅವರೊಟ್ಟಿಗೆ ಐದಾರು ವರ್ಷ ಸೇವೆ ಸಲ್ಲಿಸುವ ಭಾಗ್ಯ ನನಗೆ ದೊರೆಯಿತು. ನನಗೆ ಅವರು ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ, ನಲಿಕಲಿ ಚಟುವಟಿಕೆಗಳ ಕುರಿತು ಸಲಹೆ ಸೂಚನೆಗಳನ್ನು ನೀಡಿದ್ದಾರೆ ಎಂದರುಶಿಕ್ಷಕ ಜಗದೀಶ ಚಲವಾದಿ ಮಾತನಾಡಿ, ಗೌರ ಗುರುಮಾತೆಯರು ಮಾತೃ ಸ್ವರೂಪಿಗಳಾಗಿದ್ದಾರೆ. ಅವರ 39 ವರ್ಷಗಳ ಸೇವೆ ಸಾರ್ಥಕತೆಯನ್ನು ಪಡೆದುಕೊಂಡಿದೆ. ಅವರು ಸದಾ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಸದಾ ಸಿದ್ಧರಿದ್ದರು…
ಇಂಡಿ: ಕೃಷ್ಣಾ ನದಿಯಲ್ಲಿ ಹರಿಯುವ ಮಳೆ ನೀರನ್ನು ತೆಲಂಗಾಣ ಪ್ರದೇಶಕ್ಕೆ ಹೊಗದಂತೆ ತಾಲೂಕಿನಲ್ಲಿರುವ ಎಲ್ಲ ಕೆರೆಗಳನ್ನು ತುಂಬಲು ಕ್ರಮ ವಹಿಸಲು ಶಾಸಕ ಯಶವಂತರಾಯಗೌಡ ಪಾಟೀಲರು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಕೇಳಿಕೊಂಡರುಅವರು ಪಟ್ಟಣದ ಮಿನಿ ವಿಧಾನಸೌಧದಲ್ಲಿ ನಡೆದ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತಿದ್ದರು.ಕೃಷ್ಣಾ ಮುಖ್ಯ ಕಾಲುವೆ, ಗುತ್ತಿ ಬಸವಣ್ಣ, ಚಿಮ್ಮಲಗಿ, ಮುಳವಾಡ, ಇಂಡಿ ಏತ ನೀರಾವರಿ ಸೇರಿದಂತೆ ಯಾವುದೇ ಯೋಜನೆಯಿಂದ ತಾಲೂಕಿನಲ್ಲಿಯ ಎಲ್ಲ ಕೆರೆಗಳನ್ನು ತುಂಬಲು ಕೇಳಿಕೊಂಡರು.ಶಿರಕನಹಳ್ಳಿ, ಮಾವಿನಹಳ್ಳಿ, ಅಗರಖೇಡ, ಹಿರೇಬೇವನೂರ, ಲಾಳಸಂಗಿ, ಅರ್ಜುಣಗಿ,ಹಂಚನಾಳ, ಮಿರಗಿ, ಶಿರಶ್ಯಾಡ ಸೇರಿದಂತೆ ತಾಲೂಕಿನಲ್ಲಿರುವ ಕೆರೆ ಹಳ್ಳಗಳಿಗೆ ನೀರು ತುಂಬಿಸಬೇಕೆಂದರು.ಭೀಮಾನದಿಯಿಂದ ಬೂಯ್ಯಾರ ಬ್ಯಾರೆಜಿಗೆ ನೀರು ಸೇರಿದಂತೆ ಎಲ್ಲ ಮೂಲಗಳಿಂದ ನೀರಿನ ಸದುಪಯೋಗವಾಗಬೇಕು ಎಂದರು.ತಾಲೂಕಿನಲ್ಲಿ ರಸ್ತೆಗಳು ಕೆಟ್ಟಿದ್ದು ಈ ಕೂಡಲೇ ರಿಪೇರಿಯಾಗಬೇಕು. ಅಗರಖೇಡ, ಹಿರೇಬೇವನೂರ, ರೂಗಿ, ಸಾಲೋಟಗಿ ಸೇರಿದಂತೆ ಅನೇಕ ಕಡೆ ರಸ್ತೆಗಳು ಕೆಟ್ಟಿದ್ದು ರಿಪೇರಿ ಮಾಡಲು ಹೇಳಿದ ಅವರು ಲಚ್ಯಾಣ ರಸ್ತೆ ಅಗಲೀಕರಣಕ್ಕೆ ಕ್ರಮ ತೆಗೆದುಕೊಳ್ಳಲು ತಿಳಿಸಿದರು.ಜಿಲ್ಲೆಯಲ್ಲಿ ಅರಣ್ಯೀಕರಣ ೦.೧೨ ಹೇ ಪ್ರದೇಶವಿದೆ. ಕಳೆದ ಹತ್ತು…
ಬಸವನಬಾಗೇವಾಡಿ: ಯಾರು ತಮ್ಮ ಜೀವನದಲ್ಲಿ ಕೊನೆಯವರೆಗೂ ಶಿಸ್ತು, ಸಂಯಮ, ನಯ-ವಿನಯ ಹಾಗೂ ಜಾಗರೂಕತೆಯಿಂದ ಜೀವನ ಸಾಗಿಸುತ್ತಾರೋ ಅಂತಹವರ ಹತ್ತಿರ ಅಪರಾಧವೂ ಎಂದಿಗೂ ಸುಳಿಯಲು ಸಾಧ್ಯವಿಲ್ಲ ಎಂದು ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ ಹೇಳಿದರು.ಪಟ್ಟಣದ ಬಿಎಲ್ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ನಿಯಮ ಹಾಗೂ ಕಾನೂನಿನ ನೆರವು ಮತ್ತು ಶಿಕ್ಷೆ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಯುವಜನಾಂಗವು ಡ್ರಗ್ಸ್, ಅಫೀಮು, ಗಾಂಜಾ ಮತ್ತು ಅಂತರಜಾಲ ಆಟಗಳಿಗೆ ಮರುಳಾಗಿ ಬೆಲೆಕಟ್ಟಲಾಗದ ತಮ್ಮ ಅಮೂಲ್ಯವಾದ ಶರೀರವನ್ನು ಹಾಳು ಮಾಡಿಕೊಳ್ಳುತ್ತಿರುವುದು ದುರ್ದೈವದ ಸಂಗತಿ. ಪ್ರತಿಯೊಬ್ಬ ಯುವಕ-ಯುವತಿಯರು ಸಮಾಜ ಹಾಗೂ ದೇಶ ಮೆಚ್ಚುವಂತಹ ಸಾಧನೆ ಮಾಡುವದು ತುಂಬಾ ಅಗತ್ಯವಿದೆ. ಇವರು ಆದಷ್ಟು ಮೊಬೈಲ್ಗಳಿಂದ ದೂರವಿದ್ದುಕೊಂಡು ನಿರಂತರವಾಗಿ ಅಧ್ಯಯನ ಮಾಡಿದರೆ ಇಂತಹ ಸಾಧನೆ ಮಾಡಲು ಸಾಧ್ಯವಿದೆ ಎಂದರು.ಈಚೆಗೆ ಮಹಿಳೆಯರ ಮೇಲ ದೌರ್ಜನ್ಯದಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ಅಪರಾಧಗಳಿಂದ ಸಮಾಜ ಮುಕ್ತವಾಗಬೇಕಾದರೆ ಪ್ರತಿಯೊಬ್ಬ ಪುರುಷನು ಮಹಿಳೆಯರನ್ನು ತನ್ನ ಸಹೋದರಿ ಎಂಬ…
