Author: editor.udayarashmi@gmail.com

ವಿಜಯಪುರ: ಜಿಲ್ಲೆಯ ಎಲ್ಲ ಶೈಕ್ಷಣಿಕ ವಲಯಗಳಲ್ಲಿ ಆರೋಗ್ಯ ಶಿಬಿರ ಹಮ್ಮಿಕೊಂಡು ಆಯ್ಕೆ ಮಾಡಿಕೊಂಡ ೧೦೦ ಶ್ರವಣ ನ್ಯೂನ್ಯತೆ ಹೊಂದಿರುವ ಸಿಡಬ್ಲೂಎಸ್‌ಎನ್ ಮಕ್ಕಳಿಗೆ ಬೆಂಗಳೂರಿನ ‘ವಿ ಹಿಯರ್’ ಸಂಸ್ಥೆ ಸಹಯೋಗದಲ್ಲಿ ಸಾಧನ-ಸಲಕರಣೆ ವಿತರಣಾ ಶಿಬಿರ ವಿಜಯಪುರ ನಗರದ ಗಾಂಧಿ ಚೌಕ್ ಹತ್ತಿರವಿರುವ ಸರಕಾರಿ ಬಾಲಕಿಯರ ಪ್ರೌಢ ಶಾಲೆ ಶಾರದಾ ಭವನದಲ್ಲಿ ಜುಲೈ ೧೨ ರಂದು ಬೆಳಿಗ್ಗೆ ೯-೩೦ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಜಿಲ್ಲೆಯ ಸಿಂದಗಿ ತಾಲೂಕಿನ ಸಿಂದಗಿ ಪಟ್ಟಣದ ರಿಸನಂ.೭೫೧ರ ಪೈಕಿ ೧-೦೦ ಎಕರೆ ಜಮೀನಿನಲ್ಲಿ ಶೀಥಲ ಗೃಹ ನಿರ್ಮಾಣ ಮಾಡಲು ಕಾರ್ಯದರ್ಶಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಿಂದಗಿ ಇವರಿಗೆ ಜಮೀನು ಮಂಜೂರಿಸಲು ಉದ್ಧೇಶಿಸಿದೆ.ಈ ಕುರಿತು ಆಕ್ಷೇಪಣೆಗಳಿದ್ದಲ್ಲಿ ಈ ಅಧಿಸೂಚನೆಯ ಮೂವತ್ತು ದಿನಗಳೊಳಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Read More

ವಿಜಯಪುರ: ಜಿಲ್ಲೆಯ ತಿಕೋಟ ತಾಲೂಕಿನ ಹೊನವಾಡ ಗ್ರಾಮದಲ್ಲಿ, ತಾಳಿಕೋಟೆ ತಾಲೂಕಿನ ಕಲಕೇರಿ ಹಾಗೂ ತುರಕನಗೇರಿ ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜುಲೈ ೧೭ರವರೆಗೆ ಮೊಹರಂ ಹಬ್ಬ ಆಚರಣೆ ನಿಷೇಧಿಸಿ ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಆದೇಶ ಹೊರಡಿಸಿದ್ದಾರೆ.

Read More

ಜು.೧೩ರಂದು ರಾಷ್ಟ್ರೀಯ ಲೋಕ್ ಅದಾಲತ್ | ಜಿಲ್ಲಾ ನ್ಯಾಯಾಧೀಶ ಶಿವಾಜಿ ನಲವಡೆ ಸುದ್ದಿಗೋಷ್ಠಿ ವಿಜಯಪುರ: ಜಿಲ್ಲೆಯಾದ್ಯಂತ ಇರುವ ಎಲ್ಲ ಅಧೀನ ನ್ಯಾಯಾಲಯಗಳಲ್ಲಿ ಜುಲೈ ೧೩ ರಂದು ರಾಷ್ಟ್ರೀಯ ಲೋಕ್ ಅದಾಲತ್ ಆಯೋಜಿಸಲಾಗಿದ್ದು, ಈ ಅದಾಲತ್‌ನಲ್ಲಿ ಕಕ್ಷಿದಾರರು ಭಾಗವಹಿಸಿ ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಕ್ಕೆ ಅವಕಾಶವಿರುವುದರಿಂದ ಈ ಅದಾಲತ್ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಶಿವಾಜಿ ಅನಂತ ನಲವಡೆ ಅವರು ತಿಳಿಸಿದರು.ಬುಧವಾರ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಎಡಿಆರ್ ಕಟ್ಟಡದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೌರವಾನ್ವಿತ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ, ಎಲ್ಲ ವರ್ಗದ ಕಕ್ಷಿದಾರರಿಗೆ ಅನುಕೂಲವಾಗುವ ದೃಷ್ಟಿಯಿಂದ ಜಿಲ್ಲಾ ಕೇಂದ್ರ ಹಾಗೂ ಜಿಲ್ಲೆಯ ಎಲ್ಲ ತಾಲೂಕಾ ನ್ಯಾಯಾಲಯಗಳಲ್ಲಿ ಜುಲೈ ೧೩ ರಂದು ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ಲೋಕ್ ಅದಾಲತ್ ಕಾರ್ಯಕ್ರಮದಲ್ಲಿ ರಾಜಿಗೆ ಒಳಪಡಬಹುದಾದ ವ್ಯಾಜ್ಯ…

Read More

“ಜಯ್ ನುಡಿ” (ವ್ಯಕ್ತಿತ್ವ ವಿಕಸನ ಮಾಲಿಕೆ) – ಜಯಶ್ರೀ.ಜೆ.ಅಬ್ಬಿಗೇರಿ,ಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ, ಮೊ:೯೪೪೯೨೩೪೧೪೨ ದೇವರು ನಮಗೆ ನೂರ್ಕಾಲ ಸೊಗಸಾದ ಜೀವನ ಕರುಣಿಸಿದ್ದಾನೆ. ಸಂತಸದ ಜೀವನಕ್ಕೆ ಬೇಕಾದುದ್ದೆಲ್ಲವನ್ನೂ ನಾವು ಜಗಕೆ ಕಾಲಿಡುವ ಮುನ್ನವೇ ನಮಗಾಗಿ ಸೃಷ್ಟಿಸಿದ್ದಾನೆ. ಹಸಿರುಟ್ಟ ಭೂರಮೆ, ಜಗವ ಬೆಳಗುವ ರವಿಚಂದ್ರರು, ಸುಳಿದು ಸೂಸುವ ತಂಗಾಳಿ, ಉಲಿವ ನಲಿವ ಹಕ್ಕಿ ಪಕ್ಕಿ ಒಂದೇ ಎರಡೇ. ಎರಡು ಕಣ್ಣು ಸಾಲದು ನಿಸರ್ಗದ ಸೊಬಗನ್ನು ತುಂಬಿಸಿಕೊಳ್ಳಲು. ಪ್ರಾಕೃತಿಕ ಸೌಂದರ್ಯವನ್ನು ಸವಿಯುವ ಅನುಭವಿಸುವ ಆನಂದಿಸುವ ಅವಕಾಶವು ನಮಗಿದೆ. ಒಳ್ಳೆಯದನ್ನು ಮಾಡಿ,ನೋಡಿ ಹೇಳಿ, ಕೇಳಿ ದಿವ್ಯ ಭವ್ಯ ಜೀವನ ಅನುಭವಿಸಲು ಭಗವಂತ ಅನುವು ಮಾಡಿಕೊಟ್ಟಿದ್ದಾನೆ. ಅಂದರೆ ಸಾತ್ವಿಕ ಜೀವನ ಸಾಗಿಸುವುದಕ್ಕೆ ಈ ಜಗದಲ್ಲಿ ಯಾವುದಕ್ಕೂ ಕಡಿಮೆಯಿಲ್ಲ. ಆದರೆ ನಾವು ಒಳ್ಳೆಯದನ್ನು ಮಾಡದೆ, ನೋಡದೆ ಕುರುಡರಂತೆ ಕೆಟ್ಟದ್ದರ ಹಿಂದೆ ಓಡುತ್ತಿದ್ದೇವೆ. ಅಮೂಲ್ಯವಾದ ಬದುಕಿನ ನಿಜ ಸಿರಿ ಸಂಪದದ ಬೆಲೆ ತಿಳಿಯದೆ ಒದ್ದಾಡುತ್ತಿದ್ದೇವೆ.ತನು, ಮನ, ನಿಸ್ಸೀಮವಾದ ಬುದ್ಧಿಮತ್ತೆಯ ಸಾಮರ್ಥ್ಯ, ಭಾವದ ಬೆಲೆ ಗುರುತಿಸದೆ ಜಗದ ಎಲ್ಲ ಆಸ್ತಿಯನ್ನು ನಮ್ಮದಾಗಿಸಿಕೊಳ್ಳುವ ಹುಚ್ಚು…

Read More

“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ ಆ ಕುಟುಂಬ ತನ್ನ ಮನೆಯ ಯಜಮಾನನನ್ನು ಕಳೆದುಕೊಂಡಿತ್ತು, ಮತ್ತೊಂದು ಕುಟುಂಬ ತನ್ನ ಮನೆಯ ಪ್ರೀತಿಯ ಮಗನನ್ನು… ಒಬ್ಬ ಹೆಣ್ಣು ಮಗಳು ತಾನು ಮದುವೆಯಾದ ಪತಿಯನ್ನು ಕಳೆದುಕೊಂಡರೆ ಆ ಮಕ್ಕಳು ತಮ್ಮ ತಂದೆಯನ್ನು ಕಳೆದುಕೊಂಡಿದ್ದರು. ಅದು ಸುಮಾರು ನಾಲ್ಕು ವರ್ಷಗಳ ಹಿಂದಿನ ದುರ್ಘಟನೆ. ಪೂರ್ವ ಮಿಜೋರಾಂನ ಗ್ಯಾಲ್ವನ್ ಕಣಿವೆಯಲ್ಲಿ ದುಷ್ಟ ಕೆಂಪು ಚೀನಿಯರ ಬರ್ಬರ ಕೃತ್ಯವು ಸುಮಾರು 20 ಜನ ಭಾರತೀಯ ಮಿಲಿಟರಿ ಪಡೆಯ ಯೋಧರನ್ನು ಬಲಿ ತೆಗೆದುಕೊಂಡ ಹೃದಯವಿದ್ರಾವಕ ಘಟನೆ ದೇಶದ ಜನರ ರಕ್ತವನ್ನು ಕುದಿಯುವಂತೆ ಮಾಡಿತ್ತು. ಜೂನ್ 15 2020ರ ಮಧ್ಯರಾತ್ರಿ 4300 ಮೀಟರ್ ಎತ್ತರದ (14000ಫೀಟ್ ) ಎತ್ತರದಲ್ಲಿರುವ ಆಕ್ಸಿಜನ್ ಕೊರತೆ ಇರುವ, ಶೂನ್ಯ ತಾಪಮಾನವಿರುವ, ಕಡಿದಾದ ಕಲ್ಲು ಮತ್ತು ಹಿಮದ ಬೆಟ್ಟಗಳ, ವಿಚಿತ್ರ ತಿರುವುಗಳನ್ನು ಹೊಂದಿರುವ ಪರ್ವತ ಶ್ರೇಣಿಯ ಮಗ್ಗುಲಲ್ಲಿಯೇ ರಭಸವಾಗಿ ಹರಿಯುವ ಗ್ಯಾಲ್ವನ್ ನದಿಯ ಆಳವಾದ ಕಣಿವೆಯಲ್ಲಿ ಭಾರತೀಯ ಮಿಲಿಟರಿ ಪಡೆಯ ಯೋಧರು ಕರ್ತವ್ಯ ನಿರ್ವಹಿಸುತ್ತಿದ್ದ ಸಮಯವದು.…

Read More

ಧಾರವಾಡ: ಉತ್ತರದ ಸಂಗೀತವನ್ನು ದಕ್ಷಿಣಕ್ಕೆ ತಂದ ಪ್ರಮುಖರಲ್ಲಿ ಒಬ್ಬರಾದ ಮತ್ತು ತಮ್ಮ ಶಿಷ್ಯ ಪರಂಪರೆಯ ಮೂಲಕ ಧಾರವಾಡಕ್ಕೆ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ತವರು ಎನ್ನುವ ಖ್ಯಾತಿ ತಂದುಕೊಡುವಲ್ಲಿ ತಮ್ಮದೆಯಾದ ಕೊಡುಗೆಯನ್ನು ನೀಡಿದ, ಗಾನಯೋಗಿ ಪಂಚಾಕ್ಷರ ಗವಾಯಿಗಳವರ ಪುಣ್ಯಸ್ಮರಣೆ ‘ಗುರು ಗುಣಗಾನ’ ಕವಿಗೋಷ್ಠಿ, ಕಾವ್ಯಗಾಯನ ಮತ್ತು ನೃತ್ಯ ನಮನವನ್ನು ಒಳಗೊಂಡ ಸಮಾರಂಭವು ದಿನಾಂಕ: ೧೪ ಜುಲೈ ೨೦೨೪ ಸಂಜೆ ೪-೦೦ ಗಂಟೆಗೆ ಧಾರವಾಡದ ರಂಗಾಯಣದಲ್ಲಿ ಗದುಗಿನ ಡಾ. ಪಂ.ಪುಟ್ಟರಾಜ ಸೇವಾ ಸಮಿತಿ ಆಯೋಜಿಸಿದೆ.ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಸಂಸ್ಥಾಪಕ ಚನ್ನವೀರಸ್ವಾಮಿ ಹಿರೇಮಠ (ಕಡಣಿ) ಗದಗ ಇವರು ಅಧ್ಯಕ್ಷತೆ ವಹಿಸಿಕೊಳ್ಳುವರು ಶ್ರೀಮತಿ ಮೃಣಾಲ ಜೋಶಿ ಅಧ್ಯಕ್ಷರು, ಸಂಸ್ಕೃತಿ ಶಿಶು ಮಂದಿರ, ಧಾರವಾಡ, ಪ್ರಕಾಶ ಬಾಳಿಕಾಯಿ ವ್ಯವಸ್ಥಾಪಕರು, ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಧಾರವಾಡ ಡಾ. ಎ. ಎಲ್ ದೇಸಾಯಿ, ಸಹಾಯಕ ಉಪನ್ಯಾಸಕರು ಕ. ವಿ. ವಿ. ಲಲಿತಕಲಾ ಹಾಗೂ ಸಂಗೀತ ಮಹಾವಿದ್ಯಾಲಯ, ಧಾರವಾಡ ಅತಿಥಿಗಳಾಗಿ ಭಾಗವಹಿಸುವರು. ಡಾ. ಪಂ. ಪು. ಸೇವಾ ಸಮಿತಿಯ…

Read More

ಸಿಂದಗಿ: ತಾಲೂಕಿನಲ್ಲಿ ಅನುಷ್ಠಾನಗೊಂಡ ಜೆಜೆಎಮ್ ಕಾಮಗಾರಿಗಳು ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿವೆ. ಈ ಕಾಮಗಾರಿಗಳ ಗುತ್ತಿಗೆದಾರರಿಗೆ ಕಳಪೆ ಮಾಡಲು ಸಹಕರಿಸಿದ ಅಧಿಕಾರಿಗಳನ್ನು ಕೂಡಲೆ ಅಮಾನತು ಮಾಡಬೇಕಲ್ಲದೇ, ಈ ಕಾಮಗಾರಿಯ ಬಿಲ್ಲನ್ನು ತಡೆಹಿಡಿಯಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಬುಧವಾರ ಪಟ್ಟಣದ ಅಂಬೇಡ್ಕರ ವೃತ್ತದಲ್ಲಿ ಪ್ರತಿಭಟಿಸಿ ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭ ಡಿಎಸ್ಸೆಸ್ ರಾಜ್ಯ ಸಂಘಟನಾ ಸಂಚಾಲಕ ರಮೇಶ ಆಸಂಗಿ, ಬೆಳಗಾಂವ ವಿಭಾಗದ ಸಂಚಾಲಕ ವಿನಾಯಕ ಗುಣಸಾಗರ, ಜಿಲ್ಲಾ ಸಂಚಾಲಕ ಅಶೋಕ ಛಲವಾದಿ ಮತ್ತು ಶರಣು ಸಿಂಧೆ ಮಾತನಾಡಿ, ಸರ್ಕಾರ ಗ್ರಾಮೀಣ ಪ್ರದೇಶದ ಜನತೆಗೆ ಆರೋಗ್ಯ ದೃಷ್ಠಿಯಿಂದ ಜಲ ಜೀವನ ಮಿಷನ್ ದ ಮೂಲಕ ಶುದ್ದ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಆದರೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಾಲಯದಿಂದ ಸಿಂದಗಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳಾದ ಕೆರುಟಗಿ, ತಿಳಗೂಳ, ಆಲಗೂರ, ಬೆಕಿನಾಳ, ಬೂದಿಹಾಳ, ವಣಕಿಹಾಳ, ಕಲಕೇರಿ, ಕಲಕೇರಿ ಎಲ್.ಟಿ, ರಾಂಫುರ, ರಾಂಪೂರ ಎಲ್.ಟಿ,…

Read More

ಅಧಿಕಾರಿಗಳಿಂದ ಹಣ ದುರ್ಬಳಕೆಯಾಗಿದ್ದು ನಿಜ | ಪ್ರಕರಣದಲ್ಲಿ ನಾನು ಮಧ್ಯಪ್ರವೇಶಿಸೊಲ್ಲ | ಡಿಸಿಎಂ ಡಿ.ಕೆ ಶಿವಕುಮಾರ್ ಸ್ಪಷ್ಠನೆ ಬೆಂಗಳೂರು: ಗಿರಿಜನ ಕಲ್ಯಾಣ ಮಂಡಳಿಯಲ್ಲಿ ಹಣ ದುರುಪಯೋಗ ಮತ್ತು ದುರ್ಬಳಕೆ ನಡೆದಿರುವುದನ್ನು ಡಿಸಿಎಂ ಡಿಕೆ ಶಿವಕುಮಾರ್ ಒಪ್ಪಿಕೊಂಡಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ಆದಿವಾಸಿ ಕಲ್ಯಾಣ ಮಂಡಳಿಯಲ್ಲಿ ಅಧಿಕಾರಿಗಳಿಂದ ಹಣ ದುರುಪಯೋಗ ಆಗಿರುವುದು ನಿಜ. ಈ ಸಂಬಂಧ ನಮ್ಮ ಸಚಿವರ ಜತೆ ಮಾತನಾಡಿದ್ದೇವೆ. ಆದರೆ ಅವರು ತಾವು ಯಾವುದೇ ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಸಚಿವರಾಗಿ ತನಿಖೆ ಎದುರಿಸುವುದು ಒಳ್ಳೆಯದಲ್ಲ ಎಂದು ಸ್ವಯಂ ಪ್ರೇರಿತರಾಗಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅಧಿಕಾರಿಗಳ ಮುಂದೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ಪ್ರಕರಣದಲ್ಲಿ ನಾನು ಮಧ್ಯಪ್ರವೇಶಿಸುವುದಿಲ್ಲ, ಅವರು ತನಿಖೆ ನಡೆಸಲಿ ಎಂದು ಶಿವಕುಮಾರ್ ತಿಳಿಸಿದ್ದಾರೆ.ಹಗರಣದಲ್ಲಿ ನಮ್ಮ ಸಚಿವರು ಮತ್ತು ಶಾಸಕರ ಕೈವಾಡವಿಲ್ಲ ಆದರೆ ಇದರಲ್ಲಿ ಬೇರೆಯವರು ಶಾಮೀಲಾಗಿದ್ದಾರೆಯ. ನಾವು ಮುಕ್ತ ಮತ್ತು ನ್ಯಾಯಸಮ್ಮತ ತನಿಖೆ ನಡೆಸುತ್ತೇವೆ ಎಂದು ಶಿವಕುಮಾರ್ ಹೇಳಿದ್ದಾರೆ.ಏತನ್ಮಧ್ಯೆ, ಮಂಡಳಿಯ…

Read More

ವಿಜಯಪುರ: ಬಿಜೆಪಿಯ ಹಿರಿಯ ನಾಯಕ, ಏಳು ಬಾರಿ ಸಂಸದರಾಗಿರುವ ರಮೇಶ್ ಜಿಗಜಿಣಗಿ ಅವರನ್ನು ಮೋದಿ ತನ್ನ ಕ್ಯಾಬಿನೆಟ್‌ಗೆ ಸೇರಿಸಿಕೊಳ್ಳದಿರುವ ಬಗ್ಗೆ ಮಾಧ್ಯಮಗಳ ಮುಂದೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಬಿಜೆಪಿ ಹೈಕಮಾಂಡ್‌ ಮೇಲೆ ಬೇಸರಗೊಂಡಿರುವ ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರದ ಸಂಸದ, ರಾಜ್ಯದ ಹಿರಿಯ ದಲಿತ ರಾಜಕಾರಣಿ ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು.“ನನಗೆ ಕ್ಯಾಬಿನೆಟ್ ಹುದ್ದೆ ಬೇಕಾಗಿಲ್ಲ; ನನಗೆ ಜನ ಬೇಕು. ನಾನು ಮತ್ತೆ (ಕ್ಷೇತ್ರಕ್ಕೆ) ಹಿಂತಿರುಗಿದಾಗ, ಅನೇಕ ಜನರು ನನಗೆ ಬೈದರು. ಈ ಹಿಂದೆ ಹಲವರು ಬಿಜೆಪಿ ದಲಿತ ವಿರೋಧಿ ಎಂದು ನನಗೆ ಎಚ್ಚರಿಕೆ ನೀಡಿದ್ದರು” ಎಂದು ಅವರು ಹೇಳಿದರು.“ನಾನು ಕೇಂದ್ರದಲ್ಲಿ ಸಚಿವನಾಗಬೇಕು ಎಂಬ ಬಗ್ಗೆ ಜನರಿಂದ ಒತ್ತಡವಿದೆ. ಇದು ನ್ಯಾಯವೋ ಅನ್ಯಾಯವೋ? ಇಡೀ ದಕ್ಷಿಣ ಭಾರತದಲ್ಲಿ, ಏಳು ಬಾರಿ (ಸಂಸತ್ತಿಗೆ) ಆಯ್ಕೆಯಾದ ಏಕೈಕ ದಲಿತ ಸಂಸದ ನಾನು. ಮೇಲ್ವರ್ಗದ ಎಲ್ಲರೂ ಕ್ಯಾಬಿನೆಟ್ ಮಂತ್ರಿಗಳಾದರು, ದಲಿತರು ಬಿಜೆಪಿಗೆ ಬೆಂಬಲ ನೀಡಿಲ್ಲವೇ? ನನಗೆ ತೀವ್ರ ನೋವಾಗಿದೆ” ಎಂದು ಜಿಗಜಿಣಗಿ ಅವರು ಪಕ್ಷದ ಹೈಕಮಾಂಡ್‌ಗೆ ಸಚಿವ…

Read More