ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಮಧ್ವಾಚಾರ್ಯರ ಪ್ರತಿಪಾದಿಸಿದ ದ್ವೈತ ಸಿದ್ಧಾಂತದ ತತ್ವ, ವಿಚಾರಗಳ ಕುರಿತು ನಾವು ಅರಿಯಬೇಕಾಗಿದೆ ಎಂದು ಗ್ರೇಡ್-೨ ತಹಶೀಲ್ದಾರ ಎಂ.ಜಿ.ಬಿರಾದಾರ ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಬುಧವಾರ ಶ್ರೀಮಧ್ವಾಚಾರ್ಯರ ೭೮೮ ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಚಾರ್ಯರಲ್ಲಿ ಪ್ರಮುಖರಾದ ಶ್ರೀಮಧ್ವಾಚಾರ್ಯರ ಕುರಿತು ಸರ್ಕಾರ ಪ್ರತಿವರ್ಷ ಅಕ್ಟೋಬರ್ ೨೧ರಂದು ಅಧಿಕೃತವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಜಯಂತಿ ಆಚರಿಸಲು ಆದೇಶಿಸಿರುವುದು ಶ್ಲಾಘನೀಯ ಎಂದರು.
ವೈದ್ಯ ಆರ್.ಆರ್.ನಾಯಿಕ್, ಚೈತನ್ಯ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಿ.ಕೆ.ಕುಲಕರ್ಣಿ ಹಾಗೂ ಸಿಂದಗಿ ಪದ್ಮರಾಜ ಮಹಿಳಾ ಕಾಲೇಜಿನ ಉಪನ್ಯಾಸಕ ಗಿರೀಶ ಕುಲಕರ್ಣಿ, ಶಿಕ್ಷಕ ಜಿ.ಪಿ.ಬಿರಾದಾರ ಮಾತನಾಡಿದರು.
ಶಿರಸ್ತೇದಾರ ಸುರೇಶ ಮ್ಯಾಗೇರಿ, ಚಿದಂಬರ ಸೇವಾ ಸಮಿತಿ ಅಧ್ಯಕ್ಷ ನರೇಂದ್ರ ನಾಡಗೌಡ, ವಿಪ್ರ ಸಮುದಾಯದ ಪ್ರಮುಖರಾದ ಪಾಂಡು ದೇಶಪಾಂಡೆ, ವೆಂಕಟೇಶ ಕುಲಕರ್ಣಿ,ಚಿದಂಬರ ಕುಲಕರ್ಣಿ(ಹಂಚಲಿ), ಶ್ರೀಧರ ನಾಡಗೌಡ, ಪ್ರಸಾದ ಕುಲಕರ್ಣಿ, ಪ್ರವೀಣ ಕುಲಕರ್ಣಿ, ಗ್ರಾಮಾಡಳಿತಾಧಿಕಾರಿ ರಮಾನಂದ ಚಕ್ಕಡಿ, ಚನ್ನಬಸು ಹೊಸಮನಿ, ಸುರೇಶ ಇದ್ದರು.

