-
ಬೌದ್ಧಿಕ, ಶಾರೀರಿಕ ಮತ್ತು ಮಾನಸಿಕ ಸಾಧನೆಗೆ ಧ್ಯಾನ ಅಗತ್ಯ
ಯೋಗಸಾಧಕ ಪಂಚಾಕ್ಷರಿ ಮಿಂಚನಾಳ ನೇತೃತ್ವದಲ್ಲಿ ಧ್ಯಾನ ಕಾರ್ಯಕ್ರಮ ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಬೌದ್ಧಿಕ, ಶಾರೀರಿಕ ಮತ್ತು ಮಾನಸಿಕ ಸಾಧನೆಗೆ ಧ್ಯಾನವು ಅಗತ್ಯವಾಗಿದೆ ಎಂದು ಯೋಗಸಾಧಕ ಪಂಚಾಕ್ಷರಿ ಮಿಂಚನಾಳ ಹೇಳಿದರು.ಪಟ್ಟಣದ ಸಿದ್ಧೇಶ್ವರ ಸ್ವಾಮೀಜಿ ಕಾಲೇಜು ಆವರಣದಲ್ಲಿ ಶನಿವಾರ ಜರುಗಿದ ವಿಶ್ವ ಧ್ಯಾನ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಧ್ಯಾನ ಯೋಗದ ಅಂಗಗಳಲ್ಲಿ ಒಂದು. ಧ್ಯಾನವೇ ಮೋಕ್ಷಕ್ಕೆ ಮೂಲಸಾಧನ ಎಂದು ಹಿಂದೆ ನಮ್ಮ ಪರಂಪರೆಯ ಹೇಳಿಕೆಯಾಗಿತ್ತು. ಆದರೆ ಈಗ ನಮ್ಮ ಕಣ್ಣಿಗೆ ಕಾಣದ ಮೋಕ್ಷ ಬೇಡ ನಮ್ಮ ದೈನಂದಿನ ಜೀವನಕ್ಕೆ
-
ಮಕ್ಕಳು ಮೊಬೈಲ್ಗಳಿಂದ ದೂರವಿರಬೇಕು :ಸಿದ್ದಾಪುರ
ಪ್ರೇರಣಾ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಮಕ್ಕಳ ಬಳಗದ ೪೮ನೇ ಚಿಣ್ಣರ ನುಡಿಸಿರಿ ಸಮಾರಂಭ | ಪುಸ್ತಕ ಮಿತ್ರ ಪ್ರಶಸ್ತಿ ಪ್ರದಾನ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ಮಕ್ಕಳ ಬಳಗ ಸುವರ್ಣ ಸಂಭ್ರಮದ ಹೊಸ್ತಿಲಲ್ಲಿದೆ. ಇದರ ಸಂಸ್ಥಾಪಕರಾದ ಮಕ್ಕಳ ಸಾಹಿತಿ ಹ.ಮ.ಪೂಜಾರ ತಮ್ಮ ಬದುಕಿನ ೫೦ವರ್ಷದ ಅವಧಿ ಮಕ್ಕಳ ಏಳ್ಗೆಗಾಗಿ ವಿವಿಧ ರಚನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಲು ಸವೆಸಿದ್ದಾರೆ. ಇವರು ಇಷ್ಟು ವರ್ಷಗಳು ಯಾವುದೇ ಪ್ರಾಯೋಜಿತ ಸಹಕಾರದಿಂದ ಸಾಹಿತ್ಯ ಕಾರ್ಯಕ್ರಮಗಳನ್ನು ಮಾಡಿಲ್ಲ. ತಮ್ಮ ಪಿಂಚಣಿ ಹಣದಿಂದ ಮಕ್ಕಳಿಗೆ ಸಾಹಿತ್ಯ ರಸದೌತಣ
-
ಒಳಚರಂಡಿಯಲ್ಲಿ ಬಿದ್ದ ಆಕಳ ರಕ್ಷಣೆ
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ಬಸವೇಶ್ವರ ವೃತ್ತದ ಬಳಿ ೧೫-೨೦ ಅಡಿಯ ಒಳಚರಂಡಿಯಲ್ಲಿ ಬಿದ್ದ ಆಕಳನ್ನು ಗಮನಿಸಿದ ಸಾರ್ವಜನಿಕರು ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಕರೆ ಮಾಡಿ ತಿಳಿಸಿದಾಗ ಸಿಬ್ಬಂದಿಗಳು ಆಗಮಿಸಿ ಆಕಳನ್ನು ಮೇಲೆತ್ತಿ ಸಂರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಇವರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಈ ವೇಳೆ ಅಗ್ನಿಶಾಮಕ ಸಿಬ್ಬಂದಿಗಳಾದ ಎಸ್.ಎಸ್.ಮಠ, ಮಹಾಂತೇಶ ವಡ್ಡರ, ಶ್ರೀಧರ್, ಸಿದ್ದಲಿಂಗ ಕೋಣಶಿರಸಿಗೆ, ವಿಜಯಕುಮಾರ್ ಬಿರಾದಾರ, ಸಮೀರ್ ಕೆಸರಟ್ಟಿ ಸೇರಿದಂತೆ ಅನೇಕರಿದ್ದರು.