ಇಂಡಿ: ಕೃಷ್ಣಾ ನದಿಯಲ್ಲಿ ಹರಿಯುವ ಮಳೆ ನೀರನ್ನು ತೆಲಂಗಾಣ ಪ್ರದೇಶಕ್ಕೆ ಹೊಗದಂತೆ ತಾಲೂಕಿನಲ್ಲಿರುವ ಎಲ್ಲ ಕೆರೆಗಳನ್ನು ತುಂಬಲು ಕ್ರಮ ವಹಿಸಲು ಶಾಸಕ ಯಶವಂತರಾಯಗೌಡ ಪಾಟೀಲರು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಕೇಳಿಕೊಂಡರು
ಅವರು ಪಟ್ಟಣದ ಮಿನಿ ವಿಧಾನಸೌಧದಲ್ಲಿ ನಡೆದ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತಿದ್ದರು.
ಕೃಷ್ಣಾ ಮುಖ್ಯ ಕಾಲುವೆ, ಗುತ್ತಿ ಬಸವಣ್ಣ, ಚಿಮ್ಮಲಗಿ, ಮುಳವಾಡ, ಇಂಡಿ ಏತ ನೀರಾವರಿ ಸೇರಿದಂತೆ ಯಾವುದೇ ಯೋಜನೆಯಿಂದ ತಾಲೂಕಿನಲ್ಲಿಯ ಎಲ್ಲ ಕೆರೆಗಳನ್ನು ತುಂಬಲು ಕೇಳಿಕೊಂಡರು.
ಶಿರಕನಹಳ್ಳಿ, ಮಾವಿನಹಳ್ಳಿ, ಅಗರಖೇಡ, ಹಿರೇಬೇವನೂರ, ಲಾಳಸಂಗಿ, ಅರ್ಜುಣಗಿ,ಹಂಚನಾಳ, ಮಿರಗಿ, ಶಿರಶ್ಯಾಡ ಸೇರಿದಂತೆ ತಾಲೂಕಿನಲ್ಲಿರುವ ಕೆರೆ ಹಳ್ಳಗಳಿಗೆ ನೀರು ತುಂಬಿಸಬೇಕೆಂದರು.
ಭೀಮಾನದಿಯಿಂದ ಬೂಯ್ಯಾರ ಬ್ಯಾರೆಜಿಗೆ ನೀರು ಸೇರಿದಂತೆ ಎಲ್ಲ ಮೂಲಗಳಿಂದ ನೀರಿನ ಸದುಪಯೋಗವಾಗಬೇಕು ಎಂದರು.
ತಾಲೂಕಿನಲ್ಲಿ ರಸ್ತೆಗಳು ಕೆಟ್ಟಿದ್ದು ಈ ಕೂಡಲೇ ರಿಪೇರಿಯಾಗಬೇಕು. ಅಗರಖೇಡ, ಹಿರೇಬೇವನೂರ, ರೂಗಿ, ಸಾಲೋಟಗಿ ಸೇರಿದಂತೆ ಅನೇಕ ಕಡೆ ರಸ್ತೆಗಳು ಕೆಟ್ಟಿದ್ದು ರಿಪೇರಿ ಮಾಡಲು ಹೇಳಿದ ಅವರು ಲಚ್ಯಾಣ ರಸ್ತೆ ಅಗಲೀಕರಣಕ್ಕೆ ಕ್ರಮ ತೆಗೆದುಕೊಳ್ಳಲು ತಿಳಿಸಿದರು.
ಜಿಲ್ಲೆಯಲ್ಲಿ ಅರಣ್ಯೀಕರಣ ೦.೧೨ ಹೇ ಪ್ರದೇಶವಿದೆ. ಕಳೆದ ಹತ್ತು ವರ್ಷಗಳಿಂದ ಎಷ್ಟು ಗಿಡ ನೆಡಿಸಲಾಗಿದೆ. ಅದರಲ್ಲಿ ರಕ್ಷಣೆ ಎಷ್ಟು ಆಗಿವೆ. ಅರಣ್ಯ ಬೆಳವಣೆಗೆಗೆ ತೆಗೆದುಕೊಳ್ಳುವ ಕ್ರಮ ಕುರಿತು ಚರ್ಚಿಸಿದರು. ತಾಲೂಕಿನಲ್ಲಿ ೩೪ ಕಟ್ಟಿಗೆ ಕೊರೆಯುವ ಮಸೀನುಗಳಿದ್ದು ಅವುಗಳಿಂದ ಅರಣ್ಯ ಪ್ರದೇಶ ಎಷ್ಟು ನಷ್ಟ ವಾಗುತ್ತದೆ ಎಂಬುದರ ಕುರಿತು ಸುದೀಘ್ರ ಚರ್ಚೆ ನಡೆಸಿದರು.
ತಾಲೂಕಿನಲ್ಲಿ ಬೇಸಿಗೆಯಲ್ಲಿ ೧೦೦ ಹೇ ಪ್ರದೇಶದಲ್ಲಿ ನಿಂಬೆ ಗಿಡಗಳು ನಾಶವಾಗಿವೆ. ಅದಕ್ಕೆ ಸರಕಾರ ನೀಡುವ ಪರಿಹಾರ ರೈತರಿಗೆ ಸಮಾಧಾನ ತರುವದೇ, ರೈತರು ಕಳೆದ ೧೦,೧೫ ವರ್ಷದಿಂದ ನಿಂಬೆ ಬೆಳೆ ರಕ್ಷಿಸಿರುತ್ತಾರೆ. ಒಂದು ವರ್ಷದ ಬೆಳೆಗೆ ನಷ್ಟ ವಾದ ಬೆಳೆಯಂತೆ ಪರಿಹಾರ ನೀಡಿದರೆ ಸಾದ್ಯವೇ ಎಂದು ಚರ್ಚಿಸಿದರು.
ತಾಲೂಕಿನಲ್ಲಿ ವಿಂಡ್ ವಿದ್ಯುತ್ ಹೆಚ್ಚಸಲು ಪ್ರಯತ್ನಿಸಲು ಇಲಾಖೆ ಜೊತೆ ಚರ್ಚಿಸಿದರು.
ವೇದಿಕೆಯ ಮೇಲೆ ಕಂದಾಯ ಉಪವಿಬಾಗಾಧಿಕಾರಿ ಅಬೀದ ಗದ್ಯಾಳ, ತಹಸೀಲ್ದಾರ ಮಂಜುಳಾ ನಾಯಕ, ಡಿ.ಎಸ್.ಪಿ ಜಗದೀಶ ಎಚ್.ಎಸ್, ಇಒ ಬಾಬು ರಾಠೋಡ ಇದ್ದರು.
ಸಭೆಯಲ್ಲಿ ಎಇಇ ಹೆಸ್ಕಾಂ ಎಸ್.ಆರ್.ಮೆಂಡೆದಾರ, ಸಣ್ಣ ನೀರಾವರಿಯ ಕೆರೂರ, ಮಹಾದೇವಪ್ಪ ಏವೂರ, ಬಿ.ಜೆ.ಇಂಡಿ, ಎಚ್.ಎಸ್.ಪಾಟೀಲ, ಮಹಾಂತೇಶ ಹಂಗರಗಿ ಮತ್ತಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

