ವಿಜಯಪುರ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ಪ್ರಯೋಜನಗಳು ಮತ್ತು ಅನಾನುಕೂಲಗಳು ಮತ್ತು ಕೃತಕ ಬುದ್ಧಿಮತ್ತೆ ನಡೆದು ಬಂದ ದಾರಿಯ ಕುರಿತು ಪ್ರೊ. ಡಾ. ಡಿ ಜೈಪ್ರಸಾದ ಹೇಳಿದರು.
ಅವರು ಜಿಲ್ಲೆಯ ಇಂಡಿ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಗಣಕಯಂತ್ರ ವಿಭಾಗದ ಅಡಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ಪಾತ್ರ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ
ವಿಭಾಗದ ಮುಖ್ಯಸ್ಥ ಪ್ರೊ ಭಾರತಿ ಕನ್ನೊಳ್ಳಿ ಐಕ್ಯೂಎಸಿ ವಿಭಾಗದ ಸಂಯೋಜಕಿ ಡಾ. ಶಿರೀನೂಸುಲ್ತಾನ ಇನಾಂದಾರ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ. ರಾಜಲಕ್ಷ್ಮಿ ಆರ್, ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ಕಿರಣ ರೇವಣಕರ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ರಮೇಶ ಕತ್ತಿ, ರಾಜ್ಯಶಾಸ್ತ್ರ ವಿಭಾಗದ ಡಾ.ಸುರೇಖಾ ವಾರದ, ಡಾ.ವಿಜಯಮಹಾಂತೇಶ ದೇವರ, ಮೊದಲಾದವರಿದ್ದರು.
ಕಾಲೇಜಿನ ಗಣಕಶಾಸ್ತ್ರ ವಿಭಾಗದಲ್ಲಿ ಓದುತ್ತಿರುವ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ ಆರ್. ಎಚ್. ರಮೇಶ ವಹಿಸಿದ್ದರು
ತೇಜಸ್ವಿನಿ ಯಾಳಮೇಲಿ ಪ್ರಾರ್ಥಿಸಿದರು. ಕವೀಂದ್ರಕುಮಾರ ಚಾಬುಕಸ್ವಾರ ಸ್ವಾಗತಿಸಿದರು, ಮೇಘಾ ಬೂರ್ಖಾಡೇ ವಂದಿಸಿದರು. ಶೀತಲ್ ಹಿರೇಮಠ ನಿರೂಪಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

