ಚಡಚಣ: ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ,ನಂ-೨ ಮರಡಿ ಶಾಲೆಯಲ್ಲಿ ಇತ್ತೀಚೆಗೆ ಸೇವಾ ನಿವೃತ್ತಿ ಹೊಂದಿದ ರೇಣುಕಾ ಗೌರ ಗುರುಮಾತೆಯರಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಎಸ್ ಡಿ ಎಂ ಸಿಯ ಉಪಾಧ್ಯಕ್ಷರಾದ ಮಾಹಾದೇವಿ ಕೇಶೆಟ್ಟಿ ವಹಿಸಿದ್ದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಬಿ ಆರ್ ಪಿ ಸತೀಶ ಬಗಲಿ, ಗೌರ ಗುರುಮಾತೆಯರು ನನ್ನ ವಿದ್ಯಾಗುರುಗಳಾಗಿದ್ದಾರೆ. ಅವರು ಕಲಿಸಿದ ಅನೇಕ ಚಟುವಟಿಕೆಗಳು ನಾನು ಇಂತಹ ಉನ್ನತ ಹುದ್ದೆ ಸ್ವೀಕರಿಸಲು ಸಹಾಯಕವಾಯಿತು ಎಂದರು.
ಸಿ ಆರ್ ಪಿ ಭೀಮಾಶಂಕರ ವಾಘಮೋರೆ ಮಾತನಾಡಿ, ಗುರುಮಾತೆಯರು ನನ್ನ ವಿದ್ಯಾಗುರುಗಳು ಮತ್ತು ಅವರೊಟ್ಟಿಗೆ ಐದಾರು ವರ್ಷ ಸೇವೆ ಸಲ್ಲಿಸುವ ಭಾಗ್ಯ ನನಗೆ ದೊರೆಯಿತು. ನನಗೆ ಅವರು ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ, ನಲಿಕಲಿ ಚಟುವಟಿಕೆಗಳ ಕುರಿತು ಸಲಹೆ ಸೂಚನೆಗಳನ್ನು ನೀಡಿದ್ದಾರೆ ಎಂದರು
ಶಿಕ್ಷಕ ಜಗದೀಶ ಚಲವಾದಿ ಮಾತನಾಡಿ, ಗೌರ ಗುರುಮಾತೆಯರು ಮಾತೃ ಸ್ವರೂಪಿಗಳಾಗಿದ್ದಾರೆ. ಅವರ 39 ವರ್ಷಗಳ ಸೇವೆ ಸಾರ್ಥಕತೆಯನ್ನು ಪಡೆದುಕೊಂಡಿದೆ. ಅವರು ಸದಾ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಸದಾ ಸಿದ್ಧರಿದ್ದರು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಿಕ್ಷಕರ ಸೋಸಾಯಿಟಿಯ ಅಧ್ಯಕ್ಷ ಎಸ್ ಎಸ್ ಪಾಟೀಲ ಅವರು ಮಾತನಾಡಿ, ಸಂಘಟನೆಯೊಂದಿಗೆ ಅವರ ಮನೆತನದ ಒಡನಾಟವನ್ನು ನೆನಪಿಸಿಕೊಂಡರು.
ಇದೇ ಸಂದರ್ಭದಲ್ಲಿ ಸುಧೀರ್ಘವಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ರೇಣುಕಾ ಗೌರ ಗುರುಮಾತೆಯರು ಸನ್ಮಾನ ಸ್ವೀಕರಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ಚೆನ್ನಾಗಿ ಕಲಿಯಿರಿ, ದಿನಾಲು ಶಾಲೆಗೆ ಬರಬೇಕು, ನೀವೆಲ್ಲರೂ ಉನ್ನತ ಹುದ್ದೆಯನ್ನು ಪಡೆದು ಶಾಲೆಯ, ನಾಡಿನ ಕೀರ್ತಿಯನ್ನು ಹೆಚ್ಚಿಸುವ ಮಕ್ಕಳು ನೀವಾಗಬೇಕು ಎಂದರು. ತಮ್ಮ ಈ ಸುದೀರ್ಘ ಸೇವೆಯಲ್ಲಿ ಭೇಟಿಯಾದ ಅಧಿಕಾರಿಗಳು, ಸಹ ಶಿಕ್ಷಕರು ಹಾಗೂ ಮುಖ್ಯಗುರುಗಳ ಸ್ಪಂದನೆಯನ್ನು ಸ್ಮರಿಸಿದರು. ಹಾಗೆಯೇ ಪ್ರತಿವರ್ಷ ಮಕ್ಕಳ ದಿನಾಚರಣೆಯ ಪ್ರಯುಕ್ತ ಪ್ರತಿಭಾ ಪುರಸ್ಕಾರ ನೀಡಲು ಮುಖ್ಯ ಗುರುಗಳೊಂದಿಗೆ ಜಂಟಿ ಖಾತೆಯಲ್ಲಿ 10000 ರೂಪಾಯಿಗಳನ್ನು ಠೇವಣಿ ಹಣವಿಟ್ಟರು. ಬಂದ ಬಡ್ಡಿಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪೆನ್ನು, ಪುಸ್ತಕ ನೀಡಬೇಕು ಎಂದರು. ಹಾಗೆಯೇ ಇಂದು ಸೇವಾ ನಿವೃತ್ತಿ ಬೀಳ್ಕೊಡುಗೆ ಸಮಾರಂಭದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಸಿಹಿ ಹಾಗೂ ಪೆನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರ ಸಂಘದ ಅಧ್ಯಕ್ಷರಾದ ಅನಿಲ ಸೋನಗಿ, ನೌಕರರ ಸಂಘದ ಅಧ್ಯಕ್ಷರಾದ ಬಸವರಾಜ ಮಜ್ಜಗಿ,ಕೆ ಜಿ ಎಸ್ ಶಾಲೆಯ ಮುಖ್ಯ ಗುರುಗಳಾದ ಈರಗೊಂಡ ಬಾಲಗಾಂವ ಶಾಲೆಯ ಶಿಕ್ಷಕರಾದ ಎಂ ಎಸ್ ನಿಂಬಾಳಕರ, ವಿ ಎಸ್ ಪತ್ತಾರ, ಮಾದೇವ ಆದಿಗೊಂಡೆ, ಎಚ್ ಜೆ ಲೋಣಿ,ಗೀತಾ ಮಾಳಿ, ಅಪೇಕ್ಷಾ ಕರಜಗಿ ಅಡುಗೆ ಸಹೋದರಿಯರಾದ ಮಾನಂದ ಧೋತ್ರೆ, ಸಫೂರಾ ಲಟೋರಿ, ಸವಿತಾ ವಾಲಿಕಾರ, ರಕಮಬಾಯಿ ವಾಘಮೋರೆ, ಕಸ್ತೂರಿ ಸಾಲಮಂಟಪ ಹಾಗೂ ಗೌರ ಗುರುಮಾತೆಯರ ಬಂಧು ಮಿತ್ರರು ಉಪಸ್ಥಿತರಿದ್ದರು.
ದುಂಡಪ್ಪ ಬಗಲಿ ಸ್ವಾಗತಿಸಿದರು, ಬಸವರಾಜ ಕರಜಗಿ ನಿರೂಪಿಸಿದರು. ಸುರೇಖಾ ಝುಲ್ಪಿ ಪ್ರಾರ್ಥಿಸಿದರು. ಜಯಶ್ರೀ ಗೊಟ್ಯಾಳ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

