ಮುದ್ದೇಬಿಹಾಳ: ಮುದ್ದೇಬಿಹಾಳ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಕಾಮರಾಜ ಬಿರಾದಾರ ಇವರನ್ನು ತಾಲ್ಲೂಕಿನ ಸಾಹಿಗಳು ಹಾಗೂ ಕನ್ನಡಾಭಿಮಾನಿಗಳು ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.
ಪಟ್ಟಣದ ಪ್ರವಾಸಿ ಮಂದರಿರದ ಸರ್ಕಿಟ್ ಹೌಸ್ ನಲ್ಲಿ ಕಸಾಪ ಆಯ್ಕೆ ಪ್ರಕ್ರೀಯೆಯ ನಂತರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು ಕನ್ನಡ ನಾಡು-ನುಡಿ, ನೆಲ- ಜಲ, ಸಂಸ್ಕೃತಿಯನ್ನು ಉಳಿಸುವ ಬೆಳೆಸುವ ಕರ್ತವ್ಯ ನಿಮ್ಮೆಲ್ಲರದ್ದಾಗಿದೆ ಎಂದರು.
ಕಸಾಪ ಮಾಜಿ ಅಧ್ಯಕ್ಷ ಎಮ್.ಬಿ.ನಾವದಗಿ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಸರ್ಕಾರದ ಅಂಗ ಸಂಸ್ಥೆಯಾಗಿದ್ದರಿAದ ನಮಗೆ ನೀಡಿದ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿ ಇದರ ಗೌರವ ಘನತೆ ಹೆಚ್ಚಿಸಬೇಕು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ತಾಲೂಕಿನಲ್ಲಿ ಸಾಹಿತ್ಯದ ಪರಿಸರ ಮೂಡಿಸೋಣ ಎಂದರು.
ಹಿರಿಯ ಮುಖಂಡ ಮುಖಂಡ ವಾಯ್.ಎಚ್.ವಿಜಯಕರ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ಕ್ರೀಯಾಶೀಲವಾಗಿ ಸಾಗಬೇಕು. ಕನ್ನಡ ಸಾಹಿತ್ಯ ಪರಿಷತ್ತು ಅಲಂಕಾರಿತ ಹುದ್ದೆಯಲ್ಲ, ಕ್ರಿಯಾತ್ಮಕ ಚಟುವಟಿಕೆಗಳಿಂದ ಪ್ರತಿಭಾವಂತ ಸಾಹಿತಿಗಳಿಗೆ ವೇದಿಕೆಯನ್ನು ಕಲ್ಪಿಸಬೇಕು ಎಂದರು.
ಕಸಾಪ ತಾಳಿಕೋಟಿ ಅಧ್ಯಕ್ಷ ರೇವಣಸಿದ್ದಪ್ಪ ಕೊಪ್ಪದ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ, ಪ್ರಶಾಂತ ಕಾಳೆ, ಜಯಶ್ರೀ ಹಿರೇಮಠ, ಚೈತನ್ಯ ಮುದ್ದೆಬಿಹಾಳ, ಮಹಿಬೂಬ ಗೊಳಸಂಗಿ, ಸದಾಶಿವ ಮಠ, ಸಂಗಪ್ಪ ಮೇಲಿನಮನಿ, ಹುಸೇನ ಮುಲ್ಲಾ, ಶ್ರೀಶೈಲ ಪೂಜಾರಿ, ಅಂಬರೀಶ ಗೂಳಿ, ರಮಜಾನ ನದಾಫ, ಅಶೋಕ ಚಟ್ಟೆರ, ದಾವಲ ಗೊಳಸಂಗಿ, ಸಾಹೇಬಲಾಲ ದೇಸಾಯಿ, ಟಿ ವಿಜಯಬಾಸ್ಕರ, ಮುತ್ತು ರಾಯಗೊಂಡ, ರವಿ ಅಮರಣ್ಣವರ, ಆಸೀಫ ಅವಟಿ, ಪ್ರಕಾಶ ಸರಸಪ್ಪ, ನಜೀರ ದಾಂಡಿಯಾ, ಮನೋಹರ ರಾಯಚೂರ, ಶ್ರೀಶೈಲ ದೊಡಮನಿ, ಬಿ.ಕೆ.ರಕ್ಕಸಗಿ, ಭೀಮು ಹಡಪದ ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

