ವಿಜಯಪುರ: ಸರ್ಕಾರಿ ಹಾಗೂ ಅಮಾಯಕರ ಆಸ್ತಿಗಳನ್ನು ಕಬಳಿಸುವ ಸಾಧನವಾಗಿ ಮಾರ್ಪಟ್ಟಿರುವ ವಕ್ಫ್ ಕಾಯ್ದೆಗೆ ತಿದ್ದುಪಡಿ ವಿಧೇಯಕವನ್ನು ಮಂಡಿಸಿರುವ ಕೇಂದ್ರ ಸರ್ಕಾರದ ನಿರ್ಣಯ ಸ್ವಾಗತಾರ್ಹ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.
ವಕ್ಫ್ ಮಂಡಳಿಗಳು ಮತ್ತು ವಕ್ಫ್ ಆಸ್ತಿಗಳಿಗೆ ಅನಿಯಂತ್ರಿತ ಅಧಿಕಾರಕ್ಕೆ ಮಿತಿಯನ್ನು ತರುವ ನಿಟ್ಟಿನಲ್ಲಿ ವಕ್ಫ್ ಕಾಯ್ದೆ ತಿದ್ದುಪಡಿ ಅತ್ಯವಶ್ಯವಾಗಿತ್ತು. ಈ ಅಸಾಂವಿಧಾನಿಕ ವಕ್ಫ್ ಕಾಯ್ದೆಯನ್ನು ರದ್ದುಗೊಳಿಸುವಂತೆ ಕೋರಿ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಜಿ ಅವರಿಗೆ ೪-೯-೨೦೨೩ ರಂದು ಪತ್ರ ಬರೆದಿದ್ದೆ. ಗುರುವಾರ (೮-೮-೨೦೨೪) ವಕ್ಫ್ ಕಾಯ್ದೆ ತಿದ್ದುಪಡಿ ವಿಧೇಯಕವನ್ನು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರಾದ ಕಿರಣ್ ರಿಜುಜ್ ಅವರು ಲೋಕಸಭೆಯಲ್ಲಿ ಮಂಡಿಸಿರುವುದು ಸ್ವಾಗತಾರ್ಹ ನಿರ್ಣಯವಾಗಿದೆ.
ಈ ಮಸೂದೆ ಅಂಗಿಕಾರಗೊಂಡರೆ, ವಕ್ಫ್ ಮಂಡಳಿ ಮನಸ್ಸಿಗೆ ಬಂದಂತೆ ತಮಗೆ ಬೇಕಾದ ಆಸ್ತಿಗಳನ್ನು ಕಬಳಿಸುವ ಹುನ್ನಾರ ತಪ್ಪಿಸಬಹುದು. ಅಕ್ರಮವಾಗಿ ಆಸ್ತಿಗಳನ್ನು ತಮ್ಮದೆಂದು ಆದೇಶ ಹೊರಡಿಸುವುದನ್ನು ಪ್ರಶ್ನಿಸಲು ಅವಕಾಶ ದೊರೆಯುತ್ತದೆ. ಇದರಿಂದ ಅಮಾಯಕರಿಗೆ ಹಾಗೂ ಸರ್ಕಾರಕ್ಕೆ ಆಗುತ್ತಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅನುಕೂಲವಾಗುತ್ತದೆ ಎಂದು ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

