ವಿಜಯಪುರ: ೧೧೦ ಕೆವಿ ದೇವರಹಿಪ್ಪರಗಿ-ಸಿಂದಗಿ ವಿದ್ಯುತ್ ಪ್ರಸರಣ ಜೋಡಿ ಮಾರ್ಗದಲ್ಲಿ ವಾಹಕಗಳ ಮತ್ತು ಗೋಪುರಗಳ ಬದಲಾವಣೆ ಕಾಮಗಾರಿ ಕೈಗೊಂಡಿರುವುದರಿAದ ಈ ವಿದ್ಯುತ್ ವಿತರಣಾ ಕೇಂದ್ರದಿAದ ಸರಬರಾಜಾಗುವ ೩೩ ಕೆವಿ ಗೋಲಗೇರಿ ಹಾಗೂ ೩೩ ಕೆವಿ ಕಲಕೇರಿ ಮತ್ತು ೧೧ ಕೆವಿ ಬ್ಯಾಕೋಡ ಹಾಗೂ ೧೧ ಕೆವಿ ಬಂದಾಳ ಐಪಿ ಮಾರ್ಗಗಳಲ್ಲಿ ನವೆಂಬರ್ ೧೮ರ ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೩ ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಇಂಡಿ ಹೆಸ್ಕಾಂನ ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.