Author: editor.udayarashmi@gmail.com

ಮನೆ-ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸಿ :ಡಿಸಿ ಟಿ.ಭೂಬಾಲನ್S***ವಿಜಯಪುರ ಜಿಲ್ಲೆಯಲ್ಲಿ ಹರ್ ಘರ್ ತಿರಂಗಾ ಅಭಿಯಾನ ವಿಜಯಪುರ: ಜಿಲ್ಲೆಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಹರ-ಘರ ತಿರಂಗಾ ಕಾರ್ಯಕ್ರಮವನ್ನು ಅಧಿಕಾರಿ-ಸಿಬ್ಬಂದಿಗಳು, ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಮನೆ-ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸಿ, ರಾಷ್ಟ್ರ ಪ್ರೇಮವನ್ನು ಅಭಿವ್ಯಕ್ತಗೊಳಿಸುವ ಮೂಲಕ ಅತ್ಯಂತ ಸಂಭ್ರಮದಿಂದ ಹಮ್ಮಿಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಕರೆ ನೀಡಿದ್ದಾರೆ.ಜಿಲ್ಲೆಯಲ್ಲಿ ಹರ-ಘರ ತಿರಂಗಾ ಅಭಿಯಾನ ಯಶಸ್ವಿಗೊಳಿಸಲು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಅನುಷ್ಠಾನಗೊಳಿಸಲು ವಿವಿಧ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಆ.೧೩ರಂದು ತಿರಂಗಾ ಕ್ಯಾನ್ವಾಸ್: ಸ್ಥಳೀಯ ಭಾಷೆಗಳಲ್ಲಿ ಹರ್-ಘರ್ ತಿರಂಗಾ, ಜೈಹಿಂದ್, ಘೊಷವಾಕ್ಯಗಳನ್ನು ಬರೆಯುವುದರೊಂದಿಗೆ ಅಭಿಯಾನ ಕೈಗೊಳ್ಳುವುದು, ಅಭಿಯಾನದ ನಂತರ ಅಧಿಕೃತ ಕ್ಯಾನ್ವಾಸ್‌ನ ಹೈ ರೆಸಲ್ಯೂಶನ್ ಛಾಯಾಚಿತರವನ್ನು ಸಂಸ್ಕೃತಿ ಸಚಿವಾಲಯ ವೆಬ್‌ಸೈಟ್‌ನಲ್ಲಿ ಹಂಚಿಕೊಳ್ಳುವುದು. ತಿರಂಗಾ ಯಾತ್ರೆ, ಮ್ಯಾರಾಥಾನ್ ಓಟ ಹಾಗೂ ಬೈಕ್, ಕಾರ್ ಸೈಕಲ್ ಮೂಲಕ ತಿರಂಗಾ ರ‍್ಯಾಲಿ ಆಯೋಜಿಸುವುದು. ಸೆಲ್ಪಿಯೊಂದಿಗೆ ತಿರಂಗಾ ಪ್ರತಿಜ್ಞೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ವಿವಿಧ ಅಧಿಕಾರಿ-ಸಿಬ್ಬಂದಿಗಳು, ಸ್ವಸಹಾಯ ಸಂಘ-ಸಂಸ್ಥೆಗಳು, ಶಾಲಾ…

Read More

ವಿಜಯಪುರ: “ಕುಮಾರವ್ಯಾಸ, ಕುಮಾರವಾಲ್ಮೀಕಿ, ರನ್ನ , ಪಂಪ, ನಾಗಚಂದ್ರ ಮುಂತಾದ ಕವಿಗಳು ಸೇರಿದಂತೆ ಕಾವ್ಯ ಬರೆದವರು ಉತ್ತರ ಕರ್ನಾಟಕ ಭಾಗದವರು. ಆದರೆ, ಅದನ್ನು ವಾಚನ ಮಾಡುತ್ತಿರುವವರು ಬೆಂಗಳೂರು, ಮೈಸೂರಿನವರು ಎಂದು ಕಲ್ಯಾಣರಾವ್ ದೇಶಪಾಂಡೆ ಹೇಳಿದರು.ರವಿವಾರ ನಗರದ ಬಿಡಿಇ ಸೊಸೈಟಿಯಲ್ಲಿ ಅಖಿಲ ಭಾರತೀಯ ‘ಸಾಹಿತ್ಯ ಪರಿಷದ್(ರಿ) ವಿಜಯಪುರ’ ಗುರುಪೂರ್ಣಿಮ ಅಂಗವಾಗಿ ಆಯೋಜಿಸಿದ ‘ಕುಮಾರವ್ಯಾಸ ಭಾರತ ಗಮಕ’ ಕಾರ್ಯಕ್ರಮದಲ್ಲಿ ಹಿರಿಯ ಗಮಕಿ ಶಾಂತಾಬಾಯಿ ಕೌತಳಾ ಕುಮಾರವ್ಯಾಸ ಭಾರತದ ವಿರಾಟ ಪರ್ವದ ಕಾವ್ಯವನ್ನು ಗಾಯನ ಮಾಡಿದರು. ಕಲ್ಯಾಣರಾವ್ ದೇಶಪಾಂಡೆ ಅದನ್ನು ವ್ಯಾಖ್ಯಾನಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಉತ್ತರ ಕರ್ನಾಟಕದಲ್ಲಿ ವಿಜಯಪುರನಲ್ಲಿ ಮಾತ್ರ ಗಮಕ ಉಳಿದಿದೆಯಂದು’ ಎಂದು ತಿಳಿಸಿದರು.ಶರಣ ಸಾಹಿತ್ಯ ಪರಿಷತ್ತಿನ ಯುವವೇದಿಕೆ ಅಧ್ಯಕ್ಷ ಅಮರೇಶ ಸಾಲಕ್ಕಿ ಮಾತನಾಡಿ’ ಸಾಹಿತ್ಯ ಪ್ರಕಾರದಲ್ಲಿ ಗಮಕ ಅತ್ಯಂತ ಪವಿತ್ರವಾದ ಪ್ರಕಾರವಾಗಿದ್ದು ಇದನ್ನು ಮುಂದಿನ ಪೀಳಿಗೆಗೂ ತಲುಪಿಸುವ ನಿಟ್ಟಿನಲ್ಲಿ ‘ಅಖಿಲ ಭಾರತೀಯ ಸಾಹಿತ್ಯ ಪರಿಷದ್(ರಿ) ವಿಜಯಪುರ’ ಪ್ರಯತ್ನವನ್ನು ಶ್ಲಾಘಿಸಿದರು. ‘ಸಾತ್ವಿಕ ಸಾಹಿತ್ಯ ಮತ್ತು ರಾಷ್ಟ್ರದ ಏಕತೆ ದೃಷ್ಠಿಯಿಂದ ಅಭಾಸಾಪ ಕಾರ್ಯನಿರ್ವಹಿಸುತ್ತಿದೆ” ಎಂದು…

Read More

ವಿಜಯಪುರ: ಸರ್ಕಾರಿ ಹಾಗೂ ಅಮಾಯಕರ ಆಸ್ತಿಗಳನ್ನು ಕಬಳಿಸುವ ಸಾಧನವಾಗಿ ಮಾರ್ಪಟ್ಟಿರುವ ವಕ್ಫ್ ಕಾಯ್ದೆಗೆ ತಿದ್ದುಪಡಿ ವಿಧೇಯಕವನ್ನು ಮಂಡಿಸಿರುವ ಕೇಂದ್ರ ಸರ್ಕಾರದ ನಿರ್ಣಯ ಸ್ವಾಗತಾರ್ಹ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.ವಕ್ಫ್ ಮಂಡಳಿಗಳು ಮತ್ತು ವಕ್ಫ್ ಆಸ್ತಿಗಳಿಗೆ ಅನಿಯಂತ್ರಿತ ಅಧಿಕಾರಕ್ಕೆ ಮಿತಿಯನ್ನು ತರುವ ನಿಟ್ಟಿನಲ್ಲಿ ವಕ್ಫ್ ಕಾಯ್ದೆ ತಿದ್ದುಪಡಿ ಅತ್ಯವಶ್ಯವಾಗಿತ್ತು. ಈ ಅಸಾಂವಿಧಾನಿಕ ವಕ್ಫ್ ಕಾಯ್ದೆಯನ್ನು ರದ್ದುಗೊಳಿಸುವಂತೆ ಕೋರಿ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಜಿ ಅವರಿಗೆ ೪-೯-೨೦೨೩ ರಂದು ಪತ್ರ ಬರೆದಿದ್ದೆ. ಗುರುವಾರ (೮-೮-೨೦೨೪) ವಕ್ಫ್ ಕಾಯ್ದೆ ತಿದ್ದುಪಡಿ ವಿಧೇಯಕವನ್ನು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರಾದ ಕಿರಣ್ ರಿಜುಜ್ ಅವರು ಲೋಕಸಭೆಯಲ್ಲಿ ಮಂಡಿಸಿರುವುದು ಸ್ವಾಗತಾರ್ಹ ನಿರ್ಣಯವಾಗಿದೆ.ಈ ಮಸೂದೆ ಅಂಗಿಕಾರಗೊಂಡರೆ, ವಕ್ಫ್ ಮಂಡಳಿ ಮನಸ್ಸಿಗೆ ಬಂದಂತೆ ತಮಗೆ ಬೇಕಾದ ಆಸ್ತಿಗಳನ್ನು ಕಬಳಿಸುವ ಹುನ್ನಾರ ತಪ್ಪಿಸಬಹುದು. ಅಕ್ರಮವಾಗಿ ಆಸ್ತಿಗಳನ್ನು ತಮ್ಮದೆಂದು ಆದೇಶ ಹೊರಡಿಸುವುದನ್ನು ಪ್ರಶ್ನಿಸಲು ಅವಕಾಶ ದೊರೆಯುತ್ತದೆ. ಇದರಿಂದ ಅಮಾಯಕರಿಗೆ ಹಾಗೂ ಸರ್ಕಾರಕ್ಕೆ ಆಗುತ್ತಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅನುಕೂಲವಾಗುತ್ತದೆ ಎಂದು ತಿಳಿಸಿದ್ದಾರೆ.

Read More

ಇಂಡಿಯಲ್ಲಿ ರಾಜಕೀಯ ಚದುರಂಗದಾಟ | ಗದ್ದುಗೆ ಏರಲು ಕೈ-ಕಮಲ ಪೈಪೋಟಿ – ಶಂಕರ‌ ಜೆ ಎಮ್, ಇಂಡಿಇಂಡಿ: ಹಲವಾರು ರಾಜಕೀಯ ಮೇಲಾಟ, ಪರಸ್ಪರ ಆರೋಪ, ಪ್ರತ್ಯಾರೋಪ ಜಿದ್ದಾಜಿದ್ದಿನ ಹೋರಾಟ‌ ಹಾಗೂ ರಾಜಕಾರಣದಲ್ಲಿ ಹೊಂದಾಣಿಕೆ ಎಂಬ ಮಾತು ಇತ್ತೀಚಿಗೆ ಸಾಮಾನ್ಯ ಎಂಬಂತಾಗಿದೆ. ಆದರೆ ಅದೆಲ್ಲಕ್ಕೂ ಮೀರಿದ ಭೀಮಾತೀರದ ‌ಖ್ಯಾತಿಯ ಇಂಡಿ ಪುರಸಭೆಯಲ್ಲಿ ಇದೀಗ ರಾಜಕೀಯ ಚದುರಂಗದ ಆಟ ಜೋರಾಗಿದೆ. ಚೆಕ್ ಮೆಟ್ ಹೇಳವರಾರು..? ಎಂಬುದು ಬಾರಿ ಕೂತುಹಲ‌ ಮೂಡಿದೆ.ಹೌದು, ಭವಿಷ್ಯದ ಜಿಲ್ಲಾ ಕೇಂದ್ರದ‌ ಘೋಷಣೆ ಹಾಗೂ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ನಿಗದಿ ಬಗ್ಗೆ ಜನರು ಅತಿಯಾದ ನಿರೀಕ್ಷೆಯಲ್ಲಿದ್ದರು. ಅದಕ್ಕೆ ರಾಜ್ಯ ಸರಕಾರ ಹಸಿರು ‌ನಿಶಾನೆ‌ ತೋರಿದೆ. ಆದರೆ ಇಂಡಿ ಪುರಸಭೆ‌‌ ಅಧ್ಯಕ್ಷ ಉಪಾಧ್ಯಕ್ಷ ಇಲ್ಲದಿರುವುದರಿಂದ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಆ.೫ ರಂದು ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಪ್ರಕಟಿಸುತ್ತಿದ್ದಂತೆ ಪಟ್ಟಣದ ಪುರಸಭೆ ಚುಕ್ಕಾಣಿ ಹಿಡಿಯುವುದು ಬಿಜೆಪಿ, ಕಾಂಗ್ರೆಸ್ ಪಕ್ಷಕ್ಕೀಗ ಪ್ರತಿ಼ಷ್ಠೆಯಾಗಿ ಪರಿಣಮಿಸಿದೆ.ಪಟ್ಟಣದ ಪುರಸಭೆಯ ಅಧ್ಯಕ್ಷ ಸ್ಥಾನಕ್ಕೆ…

Read More

ಸಾರ್ವಜನಿಕರ ಸದುಪಯೋಗ ಪಡೆರಲು ಲೋಕಾಯುಕ್ತ ಪೊಲೀಸ್ ಅಧೀಕ್ಷಕರ ಕರೆ ವಿಜಯಪುರ: ಕರ್ನಾಟಕದ ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ಆ.೨೨ರಂದು ಬೆಳಿಗ್ಗೆ ೧೦ ರಿಂದ ೧-೩೦ರವರೆಗೆ ಹಾಗೂ ಮಧ್ಯಾಹ್ನ ೨-೩೦ ರಿಂದ ೫ ಗಂಟೆಯವರೆಗೆ ನಗರದ ಸ್ಟೇಶನ್ ರಸ್ತೆಯ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕಾರ ವಿಚಾರಣೆ ನಡೆಸಲಿದ್ದು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ತಮ್ಮ ಸಮಸ್ಯೆ-ಅಹವಾಲುಗಳಿಗೆ ಪರಿಹಾರ ಪಡೆದುಕೊಳ್ಳುವಂತೆ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಕೋರಿದ್ದಾರೆ.ಸರ್ಕಾರಿ ಅಧಿಕಾರಿ-ನೌಕರರು ಕಾನೂನು ರಿತ್ಯ ಕಾರ್ಯ ಮಾಡಲು ವಿಳಂಬವಾಗುತ್ತಿದ್ದಲ್ಲಿ, ಅಥವಾ ಅಧಿಕಾರಿ-ನೌಕರರು ನ್ಯಾಯಯುತವಾಗಿ ಮಾಡಿಕೊಡಬೇಕಾದ ಕೆಲಸಗಳಲ್ಲಿ ವೃಥಾ ತೊಂದರೆ ಕೊಡುವುದು ಅಥವಾ ಇನ್ನಾವುದೇ ತರಹದ ದುರಾಡಳಿತದಲ್ಲಿ ತೊಡಗಿದ್ದಲ್ಲಿ ತೊಂದರೆಗೊಳಗಾದ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಲಿಖಿತ ರೂಪದಲ್ಲಿ ದಾಖಲೆ, ಸಾಕ್ಷಾಧಾರಗಳೊಂದಿಗೆ ಸಲ್ಲಿಸಿ ಬಗೆಹರಿಸಿಕೊಳ್ಳಬಹುದಾಗಿದೆ.ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿರುವ ತನಿಖೆ-ವಿಚಾರಣೆಗೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರುದಾರರು ಹಾಗೂ ಎದುರುದಾರರ ಸಮ್ಮುಖದಲ್ಲಿ ಕಾನೂನು ರಿತ್ಯ ಆ.೨೩ರಂದು ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೧-೩೦ರವರೆಗೆ ಮತ್ತು ಮಧ್ಯಾಹ್ನ…

Read More

ವಿಜಯಪುರ: ಅನರ್ಹ ಕುಟುಂಬಗಳು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಬಿಪಿಎಲ್ ಪಡಿತರ ಚೀಟಿಗಳನ್ನು ಪಡೆದಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು, ಸರ್ಕಾರದ ಮಾನದಂಡಗಳ ಪ್ರಕಾರ ಅರ್ನಹರು ಹೊಂದಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ಆ.೩೧ರೊಳಗೆ ಸ್ವಯಂ ಪ್ರೇರಣೆಯಿಂದ ಆಯಾ ತಹಶೀಲ್ದಾರ ಕಚೇರಿಗೆ ಒಪ್ಪಿಸಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜ ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ವಿನಯಕುಮಾರ ಪಾಟೀಲ ಅವರು ತಿಳಿಸಿದ್ದಾರೆ.ಸರ್ಕಾರದ ಆದೇಶದಂತೆ ಜಿಲ್ಲೆಯ ಅನರ್ಹ ಪಡಿತರ ಚೀಟಿ ಪತ್ತೆ ಹಚ್ಚುವ ಅಭಿಯಾನ ಆರಂಭಿಸಲಾಗಿದ್ದು, ಈಗಾಗಲೇ ಆದಾಯ ತೆರಿಗೆ ಪಾವತಿ ಮಾಡುತ್ತಿರುವ ೨೦೮೬ ಕುಟುಂಬಗಳು, ಸರ್ಕಾರಿ ನೌಕರರು ಹೊಂದಿರುವ ೩೯೧, ಹಾಗೂ ೧.೨೦ಲಕ್ಷಕ್ಕಿಂತ ಹೆಚ್ಚಿನ ಕುಟುಂಬ ಆದಾಯ ಹೊಂದಿರುವ ೨೯೬೧೫ ಸೇರಿದಂತೆ ೩೨೦೯೨ ಬಿಪಿಎಲ್ ಪಡಿತರ ಚೀಟಿಗಳನ್ನು ತಂತ್ರಾಂಶದ ಮೂಲಕ ಪತ್ತೆ ಹಚ್ಚಿ ಪರಿಶೀಲನೆ ನಡೆಸಲಾಗುತ್ತಿದೆ.ಜಿಲ್ಲೆಯಲ್ಲಿ ಏಕವ್ಯಕ್ತಿ ಕುಟುಂಬದ ೪೦೯೭೫ ಹಾಗೂ ದ್ವಿವ್ಯಕ್ತಿ ೧೦೫೧೨೫ ಪಡಿತರ ಚೀಟಿಗಳಿದ್ದು, ಇದರಲ್ಲಿನ ಹೆಚ್ಚಿನ ಕುಟುಂಬಗಳು ಒಂದೇ ಮನೆಯಲ್ಲಿ ಕೂಡಿ ವಾಸವಿದ್ದು, ಕೃತಕವಾಗಿ ಪ್ರತ್ಯೇಕವಾಗಿರುವುದಾಗಿ ಪಡಿತರ ಚೀಟಿ…

Read More

ವಿಜಯಪುರ: ಮಹಾನಗರ ಪಾಲಿಕೆಯ ೨೧ನೇ ಅವಧಿಯ ವಿವಿಧ ನಾಲ್ಕು ಸ್ಥಾಯಿ ಸಮಿತಿಗಳಿಗೆ ಸದಸ್ಯರ ಆಯ್ಕೆಗಾಗಿ ಆಗಸ್ಟ್ ೧೯ರಂದು ಚುನಾವಣೆ ನಡೆಸಲು ವಿಜಯಪುರ ಮಹಾನಗರ ಪಾಲಿಕೆ ಅಧ್ಯಕ್ಷಾಧಿಕಾರಿಗಳೂ ಆದ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು ದಿನಾಂಕ ನಿಗದಿಗೊಳಿಸಿದ್ದಾರೆ.ಚುನಾವಣಾ ವೇಳಾಪಟ್ಟಿಯಂತೆ ವಿಜಯಪುರ ಮಹಾನಗರ ಪಾಲಿಕೆಯ ಸಭಾ ಭವನದಲ್ಲಿ ಆಗಸ್ಟ್ ೧೯ರಂದು ಮಧ್ಯಾಹ್ನ ೩ ಗಂಟೆಗೆ ಸಮಯ ನಿಗದಿಪಡಿಸಿದ್ದು, ಅಂದು ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೧೨ ಗಂಟೆಯವರೆಗೆ ವಿವಿಧ ನಾಲ್ಕು ಸ್ಥಾಯಿ ಸಮಿತಿಗಳಿಗೆ ನಾಮಪತ್ರಗಳ ಸ್ವೀಕಾರ, ಮಧ್ಯಾಹ್ನ ೩ ಗಂಟೆಗೆ ಚುನಾವಣಾ ಪ್ರಕ್ರಿಯೆ ಆರಂಭವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

Read More

ವಿಜಯಪುರ: ಸಿಬ್ಬಂದಿ ನೇಮಕಾತಿ ಆಯೋಗದ ವತಿಯಿಂದ ಸ್ಟೆನೋಗ್ರಾಫರ್ (ಗ್ರೇಡ್-ಸಿ ಮತ್ತು ಡಿ) ಪರೀಕ್ಷೆ ೨೦೨೪ರ ಹುದ್ದೆಗಳ ನೇಮಕಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಸ್ಟೆನೋಗ್ರಾಫರ್ ಹುದ್ದೆಗಳ ನೇಮಕಾತಿಗಾಗಿ ಕಂಪ್ಯೂಟರ್ ಆಧಾರಿತ ಸ್ಪರ್ಧಾತ್ಮಕ ಪರೀಕ್ಷೆಯನ್ನು ದೇಶದಾದ್ಯಂತೆ ನಡೆಸಲಾಗುತ್ತಿದೆ. ಜಿಲ್ಲೆಯ ಆಸಕ್ತ ೧೨ನೇ ತರಗತಿ ಮತ್ತು ಶೀಘ್ರಲಿಪಿ ಹಾಗೂ ಬೆರಳಚ್ಚು ಪಾಸಾದ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಮಹಿಳೆಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಾಜಿ ಸೈನಿಕರಿಗೆ ಅರ್ಜಿ ಶುಲ್ಕದಲ್ಲಿ ವಿನಾಯಿತಿ ನೀಡಲಾಗಿದೆ.ಅರ್ಜಿ ಸಲ್ಲಿಸಲು ದಿನಾಂಕ : ೧೭-೦೮-೨೦೨೪ ಕೊನೆಯ ದಿನವಾಗಿದ್ದು, ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ಸಿಬ್ಬಂದಿ ನೇಮಕಾತಿ ಆಯೋಗದ ವೆಬ್‌ಸೈಟ್ www.ssckkr.kar.nic.in & https:ssc.gov.inನ್ನು ಅಥವಾ ದೂ: ೦೮೦-೨೫೫೦೨೫೨೦/೧೮೦೦೩೦೯೩೦೬೩ ಸಂಖ್ಯೆಗೆ ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಪೌರಾಡಳಿತ ಮತ್ತು ಹಜ್ ಖಾತೆ ಸಚಿವ ರಹೀಂ ಖಾನ್ ಅವರು ಆ.೧೩ರಂದು ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.ಅಂದು ಬೆಳಿಗ್ಗೆ ೯-೪೦ಕ್ಕೆ ಕಲ್ಬುರ್ಗಿಯಿಂದ ಹೊರಟು, ಮಧ್ಯಾಹ್ನ ೧೨-೪೦ಕ್ಕೆ ವಿಜಯಪುರಕ್ಕೆ ಆಗಮಿಸಲಿದ್ದಾರೆ. ಮಧ್ಯಾಹ್ನ ೧ರಿಂದ ೧-೩೦ರವರೆಗೆ ಜಿಲ್ಲೆಯ ಘನತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ ೧-೩೦ಕ್ಕೆ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಲಿದ್ದಾರೆ. ೨-೩೦ ಗಂಟೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳಿಗೆ ಸಮಬಂಧಿಸಿದ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಅಂದು ವಿಜಯಪುರದಲ್ಲಿ ವಾಸ್ತವ್ಯ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Read More

ಸುಂದರಂ ಹೋಮ್ ಫೈನಾನ್ಸಿಂದ ಮಕ್ಕಳಿಗೆ ‘ನಿಮ್ಮ ಕನಸಿನ ಮನೆ’ ಚಿತ್ರ ಬಿಡಿಸುವ ಸ್ಪರ್ಧೆ ವಿಜಯಪುರ: ಮಕ್ಕಳ ಕಲಿಕೆಯ ಜೀವಸೆಲೆಯೇ ಚಿತ್ರಕಲೆ. ಮನಸ್ಸನ್ನು ಉಲ್ಲಾಸಗೊಳಿಸುವ ಚಿತ್ರಗಳ ಜತೆ ಮಕ್ಕಳು ಅನುಸಂಧಿಸುತ್ತ ಅಂತರ್ಮುಖಿಯಾಗಿ ಓದು-ಬರಹದತ್ತ ಆಸಕ್ತಿ ಬೆಳೆಸಿಕೊಳ್ಳುತ್ತಾರೆ. ಹೀಗಾಗಿ ಮಕ್ಕಳಲ್ಲಿನ ಕಲೆಯನ್ನು ಪ್ರೋತ್ಸಾಹಿಸುವದು ಬಹುಮುಖ್ಯ ಎಂದು ಕಾನಿಪ ಜಿಲ್ಲಾ ಉಪಾಧ್ಯಕ್ಷ ಇಂದುಶೇಖರ ಮಣೂರ ಹೇಳಿದರು.ಅವರು ರವಿವಾರದಂದು ನಗರದ ಲಿಂಗದ ಗುಡಿ ರಸ್ತೆಯಲ್ಲಿರುವ ಸುಂದರಂ ಹೋಮ್ ಶಾಖಾ ಕಚೇರಿಯಲ್ಲಿ ಸ್ವಾತಂತ್ರೋತ್ಸವದ ನಿಮಿತ್ತ 12 ವರ್ಷದೊಳಗಿನ ಮಕ್ಕಳಿಗೆ ಹಮ್ಮಿಕೊಂಡ ‘ನಿಮ್ಮ ಕನಸಿನ ಮನೆ’-ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ಮಕ್ಕಳಲ್ಲಿ ಸುಪ್ತವಾಗಿರುವ ಕಲಾ ಪ್ರತಿಭೆಗೆ ನೀರೆರೆದು ಪ್ರೋತ್ಸಾಹಿಸಿ, ಭವಿಷ್ಯದಲ್ಲಿ ಮಕ್ಕಳನ್ನು ಕಲಾವಿದರನ್ನಾಗಿ ರೂಪಿಸುವ ಕೆಲಸ ಸುಂದರಂ ಹೋಮ್ ಸಂಸ್ಥೆಯಿಂದ ನಡೆಯುತ್ತಿರುವುದು ಹೆಮ್ಮೆ ತಂದಿದೆ ಎಂದು ಹೇಳಿದರು.ಶಿಕ್ಷಕ ಸಾಹಿತಿ ಸಂತೋಷ ಬಂಡೆ ಮಾತನಾಡಿ, ಚಿತ್ರಕಲೆಯು ಮಕ್ಕಳ ರಚನಾ ಸಾಮರ್ಥ್ಯದ ಬೆಳವಣಿಗೆ, ಭಾವಾಭಿವ್ಯಕ್ತಿ, ಕಲ್ಪನಾಶಕ್ತಿ ವರ್ಧಿಸುವುದಕ್ಕೆ ಸಹಕಾರಿ. ಮಗು ಮಾತಿನಲ್ಲಿ ವ್ಯಕ್ತಪಡಿಸಲಾಗದ ತನ್ನ ಸಂವೇದನೆಯನ್ನು ಚಿತ್ರಕಲೆಯಂತಹ ಮೌನ ಭಾಷೆಯ…

Read More