Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಸಿಂದಗಿ: ವೈದ್ಯರ ಮೇಲೆ ನಡೆಯುವ ಹಲ್ಲೆಗಳು, ದೌರ್ಜನ್ಯಗಳು ನಗಣ್ಯವಾಗಿವೆ. ಮನುಷ್ಯ ಯಾವ ಮಟ್ಟದಲ್ಲಿ ಪೈಶಾಚಿತನಕ್ಕೆ ಇಳಿದಿದ್ದಾನೆ ಎನ್ನುವುದರ ಪ್ರತಿಬಿಂಬ ಕೋಲ್ಕತ್ತಾದ ಆರ್.ಜಿ ಕಾರ್ ವೈದ್ಯಕೀಯ ಕಾಲೇಜಿನಲ್ಲಿ ಡಾ.ಮೂಮಿತಾ ದೇವನಾಥ್ ಇವರ ಮೇಲೆ ನಡೆದ ಅತ್ಯಾಚಾರ, ಕೊಲೆ ಪ್ರಕರಣ ಸಾಕ್ಷಿ ಎಂದು ಐಎಂಎ ತಾಲೂಕಾಧ್ಯಕ್ಷ ಡಾ.ಗಿರೀಶ ಕುಲಕರ್ಣಿ ಹೇಳಿದರು.ತಾಲೂಕು ಆಡಳಿತ ಕಚೇರಿ ಮುಂಭಾಗದಲ್ಲಿ ಭಾರತೀಯ ವೈದ್ಯಕೀಯ ಸಂಘದ ಸಿಂದಗಿ ಘಟಕದ ನೇತೃತ್ವದಲ್ಲಿ, ಎಎಫ್‌ಐ, ಐಡಿಎ, ಆಯುಷ್ಮಾನ್ ಸೇರಿ ವಿವಿಧ ವೈದ್ಯಕೀಯ ಸಂಘಗಳ ಸಹಯೋಗದಲ್ಲಿ ವೈದ್ಯರು ಪ್ರತಿಭಟನೆ ನಡೆಸಿ ಘಟನೆಯನ್ನು ಖಂಡಿಸಿ ಮನವಿ ಸಲ್ಲಿಸಿ ಮಾತನಾಡಿದ ಅವರು, ಸರ್ಕಾರಿ ಸ್ವಾಮ್ಯದ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಘಟನೆ ಇದು. ಇದನ್ನು ಮುಚ್ಚಿ ಹಾಕುವ ಕೆಲಸ ನಡೆದಿದೆ. ಮೊದಲು ಆತ್ಮಹತ್ಯೆ ಎನ್ನಲಾಯಿತು. ಹೆತ್ತವರಿಗೆ ಮಗಳ ಮುಖ ನೋಡಲು ಎರಡ್ಮೂರು ಗಂಟೆ ಬಿಡಲಿಲ್ಲ. ಕೃತ್ಯ ನಡೆದ ಸ್ಥಳ ಶಿಥಿಲಗೊಂಡಿದೆ ಎಂದು ಈಗ ನವೀಕರಣಗೊಳಿಸಲು ಮುಂದಾಗಿದ್ದು ಯಾರನ್ನೋ ರಕ್ಷಿಸಲು ಇದು ನಡೆದಿದೆ ಎನ್ನುವ ಅನುಮಾನ ಮೂಡಿದೆ. ಘಟನೆ ಖಂಡಿಸಿ ದೇಶ್ಯಾದ್ಯಂತ…
ಸಿಂದಗಿ: ವಿದ್ಯಾರ್ಥಿಗಳ ಭವಿಷ್ಯತ್ತನ್ನು ರೂಪಿಸುವ ನೈಜವಾದ ಕಳಕಳಿಯನ್ನು ಸಾರಂಗಮಠದ ಪೂಜ್ಯರು ಹೊಂದಿದ್ದಾರೆ ಎಂದು ಸಿ.ಎಂ.ಮನಗೂಳಿ ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ.ಅರವಿಂದ ಮನಗೂಳಿ ಹೇಳಿದರು.ಪಟ್ಟಣದ ಶ್ರೀ ಪದ್ಮಾರಜ ಮಹಿಳಾ ಪದವಿ ಮಹಾವಿದ್ಯಾಲಯದ ಸಭಾಭವನದಲ್ಲಿ ಶ್ರೀಪದ್ಮರಾಜ ಮಹಿಳಾ ಪದವಿ ಕಾಲೇಜು ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಸನ್ಮಾನ ಸಮಾರಂಭದ ಮುಖ್ಯ ಅತಿಥಿ ಸ್ಥಾನವನ್ನು ಅಲಂಕರಿಸಿ ಮಾತನಾಡಿದ ಅವರು, ಲಿಂ.ಚನ್ನವೀರ ಸ್ವಾಮೀಜಿಗಳು ಹಾಕಿಕೊಟ್ಟ ಮಾರ್ಗದಲ್ಲಿಯೇ ಇಂದಿನ ಪೂಜ್ಯರು ನಡೆದುಕೊಳ್ಳುತ್ತಿದ್ದಾರೆ. ಶಿಕ್ಷಣ ಸಂಸ್ಥೆಯನ್ನು ಉನ್ನತ್ತ ಮಟ್ಟದಲ್ಲಿ ಬೆಳಸುತ್ತಿದ್ದಾರೆ. ರಾಜ್ಯದಲ್ಲಿ ಪುರಾಣ-ಪ್ರವಚನ, ಸಭೆ-ಸಮಾರಂಭ, ಯೋಗ ಶಿಬಿರಗಳು ಆಗುತ್ತಿವೆ, ಆದರೂ ಅಪರಾಧಗಳ ಸಂಖ್ಯೆ ಮಾತ್ರ ಕಡಿಮೆಯಾಗದೆ ಇರುವುದು ವಿಷಾದನೀಯ. ಕಾರಣ ಪದವಿ ಶಿಕ್ಷಣ ಸರಿಯಾದರೆ ಬದುಕು ನಿರ್ಮಾಣ. ಒಂದು ವೇಳೆ ಸರಿಯಾಗದಿದ್ದರೆ ಬದುಕೇ ನಿರ್ನಾಮ ಹಾಗಾಗಿ ನಿಮ್ಮ ಬದುಕನ್ನು ಬದಲಾವಣೆ ಮಾಡುವುದೇ ಪದವಿ ಶಿಕ್ಷಣ. ಶಾಂತಿ, ಸತ್ಯ, ಅಹಿಂಸೆ ಮಾರ್ಗದಿಂದ ಮೊದಲು ಎಲ್ಲವನ್ನು ಪಾಲಿಸೋಣ ಕೊನೆಯಲ್ಲಿ ಯಾವುದಕ್ಕೂ ಜಗ್ಗದೇ ಹೋದಾಗ ಶಸ್ತ್ರ ಮಾರ್ಗ ಬಳಸುವುದು ಅನಿವಾರ್ಯವಾಗುತ್ತದೆ. ವಿದ್ಯಾರ್ಥಿಗಳು ಹೆಚ್ಚೆಚ್ಚು ಗ್ರಂಥಾಲಯದ…
ಮುದ್ದೇಬಿಹಾಳ: ಪತ್ರಕರ್ತರಾದ ನಾವು ಯಾರ ಗುಲಾಮರಲ್ಲಾ. ನಮಗೆ ಭಯ ಭೀತಿ ಎಂಬುದು ಬೇಡ ಎಂದು ಹಿರಿಯ ಪತ್ರಕರ್ತ ಜಿ.ಟಿ.ಘೋರ್ಪಡೆ ಹೇಳಿದರು.ಪಟ್ಟಣದ ರಾಘವೇಂದ್ರ ಮಂಗಲ ಕಾರ್ಯಾಲಯದಲ್ಲಿ ತಾಳಿಕೋಟೆ ಮತ್ತು ಮುದ್ದೇಬಿಹಾಳ ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ, ನೂತನ ದಿನಪತ್ರಿಕೆಯ ಲೋಕಾರ್ಪಣೆ ಹಾಗೂ ಸಾಧಕ ಪತ್ರಕರ್ತರಿಗೆ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಎಲ್ಲರಂತೆ ನಮಗೂ ಸಾವು ಎಂಬುದು ಇದ್ದೇ ಇದೆ. ಒಳ್ಳೆಯ ಕೆಲಸ ಒಳ್ಳೆಯ ಬರವಣಿಗೆಯನ್ನು ಮಾಡಿ ಸಾಯುವಂತಹ ಕೆಲಸ ಮಾಡೋಣ. ಯಾರ ಮುಲಾಜಿಗೂ ಒಳಗಾಗುವದು ಬೇಡಾ ಎಂದರು.ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಪತ್ರಿಕೋಧ್ಯಮ ಮತ್ತು ಸಮೂಹ ಸಂಹನ ವಿಭಾಗದ ಪ್ರಾಧ್ಯಾಪಕ ಅರುಣ ಹೊಸಮಠ ಮಾತನಾಡಿ, ಜನರನ್ನು ಒಗ್ಗೂಡಿಸುವದು ಜಾಗೃತಿ ಮೂಡಿಸುವಂತಹ ಕಾರ್ಯ ಮಾಧ್ಯಮಗಳು ಮಾಡುತ್ತವೆ. ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ದಲಿತ ನಾಯಕ ಎಂಬ ತಮ್ಮದೇ ಆದ ಪತ್ರಿಕೆಯನ್ನು ಹೊರಡಿಸಿ ಬ್ರಿಟಿಷರ ವಿರುದ್ಧ ಹೋರಾಡಲು ತಮ್ಮ ಪತ್ರಿಕಾ ಬಳಗದಿಂದ ಸೇವಾ ಕಾರ್ಯಕ್ಕೆ ಮುಂದಾಗಿದ್ದರು. ಸಮಾಜದ ಕಣ್ಣು ತೆರೆಸುವ…
ವಿಜಯಪುರ: ಜಿಲ್ಲಾಡಳಿತದ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಜಯಪುರ ಇವರ ಸಹಯೋಗದಲ್ಲಿ ಆ.೨೦ ರಂದು ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ದಿ: ಡಿ.ದೇವರಾಜ್ ಅರಸುರವರ ೧೦೯ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಅಂದು ಬೆಳಿಗ್ಗೆ ೯ ಗಂಟೆಗೆ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಡಿ.ದೇವರಾಜ್ ಅರಸು ಅವರ ಭಾವಚಿತ್ರ ಮೆರವಣಿಗೆ ಚಾಲನೆ ಹಾಗೂ ಬೆಳಿಗ್ಗೆ ೧೦ ಗಂಟೆಗೆ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಜಯಂತಿ ಕಾರ್ಯಕ್ರಮ ಜರುಗಲಿದ್ದು, ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ವಿಜಯಪುರ: ಸಮಾಜ ಕಲ್ಯಾಣ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅನುಯಾಯಿಗಳು ರಾಜ್ಯದಿಂದ ದಿನಾಂಕ : ೧೦-೧೦-೨೦೨೪ ರಿಂದ ೧೪-೧೦-೨೦೨೪ರ ವರೆಗೆ ಪ್ರತಿ ವರ್ಷದಂತೆ ನಾಗಪೂರದ ದೀಕ್ಷಾ ಭೂಮಿಗೆ ಭೇಟಿ ನೀಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಸಮಾಜ ಕಲ್ಯಾಣ ಇಲಾಖೆಯ ವೆಬ್‌ಸೈಟ್ https:swdservices.karnataka.gov.inಮೂಲಕ ದಿನಾಂಕ : ೩೧-೦೮-೨೦೨೪ರವರೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಜಿಲ್ಲೆಯ ಡಾ.ಬಿ.ಆರ್.ಅಂಬೇಡ್ಕರ್ ಅನುಯಾಯಿಗಳು ನಿಗದಿತ ಅವಧಿಯೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ಸಮಾಜ ಕಲ್ಯಾಣ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಗಸ್ಟ್ ೧೯ರಂದು ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮವನ್ನು ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.ಅಂದು ಬೆಳಿಗ್ಗೆ ೯:೩೦ ಗಂಟೆಗೆ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರವರೆಗೆ ನುಲಿಯ ಚಂದಯ್ಯ ಭಾವಚಿತ್ರದ ಮೆರವಣಿಗೆ ನಡೆಯಲಿದೆ.ಬೆಳಿಗ್ಗೆ ೧೦:೩೦ಕ್ಕೆ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ನಡೆವ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಸಚಿವರು, ಶಾಸಕರು ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಆ.೨೨ರಂದು ಕರ್ನಾಟಕ ಉಪ ಲೋಕಾಯುಕ್ತರಿಂದ ಅಹವಾಲು ಸ್ವೀಕಾರ ವಿಜಯಪುರ: ಕರ್ನಾಟಕದ ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ಆ.೨೨ರಂದು ನಗರದ ಸ್ಟೇಶನ್ ರಸ್ತೆಯ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕಾರ ವಿಚಾರಣೆ ನಡೆಸಲಿದ್ದು ಅಹವಾಲು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವುದರಿಂದ ವ್ಯವಸ್ಥಿತವಾಗಿ ನಿರ್ವಹಣೆ ಮಾಡುವಂತೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ಸೂಚನೆ ನೀಡಿದ್ದಾರೆ.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಕರ್ನಾಟಕದ ಉಪ ಲೋಕಾಯುಕ್ತರು ಅಂದು ಬೆಳಿಗ್ಗೆ ೧೦ ರಿಂದ ೧-೩೦ರವರೆಗೆ ಹಾಗೂ ಮಧ್ಯಾಹ್ನ ೨-೩೦ರಿಂದ ೫ ಗಂಟೆಯವರೆಗೆ ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕಾರ ವಿಚಾರಣೆ ನಡೆಸಲಿದ್ದು ಅಹವಾಲು ಕಾರ್ಯಕ್ರಮ ವ್ಯವಸ್ಥಿತವಾಗಿ ನಿರ್ವಹಣೆಗೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು. ಕಾರ್ಯಕ್ರಮದಲ್ಲಿ ಭಾಗವಹಿಸಿ ಅಹವಾಲುಗಳನ್ನು ಸಲ್ಲಿಸುವ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಅಹವಾಲುಗಳ ಸ್ವೀಕಾರ ಸೂಕ್ತ ವ್ಯವಸ್ಥೆ ಕೈಗೊಳ್ಳಬೇಕು. ಪ್ರತ್ಯೇಕವಾಗಿ ೪ ಕೌಂಟರ್‌ಗಳನ್ನು ತೆರೆಯುವ ಮೂಲಕ ಅಹವಾಲುಗಳ ಸ್ವೀಕಾರ ಸುಗಮಗೊಳಿಸಬೇಕು. ಕಾರ್ಯಕ್ರಮದಲ್ಲಿ ೫೦೦ ಕ್ಕೂ…
ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಯ ೨೧ನೇ ಅವಧಿಗೆ ವಿವಿಧ ನಾಲ್ಕು ಸ್ಥಾಯಿ ಸಮಿತಿಗಳ ಸದಸ್ಯರನ್ನು ಚುನಾಯಿಸಲು ದಿನಾಂಕ : ೧೯-೦೮-೨೦೨೪ ರಂದು ನಿಗದಿಪಡಿಸಿದ ಚುನಾವಣೆಯನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ ಎಂದು ವಿಜಯಪುರ ಮಹಾನಗರ ಪಾಲಿಕೆ ಅಧ್ಯಕ್ಷಾಧಿಕಾರಿಗಳಾದ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಎಸ್.ಬಿ.ಶೆಟ್ಟೆಣ್ಣವರ ತಿಳಿಸಿದ್ದಾರೆ.
ತಿಕೋಟಾ: ತಾಲ್ಲೂಕಿನ ಕಳ್ಳಕವಟಗಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾಗಿ ಶೇಖಸಾಬ ಮುಲ್ಲಾ ಹಾಗೂ ಉಪಾಧ್ಯಕ್ಷರಾಗಿ ಭೀಮವ್ವಾ ದೊಡಮನಿ ಆಯ್ಕೆಯಾಗಿದ್ದಾರೆ.
ಯಡ್ರಾಮಿ: ಕೊಲ್ಕಾತ್ತಾದಲ್ಲಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಹಾಗೂ ಬರ್ಬರ ಹತ್ಯೆ ನಡೆದಿರುವುದು ಅಮಾನುಷ ಕೃತ್ಯವಾಗಿದೆ. ಈ ಪ್ರಕರಣದಲ್ಲಿ ನಿಷ್ಪಕ್ಷವಾಗಿ ತನಿಖೆ ನಡೆಸಿ ವಿದ್ಯಾರ್ಥಿನಿಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಖಾಸಗಿ ವೈದ್ಯಾಧಿಕಾರಿಗಳ ಸಂಘದ ತಾಲೂಕು ಅಧ್ಯಕ್ಷ ಡಾ.ವ್ಹಾಯ್.ಎ.ಛಾಯಗೋಳ ಆಗ್ರಹಿಸಿದರು.ಯಡ್ರಾಮಿ ಪಟ್ಟಣದ ತಹಸೀಲ್ ಕಛೇರಿಯಲ್ಲಿ ಶನಿವಾರ ಐಎಮ್ಎ (ಭಾರತೀಯ ವೈದ್ಯಕೀಯ ಸಂಘ) ನೀಡಿರುವ ಮುಷ್ಕರಕ್ಕೆ ಬೆಂಬಲ ಸೂಚಿಸಿ ಖಾಸಗಿ ವೈದ್ಯಾಧಿಕಾರಿಗಳ ಸಂಘದಿಂದ ಗ್ರೇಡ್-2 ತಹಸೀಲ್ದಾರ್ ಸತ್ಯಪ್ರಸಾದ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ, ಸಾರ್ವಜನಿಕರಿಗಾಗಿ ಹಗಲಿರುಳು ಸೇವೆ ಸಲ್ಲಿಸುತ್ತಿರುವ ವೈದ್ಯರ ಮೇಲೆ ಹಲ್ಯೆಯಂತಹ ಪ್ರಕರಣಗಳು ನಡೆಯುತ್ತಿವೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ವೈದ್ಯರಿಗೆ ಸೂಕ್ತ ರಕ್ಷಣೆ ನೀಡಬೇಕು. ಹಾಗೂ ಕಠಿಣ ಕಾನೂನು ಜಾರಿಗೆ ತರಬೇಕು ಎಂದರು.ಈ ವೇಳೆ ವೈದ್ಯರಾದ ಡಾ.ಎಮ್.ಎಮ್. ಬಿರಾದಾರ, ಡಾ.ರವೀಂದ್ರ, ಡಾ.ಶಿವಪ್ರಸಾದ ಪಾಟೀಲ, ಡಾ.ಪ್ರಕಾಶ ಹವಲ್ದಾರ, ಡಾ.ಉಮೇಶ ಬದ್ರಶೆಟ್ಟಿ, ಡಾ.ಪ್ರಭು ಪೊಲೀಸಪಾಟೀಲ, ಡಾ.ಎಮ್.ಎಮ್.ಗುಡ್ನಾಳ, ಡಾ.ರಾಹುಲಗೌಡ ಬಿರಾದಾರ, ಡಾ.ವಿನೋದ ರಾಠೋಡ, ಡಾ.ಶರಣು ನೂಲಾ, ಡಾ.ಲಂಕೇಶ, ಡಾ.ಅನೀಲಕುಮಾರ, ಡಾ.ಮಹಾಂತೇಶ ಹಾಗೂ ಪ್ರಮುಖರಾದ…
