Subscribe to Updates
Get the latest creative news from FooBar about art, design and business.
Author: editor.udayarashmi@gmail.com
– ಇಲಾಹಿ ಇ. ಜಮಖಂಡಿ ಚಿಮ್ಮಡ: ರಾಜ್ಯ ಸರಕಾರ ಮಹಿಳೆಯರಿಗಾಗಿ ಜಾರಿಗೊಳಿಸಿರುವ ಗ್ರಹಲಕ್ಷ್ಮಿ ಯೋಜನೆಯಡಿಯಲ್ಲಿ ಪ್ರತೀ ತಿಂಗಳು ಖಾತೆಗೆ ಬರುತ್ತಿರುವ ಎರಡು ಸಾವಿರ ರೂ.ಗಳನ್ನು ಒಂದು ವರ್ಷಗಳ ಕಾಲ ಕೂಡಿಟ್ಟು ಗ್ರಾಮದ ವಿರಕ್ತಮಠಕ್ಕೆ ಅಕ್ಕಮಹಾದೇವಿಯವರ ಹೆಸರಿನಲ್ಲಿ ಬ್ರಹತ್ ರಥವನ್ನು ನಿರ್ಮಿಸಿ ಕೊಡಲು ಇಲ್ಲಿನ ಮಹಿಳೆಯರು ಮುಂದಾಗಿದ್ದಾರೆ.ಬಾಗಲಕೋಟ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಕ್ಕ ಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕುಲವಳ್ಳಿ ಸುಕುಮಾರ ಯೋಗಾಶ್ರಮದ ಓಂ ಗುರೂಜಿಯವರು ಗ್ರಾಮದಲ್ಲಿ ಅಕ್ಕ ಮಹಾದೇವಿ ರಥ ನಿರ್ಮಿಸುವಂತೆ ಪ್ರಸ್ಥಾಪಿಸಿದರು, ಇದಕ್ಕೆ ದನಿಗೂಡಿಸಿದ ಶೇಗುಣಶಿ ವಿರಕ್ತಮಠದ ಡಾ.ಮಹಾಂತ ಮಹಾಸ್ವಾಮಿಗಳು ಹಾಗೂ ಕೊಣ್ಣೂರ ಕಲ್ಯಾಣ ಹೊರಗಿನಮಠದ ಡಾ. ವಿಶ್ವಪ್ರಭು ಶಿವಾಚಾರ್ಯರು ಮಹಿಳೆಯರು ಮನಸ್ಸು ಮಾಡಿದರೆ ರಥ ನಿರ್ಮಾಣ ಕಷ್ಟವೇನಲ್ಲ. ಹೇಗೋ ಸರಕಾರ ಮನೆಯೊಡತಿಗೆ ಪ್ರತೀ ತಿಂಗಳು ಎರಡು ಸಾವಿರ ನೀಡುತ್ತಿದೆ. ಕೇವಲ ಒಂದು ವರ್ಷದ ಹಣ ಕೂಡಿಟ್ಟರೆ ಇಪ್ಪತ್ನಾಲ್ಕು ಸಾವಿರ ಆಗುತ್ತದೆ ಇಲ್ಲಿ ನೆರೆದಿರುವ ಮಹಿಳೆಯರಷ್ಟೆ ಮನಸ್ಸು ಮಾಡಿದರೂ ಒಂದೇ ವರ್ಷದಲ್ಲಿ ರಥ ನಿರ್ಮಾಣವಾಗುತ್ತದೆ, ಇದಕ್ಕೆ…
ಚಿಮ್ಮಡ: ಗ್ರಾಮದಲ್ಲಿ ಸಾರ್ವತ್ರಿಕ ಚುನಾವಣೆ ಪ್ರಯುಕ್ತ ಸ್ವೀಪ್ ಸಮೀತಿ ಹಾಗೂ ಸ್ಥಳೀಯ ಗ್ರಾಮ ಪಂಚಾಯತಿ ಸಹಯೋಗದೊಂದಿಗೆ ಮತದಾರರ ಜಾಗ್ರತಿ ಅಭಿಯಾನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.ಇಲ್ಲಿನ ಗ್ರಾಮ ಪಂಚಾಯತಿ ಕಛೇರಿಯಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪ್ರಜಾಪ್ರಭುತ್ವ ನಮ್ಮಿಂದ, ಮತದಾನ ಮಾಡೋಣ ಹೆಮ್ಮೆಯಿಂದ. ನಮ್ಮ ನಡೆ ಮತದಾನದ ಕಡೆ ಎಂಬ ಘೋಷಣೆಗಳನ್ನು ಫಲಕ ಹಾಗೂ ಧ್ವನಿವರ್ಧಕಗಳ ಮೂಲಕ ಘೋಷಣೆ ಕೂಗುತ್ತ ಮತದಾರರಲ್ಲಿ ಖಡ್ಡಾಯ ಮತ ಚಲಾವಣೆ ಮಾಡುವ ಕುರಿತು ಜಾಗ್ರತಿ ಮೂಡಿಸಲಾಯಿತು. ನಂತರ ಮಾನವ ಸರಪಳಿ ನಿರ್ಮಿಸಿ ಸಾರ್ವಜನಿಕರಿಗೆ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ ಶಿವಾನಂದ ಬಿರಾದರ ಅವರಿಂದ ಮತದಾರರ ಪ್ರತಿಜ್ಙಾವಿಧಿ ಭೋದಿಸಲಾಯಿತು.ನಂತರ ಗ್ರಾಮದ ಪಿಕೆಪಿಎಸ್ ಆವರಣದಲ್ಲಿ ನಡೆಯುವ ವಾರದ ಸಂತೆಯಲ್ಲಿ ಆಗಮಿಸಿದ ವ್ಯಾಪಾರಸ್ಥರೂ ಹಾಗೂ ಗ್ರಾಮಸ್ಥರಿಗೆ ಖಡ್ಡಾಯ ಮತದಾನ ಮಾಡುವ ಕುರಿತ ಜಾಗ್ರತಿಯ ಕರಪತ್ರ ವಿತರಿಸಿ ಮನವಿ ಮಾಡಲಾಯಿತು. ಕಾರ್ಯಕ್ರಮದಲ್ಲಿ ಗ್ರಾ.ಪಂ. ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸೇರಿದಂತೆ ಹಲವಾರು ಜನ ಗ್ರಾಮಸ್ಥರು ಈ ಅಭಿಯಾನದಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವಿಜಯಪುರ: ಮೋದಿ ಈ ಸಲ ಬಹುಮತ ಪಡೆಯುವುದಿಲ್ಲ. ಅವರ ದುರಾಡಳಿತ ಕೊನೆಗಾಣಿಸಬೇಕು ಎಂದು ಹಿರಿಯ ಕಮ್ಯುನಿಸ್ಟ್ ನಾಯಕ ಅಪ್ಪಾಸಾಹೇಬ ಯರನಾಳ ಹೇಳಿದರು.ಸಮೀಪದ ಶಿವಣಗಿ, ಹಡಗಲಿ ಹಾಗೂ ಆಹೇರಿ ಸೇರಿ ಅನೇಕ ತಾಂಡಾಗಳಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಅವರ ಪರವಾಗಿ ಮತಯಾಚಿಸಿ ಮಾತನಾಡಿದರು.ವಿದ್ಯಾವಂತರಾದ ಆಲಗೂರರನ್ನು ಬೆಂಬಲಿಸಿದರೆ ಜಿಲ್ಲೆಗೆ ಅನುಕೂಲವಾಗಲಿದೆ. ಲೋಕಸಭೆ ಚುನಾವಣೆ ವಾತಾವರಣ ಬದಲಾಗಿದೆ. ಸುಳ್ಳು ಹೇಳಿ, ಭಾವನೆ ಕೆರಳಿಸುವ ಮೂಲಕ ಮೋದಿ ಅಧಿಕಾರ ನಡೆಸಿದ್ದಾರೆ. ಇವರ ಹಿಟ್ಲರ್ ಶಾಹಿ ಆಡಳಿತ ಕೊನೆಗೊಳಿಸಬೇಕು. ಬಡವರು, ಕೂಲಿಕಾರರಿಗೆ ಒಳ್ಳೆಯದಾಗಬೇಕು. ಮೇಲ್ವರ್ಗದ ಜನರ ಸಂಪೂರ್ಣ ಬೆಂಬಲಿವಿದೆ ಎಂದರು.ಪಾಲಿಕೆ ಸದಸ್ಯ ರಾಜು ಜಾಧವ ಮಾತನಾಡಿ, ಸಂಸದ ಜಿಗಜಿಣಗಿಯವರು ಯಾವೊಂದು ಕೆಲಸ ಮಾಡಿಲ್ಲ. ಬೆಂಗಳೂರಿಗೆ ಒಂದು ಸರಿಯಾದ ರೈಲು ಮಾಡಲಿಲ್ಲ. ನಮ್ಮ ಲಂಬಾಣಿ ಸಮಾಜಕ್ಕೆ ಕನಿಷ್ಠ ಮರ್ಯಾದೆಯೂ ಕೊಡದೆ ನಮ್ಮ ಓಟೇ ಬೇಡ ಎಂದು ಹೇಳಿದ್ದಾರೆ. ಅವರಿಗೆ ಈ ಸಲ ಬುದ್ಧಿ ಕಲಿಸಬೇಕು ಎಂದರು.ಅಭ್ಯರ್ಥಿ ಪ್ರೊ.ರಾಜು ಆಲಗೂರ ಮಾತನಾಡಿ, ಸಮುದಾಯಗಳ ಬಗ್ಗೆ ಗೌರವವಿಲ್ಲದ…
“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ-ಗದಗ ನನ್ನ ತಂದೆಯನ್ನು ನೆನಪಿಸಿಕೊಂಡರೆ ಯಾವಾಗಲೂ ಕೈಯಲ್ಲಿ ಪುಸ್ತಕ ಹಿಡಿದುಕೊಂಡು ಓದುತ್ತಿರುವ ದೃಶ್ಯವೇ ಕಣ್ಣ ಮುಂದೆ ಬರುತ್ತದೆ. ನಾನು ನನ್ನ ಕೋಣೆಯಲ್ಲಿ ಓದುತ್ತಾ ಬರೆಯುತ್ತಾ ಕುಳಿತಾಗಲು ಕೂಡ ನನ್ನ ಪಕ್ಕದ ಮಂಚದಲ್ಲಿ ತುಸು ಓರೆಯಾಗಿ ಮಲಗಿ/ಕುಳಿತು ಪುಸ್ತಕವನ್ನು ಓದುತ್ತಿದ್ದರು ನನ್ನ ತಂದೆ. ಜೊತೆ ಜೊತೆಗೆ ಒಳ್ಳೆಯ ಪುಸ್ತಕಗಳನ್ನು ಲೇಖನಗಳನ್ನು ತೋರಿಸಿ ಓದಲು ಪ್ರೋತ್ಸಾಹಿಸುತ್ತಿದ್ದರು.ಅವರ ಈ ಹವ್ಯಾಸಗಳನ್ನು ನೋಡುತ್ತಲೇ ಬೆಳೆದ ನಮಗೆ ಪುಸ್ತಕ ಸಂಗಾತಿಯಾಗಿದ್ದು ಆಶ್ಚರ್ಯವೇನಲ್ಲ. ಬಾಗಲಕೋಟೆಯ ನನ್ನ ದೊಡ್ಡಮ್ಮನ ಮನೆಯಲ್ಲಿ 1900ರ ಆದಿಯಲ್ಲಿ ಪ್ರಕಟವಾದ ಬಾಲಮಿತ್ರ ಪತ್ರಿಕೆಗಳನ್ನು ಗಂಟೊಂದರಲ್ಲಿ ಕಟ್ಟಿ ಅಟ್ಟದ ಮೇಲೆ ಇಟ್ಟಿದ್ದರು. ಪ್ರತಿ ಬಾರಿ ಬೇಸಿಗೆ ರಜೆಗೆ ಹೋದಾಗ ಅತ್ಯಂತ ಮಜಬೂತಾದ ಕಟ್ಟಿಗೆಯ ಹಲಗೆಗಳನ್ನು ಜೋಡಿಸಿ ಮಾಡಿದ ಆ ಸುವಿಶಾಲ ಅಟ್ಟದಲ್ಲಿ ಕುಳಿತುಕೊಂಡು ನಾನು ಮತ್ತು ನನ್ನಣ್ಣ ಒಂದೊಂದೇ ಪುಸ್ತಕಗಳನ್ನು ತೆಗೆದು ಕಥೆ ಓದುತ್ತಿದ್ದರೆ ಊಟ ನಿದ್ರೆಗಳ ಪರಿವೆಯೂ ಇರುತ್ತಿರಲಿಲ್ಲ. ಊಟದ ಸಮಯವಾದರೂ ಕೆಳಗಿಳಿದು ಬರದ ನಮ್ಮನ್ನು ನೋಡಿ ಮನೆಯವರೆಲ್ಲ ಹುಸಿ…
ಬಿಎಲ್ಡಿಇ ಡೀಮ್ಡ್ ವಿವಿ ಸಮಕುಲಾಧಿಪತಿ ಡಾ. ವೈ.ಎಂ.ಜಯರಾಜ ಅಭಿಮತ ವಿಜಯಪುರ: ಭಾರತ ಬಲಿಷ್ಠವಾಗಿರಬೇಕಾದರೆ ಸಮುದಾಯ ಆರೋಗ್ಯ ಪಾತ್ರ ಬಹುಮುಖ್ಯವಾಗಿದೆ ಎಂದು ಬಿ. ಎಲ್. ಡಿ. ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ ಹೇಳಿದ್ದಾರೆ.ಬಿ. ಎಲ್. ಡಿ. ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ನರ್ಸಿಂಗ್ ಕಾಲೇಜು, ರಾಜೀವ ಗಾಂಧಿ ವಿಶ್ವವಿದ್ಯಾಲಯ, ಬಿ. ಎಲ್. ಡಿ. ಇ ಡೀಮ್ಡ್ ವಿಶ್ವವಿದ್ಯಾಲಯ, ಸೊಸೈಟಿ ಕಮ್ಯೂನಿಟಿ ನರ್ಸಿಂಗ್ ಆಫ್ ಇಂಡಿಯಾ ಸಹಯೋಗದಲ್ಲಿ ನರ್ಸಿಂಗ್ ಕಾಲೇಜಿನಲ್ಲಿ ಶುಕ್ರವಾರ ಪ್ರಾರಂಭವಾದ ಎರಡು ದಿನಗಳ ಆಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.ವಿಶ್ವದಲ್ಲಿ ರೋಗಗಳಿಗೆ ಪರಿಣಾಮಕಾರಿ ಮತ್ತು ಕಾಳಜಿಯಿಪೂರಕ ಚಿಕಿತ್ಸೆ ಸಿಗಲಿ ಎಂಬ ಉದ್ದೇಶದಿಂದ ದೇವರ ಶುಶ್ರೂಷಕರನ್ನು ಸೃಷ್ಠಿಸಿದ್ದಾರೆ. ಸಮುದಾಯದಲ್ಲಿ ಆರೋಗ್ಯ ಸುಧಾರಣೆಯಿಂದ ದೇಶದ ಆರೋಗ್ಯ ಸುಧಾರಣೆ ಸಾಧ್ಯವಿದೆ. ದೇಶದಲ್ಲಿ ಪ್ರತಿಯೊಬ್ಬರು ದೈಹಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ ಸದೃಢರಾದಾಗ ಮಾತ್ರ ಭಾರತ ಬಲಿಷ್ಠವಾಗಲಿದೆ. ಇದರಲ್ಲಿ ಸಮುದಾಯ ಆರೋಗ್ಯದ ಪಾತ್ರ ಬಹುಮುಖ್ಯವಾಗಿದೆ ಎಂದು ಅವರು ಹೇಳಿದರು.ಬೆಂಗಳೂರಿನ ರಾಜೀವ ಗಾಂಧಿ…
Udayarashmi kannada daily newspaper
ಲೇಖನ: – ಸಾಯಬಣ್ಣ ಮಾದರ (ಸಲಾದಹಳ್ಳಿ ) ಚುನಾವಣೆ ವ್ಯವಸ್ಥೆಯ ಬಗ್ಗೆ ನಮ್ಮ ಭಾರತ ಸಂವಿಧಾನ ರಚನಾ ಸಭೆಯಲ್ಲಿ ದೀರ್ಘವಾಗಿ ಚರ್ಚಿತವಾದ ವಿಷಯಗಳಲ್ಲೊಂದು ಚುನಾವಣಾ ಪ್ರಕ್ರಿಯೆ ಎಂಬುವುದು, ಭಾರತದ ಅತಿ ದೊಡ್ಡ ಸಯುಕ್ತ ಒಕ್ಕೂಟ ಇಲ್ಲಿ ನೂರಾರು ಭಾಷೆ, ವಿಭಿನ್ನ ಪ್ರಾದೇಶಿಕತೆ, ವಿವಿಧ ಧಾರ್ಮಿಕತೆ, , ಮುಂತಾದವು ವಿವಿಧತೆಯಲ್ಲಿ ಏಕತೆಯನ್ನು ಒಳಗೊಂಡಿದ್ದು, ದೇಶದಲ್ಲಿ ಚುನಾವಣೆ ನಡೆಸುವುದು ಒಂದು ಅತಿ ದೊಡ್ಡ ಸವಾಲಿನ ಕೆಲಸ ಎಂದು ಹೇಳಬಹುದು. ಅದಕ್ಕಾಗಿ ಸಂವಿಧಾನದಲ್ಲಿ ಚುನಾವಣೆ ಆಯೋಗಕ್ಕೆ ಪ್ರತ್ಯೇಕವಾದ ವಿಶೇಷ ಸ್ಥಾನವಿದೆ. ” ಡಾ ಬಿ ಆರ್ ಅಂಬೇಡ್ಕರ್ ಹೇಳಿದಂತೆ ಇನ್ನು ಮುಂದೆ ರಾಜ್ಯರ ಹೊಟ್ಟೆಯಿಂದ ರಾಜರು ಹುಟ್ಟುವುದಿಲ್ಲ ಮತದಾರರ ಮತ ಪೆಟ್ಟಿಗೆಯಿಂದ ಹುಟ್ಟುತ್ತಾನೆ” ಎಂದು ಹೇಳಿದ್ದಾರೆ. ಅದರಂತೆ ಭಾರತದಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆಗಳ ಆವರ್ತನ ಮತ್ತು ಅದಕ್ಕೆ ಸಂಬಂಧಿಸಿದ ವಿಚಾರಗಳು ದೇಶದಲ್ಲಿ ಮುನ್ನೆಲೆಗೆ ಇತ್ತೀಚಿಗೆ ಬಂದಿವೆ ವಿಶಾಲ ಅಖಂಡ ಭಾರತದಲ್ಲಿ ಒಂದು ದೇಶ ಒಂದು ಚುನಾವಣೆ ಪರಿಕಲ್ಪನೆ ಯಶಸ್ವಿ ಆಗುತ್ತದೆ ಎಂದು ನಾವು ನೋಡುವುದಾದರೆ…
ಮುದ್ದೇಬಿಹಾಳ: ತಾಲ್ಲೂಕಿನ ವನಕಿಹಾಳ ಗ್ರಾಮದಲ್ಲಿ ಶುಕ್ರವಾರ ಜರುಗಿದ ಮಹೇಂದ್ರಕರ ಮದುವೆ ಸಮಾರಂಭದಲ್ಲಿ ಗ್ರಾಮ ಪಂಚಾಯತಿ ಹಾಗೂ ತಾಲೂಕು ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ ಮೂಡಿಸಲಾಯಿತು.ವನಕಿಹಾಳ ಗ್ರಾಮದ ಹಿರೇಮುರಾಳ ಗ್ರಾಮ ಪಂಚಾಯತಿ ಸಿಬ್ಬಂದಿ ಹಣಮಂತ್ರಾಯ ಹಾಗೂ ರೇಣುಕಾ ಇವರ ಮದುವೆ ಕಾರ್ಯಕ್ರಮದಲ್ಲಿ ತಾಲೂಕು ಸ್ವೀಪ್ ಸಮಿತಿ ಸದಸ್ಯರು ಮತದಾರರ ಜಾಗೃತಿ ಕರಪತ್ರಗಳನ್ನು ನೀಡಿ ವಿಶಿಷ್ಟವಾಗಿ ಚಟುವಟಿಕೆ ಹಮ್ಮಿಕೊಂಡು ಮದುವೆಗೆ ನೆರೆದಿದ್ದ ಜನರಿಗೆ ನವ ವಧು-ವರರಿಗೆ ಮತದಾನದ ಜವಾಬ್ದಾರಿಗಳ ಕುರಿತು ತಿಳಿಸಿದರು.ಮದುವೆ ಸಮಾರಂಭದಲ್ಲಿ ೪೦೦ಕ್ಕೂ ಅಧಿಕ ಜನರು ಭಾಗವಹಿಸಿದ್ದರು.ಇದೇ ಸಂದರ್ಭದಲ್ಲಿ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಕೆ.ಎಚ್.ಕುಂಬಾರ ಅವರು “ಮತದಾನ ಪ್ರತಿಜ್ಞೆ ವಿಧಿ” ಬೋಧಿಸಿದರು. ತಾಲೂಕು ಪಂಚಾಯತಿ ನರೇಗಾ ಐಇಸಿ ಸಂಯೋಜಕ ಪರಮೇಶ ಹೊಸಮನಿ, ಗ್ರಾಮ ಪಂಚಾಯತಿ ಎಸ್‌ಡಿಎ ಎನ್.ಜಿ.ಬಿರಾದಾರ ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಜರಿದ್ದರು.
ವಿಜಯಪುರ: ಸುಳ್ಳು ಹೇಳುವಲ್ಲಿ ಮೋದಿಜಿ ಪ್ರವೀಣರು, ಹೆಚ್ಚು ಸುಳ್ಳು ಹೇಳಿದ ಪ್ರಧಾನಿ ಯಾರಾದರೂ ಇದ್ದರೆ ಅದು ಮಿಸ್ಟರ್ ನರೇಂದ್ರ ಮೋದಿ. ಸೋಲಿನ ಹತಾಶೆಯಿಂದ ಭಾವನಾತ್ಮಕ ವಿಚಾರ ಪ್ರಸ್ತಾಪಿಸುತ್ತಿದ್ದಾರೆ, ಹೊಸದಾಗಿ ಮುಸ್ಲಿಂರಿಗೆ ನಾವು ಮೀಸಲಾತಿ ನೀಡುತ್ತಿಲ್ಲ, ಈ ವಿಷಯವಾಗಿ ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.ನಗರದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಹಾವನೂರ ಆಯೋಗ, ಚಿನ್ನಪ್ಪ ರೆಡ್ಡಿ ಆಯೋಗ ಅಲ್ಪಸಂಖ್ಯಾತರಿಗೆ ಮೀಸಲಾತಿ ಕೊಡಲು ಶಿಫಾರಸ್ಸು ಮಾಡಿದೆ, ಹೊಸದಾಗಿ ಯಾವ ರೀತಿಯ ಮೀಸಲಾತಿಯನ್ನು ಅಲ್ಪಸಂಖ್ಯಾತರಿಗೆ ರಾಜ್ಯ ಸರ್ಕಾರ ನೀಡಿಲ್ಲ ಎಂದರು.ಈ ಚುನಾವಣೆಯಲ್ಲಿ ಸೋಲುವುದು ಶತಸಿದ್ಧ ಎಂದು ಬಿಜೆಪಿ ನಾಯಕರಿಗೂ ಗೊತ್ತಾಗಿದೆ, ಸೋಲಿನ ಭೀತಿಯಿಂದಾಗಿ ೪೦೦ ಸೀಟು ಜಪ ಮಾಡುತ್ತಿದೆ, ಭಾರತೀಯ ಸಂವಿಧಾನ ಬದಲಾವಣೆ ಮಾಡುವಗೋಸ್ಕರವೇ ಈ ಬಿಜೆಪಿ ಈ ಜಪ ಮಾಡುತ್ತಿದೆ, ಭಾರತೀಯ ಸಂವಿಧಾನಕ್ಕೆ ವಿರುದ್ಧವಾಗಿ ಹಾಗೂ ಸಾಮಾಜಿಕ ನ್ಯಾಯದ ವಿರುದ್ಧವಾಗಿ ಇರುವವರು ಬಿಜೆಪಿ. ಅವರು ಯಾವತ್ತೂ ಸಂವಿಧಾನದ ಪರವಾಗಿ ಇಲ್ಲ ಎಂದು ಸಿದ್ಧರಾಮಯ್ಯ ಕಿಡಿಕಾರಿದರು.ಪ್ರಧಾನಿ…
ದೇಶದಲ್ಲಿ ಅವೈಜ್ಞಾನಿಕ ಜಿಎಸ್‌ಟಿ ಜಾರಿ | ಕೇಂದ್ರ ಸರ್ಕಾರದಿಂದ ಬಡವರಿಗೆ ಏನೂ ದೊರಕಿಲ್ಲ | ರಾಹುಲ್ ಗಾಂಧಿ ವಾಗ್ದಾಳಿ ವಿಜಯಪುರ: ಜಿಎಸ್‌ಟಿ ಮರುಪಾವತಿ ವಿಷಯವಾಗಿ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಅಸಮಾಧಾನ ಹೊರಹಾಕಿದ ಎಐಸಿಸಿ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರು ಇಂಡಿಯಾ ಒಕ್ಕೂಟದ ಅಧಿಕಾರಕ್ಕೆ ಬಂದರೆ ಈ ಅನ್ಯಾಯ ಸರಿಪಡಿಸುವುದಾಗಿ ಅಭಯ ನೀಡಿದರು.ನಗರದ ಸೊಲ್ಲಾಪೂರ ರಸ್ತೆಯಲ್ಲಿರುವ ಎಎಸ್‌ಪಿ ವಾಣಿಜ್ಯ ಮಹಾವಿದ್ಯಾಲಯದ ಮೈದಾನದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಅವೈಜ್ಞಾನಿಕ ಜಿಎಸ್‌ಟಿ ಜಾರಿಗೊಳಿಸಲಾಗಿದೆ, ಕರ್ನಾಟಕ ಸರ್ಕಾರ ಜಿಎಸ್‌ಟಿ ರೂಪದಲ್ಲಿ ೧೦೦ ರೂ. ಕೊಟ್ಟರೆ ನಿಮಗೆ ೧೩ ರೂ. ಮಾತ್ರ ಕೇಂದ್ರ ಸರ್ಕಾರ ವಾಪಸ್ಸು ನೀಡುತ್ತಿದೆ, ಆ ಮೂಲಕ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದ್ದಾರೆ, ಈ ಅನ್ಯಾಯವನ್ನು ಸರಿಪಡಿಸಲು ನಾವು ಬದ್ಧ ಎಂದು ರಾಹುಲ್ ಗಾಂಧಿ ಘೋಷಿಸಿದರು.ಭಾರತ ಇತಿಹಾಸದಲ್ಲಿ ಈಗ ನಡೆಯುತ್ತಿರುವ ಚುನಾವಣೆ ಸಾಮಾನ್ಯವಾದ ಚುನಾವಣೆಯಲ್ಲ, ಒಂದು ಪಕ್ಷ, ಒಂದು ವ್ಯಕ್ತಿ…
