ಬಸವನಬಾಗೇವಾಡಿ: ಯಾರು ತಮ್ಮ ಜೀವನದಲ್ಲಿ ಕೊನೆಯವರೆಗೂ ಶಿಸ್ತು, ಸಂಯಮ, ನಯ-ವಿನಯ ಹಾಗೂ ಜಾಗರೂಕತೆಯಿಂದ ಜೀವನ ಸಾಗಿಸುತ್ತಾರೋ ಅಂತಹವರ ಹತ್ತಿರ ಅಪರಾಧವೂ ಎಂದಿಗೂ ಸುಳಿಯಲು ಸಾಧ್ಯವಿಲ್ಲ ಎಂದು ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ ಹೇಳಿದರು.
ಪಟ್ಟಣದ ಬಿಎಲ್ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ನಿಯಮ ಹಾಗೂ ಕಾನೂನಿನ ನೆರವು ಮತ್ತು ಶಿಕ್ಷೆ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಯುವಜನಾಂಗವು ಡ್ರಗ್ಸ್, ಅಫೀಮು, ಗಾಂಜಾ ಮತ್ತು ಅಂತರಜಾಲ ಆಟಗಳಿಗೆ ಮರುಳಾಗಿ ಬೆಲೆಕಟ್ಟಲಾಗದ ತಮ್ಮ ಅಮೂಲ್ಯವಾದ ಶರೀರವನ್ನು ಹಾಳು ಮಾಡಿಕೊಳ್ಳುತ್ತಿರುವುದು ದುರ್ದೈವದ ಸಂಗತಿ. ಪ್ರತಿಯೊಬ್ಬ ಯುವಕ-ಯುವತಿಯರು ಸಮಾಜ ಹಾಗೂ ದೇಶ ಮೆಚ್ಚುವಂತಹ ಸಾಧನೆ ಮಾಡುವದು ತುಂಬಾ ಅಗತ್ಯವಿದೆ. ಇವರು ಆದಷ್ಟು ಮೊಬೈಲ್ಗಳಿಂದ ದೂರವಿದ್ದುಕೊಂಡು ನಿರಂತರವಾಗಿ ಅಧ್ಯಯನ ಮಾಡಿದರೆ ಇಂತಹ ಸಾಧನೆ ಮಾಡಲು ಸಾಧ್ಯವಿದೆ ಎಂದರು.
ಈಚೆಗೆ ಮಹಿಳೆಯರ ಮೇಲ ದೌರ್ಜನ್ಯದಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ಅಪರಾಧಗಳಿಂದ ಸಮಾಜ ಮುಕ್ತವಾಗಬೇಕಾದರೆ ಪ್ರತಿಯೊಬ್ಬ ಪುರುಷನು ಮಹಿಳೆಯರನ್ನು ತನ್ನ ಸಹೋದರಿ ಎಂಬ ಭಾವನೆಯಿಂದ ಕಾಣುವ ಅಗತ್ಯವಿದೆ. ಯಾರೂ ಎಂದಿಗೂ ಕಾನೂನನ್ನು ಕೈಗೆತ್ತಿಗೊಳ್ಳಬಾರದು. ಒಂದು ವೇಳೆ ಕಾನೂನು ಕೈಗೆತ್ತಿಗೊಂಡರೆ ಅವರು ಘೋರ ಶಿಕ್ಷೆಗೆ ಒಳಗಾಬೇಕಾಗುತ್ತದೆ. ಸಮಾಜದಲ್ಲಿ ಕಂಡುಬರುವ ಅಪರಾಧಗಳ ಬಗ್ಗೆ ಮುಂಚಿತವಾಗಿ ಪೊಲೀಸ್ ಇಲಾಖೆಗೆ ತಿಳಿಸಿದರೆ ಮುಂದಾಗುವ ಅನಾಹುತಗಳನ್ನು ತಪ್ಪಿಸಬಹುದಾಗಿದೆ. ಈ ಮಾಹಿತಿಯನ್ನು ನೀಡಲು ೧೧೨ ಇಲ್ಲವೇ ೧೯೩೦ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎ.ವ್ಹಿ.ಸೂರ್ಯವಂಶಿ ಮಾತನಾಡಿದರು. ವೇದಿಕೆಯಲ್ಲಿ ಔಷಧ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಸಿ.ಸಿ.ಸಿಂಪಿ, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ.ಆರ್.ಎ.ಪವಾರ ಇದ್ದರು. ಕಾರ್ಯಕ್ರಮದಲ್ಲಿ ಮೂರು ಮಹಾವಿದ್ಯಾಲಯದ ಎಲ್ಲ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಪೊಲೀಸ್ ಇಲಾಖೆಯ ಕೆಲ ಸಿಬ್ಬಂದಿಗಳು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

