Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಸುಂದರಂ ಹೋಮ್ ಫೈನಾನ್ಸಿಂದ ಮಕ್ಕಳಿಗೆ ‘ನಿಮ್ಮ ಕನಸಿನ ಮನೆ’ ಚಿತ್ರ ಬಿಡಿಸುವ ಸ್ಪರ್ಧೆ ವಿಜಯಪುರ: ಮಕ್ಕಳ ಕಲಿಕೆಯ ಜೀವಸೆಲೆಯೇ ಚಿತ್ರಕಲೆ. ಮನಸ್ಸನ್ನು ಉಲ್ಲಾಸಗೊಳಿಸುವ ಚಿತ್ರಗಳ ಜತೆ ಮಕ್ಕಳು ಅನುಸಂಧಿಸುತ್ತ ಅಂತರ್ಮುಖಿಯಾಗಿ ಓದು-ಬರಹದತ್ತ ಆಸಕ್ತಿ ಬೆಳೆಸಿಕೊಳ್ಳುತ್ತಾರೆ. ಹೀಗಾಗಿ ಮಕ್ಕಳಲ್ಲಿನ ಕಲೆಯನ್ನು ಪ್ರೋತ್ಸಾಹಿಸುವದು ಬಹುಮುಖ್ಯ ಎಂದು ಕಾನಿಪ ಜಿಲ್ಲಾ ಉಪಾಧ್ಯಕ್ಷ ಇಂದುಶೇಖರ ಮಣೂರ ಹೇಳಿದರು.ಅವರು ರವಿವಾರದಂದು ನಗರದ ಲಿಂಗದ ಗುಡಿ ರಸ್ತೆಯಲ್ಲಿರುವ ಸುಂದರಂ ಹೋಮ್ ಶಾಖಾ ಕಚೇರಿಯಲ್ಲಿ ಸ್ವಾತಂತ್ರೋತ್ಸವದ ನಿಮಿತ್ತ 12 ವರ್ಷದೊಳಗಿನ ಮಕ್ಕಳಿಗೆ ಹಮ್ಮಿಕೊಂಡ ‘ನಿಮ್ಮ ಕನಸಿನ ಮನೆ’-ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ಮಕ್ಕಳಲ್ಲಿ ಸುಪ್ತವಾಗಿರುವ ಕಲಾ ಪ್ರತಿಭೆಗೆ ನೀರೆರೆದು ಪ್ರೋತ್ಸಾಹಿಸಿ, ಭವಿಷ್ಯದಲ್ಲಿ ಮಕ್ಕಳನ್ನು ಕಲಾವಿದರನ್ನಾಗಿ ರೂಪಿಸುವ ಕೆಲಸ ಸುಂದರಂ ಹೋಮ್ ಸಂಸ್ಥೆಯಿಂದ ನಡೆಯುತ್ತಿರುವುದು ಹೆಮ್ಮೆ ತಂದಿದೆ ಎಂದು ಹೇಳಿದರು.ಶಿಕ್ಷಕ ಸಾಹಿತಿ ಸಂತೋಷ ಬಂಡೆ ಮಾತನಾಡಿ, ಚಿತ್ರಕಲೆಯು ಮಕ್ಕಳ ರಚನಾ ಸಾಮರ್ಥ್ಯದ ಬೆಳವಣಿಗೆ, ಭಾವಾಭಿವ್ಯಕ್ತಿ, ಕಲ್ಪನಾಶಕ್ತಿ ವರ್ಧಿಸುವುದಕ್ಕೆ ಸಹಕಾರಿ. ಮಗು ಮಾತಿನಲ್ಲಿ ವ್ಯಕ್ತಪಡಿಸಲಾಗದ ತನ್ನ ಸಂವೇದನೆಯನ್ನು ಚಿತ್ರಕಲೆಯಂತಹ ಮೌನ ಭಾಷೆಯ…
ಪ್ರಗತಿ ಪರಿಶೀಲನೆ ಸಭೆಯಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅಧಿಕಾರಿಗಳಿಗೆ ಸೂಚನೆ ವಿಜಯಪುರ: ಮಕ್ಕಳ ಆರೋಗ್ಯ ಕಾಳಜಿ, ಸಮರ್ಪಕ ತ್ಯಾಜ್ಯ ನಿರ್ವಹಣೆ, ಗ್ರಾಮ-ನಗರಗಳ ಸ್ವಚ್ಛತೆ, ಬಯಲು ಬಹಿರ್ದೆಸೆ ಮುಕ್ತ, ಕೆರೆಗಳ ಸಂರಕ್ಷಣೆ, ಸಾರ್ವಜನಿಕರ ಆರೋಗ್ಯ, ಶಾಲಾ ಮಕ್ಕಳ ಶಿಕ್ಷಣ ಗುಣಮಟ್ಟ ಸುಧಾರಣೆ, ಕೊಠಡಿಗಳ ಸುಸ್ಥಿತಿ, ಸಾರ್ವಜನಿಕ ಆಸ್ತಿ ರಕ್ಷಣೆ, ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ, ಹಸರೀಕರಣದ ದೃಷ್ಟಿಯಲ್ಲಿ ಅರಣ್ಯೀಕರಣ ಒಳಗೊಂಡಂತೆ ಸಾರ್ವಜನಿಕರ ಸಮಸ್ಯೆಗಳನ್ನು ಅರಿತು, ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಯೋಜನಾ ಬದ್ಧವಾಗಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಸೂಚನೆ ನೀಡಿದರು.ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಜಿಲ್ಲೆಯ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಸಾರ್ವಜನಿಕ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು. ಅಂಗನವಾಡಿ ಕೇಂದ್ರಗಳಲ್ಲಿರುವ ಚಿಕ್ಕ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಅಂಗನವಾಡಿ ಕೇಂದ್ರದ ಕಟ್ಟಡಗಳ ಕಿಟಕಿಗಳಿಗೆ ಜಾಳಿಗೆ ಅಳವಡಿಸಿ ಸೊಳ್ಳೆಗಳು ಬರದಂತೆ ನೋಡಿಕೊಂಡು ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಕ್ರಮ ವಹಿಸಬೇಕು. ಜಲಮೂಲಗಳ ಸಂರಕ್ಷಣೆ ನಮ್ಮ ಜವಾಬ್ದಾರಿಯಾಗಿದ್ದು, ಜಿಲ್ಲೆಯಲ್ಲಿರುವ ಕೆರೆ-ಕಟ್ಟೆಗಳ ಸಮೀಕ್ಷೆ…
ವಿಜಯಪುರ: ಕತ್ತಲೆಯನ್ನು ತೊಲಗಿಸುವ ದೀಪಕ್ಕಿರುವ ಶಕ್ತಿ ಶಿಕ್ಷಕರಿಗೆ ಇದೆ. ಅವರಿವರನ್ನು ದೂರದೆ ವಿಷಯ ಪ್ರಬುದ್ಧತೆ ಹೊಂದಿ ಸರಳ ಮಾದರಿಯಲ್ಲಿ ಆಕರ್ಷಕ ಬೋಧನಾ ಶೈಲಿಯನ್ನು ಅಳವಡಿಸಿಕೊಂಡು ಮಕ್ಕಳಿಗೆ ಮನ ಮುಟ್ಟುವಂತೆ ಬೋಧಿಸಬೇಕು ಎಂದು ಇ.ಸಿ.ಒ. ನವಾಜಖಾನ ಪಠಾಣ ಸಲಹೆ ನೀಡಿದರು.ಜಿಲ್ಲೆಯ ಇಂಡಿ ತಾಲ್ಲೂಕಿನ ಹಿರೇಮಸಳಿ ಗ್ರಾಮದಲ್ಲಿ ನಲಿ ಕಲಿ 2ನೇ ಸಮಾಲೋಚನೆ ಸಭೆಯಲ್ಲಿ ಮಾತನಾಡಿದ ಅವರು, ಶಿಕ್ಷಕರು ನಿತ್ಯ ಅಧ್ಯಯನದಲ್ಲಿ ತೊಡಗಿಸಿಕೊಂಡು ಗುರಿ ತಲುಪಬೇಕು. ಟಿಪ್ಪಣಿ, ಅಗತ್ಯ ಬೋಧನಾ ಸಲಕರಣಿಗಳೊಂದಿಗೆ ತರಗತಿ ಕೋಣೆಗೆ ಹಸನ್ಮುಖಿಯಾಗಿ ಮಕ್ಕಳ ಎದುರಿಗೆ ಕಾಣಿಸಿಕೊಂಡು ಅವರನ್ನು ತಮ್ಮತ್ತ ಸೂಜಿಗಲ್ಲಿನಂತೆ ಸೆಳೆಯಬೇಕು ಎಂದು ಹೇಳಿದರು.ಈ ಸಮಾಲೋಚನಾ ಸಭೆ ವರ್ಷದಲ್ಲಿ 6 ಬಾರಿ ನಡೆಸಲಾಗುತ್ತದೆ. ಇಂದಿನ ಸಭೆಯು ಇಂಡಿ ತಾಲ್ಲೂಕಿನ ನಾಲ್ಕು ಕ್ಲಸ್ಟರ್‌ಗಳ ಉರ್ದು ಸಿ.ಆರ್.ಪಿ ಗಳಾದ ರೂಗಿ ಕ್ಲಸ್ಟರ್ ಬಿ.ಡಿ. ಚಪ್ಪರಬಂದ, ಇಂಡಿ ಕ್ಲಸ್ಟರ್ ಪರ್ವೇಜ್ ಪಟೇಲ್, ಇಂಗಳಗಿ ಕ್ಲಸ್ಟರ್ ಬಾಶಾ ಕುಮಸಗಿ, ಸಾತಲಗಾಂವ್ ಕ್ಲಸ್ಟರ್ ಐ.ಎ. ಶಿಕ್ಕಲಗಾರ್ ಅವರ ನೇತೃತ್ವದಲ್ಲಿ ನಡೆಯಿತು.ಈ ಸಂದರ್ಭದಲ್ಲಿ CRP ದಾದಾ ಶಾಮನವ್ವರ್, ಎಸ್.ಡಿ.ಎಂ.ಸಿ.…
ವಿಜಯಪುರ: ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಸಹೋದರಿಯರು ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರನ್ನು ಭೇಟಿ ಮಾಡಿ ರಕ್ಷಾ ಬಂಧನದ ಅಂಗವಾಗಿ ಶುಭ ಕೋರಿದರು.ನಗರದಲ್ಲಿರುವ ಸಚಿವರ ಗೃಹ ಕಚೇರಿಗೆ ರವಿವಾರ ಬೆಳಿಗ್ಗೆ ಆಗಮಿಸಿದ ದರ್ಗಾ ಬಳಿಯ ಈಶ್ವರಿಯ ವಿಶ್ವವಿದ್ಯಾಲಯ ಜ್ಞಾನಗಂಗಾ ಭವನದ ಸರೋಜಾ ಮತ್ತು ಕವಿತಾ ಸಹೋದರಿಯರು ಸಚಿವರಿಗೆ ಹಣೆಗೆ ತಿಲಕ ಹಚ್ಚಿ, ರಾಖಿ ಕಟ್ಟಿ ಶುಭಾಷಯ ಕೋರಿದರು. ಸಚಿವರೂ ಕೂಡ ಸಹೋದರಿಯರೊಂದಿಗೆ ರಕ್ಷಾ ಬಂಧನ ಶುಭಾಷಯ ವಿನಿಮಯ ಮಾಡಿಕೊಂಡರು.
ವಿಜಯಪುರ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ಪ್ರಯೋಜನಗಳು ಮತ್ತು ಅನಾನುಕೂಲಗಳು ಮತ್ತು ಕೃತಕ ಬುದ್ಧಿಮತ್ತೆ ನಡೆದು ಬಂದ ದಾರಿಯ ಕುರಿತು ಪ್ರೊ. ಡಾ. ಡಿ ಜೈಪ್ರಸಾದ ಹೇಳಿದರು.ಅವರು ಜಿಲ್ಲೆಯ ಇಂಡಿ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಗಣಕಯಂತ್ರ ವಿಭಾಗದ ಅಡಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ಪಾತ್ರ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದರು.ಪ್ರಾಸ್ತಾವಿಕವಾಗಿ ಮಾತನಾಡಿದವಿಭಾಗದ ಮುಖ್ಯಸ್ಥ ಪ್ರೊ ಭಾರತಿ ಕನ್ನೊಳ್ಳಿ ಐಕ್ಯೂಎಸಿ ವಿಭಾಗದ ಸಂಯೋಜಕಿ ಡಾ. ಶಿರೀನೂಸುಲ್ತಾನ ಇನಾಂದಾರ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ. ರಾಜಲಕ್ಷ್ಮಿ ಆರ್, ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ಕಿರಣ ರೇವಣಕರ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ರಮೇಶ ಕತ್ತಿ, ರಾಜ್ಯಶಾಸ್ತ್ರ ವಿಭಾಗದ ಡಾ.ಸುರೇಖಾ ವಾರದ, ಡಾ.ವಿಜಯಮಹಾಂತೇಶ ದೇವರ, ಮೊದಲಾದವರಿದ್ದರು.ಕಾಲೇಜಿನ ಗಣಕಶಾಸ್ತ್ರ ವಿಭಾಗದಲ್ಲಿ ಓದುತ್ತಿರುವ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ ಆರ್. ಎಚ್. ರಮೇಶ ವಹಿಸಿದ್ದರುತೇಜಸ್ವಿನಿ ಯಾಳಮೇಲಿ ಪ್ರಾರ್ಥಿಸಿದರು. ಕವೀಂದ್ರಕುಮಾರ ಚಾಬುಕಸ್ವಾರ ಸ್ವಾಗತಿಸಿದರು, ಮೇಘಾ ಬೂರ್ಖಾಡೇ ವಂದಿಸಿದರು. ಶೀತಲ್ ಹಿರೇಮಠ…
ಕೆಂಭಾವಿ: ಪಟ್ಟಣದ ಶತಮಾನ ಕಂಡ ಪೋಲಿಸ್ ಠಾಣೆಗೆ ನೂತನವಾಗಿ ಆಗಮಿಸಿರುವ ಕ್ರೃಂ ಪಿಎಸ್‌ಐ ಹಣಮಂತರಾಯ ಸಿದ್ದಾಪುರ ಅವರಿಗೆ ಕೆಂಭಾವಿ ಪಟ್ಟಣದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿಮಡಿವಾಳಪ್ಪಗೌಡ ಪೋ ಪಾಟೀಲ, ಮುರಗೇಶ ಸಾಹು ಹುಣಸಗಿ, ಬಾಪುಗೌಡ ಪೋ ಪಾಟೀಲ, ಮಹಿಪಾಲರೆಡ್ಡಿ ಡಿಗ್ಗಾವಿ, ರಹೀಮಾನ ಪಟೀಲ್ ಯಲಗೋಡ, ಪ್ರಧಾನೆಪ್ಪ ಪೂಜಾರಿ, ರಂಗಪ್ಪ ವಡ್ಡರ, ಸುಭಾಷ ಮ್ಯಾಗೇರಿ, ಭೀಮು ಶಹಾಪುರ, ನಿಂಗಣ್ಣ ನಡಕೂರ, ಪ್ರವೀಣ ಕವಲ್ದಾರ, ಪ್ರಭು ಕವಲ್ದಾರ, ಬಸವರಾಜ ಮ್ಯಾಗೇರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕೆಂಭಾವಿ: ಸುಮಾರು ಎರಡೂವರೆ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ವಲಯ ಕನ್ನಡ ಸಾಹಿತ್ಯ ಪರಿಷತ್ತಿಗೆ ನೂತನ ಅಧ್ಯಕ್ಷರಾಗಿ ಸಾಹಿತಿ, ಸಂಘಟಕ, ಮಡಿವಾಳಪ್ಪಗೌಡ ಪಾಟೀಲ್ ಹೆಗ್ಗಣದೊಡ್ಡಿ ಅವಿರೋಧವಾಗಿ ಆಯ್ಕೆಯಾದರು.ಪಟ್ಟಣದ ಸ್ಪಂದನ ಶಾಲೆಯಲ್ಲಿ ಶುಕ್ರವಾರ ಸಂಜೆ ಜರುಗಿದ ವಲಯ ಕಸಾಪ ಸರ್ವ ಸದಸ್ಯರ ಸಭೆಯಲ್ಲಿ ಪತ್ರಕರ್ತ ಡಿ ಸಿ ಪಾಟೀಲ್ ಮಾತನಾಡಿ ಮಡಿವಾಳಪ್ಪಗೌಡ ಹೆಗ್ಗನದೊಡ್ಡಿ ಹೆಸರು ಸೂಚಿಸಿದರು. ಸಭೆಯಲ್ಲಿದ್ದ ಸಾಹಿತಿ ನಿಂಗನಗೌಡ ದೇಸಾಯಿ, ಶಿಕ್ಷಕ ಶಿವನಗೌಡ ಪಾಟೀಲ ಬೆಂಬಲಿಸಿದರು. ಶಿಕ್ಷಕ ಬಂದೇನವಾಜ್ ನಾಲತವಾಡ, ಪತ್ರಕರ್ತ ಗುರು ಕುಲಕರ್ಣಿ ಅನುಮೋದಿಸಿದರು. ಸುರಪುರ ತಾಲೂಕು ಕಸಾಪ ಅಧ್ಯಕ್ಷ ಶರಣಬಸವ ಯಾಳವಾರ ಮಡಿವಾಳಪ್ಪಗೌಡರ ಹೆಸರನ್ನು ಸಭೆಯಲ್ಲಿ ಘೋಷಿಸುತ್ತಿದ್ದಂತೆ ಹಾಜರಿದ್ದ ಸರ್ವ ಸದಸ್ಯರು ಚಪ್ಪಾಳೆ ತಟ್ಟುವ ಮೂಲಕ ಅಂಗೀಕರಿಸಿದರು, ತದನಂತರ ಸುರಪುರ ಹಾಗೂ ಶಹಾಪುರ ತಾಲೂಕು ಕಸಾಪ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ನೂತನ ಅಧ್ಯಕ್ಷರಿಗೆ ಸನ್ಮಾನಿಸಿ ಗೌರವಿಸಿ ಶುಭಹಾರೈಸಿದರು.ನೂತನ ಅಧ್ಯಕ್ಷ ಮಡಿವಾಳಪ್ಪಗೌಡ ಪಾಟೀಲ್ ಮಾತನಾಡಿ, 2022ರ ಫೆಬ್ರುವರಿಯಲ್ಲಿ ನಡೆದ ಸುರಪುರ ತಾಲೂಕು ಕಸಾಪ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ನಡೆದ ಕೆಲವು ಕಹಿ…
ಚಡಚಣ: ನಾಗರಪಂಚಮಿ ನಾಡಿಗೆ ದೊಡ್ಡದು ಎಂಬತೆ ಶ್ರಾವಣ ಮಾಸದ ಪ್ರಾರಂಭದಲ್ಲಿ ಬರುವ ಹಬ್ಬ ನಾಗರಪಂಚಮಿ. ಗ್ರಾಮೀಣ ಭಾಗದಲ್ಲಿ ಇದು ಇನ್ನೂ ಮಹತ್ವ ಪಡೆದುಕೊಂಡಿದೆ. ಆಧುನಿಕತೆ ಬೆಳೆದಂತೆ ಹಬ್ಬವು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತ ಸಾಗಿದೆ. ಅಣ್ಣ-ತಂಗಿಯರ ಬಾಂಧವ್ಯ ಬೆಸೆಯುವ ಹಬ್ಬ. ಹೆಣ್ಣು ಮಕ್ಕಳು ನಾಗರಪಂಚಮಿಯನ್ನು ತವರಿನಲ್ಲಿಯೇ ಆಚರಿಸಬೇಕೆಂಬುದು ಅವರ ಕನಸು.ದಿ.೯ ರಂದು ಶುಕ್ರವಾರ ಪಟ್ಟಣದ ಅಗಸಿಯ ಮುಂದಿರುವ ಹನುಮಾನ ದೇವಸ್ಥಾನದ ಆವರಣದಲ್ಲಿ ಬೃಹದಾಕಾರವಾದ ಸುಂದರವಾದ ಮಣ್ಣಿನ ನಾಗೇಶನನ್ನು ನಿರ್ಮಿಸಿದ್ದಾರೆ. ಪಟ್ಟಣದ ಎಲ್ಲ ಸುಮಂಗಲೆಯರು ಮಣ್ಣಿನ ನಾಗೇಶನಿಗೆ ಹಾಲೆರೆದು ಧನ್ಯರಾದರು.ಅದರಂತೆ ಪಟ್ಟಣದ ಪ್ರತಿಷ್ಠಿತ ಬಾಬುಗೌಡ ಪಾಟೀಲರ ಕುಟುಂಬದವರು ಮೊದಲು ನಾಗೇಶನಿಗೆ ಪೂಜೆ ಮಾಡುವ ವಾಡಿಕೆ. ಅವರ ಕುಟುಂಬದವರು ಮಣ್ಣಿನ ನಾಗೇಶನಿಗೆ ನೂಲು ಸುತ್ತಿ ಅರಿಷಿಣ ಕುಂಕುಮದೊಂದಿಗೆ ಪೂಜೆ ಮಾಡಿ, ಎಲ್ಲರೂ ಹಾಲೆರೆದು ನೈವೇದ್ಯ ಸಮರ್ಪಿಸಿದರು. ಇವರೊಂದಿಗೆ ಎಲ್ಲ ಮಹಿಳೆಯರು ಭಾಗಿಯಾಗಿದ್ದರು.ವಿಜಯಲಕ್ಷಿ, ಸುನಂದ, ಸುರೇಖ, ಸುವರ್ಣ, ಸ್ವಾತಿ, ಸನ್ನೀಧಿ, ಅಕ್ಷತಾ, ಲಕ್ಷ್ಮಿ, ಕೀರ್ತಿ, ಸೋನಾಲಿ, ಇವರು ಭಾಗಿಯಾಗಿದ್ದರು.ಗೌರಿ ಪೂಜೆ: ದಿ.೧೦ ರಂದು ಶನಿವಾರ ಸಿರಿಯಾಳಶೆಟ್ಟಿ ದಿನದಂದು…
ವಿಜಯಪುರ: ಬೃಹತ್ ಮತ್ತು ಮದ್ಯಮ ಕೈಗಾರಿಕೆ, ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ. ಬಿ. ಪಾಟೀಲ ಅವರು ಆಗಷ್ಟ11 ರಿಂದ ಆಗಷ್ಟ 15ರ ವರೆಗೆ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ನಾನಾ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.ಆಗಷ್ಟ 11 ರವಿವಾರ ಮತ್ತು ಆಗಷ್ಟ 12 ಸೋಮವಾರದಂದು ವಿಜಯಪುರ ಗೃಹ ಕಚೇರಿಯಲ್ಲಿ ಬೆಳಿಗ್ಗೆ 9 ರಿಂದ ಬೆಳಿಗ್ಗೆ 11 ಗಂಟೆ ವರೆಗೆ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಕುಂದುಕೊರತೆ ಆಲಿಸಲಿದ್ದಾರೆ.ಆಗಷ್ಟ 13 ರಂದು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಬಬಲೇಶ್ವರ ಹೆಸ್ಕಾಂ ಪರೀಕ್ಷಾ ಕೇಂದ್ರದ ಆವರಣದಲ್ಲಿ ರೂ. 27 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ವಿದ್ಯುತ್ ಪರಿವರ್ತಕಗಳ ದುರಸ್ಥಿ ಹಾಗೂ ಪರೀಕ್ಷಣಾ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ಮದ್ಯಾಹ್ನ 12 ಗಂಟೆಗೆ ವಿಜಯಪುರ ನಗರದ ಹೆಸ್ಕಾಂ ಉಪವಿಭಾಗ-01ರ ಕಚೇರಿ ಆವರಣದಲ್ಲಿ ರೂ. 234 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಕಟ್ಟಡ, ರೂ.124 ವೆಚ್ಚದಲ್ಲಿ ನಿರ್ಮಿಸಲಾಗಿರುವ ಶಿವಗಿರಿ ಶಾಖಾಧಿಕಾರಿಗಳ ಕಚೇರಿ ಕಟ್ಟಡ ಹಾಗೂ ಭೂತನಾಳ ಶಾಖಾಧಿಕಾರಿಗಳ ಕಛೇರಿ ಕಟ್ಟಡ…
ಆಲಮೇಲ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮುಡಾಹಗರಣದ ವಿಷಯದಲ್ಲಿ ಸಿಎಂ ಸಿದ್ದರಾಮಯ್ಯನವರ ವಿರುದ್ಧ ಕುತಂತ್ರ ಹಾಗೂ ಸುಳ್ಳು ಆರೋಪ ಮಾಡುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ನಡೆಯನ್ನು ಪಟ್ಟಣದ ಕಾಂಗ್ರೆಸ್ ಮುಖಂಡ ನಬಿ ಆರ್ ಜಮಾದಾರ ಖಂಡಿಸಿದ್ದಾರೆ.ಶುಕ್ರವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸಿಎಂ ಸಿದ್ದರಾಮಯ್ಯ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತಂದು ಸಿಎಂ ಸ್ಥಾನದಿಂದ ಕೆಳಗಿಳಿಸುವ ಪ್ರಯತ್ನದಲ್ಲಿದ್ದಾರೆ. ಆದರೆ ಅದು ಫಲಿಸುವುದಿಲ್ಲ. ಏಕೆಂದರೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ರಾಜ್ಯದಲ್ಲಿ ಉತ್ತಮ ಆಡಳಿತವನ್ನು ನೀಡುವ ಮೂಲಕ ಬಡವ, ದೀನದಲಿತರ, ಹಿಂದುಳಿದ ವರ್ಗದವರ ಅಭಿವೃದ್ಧಿಗೆ ಅನೇಕ ಭಾಗ್ಯಗಳನ್ನು ಕೊಟ್ಟಂತಹ ಭಾಗ್ಯಗಳ ಸರದಾರ ಎನಿಸಿಕೊಂಡಿದ್ದಾರೆ. ನಾಡಿನ ಎಲ್ಲ ಸಮುದಾಯದಗಳ ಜನಮನ ಗೆದ್ದಿದ್ದಾರೆ. 2013 ರಿಂದ 2018 ರವರೆಗೆ ಯಾವುದೇ ಒಂದು ಕಪ್ಪು ಚುಕ್ಕೆ ಇಲ್ಲದೆ ಆಡಳಿತ ಮಾಡಿದ್ದಾರೆ ಎಂದು ಹೊಟ್ಟೆಕಿಚ್ಚಿನಿಂದ ಸಿದ್ದರಾಮಯ್ಯನವರನ್ನು ಇನ್ನು ಮುಂದೆ 5 ವರ್ಷ ಪೂರೈಸಬಾರದು, ಮತ್ತೆ ಈ ಅವಧಿಯಲ್ಲಿ ವರ್ಷ ಪೂರೈಸಿದರೆ ರಾಜ್ಯದಲ್ಲಿ ನಮಗೆ ಉಳಿಗಾಲವಿಲ್ಲವೆಂದು…
