ವಿಜಯಪುರ: ಕತ್ತಲೆಯನ್ನು ತೊಲಗಿಸುವ ದೀಪಕ್ಕಿರುವ ಶಕ್ತಿ ಶಿಕ್ಷಕರಿಗೆ ಇದೆ. ಅವರಿವರನ್ನು ದೂರದೆ ವಿಷಯ ಪ್ರಬುದ್ಧತೆ ಹೊಂದಿ ಸರಳ ಮಾದರಿಯಲ್ಲಿ ಆಕರ್ಷಕ ಬೋಧನಾ ಶೈಲಿಯನ್ನು ಅಳವಡಿಸಿಕೊಂಡು ಮಕ್ಕಳಿಗೆ ಮನ ಮುಟ್ಟುವಂತೆ ಬೋಧಿಸಬೇಕು ಎಂದು ಇ.ಸಿ.ಒ. ನವಾಜಖಾನ ಪಠಾಣ ಸಲಹೆ ನೀಡಿದರು.
ಜಿಲ್ಲೆಯ ಇಂಡಿ ತಾಲ್ಲೂಕಿನ ಹಿರೇಮಸಳಿ ಗ್ರಾಮದಲ್ಲಿ ನಲಿ ಕಲಿ 2ನೇ ಸಮಾಲೋಚನೆ ಸಭೆಯಲ್ಲಿ ಮಾತನಾಡಿದ ಅವರು, ಶಿಕ್ಷಕರು ನಿತ್ಯ ಅಧ್ಯಯನದಲ್ಲಿ ತೊಡಗಿಸಿಕೊಂಡು ಗುರಿ ತಲುಪಬೇಕು. ಟಿಪ್ಪಣಿ, ಅಗತ್ಯ ಬೋಧನಾ ಸಲಕರಣಿಗಳೊಂದಿಗೆ ತರಗತಿ ಕೋಣೆಗೆ ಹಸನ್ಮುಖಿಯಾಗಿ ಮಕ್ಕಳ ಎದುರಿಗೆ ಕಾಣಿಸಿಕೊಂಡು ಅವರನ್ನು ತಮ್ಮತ್ತ ಸೂಜಿಗಲ್ಲಿನಂತೆ ಸೆಳೆಯಬೇಕು ಎಂದು ಹೇಳಿದರು.
ಈ ಸಮಾಲೋಚನಾ ಸಭೆ ವರ್ಷದಲ್ಲಿ 6 ಬಾರಿ ನಡೆಸಲಾಗುತ್ತದೆ. ಇಂದಿನ ಸಭೆಯು ಇಂಡಿ ತಾಲ್ಲೂಕಿನ ನಾಲ್ಕು ಕ್ಲಸ್ಟರ್‌ಗಳ ಉರ್ದು ಸಿ.ಆರ್.ಪಿ ಗಳಾದ ರೂಗಿ ಕ್ಲಸ್ಟರ್ ಬಿ.ಡಿ. ಚಪ್ಪರಬಂದ, ಇಂಡಿ ಕ್ಲಸ್ಟರ್ ಪರ್ವೇಜ್ ಪಟೇಲ್, ಇಂಗಳಗಿ ಕ್ಲಸ್ಟರ್ ಬಾಶಾ ಕುಮಸಗಿ, ಸಾತಲಗಾಂವ್ ಕ್ಲಸ್ಟರ್ ಐ.ಎ. ಶಿಕ್ಕಲಗಾರ್ ಅವರ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ CRP ದಾದಾ ಶಾಮನವ್ವರ್, ಎಸ್.ಡಿ.ಎಂ.ಸಿ. ಅಧ್ಯಕ್ಷ ಬಶೀರ್ ಜಿ. ಮುಲ್ಲಾ, ಮುಖ್ಯೋಪಾಧ್ಯಾಯರಾದ ಅಬುತಾಲಿಬ್ ಹೋಸೂರ್, ಮತ್ತು ರೆಹಮಾನ್ ಸಾಬ್ ಎಚ್. ಸೌದಾಗರ್, ಡಾ. ಇಬ್ರಾಹಿಂ ಉಸ್ತಾದ್, ಶಾಲಾ ಸಿಬ್ಬಂದಿ ಎಂ.ಡಿ. ಯೂನಸ್ ಬಿಲಗಿ, ಖಲೀಫಾ ಚೌಧರಿ, ಶ್ರೀಮತಿ ಕೆ.ಎ ಶೇಖ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವರದಿಗಾರರಾದ ಹಸನ್ ಮುಜಾವರ ಮತ್ತು ಮುಹಮ್ಮದ್ ನಾಸೀರ್ ಇನಾಮ್ದಾರ್ ಅವರನ್ನು ಸನ್ಮಾನಿಸಲಾಯಿತು.
ಇಂಡಿ ತಾಲ್ಲೂಕಿನ ಉರ್ದು ನಲಿ ಕಲಿ ಶಿಕ್ಷಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

