Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ಜಿಲ್ಲಾ ಉದ್ಯೊಗ ವಿನಿಮಯ ಕೇಂದ್ರ ಹಾಗೂ ಬಿಎಲ್‌ಡಿಇ, ಐಟಿಐ ವಿಜಯಪುರ ಇವರ ಸಹಯೋಗದಲ್ಲಿ ಬೆಂಗಳೂರಿನ ಜಾನ್ಸನ್ ಲಿಫ್ಟ್ ಪ್ರೈ.ಲಿ. ವತಿಯಿಂದ ಜೂ.೨೬ ರಂದು ಬೆಳಿಗ್ಗೆ ೧೦ ಗಂಟೆಗೆ ಬಿಎಲ್‌ಡಿಇ ಐಟಿಐ-ಪಾಲಿಟೆಕ್ನಿಕ್ ಕಾಲೇಜ್ ಆವರಣದಲ್ಲಿ ಕ್ಯಾಂಪಸ್ ಸಂದರ್ಶನ ಆಯೋಜಿಸಲಾಗಿದೆ.ಐಟಿಐ ಪಾಸಾದಂತಹ ಹಾಗೂ ಅಂತಿಮ ವರ್ಷದ ಐಟಿಐ ಪರೀಕ್ಷೆಗೆ ಹಾಜರಾಗುತ್ತಿರುವ ಆಸಕ್ತ ಅಭ್ಯರ್ಥಿಗಳು ಮೂಲ ದಾಖಲಾತಿಗಳೊಂದಿಗೆ ಸಂದರ್ಶನಕ್ಕೆ ಭಾಗವಹಿಸಬಹುದಾಗಿದೆ. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಖುದ್ದಾಗಿ ಅಥವಾ ಪೋನ್ ಸಂಖ್ಯೆ ೯೯೧೬೮೫೩೬೦೫, ೯೯೪೫೦೦೦೭೯೩ ಸಂಖ್ಯೆಗೆ ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ಆಲಮೇಲ ತಾಲೂಕಿನ ದೇವರ ನಾವದತಿ ಹಾಗೂ ಬಗಲೂರ ಗ್ರಾಮ ಪಂಚಾಯತಿಗಳಲ್ಲಿ ಗ್ರಾಮೀಣ ಪುನರ್ವಸತಿ ಯೋಜನೆಯಡಿ ಗೌರವಧನದ ಆಧಾರದ ಮೇಲೆ ಕಾರ್ಯನಿರ್ವಹಿಸಲು ತಾತ್ಕಾಲಿಕವಾಗಿ ಆಯ್ಕೆಯಾದ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.ತಾತ್ಕಾಲಿಕವಾಗಿ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಚೇರಿ ನೋಟಿಸ್ ಬೋರ್ಡಿಗೆ ಹಾಗೂ ತಾಲೂಕಾ ಪಂಚಾಯತ್ ಆಲಮೇಲ ಕಚೇರಿಯ ನೋಟಿಸ್ ಬೋರ್ಡಿನಲ್ಲಿ ಮತ್ತು ದೇವರ ನಾವದಗಿ ಮತ್ತು ಬಗಲೂರ ಗ್ರಾಮ ಪಂಚಾಯತ್ ಕಾರ್ಯಲಯ ನೋಟಿಸ್ ಬೋರ್ಡಿಗೆ ಪ್ರಕಟಿಸಲಾಗಿದೆ. ಪ್ರಕಟಿತ ಪಟ್ಟಿಗೆ ಆಕ್ಷೇಪಣೆಗಳಿದ್ದಲ್ಲಿ ದಿನಾಂಕ : ೦೨-೦೭-೨೦೨೪ರೊಳಗಾಗಿ ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ವಿಜಯಪುರ ಕಚೇರಿಗೆ ಸಲ್ಲಿಸಬಹುದಾಗಿದೆ.ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿಗಳ ಕಚೇರಿ, ಕನಕದಾಸ ಬಡಾವಣೆ, ಜಿಲ್ಲಾ ಪಂಚಾಯತ್ ಆವರಣ ವಿಜಯಪುರ ದೂ: ೦೮೩೫೨-೭೯೬೦೬೦ ಸಂಖ್ಯೆಗೆ ಸಂಪರ್ಕಿಸುವಂತೆ ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ವಿಜಯಪುರ ನಗರದ ನವಬಾಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಪ್ರಥಮ ವರ್ಷದ ವಿವಿಧ ಕೋರ್ಸ್ಗಳಿಗೆ ಪ್ರವೇಶ ಪಡೆಯುವ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆ ವಿಜಯಪುರ ಇವರಿಗೆ ಸಂಪರ್ಕಿಸಿ ಪ್ರೀಶಿಪ್ ಕಾರ್ಡನ್ನು ಪಡೆದು ಆನ್‌ಲೈನ್ ಮೂಲಕ ಯುಯುಸಿಎಂಎಸ್ ನಲ್ಲಿ ಭರ್ತಿ ಮಾಡಿ ದಿನಾಂಕ : ೦೬-೦೭-೨೦೨೪ರೊಳಗಾಗಿ ದಂಡರಹಿತವಾಗಿ ಪ್ರವೇಶ ಪಡೆದುಕೊಳ್ಳಲು ತಿಳಿಸಲಾಗಿದೆ.ಒಂದು ವೇಳೆ ಪ್ರೀಶಿಪ್ ಕಾರ್ಡನ್ನು ಪಡೆದುಕೊಳ್ಳದೇ ಇದ್ದಲ್ಲಿ ಕಾಲೇಜು ಶಿಕ್ಷಣ ಇಲಾಖೆ ಬೆಂಗಳೂರು ಮತ್ತು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಇವರ ಪ್ರವೇಶಾತಿ ನಿಯಮಾವಳಿಗಳಂತೆ ಪ್ರವೇಶ ಶುಲ್ಕವನ್ನು ಪಡೆದುಕೊಳ್ಳಲಾಗುವುದೆಂದು ಕಾಲೇಜಿನ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ವಿಜಯಪುರ ನಗರದ ಗೋಲಗುಂಬಜ್ ಆವರಣದಲ್ಲಿ ಇತ್ತೀಚೆಗೆ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಧಾರವಾಡದ ಎಎಸ್‌ಎಇ ವಿಶೇಷ ನೊಡಲ್ ಅಧಿಕಾರಿ ರಾಕೇಶ್ ಸಿಂಧೆ, ಅವರು ಭಾಗವಹಿಸಿ, ಅಂತರರಾಷ್ಟ್ರೀಯ ಯೋಗದ ಪ್ರಾಮುಖ್ಯತೆ ಹಾಗೂ ಈ ವರ್ಷದ ಧ್ಯೇಯವಾಕ್ಯವಾದ “ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ” ಎಂಬುದರ ಬಗ್ಗೆ ಮಾತನಾಡಿದರು.ಈ ವಿಶೇಷ ಯೋಗ ದಿನದ ನಿಮಿತ್ತ ವೃತ್ತಿಪರ ಯೋಗ ತರಬೇತುದಾರರಾದ ಸುರೇಶ್ ಆನಂದಿ, ಅಂತರಾಷ್ಟ್ರೀಯ ಯೋಗದ ತೀರ್ಪುಗಾರರು, ಎವರಿಡೇ ಯೋಗ ಗುರುಗಳು ಭಾಗವಹಿಸಿ ವಿವಿಧ ಯೋಗದ ವ್ಯಾಯಾಮಗಳನ್ನು ಶ್ಲೋಕದೊಂದಿಗೆ ಆರಂಭಿಸಿ, ಈ ಹಿಂದೆ ಖುಷಿ-ಮುನಿಗಳು ಮಾತ್ರ ಅಭ್ಯಾಸ ಮಾಡುತ್ತಿದ್ದ ಯೋಗವನ್ನು ಈಗ ಪ್ರತಿಯೊಬ್ಬರಲ್ಲೂ ಕಲಿಯುತ್ತಿದ್ದು, ವೈಜ್ಞಾನಿಕವಾಗಿ ಯೋಗದ ಮಹತ್ವ ಸಾಬೀತಾಗಿದೆ, ಯೋಗವು ಒತ್ತಡವನ್ನು ನಿವಾರಿಸಲು ಮತ್ತು ಮಾನಸಿಕ ಶಾಂತಿಯನ್ನು ನೀಡಲು ಅತ್ಯುತ್ತಮ ಔಷಧವಾಗಿದೆ. ದಿನನಿತ್ಯದ ಯೋಗ ಪ್ರದರ್ಶನವು ಹಲವು ಪ್ರಯೋಜನಗಳಿಗೆ ಸಾಕ್ಷಿಯಾಗುತ್ತದೆ. ನಮ್ಮ ಜ್ಞಾನವೃಧ್ದಿ, ಮತ್ತು ಕೆಲಸದ ಕಾರ್ಯಕ್ಕೆ ಉತ್ತಮ ಸಾಧನೆವಾಗುತ್ತದೆ ಎಂದು…
ವಿಜಯಪುರ: ವಿಜಯಪುರ ನಗರದ ನವಬಾಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಪ್ರಥಮ ವರ್ಷದ ವಿವಿಧ ಕೋರ್ಸ್ಗಳಿಗೆ ಪ್ರವೇಶ ಪಡೆಯುವ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆ ವಿಜಯಪುರ ಇವರಿಗೆ ಸಂಪರ್ಕಿಸಿ ಪ್ರೀಶಿಪ್ ಕಾರ್ಡನ್ನು ಪಡೆದು ಆನ್‌ಲೈನ್ ಮೂಲಕ ಯುಯುಸಿಎಂಎಸ್ ನಲ್ಲಿ ಭರ್ತಿ ಮಾಡಿ ದಿನಾಂಕ : ೦೬-೦೭-೨೦೨೪ರೊಳಗಾಗಿ ದಂಡರಹಿತವಾಗಿ ಪ್ರವೇಶ ಪಡೆದುಕೊಳ್ಳಲು ತಿಳಿಸಲಾಗಿದೆ.ಒಂದು ವೇಳೆ ಪ್ರೀಶಿಪ್ ಕಾರ್ಡನ್ನು ಪಡೆದುಕೊಳ್ಳದೇ ಇದ್ದಲ್ಲಿ ಕಾಲೇಜು ಶಿಕ್ಷಣ ಇಲಾಖೆ ಬೆಂಗಳೂರು ಮತ್ತು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಇವರ ಪ್ರವೇಶಾತಿ ನಿಯಮಾವಳಿಗಳಂತೆ ಪ್ರವೇಶ ಶುಲ್ಕವನ್ನು ಪಡೆದುಕೊಳ್ಳಲಾಗುವುದೆಂದು ಕಾಲೇಜಿನ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗುತ್ತಿಗೆದಾರರು & ಅಧಿಕಾರಿಗಳಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೂಚನೆ ವಿಜಯಪುರ: ಬಾಕಿ ಉಳಿದ ಕಾಮಗಾರಿ ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸಿ, ಫಲಾನುಭವಿಗಳ ವಾಸಕ್ಕೆ ಅನುಕೂಲ ಮಾಡಿಕೊಡಬೇಕೆಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಸಂಬಂಧಿಸಿದ ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ಸೂಚಿಸಿದರು.ನಗರ ಮತಕ್ಷೇತ್ರದ ವ್ಯಾಪ್ತಿಯ ನಮೋ ನಗರದಲ್ಲಿ ಪ್ರಧಾನಮಂತ್ರಿ ಅವಾಸ ಯೋಜನೆಯಡಿ ನಿರ್ಮಿಸಲಾಗುತ್ತಿರುವ ೧,೪೯೩ ಆಶ್ರಯ ಮನೆಗಳ ಕಾಮಗಾರಿಯನ್ನು ಸೋಮವಾರ ವೀಕ್ಷಿಸಿ, ಸಂಬಂಧಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ವಿಳಂಬ ಮಾಡದೆ, ವೇಗವಾಗಿ ಕಾಮಗಾರಿ ಮುಗಿಸಿ, ಬಡವರಿಗೆ ಅನುಕೂಲ ಮಾಡಿಕೊಡಬೇಕು ಎಂದರು.ಬರೀ ಬಾಯಿ ಮಾತಿನಲ್ಲಿ ಕಾಮಗಾರಿ ಪೂರ್ಣಗೊಳಿಸುವ ಭರವಸೆ ಕೊಟ್ಟರೆ ಸಾಲದು, ಹೇಳಿದಂತೆ ಕೆಲಸ ಮಾಡಬೇಕು ಎಂದು ಕಡಕ್ ಸೂಚನೆ ನೀಡಿದ ಅವರು, ಅಥಣಿ ಮುಖ್ಯ ರಸ್ತೆಯಿಂದ ನಮೋ ನಗರಕ್ಕೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿ, ವಿದ್ಯುತ್ ಸಂಪರ್ಕ, ಚರಂಡಿ ವ್ಯವಸ್ಥೆ, ನೀರಿನ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲು ಸಂಬAಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು.ಮುಂದಿನ ವಾರ…
ಸಿಂದಗಿ: ಸರಕಾರಿ ಶಾಲೆಗಳಲ್ಲಿ ಊಟ, ಸಮವಸ್ತ್ರ ಹಾಗೂ ಕಲಿಕಾ ಸಾಮಾಗ್ರಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಸರ್ಕಾರ ೬-೧೪ ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಉಚಿತ ಕಡ್ಡಾಯ ಶಿಕ್ಷಣ ಜಾರಿಗೆ ತಂದಿದೆ. ಅದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಸಂಸ್ಥೆಯ ನಿರ್ದೇಶಕ ಫಾ.ಸಂತೋಷ ಹೇಳಿದರು.ತಾಲೂಕಿನ ರಾಂಪುರ ಪಿ.ಎ ಸರಕಾರಿ ಹಿರಿಯ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಸಂಗಮ ಸಿಂದಗಿ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಶಾಲೆ ಕಡೆ ನಮ್ಮ ನಡೆ ಜಾಥ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಂಪುರ ಸರಕಾರಿ ಪ್ರೌಡ ಶಾಲೆಯಲ್ಲಿ ಮಕ್ಕಳು ತುಂಬಾ ಪ್ರಗತಿ ಕಾಣುತ್ತಿದ್ದಾರೆ. ಅದ್ದರಿಂದ ಸುತ್ತಮುತ್ತಲಿನ ಗ್ರಾಮಗಳ ಮಕ್ಕಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.ಜಾಥಾ ಕಾರ್ಯಕ್ರಮವನ್ನು ತಾಲೂಕಿನ ಬೆನಕೊಟಗಿ, ರಾಂಪೂರ ತಾಂಡಾ, ಬಬಲೇಶ್ವರ, ಬೆನಕೊಟಗಿ ತಾಂಡಾ, ರಾಂಪುರ ಪಿಎ, ಗಣಿಹಾರ, ಗಣಿಹಾರ ತಾಂಡಾ, ಓತಿಹಾಳ, ಬೂದಿಹಾಳ, ಬಂದಾಳ ಮತ್ತು ಚಿಕ್ಕಸಿಂದಗಿ ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಯಿತು. ಈ…
ದೇವರಹಿಪ್ಪರಗಿ: ಪಟ್ಟಣ, ದೇವೂರ ಗ್ರಾಮ ಸೇರಿದಂತೆ ತಾಲ್ಲೂಕಿನಾದ್ಯಂತ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮದ್ಯ ಹಾಗೂ ಪಾನ ಶಾಪ್‌ಗಳಲ್ಲಿ ಗಾಂಜಾ ಮಿಶ್ರೀತ ಮಾವಾ ಎಂಬ ಮಾದಕ ಪದಾರ್ಥ ಮಾರಾಟ ತಡೆದು ರೈತ ಮತ್ತು ಕೂಲಿ ಕಾರ್ಮಿಕ ಮಹಿಳೆಯರಿಗೆ ಬದುಕು ಕಲ್ಪಿಸುವಂತೆ ಆಗ್ರಹಿಸಿ ಮಹಿಳೆಯರು ತಹಶೀಲ್ದಾರ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿದರು.ಪಟ್ಟಣದ ತಹಶೀಲ್ದಾರ ಕಚೇರಿಗೆ ಸೋಮವಾರ ದೇವೂರ ಹಾಗೂ ವಿವಿಧ ಗ್ರಾಮಗಳ ಮಹಿಳೆಯರು ಆಗಮಿಸಿ ಅಕ್ರಮ ಮದ್ಯ, ಗಾಂಜಾ ಮಿಶ್ರೀತ ಮಾವಾ ಮಾರಾಟಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ರೇಣುಕಾ ಪಾಟೀಲ ಮಾತನಾಡಿ, ಪಟ್ಟಣದ ಹಲವು ಅಂಗಡಿ ಹಾಗೂ ದೇವೂರ ಗ್ರಾಮದ ಸಿದ್ಧಾರೂಢ ಕಿರಾಣಿ ಅಂಗಡಿ, ರೇಣುಕಾ ಬೋರಗಿ ಮನೆ, ಅನಸಾಬಾಯಿ ಪೂಜಾರಿ ಕಿರಾಣಿ ಅಂಗಡಿ ಹಾಗೂ ಮನೆ, ಮಹಾದೇವ ಪೂಜಾರಿ ಕಿರಾಣಿ ಅಂಗಡಿ ಹಾಗೂ ಮನೆ, ಅಪ್ಪಾಸಾಹೇಬ ಬಗಲಿ ಪಾನ್ ಅಂಗಡಿ, ಕಲಾವತಿ ಬಗಲಿ ಮನೆ, ಎಲ್.ಟಿನಂ ೧ ರ ನಿವಾಸಿ ಸಂತೋಷ ತುಕಾರಾಮ್ ರಾಠೋಡ ಇವರು ಅಕ್ರಮ ಮದ್ಯ…
ಬಸವನಬಾಗೇವಾಡಿ: ತಾಲೂಕಿನ ಉಪ್ಪಲದಿನ್ನಿ ಎಲ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಶಾಲಾ ಸಂಸತ್ ರಚನೆಯು ಚುನಾವಣೆಯ ಮಾದರಿಯಲ್ಲಿ ಜರುಗಿತು. ಚುನಾವಣೆಯಲ್ಲಿ ವೋಟಿಂಗ್ ಮಷಿನ್ ಆಪ್ ಬಳಕೆ ಮಾಡಲಾಯಿತು. ಶಾಲೆಯ ೩ ರಿಂದ ೮ ನೇ ತರಗತಿಯ ೯೦ ವಿದ್ಯಾರ್ಥಿಗಳು ಉತ್ಸಾಹದಿಂದ ಸರದಿಯ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ವಿದ್ಯಾರ್ಥಿಗಳು ದೇಶದ ಸಂಪತ್ತು. ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವ ಮಾದರಿ ಚುನಾವಣೆಯ ಪ್ರಕ್ರಿಯೆ ಪರಿಕಲ್ಪನೆಯನ್ನು ಶಿಕ್ಷಕರು ಮಾಡಿಕೊಟ್ಟಿದ್ದು ವಿಶೇಷ.ಈ ಚುನಾವಣೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶುಭಕೋರಿ, ಸೋತ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿ ಸೋಲೇ ಗೆಲುವಿನ ಸೋಪಾನ ಎಂಬ ಸಂದೇಶವನ್ನು ವಿದ್ಯಾರ್ಥಿಗಳಿಗೆ ಶಿಕ್ಷಕರು ತಿಳಿಸಿದರು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಖಾತೆಯನ್ನು ಹಂಚಿ ಪ್ರಮಾಣ ವಚನ ಬೋಧಿಸಲಾಯಿತು. ವಿದ್ಯಾರ್ಥಿಗಳು ತಾವು ಪಡೆದುಕೊಂಡ ಖಾತೆಗಳ ಮಾಹಿತಿ, ಅವರು ಶಾಲೆಯಲ್ಲಿ ಯಾವ ಯಾವ ಕರ್ತವ್ಯಗಳನ್ನು ನಿರ್ವಹಿಸಬೇಕೆಂಬುವದರ ಕುರಿತು ಶಿಕ್ಷಕ ಪ್ರಕಾಶ ಕೊಂಡಿಕೊಪ್ಪದವರ ವಿದ್ಯಾರ್ಥಿಗಳಿಗೆ ಹೇಳಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಮಾತೆ ಎಂ.ಎನ್.ನಾಯಕ, ಶಿಕ್ಷಕರಾದ ಯು.ಐ.ಭರಮಗೌಡ್ರು, ಆರ್.ಡಿ.ಪವಾರ, ಕೊಟ್ರೇಶ ಹೆಗ್ಡಾಳ ಇತರರು…
ಬಸವನಬಾಗೇವಾಡಿ: ಶಿಕ್ಷಕ ಬಾಂಧವರು ತಮ್ಮ ಪಾಠ-ಪ್ರವಚನದೊಂದಿಗೆ ವಿದ್ಯಾರ್ಥಿಗಳಲ್ಲಿ ರಾಷ್ಟ್ರಾಭಿಮಾನವನ್ನು ಮೂಡಿಸುವಂತಹ ಕಾರ್ಯಕ್ರಮಗಳನ್ನು ಆಯೋಜಿಸುವಂತಾಗಬೇಕೆಂದು ಭಾರತ ಸೇವಾದಳದ ವಲಯ ಸಂಘಟಕ ನಾಗೇಶ ಡೋಣೂರ ಹೇಳಿದರು.ಪಟ್ಟಣದ ಅಕ್ಕನಾಗಮ್ಮ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಭಾರತ ಸೇವಾದಳದ ಜಿಲ್ಲಾ ಹಾಗೂ ತಾಲೂಕು ಸಮಿತಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ಅಕ್ಕನಾಗಮ್ಮ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಭಾವೈಕ್ಯತೆ, ರಾಷ್ಟ್ರಧ್ವಜ, ರಾಷ್ಟ್ರಗೀತೆ ಕುರಿತಾದ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ರಾಷ್ಟ್ರಧ್ವಜದ ನೀತಿ ಸಂಹಿತೆ, ಧ್ವಜಾರೋಹಣ, ಧ್ವಜಾಅವರೋಹಣ, ಧ್ವಜದ ನಿಯಮಗಳು, ರಾಷ್ಟ್ರಗೀತೆಯ ಮಹತ್ವ, ಶಬ್ದಗಳ ಅರ್ಥ, ಹಾಡುವ ಸಮಯ, ರಾಗ-ಲಯ-ತಾಳ ಇವುಗಳ ಕುರಿತು ತಿಳಿಸಿಕೊಡುವ ಕಾರ್ಯವಾಗಬೇಕಿದೆ ಎಂದರು. ನಂತರ ಎರಡು ಗಂಟೆ ಕಾಲ ಶಿಕ್ಷಕರಿಗೆ, ವಿದ್ಯಾರ್ಥಿನಿಯರಿಗೆ ರಾಷ್ಟ್ರೀಯ ಭಾವೈಕ್ಯತೆ, ರಾಷ್ಟ್ರಧ್ವಜ, ರಾಷ್ಟ್ರಗೀತೆ ಕುರಿತು ಮಾಹಿತಿ, ತರಬೇತಿ ನೀಡಿದರು.ಕಾರ್ಯಾಗಾರದಲ್ಲಿ ಪ್ರೌಢಶಾಲೆಯ ಪ್ರಭಾರಿ ಮುಖ್ಯಗುರು ವೇಣುಗೋಪಾಲ ಅಪಸಂಗಿ, ಶಿಕ್ಷಕರಾದ ಮಾಲತಿ ಬಿದರಿ, ಎಂ.ವೈ.ಜಾಲವಾದಿ, ಸುರೇಶ ಬಾಗೇವಾಡಿ ಇತರರು ಇದ್ದರು. ಜಿ.ಎಂ.ಗಂಜಾಳ ಸ್ವಾಗತಿಸಿದರು. ಅಶೋಕ ಹಂಚಲಿ ನಿರೂಪಿಸಿದರು.…
