ರೈತರು ಮತ್ತು ಹೆಸ್ಕಾಂ ಸಿಬ್ಬಂದಿ ನಡುವೆ ವಾಗ್ವಾದ | ಪ್ರತಿಭಟಿಸಿದ ರೈತರು
ಉದಯರಶ್ಮಿ ದಿನಪತ್ರಿಕೆ
ಇಂಡಿ: ಸಾಲೋಟಗಿ ಗ್ರಾಮದ ಮತ್ತು ಇಂಡಿಯ ಮುಖ್ಯ ಕೃಷ್ಣಾ ಕಾಲುವೆಯ ಇರುವ ಸಾಲೋಟಗಿ ಹತ್ತಿರದ ರೈತರ ಕೃಷ್ಣಾ ಕಾಲುವೆ ಮೇಲಿರುವ ಪಂಪಶೆಟ್ಟುಗಳ ವಾಯರ್ ಕಟ್ ಮಾಡಲು ಹೆಸ್ಕಾಂ ಸಿಬ್ಬಂದಿ ಪ್ರಾರಂಬಿಸಿತು.
ಇದಕ್ಕೆ ಪ್ರತಿಭಟಿಸಿದ ರೈತರು ನೂರಾರು ಸಂಖ್ಯೆಯಲ್ಲಿ ಸೇರಿ ಹೆಸ್ಕಾ ಸಿಬ್ಬಂದಿ ಮೇಲೆ ಹಲ್ಲೆ ಮಾಡುವದಾಗಿ ತಾಕೀತು ಮಾಡಿದರು.
ಹೆಸ್ಕಾ ಸಿಬ್ಬಂದಿ ತಮ್ಮ ಹೆಚ್ಚಿನ ಸಿಬ್ಬಂದಿ ಮತ್ತು ಮೇಲಾಧಿಕಾರಿಗಳನ್ನು ಕರೆದರು.
ಸ್ಥಳಕ್ಕೆ ಆಗಮಿಸಿದ ಹೆಸ್ಕಾ ಮೇಲಾಧಿಕಾರಿಗಳು ಕಾಲುವೆಯ ನೀರು ಕೇವಲ ಕುಡಿಯಲು ಮಾತ್ರ ಬಿಡುತ್ತಿದ್ದು ರೈತರು ಕೃಷಿಗೆ ಉಪಯೋಗಿಸಬಾರದು ಎಂದು ಹಠ ಹಿಡಿದರು.
ಆಗ ರೈತರು ಈಗಾಗಲೇ ಮುಂಗಾರು ಬೆಳೆ ವಿಫಲ ಗೊಂಡಿದೆ. ಮೆಕ್ಕೆಜೋಳ ಹತ್ತಿ ತೊಗರಿ ಕಬ್ಬು ಸೇರಿದಂತೆ ಇನ್ನಿತರ ಬೆಳೆ ಸಂಪೂರ್ಣ ವಿಫಲಗೊಂಡಿದ್ದು ನೀವು ಕುಡಿಯಲು ನೀರು ಕೊಡಿ ನಮ್ಮದೇನೂ ಅಭ್ಯಂತರವಿಲ್ಲ, ಆದರೆ ಕೃಷಿಗೆ ನೀರು ಕೊಡಬೇಕು. ಕೇವಲ ವಿಜಯಪೂರ ಜಿಲ್ಲೆಗೆ ಮಾತ್ರ ವಾರಾಬಂದಿ ಮಾಡಿ ಕಲಬುರಗಿ ಯಾದಗಿರ ಸುರಪುರ ರೈತರಿಗೆ ವಾರಾಬಂದಿ ಇಲ್ಲ ಭೂಮಿಯಲ್ಲಿ ತೇವಾಂಶ ಕೊರತೆ ಇದೆ. ಕಾಲುವೆಯ ಸ್ವಲ್ಪ ನೀರು ಬಿಟ್ಟು ಬಿತ್ತಲು ಅನುಕೂಲವಾಗುತ್ತದೆ ಎಂದು ಪಟ್ಟು ಹಿಡಿದರು. ತಾಲೂಕಿನಲ್ಲಿ ಒಂದು ಲಕ್ಷ ಇಪ್ಪತ್ತು ಸಾವಿರ ಹೇಕ್ಟರ ಪ್ರದೇಶದಲ್ಲಿ ಹಿಂಗಾರು ಬಿತ್ತನೆ ಯಾಗಬೇಕು. ನಿಜ ಸ್ಥಿತಿಯಲ್ಲಿ ಕೇವಲ ಎಂಟು ಸಾವಿರ ಹೇಕ್ಟರ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ ಎಂದು ಪಟ್ಟು ಹಿಡಿದರು. ಸ್ಥಳಕ್ಕೆ ಸಿಪಿಐ ಸುನೀಲ ಪಾಟೀಲ ಮತ್ತು ತಹಸೀಲ್ದಾರ ನಾಗೇಂದ್ರ ಕೋಳಶೆಟ್ಟಿ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳುವಲ್ಲಿ ಸಾಕಷ್ಟು ಪ್ರಯತ್ನಿಸಿದರು. ಆದರೂ ರೈತರು ಹೆಸ್ಕಾ ಸಿಬ್ಬಂದಿ ಮತ್ತೆ ಬಂದರೆ ಸಾಮೂಹಿಕ ಹಲ್ಲೆ ಮಾಡುವದಾಗಿ ಪಟ್ಟು ಹಿಡಿದಿದ್ದಾರೆ.
ಕೋಟ್
“ಕಳೆದ ಮೂರು ದಿನಗಳಿಂದ ಕಾಲುವೆಗೆ ನೀರು ಬರುತ್ತಿದ್ದು ಹೆಸ್ಕಾಂ ಇಲಾಖೆಯವರು ರೈತರ ವಿದ್ಯುತ್ ವಾಯರ್ ಕಟ್ ಮಾಡುವ ನೆಪದಲ್ಲಿ ಕೇವಲ ಮೂರು ಗಂಟೆ ವಿದ್ಯುತ್ ನೀಡುತ್ತಿದ್ದು ಇತ್ತ ರೈತರಿಗೆ ನೀರು ಪಡೆಯುವುದು ಆಗುತ್ತಿಲ್ಲ. ಹೆಸ್ಕಾಂ ಮತ್ತು ಕೃಷ್ಣಾ ಇಲಾಖೆಯವರು ಕಂದಾಯ ಇಲಾಖೆ ರೈತರ ಜೊತೆ ಚೆಲ್ಲಾಟ ವಾಡುತ್ತಿದ್ದಾರೆ. ಹೀಗೆ ಪರಿಸ್ಥಿತಿ ಮುಂದುವರೆದರೆ ರೈತರು ಬೀದಿಗೆ ಇಳಿದು ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತಿದೆ.”
– ಕಾಸುಗೌಡ ಬಿರಾದಾರ ಬಿಜೆಪಿ ಜಿಲ್ಲಾ ಮಾಜಿ ರೈತ ಮೋರ್ಚಾ ಅಧ್ಯಕ್ಷರು

