ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿದ್ಯಾರ್ಥಿಗಳು ಪದವಿ ಪೂರ್ಣಗೊಂಡ ನಂತರ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಪಡೆಯಲು ಸತತ ಅಧ್ಯಯನ, ಕಠಿಣ ಪರಿಶ್ರಮ, ಸಕಾರಾತ್ಮಕ ಚಿಂತನೆ ಮತ್ತು ಸಾಧಿಸಿಯೇ ತೀರುತ್ತೇನೆ ಎಂಬ ಆತ್ಮವಿಶ್ವಾಸದೊಂದಿಗೆ ಮುನ್ನಡೆದರೆ ಖಂಡಿತ ಯಶಸ್ಸು ದೊರೆಯುತ್ತದೆ ಎಂದು ಗುರು ಗಚ್ಚಿನಮಠ ಅವರು ಹೇಳಿದರು. ಅವರು ನಗರದ ಸಿದ್ದೇಶ್ವರ ರಸ್ತೆಯಲ್ಲಿರುವ ಎಸ್.ಎಸ್.ರಸ್ತೆಯಲ್ಲಿರುವ ಶ್ರೀ ಸಿದ್ದೇಶ್ವರ ವಾಚನಾಲಯ (ಗ್ರಂಥಾಲಯ) ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಅವರು ಮಾತನಾಡುತ್ತಾ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಪಡೆಯಲು ವಿಷಯ ಜ್ಞಾನದೊಂದಿಗೆ ಸಂದರ್ಶನ ಕಲೆ, ಸಂವಹನ ಕೌಶಲ್ಯ, ಕುಶಲಗಾರಿಕೆ, ಸೃಜನಶೀಲತೆ, ಪ್ರಾಯೋಗಿಕತೆ ಮತ್ತು ಸಮಸ್ಯೆಯನ್ನು ಎದುರಿಸುವ ಆತ್ಮಬಲವೊಂದಿದ್ದರೆ ಎಂತಹ ಸಾಧನೆ ಮಾಡಬಹುದು. ಗ್ರಂಥಗಳನ್ನು ಓದುವುದರಿಂದ ನಮ್ಮಲ್ಲಿ ವಿಷಯ ಜ್ಞಾನ ಮತ್ತು ಜ್ಞಾನ ಶಕ್ತಿ ಹೆಚ್ಚುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ಅತಥಿಗಳಾಗಿ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡ್. ಚಿದಾನಂದ ಆನೂರ, ಪ್ರಾಧ್ಯಾಪಕರಾದ ಪ್ರೊ. ಎಂ.ಎಸ್.ಖೊದ್ನಾಪೂರ, ಡಾ. ಪ್ರಕಾಶ ಹಾವೇರಿಪೇಠ, ಡಾ. ಬಸವನಗೌಡ ಶಾಡದಳ್ಳಿ ಹಾಗೂ ಗ್ರಂಥಾಲಯದ ಮಾಲೀಕ ಶ್ರೀ ಟೇತನ ನುನ್ನಾ ಇನ್ನಿತರರು ಉಪಸ್ಥಿತರಿದ್ದರು. ಈ ಕಾರಾಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

