ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕಿನ ಹಿರೇಬೇವನೂರದ ಇಂಡಿಯನ್ ಕೇನ್ ಪಾವರ ಲಿಮಿಟೆಡ್ ಸಕ್ಕರೆ ಕಾರ್ಖಾನೆಗೆ ಬೀಗ ಹಾಕಿ ಬುಧವಾರ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸಿದರು.
ಕಬ್ಬಿಗೆ ಬೆಂಬಲ ಬೆಲೆ ೩೬೦೦ ರೂ ಆಗ್ರಹಿಸಿ ಕಾರ್ಖಾನೆಗೆ ಬೀಗ ಹಾಕಿದರು. ಮತ್ತು ರೂ ೩೬೦೦ ಕಬ್ಬಿಗೆ ಬೆಲೆ ನೀಡದಿದ್ದರೆ ಇಂಡಿ ತಾಲೂಕಿನ ಭೀಮಾಶಂಕರ ಸಕ್ಕರೆ ಕಾರ್ಖಾನೆ ಮರಗೂರ, ನಾದದ ಸಕ್ಕರೆ ಕಾರ್ಖಾನೆ ಮತ್ತು ಹಿರೇಬೇವನೂರ ಸಕ್ಕರೆಗೆ ಬೀಗ ಹಾಕಲಾಗುವದು ಎಂದರು.
ಮುಖ್ಯ ಬಾಗಲಿಗೆ ಬೀಗ ಹಾಕಿ ಒಳಗೆ ಕಬ್ಬು ಬರದಂತೆ ಪ್ರತಿಭಟಿಸಲಾಗುತ್ತದೆ. ಮತ್ತು ರೂ ೩೬೦೦ ನೀಡುವ ವರೆಗೆ ಪ್ರತಿಭಟನೆ ಮಾಡಲಾಗುವದೆಂದರು.
ಬೆಳಗಾಂವ ಮತ್ತು ಬಾಗಲಕೋಟ ಜಿಲ್ಲೆಯ ರೈತರು ಈಗಾಗಲೇ ರೂ ೩೬೦೦ ಕೊಡಲು ಒಪ್ಪಿದ್ದು ವಿಜಯಪುರ ಜಿಲ್ಲೆಯ ರೈತರಿಗೆ ಏಕೆ ತಾರತಮ್ಯ ಎಂದರು.
ಕಾರ್ಖಾನೆಯ ಮ್ಯಾನೆಜಿಂಗ ಡೇರೆಕ್ಟರ್ ಸೂರ್ಯ ಪ್ರಕಾಶ ಘಟನಾ ಸ್ಥಳಕ್ಕೆ ಬಂದು ಮಾತನಾಡಿ ತಮ್ಮ ಮನವಿಯನ್ನು ಮಾಲಿಕರ ಜೊತೆ ಚರ್ಚಿಸುವದಾಗಿ ಮತ್ತು ಗುರುವಾರದ ವರೆಗೆ ಕಾಲಾವಕಾಶ ಕೇಳಿದರು.
ಪ್ರತಿಭಟನೆಯಲ್ಲಿ ಸಿದ್ದರಾಮ ಹಂಜಗಿ, ಶಿವಾನಂದ ಬಿರಾದಾರ, ಪ್ರಕಾಶ ಅಂದೇವಾಡಿ, ಭಾಳನಗೌಡ ಬಿರಾದಾರ, ಸಿದ್ದಾರಾಮ ಬಿಜಾಪುರ, ಸುಭಾಸ ಪಾಟೀಲ, ತಿಪ್ಪಣ್ಣ ಮಂಗಲಗಿ, ಸಂತೋಷ ಪರಿಟ, ಶಿವರಾಯ ಬಿರಾದಾರ , ಚಿದಾನಂದ ಪರೀಟ, ಸಿದ್ದು ಬುರುಕುಲೆ, ಅನೀಲ ಪವಾರ, ಪ್ರಶಾಂತ ತೆಲಸಂಗ, ಸೋಮು ಚಾಳಿಕಾರ ಶರಣು ಹಂಜಗಿ ಮತ್ತಿತರಿದ್ದರು.

