ಚಡಚಣ: ಪುಸ್ತಕದ ಸ್ನೇಹ ಬೆಳೆಸುವುದರಿಂದ ಮೆದುಳಿನ ಬೆಳವಣಿಗೆ ವೇಗ ಪಡೆಯುವುದಷ್ಟೇ ಅಲ್ಲದೆ ಬುದ್ಧಿಮತ್ತೆಯೂ ಚುರುಕುಗೊಳ್ಳುತ್ತದೆ. ಯಾವುದೇ ದೃಶ್ಯ ಮಾಧ್ಯಮಗಳೂ ಪುಸ್ತಕಗಳು ನೀಡುವ ಜ್ಞಾನವನ್ನು ಕೊಡಲು ಮತ್ತು ಓದುಗನಲ್ಲಿ ಉಂಟು ಮಾಡುವ ಮನೋವಿಕಾಸವನ್ನು ಸರಿಗಟ್ಟಲು ಸಾಧ್ಯವೇ ಇಲ್ಲ. ಪ್ರಾಥಮಿಕ ಹಂತದ ಶಿಕ್ಷಣ ಓದಲು ಕಲಿಸುತ್ತದೆ, ಉನ್ನತ ಹಂತದ ಶಿಕ್ಷಣ ಕಲಿಯಲು ಬೇಕಾದ ಓದುವ ಪರಿಯನ್ನು ತಿಳಿಸುತ್ತದೆ ಎಂದು ನಿವರಗಿ ಗ್ರಾಪಂ ಪಿಡಿಓ ಎಸ್.ಎಚ್.ಶಿನಖೇಡರವರು ಹೇಳಿದರು.
ತಾಲೂಕು ಪಂಚಾಯತ ವತಿಯಿಂದ ಮಂಗಳವಾರದಂದು ನಿವರಗಿ ಗ್ರಾಮಕ್ಕೆ ‘ವಿಶ್ವಜ್ಞಾನಿ ಡಾ. ಬಿ.ಆರ್.ಅಂಬೇಡ್ಕರ್ ಸಾರ್ವಜನಿಕ ಗ್ರಂಥಾಲಯ’ವನ್ನು ಗ್ರಾಪಂ ಅಧ್ಯಕ್ಷರಾದ ಜಯಶ್ರೀ ಹುನ್ನೂರ ಹಾಗೂ ಉಪಾಧ್ಯಕ್ಷರು ತಮ್ಮಾರಾಯ ತೇಲಿಯವರುಗಳು ಉದ್ಘಾಟನೆಗೊಳಿಸಿದರು.
ಈ ವೇಳೆಯಲ್ಲಿ ಮಾತನಾಡಿದ ಗ್ರಾಪಂ ಪಿಡಿಓ ಎಸ್.ಎಚ್.ಶಿನಖೇಡರವರು. ಮುಗಿದು ಹೋಗದ ಸಂಪತ್ತು ಎಂದರೆ ಅದು ಜ್ಞಾನ ಸಂಪತ್ತು. ಆ ಸಂಪತ್ತಿನ ಬೆಳವಣಿಗೆಗೆ ಪುಸ್ತಕ ಹವ್ಯಾಸವನ್ನು ಬೆಳಸಿಕೊಳ್ಳಬೇಕು, ಅದಕ್ಕಾಗಿ ನೂತನ ಗ್ರಂಥಾಲಯದ ಸದೋಪಯೋಗವನ್ನು ಪಡೆದುಕೊಂಡು ಜ್ಞಾನ ಸಂಪಾದನೆ ಮಾಡಿ ಅರ್ಥಪೂರ್ಣ ಬದುಕನ್ನು ನಿರ್ಮಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಗ್ರಾಪಂ ಅಧ್ಯಕ್ಷರಾದ ಪ್ರಕಾಶ ಖಾನಾಪುರ, ಗಿರಮಲ್ಲ ಪೂಜಾರಿ, ಸಂಜೀವ ದಾಂಡೇಕರ ಮತ್ತು ಮಾಜಿ ಗ್ರಾಪಂ ಉಪಾಧ್ಯಕ್ಷರಾದ ಪಲ್ಲವಿ ಕಾಬಂಳೆ, ಗ್ರಾಪಂ ಸದಸ್ಯರುಗಳಾದ ಕಾಶೀನಾಥ ಸಂಖ, ಶ್ರೀಮಂತ ಚಿಕ್ಕಲಕಿ, ಲಕ್ಷ್ಮೀಬಾಯಿ ಇಂಗಳೆ, ಸಾವಿತ್ರಿ ಕಾರಾಜನಗಿ, ಕಸ್ತೂರಿ ಬರಗುಡಿ, ಲಲಿತಾ ದಳವಾಯಿ, ದೀಪಾ ಕಾಬಂಳೆ, ಗ್ರಾಮದ ಹಿರಿಯರಾದ ಎನ.ಎ.ಪಾಟೀಲ, ಶ್ರವಣಕುಮಾರ ಕಾಬಂಳೆ, ಎನ.ಡಿ.ಜಾಹಗೀರದಾರ ಮತ್ತು ನೌಕರರ ಗೆಳೆಯರ ಬಳಗದ ಸದಸ್ಯರುಗಳು ಗ್ರಾಪಂ ಸಿಬ್ಬಂದಿಗಳಾದ ದಿಲೀಪ ಕಟ್ಟಿಮನಿ, ಪ್ರಕಾಶ ಜೀರಗಾಳೆ, ಶ್ರೀಕಾಂತ ಬಗಲಿ, ಸಾಗರ ಚವ್ಹಾಣ, ಗ್ರಂಥಪಾಲಕ ಕಮಲ ನದಾಫ್ ಸೇರಿದಂತೆ ಗ್ರಾಮದ ಇತರರು ಉಪಸ್ಥಿತರಿದ್ದರು.
Related Posts
Add A Comment