ವಿಜಯಪುರ: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ವಿಜಯಪುರ ನಗರದ ಗೋಲಗುಂಬಜ್ ಆವರಣದಲ್ಲಿ ಇತ್ತೀಚೆಗೆ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಧಾರವಾಡದ ಎಎಸ್‌ಎಇ ವಿಶೇಷ ನೊಡಲ್ ಅಧಿಕಾರಿ ರಾಕೇಶ್ ಸಿಂಧೆ, ಅವರು ಭಾಗವಹಿಸಿ, ಅಂತರರಾಷ್ಟ್ರೀಯ ಯೋಗದ ಪ್ರಾಮುಖ್ಯತೆ ಹಾಗೂ ಈ ವರ್ಷದ ಧ್ಯೇಯವಾಕ್ಯವಾದ “ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ” ಎಂಬುದರ ಬಗ್ಗೆ ಮಾತನಾಡಿದರು.
ಈ ವಿಶೇಷ ಯೋಗ ದಿನದ ನಿಮಿತ್ತ ವೃತ್ತಿಪರ ಯೋಗ ತರಬೇತುದಾರರಾದ ಸುರೇಶ್ ಆನಂದಿ, ಅಂತರಾಷ್ಟ್ರೀಯ ಯೋಗದ ತೀರ್ಪುಗಾರರು, ಎವರಿಡೇ ಯೋಗ ಗುರುಗಳು ಭಾಗವಹಿಸಿ ವಿವಿಧ ಯೋಗದ ವ್ಯಾಯಾಮಗಳನ್ನು ಶ್ಲೋಕದೊಂದಿಗೆ ಆರಂಭಿಸಿ, ಈ ಹಿಂದೆ ಖುಷಿ-ಮುನಿಗಳು ಮಾತ್ರ ಅಭ್ಯಾಸ ಮಾಡುತ್ತಿದ್ದ ಯೋಗವನ್ನು ಈಗ ಪ್ರತಿಯೊಬ್ಬರಲ್ಲೂ ಕಲಿಯುತ್ತಿದ್ದು, ವೈಜ್ಞಾನಿಕವಾಗಿ ಯೋಗದ ಮಹತ್ವ ಸಾಬೀತಾಗಿದೆ, ಯೋಗವು ಒತ್ತಡವನ್ನು ನಿವಾರಿಸಲು ಮತ್ತು ಮಾನಸಿಕ ಶಾಂತಿಯನ್ನು ನೀಡಲು ಅತ್ಯುತ್ತಮ ಔಷಧವಾಗಿದೆ. ದಿನನಿತ್ಯದ ಯೋಗ ಪ್ರದರ್ಶನವು ಹಲವು ಪ್ರಯೋಜನಗಳಿಗೆ ಸಾಕ್ಷಿಯಾಗುತ್ತದೆ. ನಮ್ಮ ಜ್ಞಾನವೃಧ್ದಿ, ಮತ್ತು ಕೆಲಸದ ಕಾರ್ಯಕ್ಕೆ ಉತ್ತಮ ಸಾಧನೆವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಕಾಸ ಪ್ರಾಢಶಾಲೆ, ಎ.ಎಸ್.ಪಾಟೀಲ್ ವಾಣಿಜ್ಯ, ಕಾಲೇಜು, ಹಾಗೂ ಸರ್ಕಾರಿ ಶಾಲೆ ನಂ. ೦೩, ವಿಜಯಪುರದ ಶಾಲಾ ವಿದ್ಯಾರ್ಥಿಗಳು, ದೈಹಿಕ ಶಿಕ್ಷಕರಾದ ಎಸ್.ಎಂ. ಬಿರಾದರ್, ಸಹ ಶಿಕ್ಷಕರರಾದ ಸಂಜೀವ್‌ಕುಮಾರ್, ವಿಜಯಕುಮಾರ್ ತಳವಾರ, ಮುಖ್ಯೋಪಾಧ್ಯಯರಾದ ಬಿ.ಡಿ. ಬೆಳೆಣೆನವರು, ಸೇರಿದಂತೆ ಸರ್ವೇಕ್ಷಣಾ ಇಲಾಖೆಯ ಎನ್. ಪ್ರಸನ್ನಕುಮಾರ್, ವಿಜಯಕುಮಾರ್, ಆರ್.ಎಂ.ಕರ್ಜಗಿ, ಮನೀಶ್‌ಕುಮಾರ್, ವಿಶ್ರೃತ್‌ಗೌಡ, ಹಾಗೂ ಇಲಾಖೆಯ ವಸ್ತುಸಂಗ್ರಹಾಲಯ, ಉಪವಲಯ, ಗಾರ್ಡನ್‌ನ ಎಲ್ಲಾ ಸಿಬ್ಬಂಧಿವರ್ಗ ಭಾಗವಹಿಸಿದರು. ಬಿರಾದಾರ ನಿರೂಪಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

