ವಿಜಯಪುರ: “ಕುಮಾರವ್ಯಾಸ, ಕುಮಾರವಾಲ್ಮೀಕಿ, ರನ್ನ , ಪಂಪ, ನಾಗಚಂದ್ರ ಮುಂತಾದ ಕವಿಗಳು ಸೇರಿದಂತೆ ಕಾವ್ಯ ಬರೆದವರು ಉತ್ತರ ಕರ್ನಾಟಕ ಭಾಗದವರು. ಆದರೆ, ಅದನ್ನು ವಾಚನ ಮಾಡುತ್ತಿರುವವರು ಬೆಂಗಳೂರು, ಮೈಸೂರಿನವರು ಎಂದು ಕಲ್ಯಾಣರಾವ್ ದೇಶಪಾಂಡೆ ಹೇಳಿದರು.
ರವಿವಾರ ನಗರದ ಬಿಡಿಇ ಸೊಸೈಟಿಯಲ್ಲಿ ಅಖಿಲ ಭಾರತೀಯ ‘ಸಾಹಿತ್ಯ ಪರಿಷದ್(ರಿ) ವಿಜಯಪುರ’ ಗುರುಪೂರ್ಣಿಮ ಅಂಗವಾಗಿ ಆಯೋಜಿಸಿದ ‘ಕುಮಾರವ್ಯಾಸ ಭಾರತ ಗಮಕ’ ಕಾರ್ಯಕ್ರಮದಲ್ಲಿ ಹಿರಿಯ ಗಮಕಿ ಶಾಂತಾಬಾಯಿ ಕೌತಳಾ ಕುಮಾರವ್ಯಾಸ ಭಾರತದ ವಿರಾಟ ಪರ್ವದ ಕಾವ್ಯವನ್ನು ಗಾಯನ ಮಾಡಿದರು. ಕಲ್ಯಾಣರಾವ್ ದೇಶಪಾಂಡೆ ಅದನ್ನು ವ್ಯಾಖ್ಯಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಉತ್ತರ ಕರ್ನಾಟಕದಲ್ಲಿ ವಿಜಯಪುರನಲ್ಲಿ ಮಾತ್ರ ಗಮಕ ಉಳಿದಿದೆಯಂದು’ ಎಂದು ತಿಳಿಸಿದರು.
ಶರಣ ಸಾಹಿತ್ಯ ಪರಿಷತ್ತಿನ ಯುವವೇದಿಕೆ ಅಧ್ಯಕ್ಷ ಅಮರೇಶ ಸಾಲಕ್ಕಿ ಮಾತನಾಡಿ’ ಸಾಹಿತ್ಯ ಪ್ರಕಾರದಲ್ಲಿ ಗಮಕ ಅತ್ಯಂತ ಪವಿತ್ರವಾದ ಪ್ರಕಾರವಾಗಿದ್ದು ಇದನ್ನು ಮುಂದಿನ ಪೀಳಿಗೆಗೂ ತಲುಪಿಸುವ ನಿಟ್ಟಿನಲ್ಲಿ ‘ಅಖಿಲ ಭಾರತೀಯ ಸಾಹಿತ್ಯ ಪರಿಷದ್(ರಿ) ವಿಜಯಪುರ’ ಪ್ರಯತ್ನವನ್ನು ಶ್ಲಾಘಿಸಿದರು. ‘ಸಾತ್ವಿಕ ಸಾಹಿತ್ಯ ಮತ್ತು ರಾಷ್ಟ್ರದ ಏಕತೆ ದೃಷ್ಠಿಯಿಂದ ಅಭಾಸಾಪ ಕಾರ್ಯನಿರ್ವಹಿಸುತ್ತಿದೆ” ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಭಾಸಾಪ ವಿಜಯಪುರ ಜಿಲ್ಲಾಧ್ಯಕ್ಷ ನಾರಾಯಣ ಬಾಬಾನಗರ ಅಧ್ಯಕ್ಷನುಡಿಗಳನ್ನಾಡಿದರು.
ನಿರೂಪಣೆ ರಾಹುಲ್ ಮರಳಿ , ಸ್ವಾಗತ-ಪರಿಚಯ ಶ್ರೀರಂಗ ಕುಲಕರ್ಣಿ, ವಂದನಾರ್ಪಣೆ – ಮಯೂರು ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಜಿ.ಆರ್‌ಕುಲಕರ್ಣಿ, ಬಿ.ಎಮ್.ಪಾಟೀಲ. ಸರಸ್ವತಿ ಕುಲಕರ್ಣಿ, ಪುಷ್ಪ ಕುಲಕರ್ಣಿ, ಮೋಹನ ಕೌತಾಳ , ಬಾಬುರಾವ್ ಕುಲಕರ್ಣಿ, ಅನಿಲಕುಮಾರ ಮಾಶ್ಯಾಳಕರ, ಕೇಶವ ಕುಲಕರ್ಣಿ, ಬಲವಂತರಾವ ಕುಲಕರ್ಣಿ, ಡಂಬಳ ಸರ್, ಶ್ರೀರಂಗ ಪುರಾಣಿಕ, ಅರುಣ ಕುಲಕರ್ಣಿ, ಓಂಕಾರ ಅಥರ್ಗಾ, ಸಂತೋಷ ಕಳ್ಳಿಗುಡ್ಡ, ಸಂತೋಷ ಜೋಶಿ, ಚಿದಾನಂದ ಕೂಸೂರ, ಅರಣು ಮರಳಿ, ಅಂಬಾದಾಸ ಜೋಶಿ ಮುಂತಾದವರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

