ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಆಲಮೇಲ ತಾಲೂಕಿನ ಕಡಣಿ ಹಾಗೂ ಸಿಂದಗಿ ತಾಲೂಕಿನ ಕೋರಳ್ಳಿ (ಹಿಕ್ಕನಗುತ್ತಿ) ಗ್ರಾಮಗಳಲ್ಲಿ ಪ್ರಸ್ತಾವಿತ ೧೧೦ ಕೆ.ವಿ. ಕೋರಳ್ಳಿ ಮತ್ತು ೧೧೦ ಕೆ.ವಿ. ಕಡಣಿ ವಿದ್ಯುತ್ ಮಾರ್ಗಗಳ ಲಿಲೋ ಗೋಪುರ ನಿರ್ಮಾಣ ಹಾಗೂ ತಂತಿ ಎಳೆಯುವ ಕಾಮಗಾರಿ ಕೈಗೊಳ್ಳಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ನ.೪ರಂದು ಬೆಳಿಗ್ಗೆ ೬ರಿಂದ ಸಂಜೆ ೬ರವರೆಗೆ ಆಲಮೇಲ ೧೧೦/೧೧ ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೋಗುವ ಎಲ್ಲ ೧೧ ಕೆ.ವಿ. ಮಾರ್ಗಗಳ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಸಂಬಂಧಿಸಿದ ವ್ಯಾಪ್ತಿಯ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸುವಂತೆ ಹೆಸ್ಕಾಂನ ಇಂಡಿ ಕಾರ್ಯ ಮತ್ತು ಪಾಲನೆ ವಿಭಾಗ ಕಾರ್ಯನಿರ್ವಾಹಕ ಅಭಿಯಂತರ ಪ್ರಕಟಣೆಯಲ್ಲಿ ತಿಳಿಸಿದೆ.
