Author: editor.udayarashmi@gmail.com

ಸುಮನ್ ಪಾಟೀಲ್,ಕೆಸಿಪಿ ಕಾಲೇಜ್ ಜರ್ನಲಿಸಂ ವಿದ್ಯಾರ್ಥಿನಿ, ವಿಜಯಪುರ ಕೇಸರಿ ಬಿಳಿ ಹಸಿರು ಬಾವುಟ , ಹೂವುಗಳು ಬಲೂನ್ಗಳು, ಸಾಲ ಕಾಲೇಜು ಬ್ಯಾಂಕ್ ಕಚೇರಿಗಳ ಮುಂದೆ ನಮ್ಮ ಭಾರತದ ರಾಷ್ಟ್ರೀಯ ಬಾವುಟದ ಬಣ್ಣಗಳ ರಂಗೋಲಿ, ಹ್ಯಾಪಿ ಇಂಡಿಪೆಂಡೆನ್ಸ್ ಡೇ ಹೇಳುವ ಮಕ್ಕಳ ಭಾಷಣಗಳು , ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು ಎಂಬ ದೇಶಭಕ್ತಿ ಗೀತೆ, ದೇಶಭಕ್ತಿ ಗೀತೆಗಳ ಮೇಲೆ ನೃತ್ಯಗಳು, ಪಿರಮಿಡ್ ಗಳು ಹಲವಾರು ಕಾರ್ಯ ಕ್ರಮಗಳು ಈ ದಿನ ಅಗಸ್ಟ್ 15 ಅಂದರೆ ನಮ್ಮ ಭಾರತ ಸ್ವಾತಂತ್ರ್ಯ ದಿನವನ್ನು ಇನ್ನಷ್ಟು ಮೆರಗುಗೊಳಿಸುತ್ತವೆ.ಇಂದಿಗೆ ಅಂದರೆ 78 ವರ್ಷಗಳ ಹಿಂದೆ ನಮ್ಮ ಭಾರತ ಬ್ರಿಟಿಷ್ ಸಾಮ್ರಾಜ್ಯ ಅಡಿಯಲ್ಲಿ ವರ್ಷಗಳ ಗುಲಾಮಗಿರಿ ಬಂಧನದ ನಂತರ, 1947 ಅಗಸ್ಟ್ 15 ರಂದು ಸ್ವಾತಂತ್ರ ಪಡೆಯಿತು. ಇದು ಸುಲಭದ ಕೆಲಸವಾಗಿರಲಿಲ್ಲ. ಮಹಾತ್ಮ ಗಾಂಧೀಜಿ ಜವಹರಲಾಲ್ ನೆಹರು, ಸುಭಾಷ್ ಚಂದ್ರ ಬೋಸ್, ಲಾಲ್ ಬಹದ್ದೂರ್ ಶಾಸ್ತ್ರಿ, ಲಾಲಾ ಲಜಪತ ರಾಯ್, ರಾಣಿ ಲಕ್ಷ್ಮೀಬಾಯಿ, ಬಾಲ್ ಗಂಗಾಧರ್ ತಿಲಕ್…

Read More

“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ – ಗದಗ ನಿಮಗೆ ಓದಿಸಲು ಅದೆಷ್ಟು ಖರ್ಚು ಮಾಡಿದ್ದೇವೆ ಗೊತ್ತಾ, ಹೊಟ್ಟೆ ಬಟ್ಟೆ ಕಟ್ಟಿ ನಾವು ಅಷ್ಟೊಂದು ಸಪೋರ್ಟ್ ಮಾಡಿರೋದ್ರಿಂದಲೇ ನೀನು ಇಂದು ಇಷ್ಟು ಮುಂದೆ ಬಂದಿರುವುದು, ಕಣ್ಣಿಗೆ ಹೆಣ್ಣಿಗೆ ಬಿಟ್ಟುಕೊಂಡು ಹಗಲು ರಾತ್ರಿ ನಿಮ್ಮನ್ನು ಓದಿಸಿದ್ದೇವೆ, ನಿಮ್ಮನ್ನು ಓದಿಸಬೇಕಾದರೆ ಕಣ್ಣೀರಲ್ಲ ರಕ್ತ ಸುರಿಸಿ ದುಡಿದಿದ್ದೇವೆಅಕಸ್ಮಾತ್ ನಾನು ನಿನ್ನನ್ನು ನಮ್ಮಿಂದ ಸಾಧ್ಯವಾಗುವುದಿಲ್ಲ ಅಂತ ಬಿಟ್ಟು ಹೋಗಿದ್ರೆ ನೀನೇನ್ ಆಗ್ತಿದ್ದೆ ಗೊತ್ತಾನೀ ಹುಟ್ಟೋಕು ಮುಂಚೆ ನಿನ್ನನ್ನ ಅಬಾರ್ಷನ್ ಮಾಡಿಸಿ ತೆಗೆಸಬೇಕು ಅಂತ ಮಾಡಿದ್ದೆ ನಾನೇನು ಮಾಡಿದ್ರೂ ನಿನಗೆ ಅದರ ಕಿಮ್ಮತ್ತು ಗೊತ್ತಾಗ್ತಾ ಇಲ್ಲ, ನಾನು ಸತ್ತು ಹೋದ ಮೇಲೆ ನನ್ನ ಬೆಲೆ ನಿನಗೆ ಗೊತ್ತಾಗುತ್ತದೆ… ಹೀಗೆಲ್ಲಾ ಪಾಲಕರು ತಮ್ಮ ಮಕ್ಕಳಿಗೆ ಹೇಳುವುದನ್ನು ಆಗಾಗ ನಾವು ಕೇಳುತ್ತೇವೆ. ಇದು ಅವರ ಮನದಾಳದ ಮಾತುಗಳು. ಮಕ್ಕಳನ್ನು ಬೆಳೆಸಿ ಅವರಿಗೆ ನಾವು ಉಪಕಾರ ಮಾಡಿದ್ದೇವೆ ಎಂಬಂತಹ ಭಾವವನ್ನು ಅವರಲ್ಲಿ ಬಿತ್ತುವ ಪಾಲಕರು ಅವರಿಂದ ಕೃತಜ್ಞತೆಯ ಬೆಳೆಯನ್ನು ನಿರೀಕ್ಷಿಸುತ್ತಾರೆ. ಆದರೆ…

Read More

ವಿಜಯಪುರ: ಪುಸ್ತಕದ ಮೌಲ್ಯ ಅರಿಯಲು ಗ್ರಂಥಾಲಯ ಅವಶ್ಯ. ಪುಸ್ತಕ ನಮ್ಮ ಜೀವನಕ್ಕೆ ಬೆಳಕು ಕೊಡುವಂತಹದು. ಹೆಚ್ಚೆಚ್ಚು ಸದಸ್ಯರನ್ನು ಮಾಡಿ ಗ್ರಂಥಾಲಯದ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.ಅವರು ತಾಲೂಕಿನ ನಾಗಠಾಣ ಗ್ರಾಮದ ಅರಿವು ಕೇಂದ್ರ ಗ್ರಂಥಾಲಯದಲ್ಲಿ ಹಮ್ಮಿಕೊಂಡ ಗ್ರಂಥಪಾಲಕರ ದಿನಾಚರಣೆಯ ನಿಮಿತ್ತ ‘ಸುಶಿಕ್ಷಿತ ಸಮಾಜ ನಿರ್ಮಾಣದಲ್ಲಿಗ್ರಂಥಾಲಯದ ಪಾತ್ರ’ಕುರಿತು ಮಾತನಾಡಿದರು.ಗ್ರಂಥಾಲಯವು ಜ್ಞಾನದ ಕಣಜವಾಗಿದ್ದು, ಓದುಗನಿಗೆ ಜ್ಞಾನವನ್ನು ಉಣಬಡಿಸುವ ಗ್ರಂಥಪಾಲಕರ ಶ್ರಮ ಬಹಳವಿದೆ. ಭಾರತದಲ್ಲಿ ಸಾರ್ವಜನಿಕ ಗ್ರಂಥಾಲಯಗಳು ಬೆಳೆಯುವುದಕ್ಕೆ ಡಾ. ಎಸ್‌ ಆರ್‌ ರಂಗನಾಥನ್‌ ಪ್ರಮುಖ ಕಾರಣ. ಅವರು ನೀಡಿದ ಗ್ರಂಥಾಲಯದ ಪಂಚ ಸೂತ್ರಗಳು ಜಗನ್ಮಾನ್ಯತೆ ಗಳಿಸಿವೆ ಎಂದು ಹೇಳಿದರು.ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಸಾಯಬಣ್ಣ ಗೌಡೆನ್ನವರ ಮಾತನಾಡಿ, ದೇಹಕ್ಕೆ ಅನ್ನ, ನೀರು, ಗಾಳಿ, ಎಷ್ಟು ಮುಖ್ಯವೋ ಹಾಗೆಯೇ ಮಾನವನ ಮತ್ತು ಸಮಾಜದ ವಿಕಾಸಕ್ಕೆ ಪುಸ್ತಕಗಳು ಬಹು ಮುಖ್ಯ. ಪುಸ್ತಕಗಳು ಸದಾ ಒಳ್ಳೆಯ ಆಲೋಚನೆಗೆ ದಾರಿ ಮಾಡಿಕೊಟ್ಟು, ಸುಶಿಕ್ಷಿತ ಸಮಾಜ ನಿರ್ಮಿಸುವಲ್ಲಿ ನಿರ್ಣಾಯಕವಾಗಿವೆ ಎಂದು ಹೇಳಿದರು.ಗ್ರಂಥಪಾಲಕ ಮಂಜುನಾಥ ಗಂಗನಳ್ಳಿ ಅಧ್ಯಕ್ಷತೆ…

Read More

ವಿಜಯಪುರ: ಪರಿಸರ ಸಂರಕ್ಷಣೆಗಾಗಿ ಹಸಿರು ಇಂಧನ ಮತ್ತು ಉತ್ತಮ ಆರೋಗ್ಯಕ್ಕಾಗಿ ಸಾವಯವ ಆಹಾರ ಉತ್ಪಾದನೆಗೆ ಪ್ರೋತ್ಸಾಹ ನೀಡಲು ಎಲ್ಲರೂ ಕೈಜೋಡಿಸಬೇಕಾಗಿದೆ ಎಂದು ಕೈಗಾರಿಕೆ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ಮಂಗಳವಾರ ವಿಜಯಪುರ ನಗರದಲ್ಲಿ ಹೆಸ್ಕಾಂ ನ ವಿಜಯಪುರ ನಗರ ಉಪವಿಭಾಗ- 1, ಶಿವಗಿರಿ ಶಾಖಾಧಿಕರಿಗಳ ಕಟ್ಟಡ ಹಾಗೂ ಭೂತನಾಳ ಶಾಖಾಧಿಕಾರಿಗಳ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.ಅಭಿವೃದ್ಧಿ ಯೋಜನೆಗಳಿಗೆ ವಿದ್ಯುಚ್ಛಕ್ತಿ ಅಗತ್ಯವಾಗಿದೆ. ಆದರೆ, ಇದೇ ವಿದ್ಯುಚ್ಛಕ್ತಿ ಉತ್ಪಾದನೆಗೆ ಪರಿಸರಕ್ಕೂ ಹಾನಿಯಾಗಿದೆ. ಅಭಿವೃದ್ಧಿಗೆ ಅಗತ್ಯವಾಗಿರುವ ವಿದ್ಯುತ್ ಉತ್ಪಾದನೆಗೆ ಜಲವಿದ್ಯುತ್, ಪವನ ವಿದ್ಯುತ್ ಮತ್ತು ಸೋಲಾರ್ ವಿದ್ಯುತ್ ನಂಥ ಹಸಿರು ಇಂಧನ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಸಾರ್ವಜನಿಕರೂ ಕೂಡ ಈ ನಿಟ್ಟಿನಲ್ಲಿ ಕೈ ಜೋಡಿಸಬೇಕು. ಮನೆಗಳ ಮೇಲೆ ಸೋಲಾರ್ ವಿದ್ಯುತ್ ಉತ್ಪಾದನೆ ಸಲಕರಣೆ ಬಳಸಬೇಕು. ಈ ಮೂಲಕ ಈಗಾಗಲೇ ಹಾನಿಯಾಗಿರುವ ಪರಿಸರವನ್ನು ಕಾಪಾಡಬೇಕಿದೆ. ನಮ್ಮ ಪೂರ್ವಜರು ಬಿಟ್ಟು ಹೋಗಿರುವ ಉತ್ತಮ ಪರಿಸರ ಮತ್ತು ಭೂಮಂಡಲವನ್ನು ನಾವು ಮುಂದಿನ…

Read More

ಬಬಲೇಶ್ವರದಲ್ಲಿ ವಿದ್ಯುತ್ ಪರಿವರ್ತಕಗಳ ದುರಸ್ಥಿ & ಪರೀಕ್ಷಣಾ ಕೇಂದ್ರ ಉದ್ಘಾಟಿಸಿದ ಸಚಿವ ಎಂ.ಬಿ.ಪಾಟೀಲ ಮಾಹಿತಿ ವಿಜಯಪುರ: ರೈತರಿಗೆ ಗುಣಮಟ್ಟದ ವಿದ್ಯುತ್ ಪೂರೈಸಲು ಮತ್ತು ಟ್ರಾನ್ಸಫಾರ್ಮರ್ ಸಮಸ್ಯೆಗೆ ಪರಿಹಾರ ಒದಗಿಸಲು ಹಲವಾರು ಸುಧಾರಣೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ಮಂಗಳವಾರ ಬಬಲೇಶ್ವರ ಪಟ್ಟಣದಲ್ಲಿ ಹೆಸ್ಕಾಂ ಪರೀಕ್ಷಾ ಕೇಂದ್ರದ ಆವರಣದಲ್ಲಿ ರೂ. 27 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ವಿದ್ಯುತ್ ಪರಿವರ್ತಕಗಳ ದುರಸ್ಥಿ ಮತ್ತು ಪರೀಕ್ಷಣಾ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಒಂದು ಕಾಲದಲ್ಲಿ ರೈತರು ಟಿಸಿ ದುರಸ್ಥಿಗಾಗಿ ಸಾವಿರಾರು ರೂಪಾಯಿ ಖರ್ಚುಮಾಡಿ ಅಲೆದಾಡಬೇಕಿತ್ತು. ಅಲ್ಲದೇ, ಹಣ ನೀಡಿದರೂ ಟಿಸಿ ದುರಸ್ಥಿಗೆ ತಿಂಗಳುಗಟ್ಟಲೆ ಕಾಯಬೇಕಿತ್ತು. ಇದಕ್ಕೆ ಪರಿಹಾರ ಒದಗಿಸಲು ಈಗ ಬಬಲೇಶ್ವರದಲ್ಲಿ ವಿದ್ಯುತ್ ಪರಿವರ್ತಕಗಳ ದುರಸ್ಥಿ ಮತ್ತು ಪರೀಕ್ಷಣಾ ಕೇಂದ್ರ ಉದ್ಘಾಟಿಸಲಾಗಿದೆ. ಇದರಿಂದ ಪ್ರತಿ ತಿಂಗಳು ಗರಿಷ್ಠ 120 ಟಿಸಿಗಳ ನಿರ್ವಹಣೆ ದುರಸ್ಥಿ ಮತ್ತು ಪರೀಕ್ಷೆ ಸಾಧ್ಯವಾಗಲಿದೆ. ಅಷ್ಟೇ ಅಲ್ಲ,…

Read More

ಆಲಮಟ್ಟಿ: ಸುಕ್ಷೇತ್ರ ಯಲಗೂರು ಹನುಮಾನ ದೇವಸ್ಥಾನಕ್ಕೆ ಮಂಗಳವಾರ ಬೆಳಿಗ್ಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ದಂಪತಿ ಸಮೇತ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು.ಲೋಕಾಯುಕ್ತರನ್ನು ಯಲಗೂರೇಶ್ವರ ದೇವಸ್ಥಾನ ಟ್ರಸ್ಟ್ ಸಮಿತಿ ಹಾಗೂ ಯಲಗೂರೇಶ್ವರ ಅನ್ನದಾಸೋಹ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.ದೇವಸ್ಥಾನದ ಪ್ರಾಂಗಣದಲ್ಲಿ ಬದಲಾವಣೆಯಾಗಿದ್ದು, ಸಾಕಷ್ಟು ಅಭಿವೃದ್ಧಿ ಕಾಮಗಾರಿ ನಡೆದಿದ್ದನ್ನು ನೋಡಿ ಸಂತಸ ವ್ಯಕ್ತಪಡಿಸಿದರು. ದೇವಸ್ಥಾನದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಟ್ರಸ್ಟ್ ಸಮಿತಿಗೆ ಲೋಕಾಯುಕ್ತರು ಸೂಚಿಸಿದರು.ಅನ್ನದಾಸೋಹ ಟ್ರಸ್ಟ್ ಸಮಿತಿಯ ಅಧ್ಯಕ್ಷ ಶ್ಯಾಮ ಪಾತರದ ನೇತೃತ್ವದಲ್ಲಿ ಹಲವರು ಸನ್ಮಾನಿಸಿದರು.ಈ ಸಂದರ್ಭದಲ್ಲಿ ಭೀಮಣ್ಣ ಪೂಜಾರಿ, ಯಲಗೂರದಪ್ಪ ಪೂಜಾರಿ, ಗುಂಡಪ್ಪ ತಳವಾರ, ದೇವಸ್ಥಾನ ಟ್ರಸ್ಟ್ ಸಮಿತಿಯ ಕಾರ್ಯದರ್ಶಿ ಸಂತೋಷ ಪೂಜಾರ, ಭೀಮಣ್ಣ ಅವಟಗೇರ, ಶ್ರೀಶೈಲ ಹೂಗಾರ, ಜಂಗಪ್ಪ ಬೇವೂರ, ನರಸಿಂಹಾಚಾರ್ಯ ಆಲೂರ, ಗೋಪಾಲ ಹಿಪ್ಪರಗಿ, ಬದರಿನಾರಾಯಾಣ ಚಿಮ್ಮಲಗಿ ಮತ್ತೀತರರು ಇದ್ದರು.

Read More

ವಿಜಯಪುರ: ಹರ ಘರ ತಿರಂಗಾ ಅಭಿಯಾನದ ಅಂಗವಾಗಿ ನಗರದ ಚಿದರಂಬರ ನಗರದಲ್ಲಿರುವ ಚಿದಂಬರ ಜೋಶಿ ರೊಳ್ಳಿ ಅವರ ಮನೆಯ ಮೇಲೆ ಧ್ವಜ ಹಾರಿಸುವ ಮೂಲಕ ಹರ ಘರ ತಿರಂಗಾ ಅಬಿಯಾನಕ್ಕೆ ಸಂಸದ ರಮೇಶ ಜಿಗಜಿಣಗಿ ಚಾಲನೆ ನೀಡಿ ಮಾತನಾಡಿದರು.ದೇಶಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷ ತುಂಬಿರುವ ಸಂದರ್ಭದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು (ಆಜಾದಿ ಕಾ ಅಮೃತ ಮಹೋತ್ಸವ) ಸಂಭ್ರಮದಿಂದ ದೊಡ್ಡ ಪ್ರಮಾಣದಲ್ಲಿ ಆಚರಿಸಲು ನಮ್ಮ ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ಕರೆ ಕೊಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯದ ಪ್ರತಿ ಮನೆಯ ಮೇಲೂ ತ್ರಿವರ್ಣ ಧ್ವಜ ಹಾರಿಸಬೇಕು. ಮನೆ ಮನೆಯಲ್ಲೂ ತ್ರಿವರ್ಣ ಧ್ವಜದ (ಹರ್ ಘರ ತಿರಂಗ) ಮೂಲಕ ದೇಶಭಕ್ತಿಯ ಜ್ವಾಲೆ ಮೂಡಿಸುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿಕೊಂಡರು.ಈ ಸಂದರ್ಭದಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ವಿಧಾನ ಪರಿಷತ್ ಮಾಜಿ ಶಾಸಕರಾದ ಅರುಣ ಶಹಾಪೂರ, ರಾಜ್ಯ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಉಮೇಶ ಕಾರಜೋಳ, ಜಿಲ್ಲೆಯ ಪ್ರಧಾನ ಕಾರ್ಯದರ್ಶಿಗಳಾದ…

Read More

ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಲು ಡ್ರೋನ್ ದೀದಿ ಜಕ್ಕಮ್ಮ ಗೆ ದೆಹಲಿಗೆ ಆಹ್ವಾನ – ಡಾ.ಸಂತೋಷ ನವಲಗುಂದಯಡ್ರಾಮಿ: ಗ್ರಾಮೀಣ ಭಾಗದ ಮಹಿಳೆಯರ ಸ್ವಾವಲಂಬಿ ಬದುಕಿಗಾಗಿ ಸರ್ಕಾರಗಳು ಜಾರಿಗೆ ತಂದಿರುವ ಅನೇಕ ಮಹತ್ವಾಕಾಂಕ್ಷಿ ಯೋಜನೆಗಳು ಜಾರಿಯಲ್ಲಿವೆ. ಮಹಿಳೆ ಅಬಲೆಯಲ್ಲ; ಅವಳು ಸಬಲೆ ಅನ್ನುವ ಮಾತು ಪ್ರಸ್ತುತ ಸಮಸ್ತ ಮಹಿಳಾ ಲೋಕದ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ.ಮಹಿಳೆ ಕೇವಲ ಅಡುಗೆ ಮನೆಗೆ ಸೀಮಿತ ಅನ್ನುವ ದಿನಗಳು ಮುಗಿದು ಹೋಗಿವೆ. ಪುರುಷನಷ್ಟೇ ಸಮಾನಳು ಎನ್ನುವುದನ್ನು ಈಗಾಗಲೇ ಮಹಿಳೆ ಎಲ್ಲ ರಂಗಗಳಲ್ಲಿಯೂ ಪ್ರಗತಿ ಸಾಧಿಸುತ್ತಿರುವುದು ಕಾಣುತ್ತಿದ್ದೇವೆ. ಈ ದಿಶೆಯಲ್ಲಿ ಕೃಷಿ ಕ್ಷೆತ್ರದಲ್ಲೂ ಮಹಿಳೆ ಹಿಂದೇನಿಲ್ಲ.ಹೌದು! ಗ್ರಾಮೀಣ ಯುವ ಮಹಿಳೆ ನಮೋ ಡ್ರೋನ್ ದೀದಿ ಆಗುವ ಮೂಲಕ ಗ್ರಾಮೀಣ ರೈತರ ಕೃಷಿ ಚಟುವಟಿಕೆಗಳಿಗೆ ನೆರವಾಗಲು ಸಜ್ಜುಗೊಂಡಿರುವುದು ಗ್ರಾಮೀಣ ರೈತರಲ್ಲಿ ಸಂತಸ ತಂದಿದೆ. ಇಂತಹ ಕೃಷಿ ಸಾಧಕಿಯೇ ಯಡ್ರಾಮಿ ತಾಲೂಕಿನ ಮಳ್ಳಿ ಗ್ರಾಮದ ಜಕ್ಕಮ್ಮ ಬಸವರಾಜ ಕೋಟ್ಯಾಳ.ನಾಳೆ ದೆಹಲಿಯಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವ ಕಾರ‍್ಯಕ್ರಮದಲ್ಲಿ ಭಾಗವಹಿಸಲು ಆಮಂತ್ರಣ ಬಂದಿರುವುದು ರೈತರಲ್ಲಿ ಹರ್ಷ ತಂದಿದೆ.ಕೇಂದ್ರ ಸರ್ಕಾರದ…

Read More

ವಿಜಯಪುರ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾದ ತಿರಂಗಾ ಅಭಿಯಾನದ ಪ್ರಯುಕ್ತ ಬಿಜೆಪಿ ನಗರ ಮಂಡಲ ವತಿಯಿಂದ ಮಂಗಳವಾರ ನಗರದಲ್ಲಿರುವ ಮಹಾನ್ ನಾಯಕರ ಪುತ್ಥಳಿ ಹಾಗೂ ವೃತ್ತಗಳನ್ನು ಸ್ವಚ್ಛಗೊಳಿಸಲಾಯಿತು.ಬೆಳಿಗ್ಗೆ ಮಹಾನ್ ನಾಯಕರಾದ ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್, ವಿಶ್ವಗುರು ಬಸವಣ್ಣ, ಲಾಲ್ ಬಹಾದ್ದೂರ ಶಾಸ್ತ್ರಿ, ನೇತಾಜಿ ಸುಭಾಸ ಚಂದ್ರ ಬೋಸ್, ವೀರ ಸಾವರ್ಕರ್, ಸಂತ ಕನಕದಾಸ, ಸಂತ ಸೇವಾಲಾಲ್, ಛತ್ರಪತಿ ಶಿವಾಜಿ ಮಹಾರಾಜ್, ಮಹಾತ್ಮ ಗಾಂಧೀಜಿ, ಅಹಿಲ್ಯಾಬಾಯಿ ಹೋಳ್ಕರ್, ಅಟಲ್ ಬಿಹಾರಿ ವಾಜಪೇಯಿ, ಬಾಬು ಜಗಜೀವನ್ ರಾವ್ ವೃತ್ತಗಳಿಗೆ ತೆರಳಿದ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಪುತ್ಥಳಿ ಮತ್ತು ವೃತ್ತವನ್ನು ಸ್ವಚ್ಛಗೊಳಿಸಿ, ಗಮನಸೆಳೆದರು.ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ, ಸ್ವಾತಂತ್ರ್ಯೋತ್ಸವ ಅಂಗವಾಗಿ ಹಮ್ಮಿಕೊಂಡಿರುವ ತಿರಂಗಾ ಅಭಿಯಾನದ ಪ್ರಯುಕ್ತ ಮಹಾನ್ ನಾಯಕರ ಸ್ಮರಣೆ ಜೊತೆಗೆ ವೃತ್ತಗಳಲ್ಲಿ ಸ್ವಚ್ಚತಾ ಅಭಿಯಾನ ಹಮ್ಮಿಕೊಂಡು ಗೌರವ ಸಲ್ಲಿಸುವ ಪ್ರಧಾನಿ ನರೇಂದ್ರ ಮೋದಿಯವರ ಕರೆಗೆ ಸ್ಪಂದಿಸಿ, ಸ್ವಚ್ಛತಾ ಅಭಿಯಾನ ನಡೆಸಲಾಗುತ್ತಿದೆ ಎಂದರು.ಈ ಸ್ವಚ್ಛತಾ ಅಭಿಯಾನದಲ್ಲಿ…

Read More

ಢವಳಗಿ:ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅವರ ಸಹಯೋಗದಲ್ಲಿ ಅಗಸ್ಟ 17,18,19 ರಂದು ಬೆಂಗಳೂರಿನ ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ನಡೆಯುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜಯಪುರ ಜಿಲ್ಲೆಯಿಂದ ವೈಯಕ್ತಿಕ ಆಟದ ಪುರುಷರ ವಿಭಾಗದಲ್ಲಿ ಗುಂಡು ಎಸೆತ,ಚಕ್ರ ಎಸೆತ,ಉದ್ದ ಜಿಗಿತದಲ್ಲಿ ಮತ್ತು ಕಬಡ್ಡಿ ಆಟದಲ್ಲೂ ವಿಜಯಪುರ ಕಬಡ್ಡಿ ತಂಡದ ನಾಯಕರಾಗಿ ಮುದ್ದೇಬಿಹಾಳ ತಾಲ್ಲೂಕಿನ ಢವಳಗಿ ಗ್ರಾಮ ಪಂಚಾಯತಿಯ ದ್ವೀತಿಯ ದರ್ಜೆ ಲೆಕ್ಕ ಸಹಾಯಕರಾದ ಎಮ್ ಕೆ ಗುಡಿಮನಿ ಅವರು ಆಯ್ಕೆಯಾಗಿದ್ದಾರೆ ಎಂದು ಸಹಾಯಕ ನಿರ್ದೇಶಕರು,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವಿಜಯಪುರ ಅವರು ಆದೇಶ ಹೋರಡಿಸಿದ್ದಾರೆ.

Read More